Author: admin
ಕರಾವಳಿಯ ಬಹುಮುಖ ಪ್ರತಿಭೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಹೊಸ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೊಸ ಸಿನಿಮಾವೆಂದರೆ ಇದು ಪಕ್ಕಾ ರಾಜ್ ಬಿ ಶೆಟ್ಟಿ ಅಭಿಮಾನಿಗಳು ಇಷ್ಟಪಡುವ ಜಾನರ್ ವುಳ್ಳ ಚಿತ್ರ. ‘ಗರುಡ ಗಮನ ವೃಷಭ ವಾಹನʼ ಸಿನಿಮಾ ಹಿಟ್ ಆಗಿತ್ತು. ಸಿನಿಮಾದ ಕೆಂಟೆಂಟ್ ಭಿನ್ನವಾಗಿತ್ತು. ಕರಾವಳಿಯ ಹುಲಿವೇಷ, ವಾತಾವರಣ ಭಾಷಾ ಸೊಗಡು ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೇ ತಂಡವನ್ನಿಟ್ಟುಕೊಂಡು ರಾಜ್ ಬಿ ಶೆಟ್ಟಿ ಮತ್ತೊಂದು ಸಿನಿಮಾವನ್ನು ಅನೌನ್ಸ್ ಮಾಡುವುದರ ಬಗ್ಗೆ ಇತ್ತೀಚೆಗಷ್ಟೇ ಹೇಳಿದ್ದರು. ರಾಜ್ ಬಿ ಶೆಟ್ಟಿ ಅವರ ʼ ಲೈಟರ್ಸ್ ಬುದ್ಧ ಫಿಲ್ಮ್ʼ ʼ ಅಗಸ್ತ್ಯ ಫಿಲ್ಮ್ಸ್ʼ ಅವರೊಂದಿಗೆ ಜಂಟಿಯಾಗಿ ಬರುತ್ತಿರುವ ಸಿನಿಮಾಕ್ಕೆ “ಟೋಬಿ “ ಟೈಟಲ್ ಇಡಲಾಗಿದೆ. ಪೋಸ್ಟರ್ ನಲ್ಲಿ ಮೊದಲು ತಿಳಿಸಿದಂತೆ ಇದೊಂದು ಆ್ಯಕ್ಷನ್ ಜಾನರ್ ವುಳ್ಳ ಸಿನಿಮಾವಾಗಿರಲಿದೆ. ʼಟೋಬಿ” ಸಿನಿಮಾದ ಟೈಟಲ್ ನ್ನು ಈ ಹಿಂದೆಯೇ ಫಿಕ್ಸ್ ಮಾಡಲಾಗಿತ್ತು. ಇದೀಗ ಸಿನಿಮಾದ ರಿಲೀಸ್ ಡೇಟ್ ನ್ನು ರಿವೀಲ್…
ಯಕ್ಷಗಾನದಲ್ಲಿ ಮಹಿಳೆಯರು, ಮಕ್ಕಳು ತೊಡಗಿಕೊಳ್ಳಬೇಕು. ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹಿಳಾ ಘಟಕ ಕೆಲಸ ಮಾಡುವಂತಾಗಲಿ. ಇದಕ್ಕೆ ಪ್ರತೀ ವರ್ಷ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಐದು ಲಕ್ಷ ದೇಣಿಗೆಯನ್ನು ನೀಡುವುದಾಗಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ತಿಳಿಸಿದರು. ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಕೇಂದ್ರೀಯ ಮಹಿಳಾ ಘಟಕದ “ಪ್ರಮುದಾ ಪ್ರಭಾ” ವಾರ್ಷಿಕ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಮಹಿಳಾ ಘಟಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಮಹಿಳಾ ಘಟಕ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ ಎಂದರು. ಇನ್ನೋರ್ವ ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ, ಟ್ರಸ್ಟ್ ನ ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ ಮಾತನಾಡಿ ಮಹಿಳಾ ಘಟಕವು ಪಟ್ಲ…
ಬಂಟರ ಸಂಘದ ಏಳಿಗೆಗಾಗಿ ಶ್ರಮಿಸಲು ಬದ್ಧನಾಗಿದ್ದು, ಒಳ್ಳೆಯ ಕಾರ್ಯದ ವಿಚಾರದಲ್ಲಿ ಯಾರೂ ಕೂಡಾ ತೊಂದರೆ ಕೊಡಬಾರದು ಎಂದು ಜಿಲ್ಲಾಧ್ಯಕ್ಷ ಬಿ.ಡಿ ಜಗದೀಶ್ ರೈ ಅಭಿಪ್ರಾಯಪಟ್ಟರು. ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಎರಡು ದಿನಗಳ ಕಾಲ ಇಲ್ಲಿನ ಕಾಲೇಜು ಮೈದಾನದಲ್ಲಿ ನಡೆದ ‘ಸ್ವಜಾತಿ ಬಂಧುಗಳ ಸಮ್ಮಿಲನ – 2023’ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಂಟರ ಸಂಘ ಹಾಗೂ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಒಂದೊಂದಾಗಿ ಕಾರ್ಯರೂಪಕ್ಕೆ ತರಲಾಗುವುದು. ಮುಖ್ಯವಾಗಿ ಬಂಟರ ಭವನ ನಿರ್ಮಾಣ ಕಾರ್ಯವನ್ನು ಶ್ರೀಘ್ರದಲ್ಲೇ ಆರಂಭಿಸಬೇಕೆಂಬ ಇರಾದೆ ಇದೆ. ಯಾರು ಕೂಡ ವಿನಾಕಾರಣ ಅಡ್ಡಗಾಲು ಹಾಕಬಾರದೆಂದು ಮನವಿ ಮಾಡಿದರು. ಜಿಲ್ಲಾ ಬಂಟರ ಶಾಂತಿ ಧಾಮಕ್ಕೆ ಸುಂದರ ರೂಪ ನೀಡಲಾಗಿದೆ. ಮುಂದೆ ಪ್ರತಿಭಾ ಪುರಸ್ಕಾರ, ಸಮುದಾಯದ ಸಾಧಕರನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಸಮುದಾಯದವರ ಏಳಿಗೆಗಾಗಿ ಬಂಟರ ಸಂಘ ಸದಾ ಬೆಂಬಲವಾಗಿರುತ್ತದೆ. ಎಲ್ಲಾ ಹೋಬಳಿಯಲ್ಲೂ ಸಂಘದ ಘಟಕ ಆರಂಭಿಸಿ, ಕಾರ್ಯಚಟುವಟಿಕೆಯಿಂದ ಕೂಡಿರುವಂತೆ ಕಾಳಜಿ ವಹಿಸಬೇಕು. ಸಮುದಾಯದ…
“ಬಂಟರ, ನಾಡವರ ಅಭಿವೃದ್ಧಿ ನಿಗಮ, ಬಂಟರನ್ನು ಪ್ರವರ್ಗ2(ಎ)ಗೆ ಸೇರ್ಪಡೆಗೆ ಒತ್ತಾಯ” – ಮಾಲಾಡಿ ಅಜಿತ್ ಕುಮಾರ್ ರೈ
“ಬಂಟರು ಯಾನೆ ನಾಡವರನ್ನು ಪ್ರವರ್ಗ 3(ಬಿ)ಯಿಂದ ಕೈಬಿಟ್ಟು 2(ಎ)ಗೆ ಸೇರಿಸಬೇಕು, ಬಂಟರ ನಾಡವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಂಟರ ಯಾನೆ ನಾಡವರ ಸಮಾಜ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು. ಈ ಕುರಿತು ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಬಂಟರ ಸಮಾಜಕ್ಕೆ ನ್ಯಾಯ ಒದಗಿಸಬೇಕು” ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, “ಬಂಟ ಸಮಾಜದಲ್ಲಿ 40% ಜನರು ಬಡತನ ರೇಖೆಗಿಂತ ಕೆಳಗಿದ್ದು ಕಷ್ಟ-ಕಾರ್ಪಣ್ಯಗಳೊಂದಿಗೆ ನಿತ್ಯ ದುಖಃದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಹಲವು ಬಾರಿ ಮನವಿ ಮಾಡಿದ್ದರೂ ಈ ಹಿಂದಿನಿಂದ ಆಡಳಿತದಲ್ಲಿದ್ದ ಎಲ್ಲಾ ಸರಕಾರಗಳು ಯಾವುದೇ ಗಮನ ಕೊಡಲಿಲ್ಲ. ನಮ್ಮ ಬಗ್ಗೆ ತಾರತಮ್ಯ ಧೋರಣೆಯನ್ನು ಅನುಸರಿಸಿದ ಕಾರಣ ವಿದ್ಯೆ, ಉದ್ಯೋಗ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಬಂಟ ಸಮಾಜ ಬಾಂದವರು ಅವಕಾಶ ವಂಚಿತರಾಗುವಂತಾಗಿದೆ. ದೇಶದ, ರಾಜ್ಯದ ಹಾಗೂ ಜಿಲ್ಲೆಗಳ ಅಭಿವೃದ್ಧಿಯಲ್ಲಿ…
ಪ್ರೀತಿ, ವಿಶ್ವಾಸ ತುಳುವರ ಜೀವಾಳ. ತುಳುವರಿಗೆ ತುಳು ಸಂಸ್ಕೃತಿಯನ್ನು ನೆನಪಿಸುವ, ಜಾಗೃತಿ ಮೂಡಿಸುವ ಜತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳ ಆವಶ್ಯಕತೆ ಇದೆ. ತುಳುವಿಗೆ ಸ್ವಾದವಿದೆ, ಸೆಳೆತವಿದೆ. ತುಳುವರು ಔದಾಸೀನ್ಯವನ್ನು ಬಿಡಬೇಕು. ಮಾತೃಭಾಷೆಯಲ್ಲಿ ಮಾತನಾಡಲು ನಾಚಿಕೆ ಬೇಡ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಒಡಿಯೂರು ಸಂಸ್ಥಾನದಲ್ಲಿ ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ, 23ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಜ್ಜಿ ಕಥೆಯಲ್ಲಿ ಜೀವನ ಸಾರವನ್ನು ನೀಡುವ ನೈತಿಕ ಮೌಲ್ಯಗಳು ತುಂಬಿದೆ. ಭಾಷೆ – ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳು. ಹಿಂದಿನ ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಶಕ್ತಿ ಪ್ರಯತ್ನಿಸಬೇಕು. ಮನೆಯಲ್ಲಿ ಬದಲಾವಣೆಯಾದಾಗ ದೇಶ ಬದಲಾಗಲು ಸಾಧ್ಯ ಎಂದರು. ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ವಸಂತ ಕುಮಾರ ಪೆರ್ಲ ಮಾತನಾಡಿ, ಕೃಷಿ ಪ್ರಧಾನವಾದ ತುಳುನಾಡು ಕೈಗಾರಿಕೀಕರಣದತ್ತ…
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಆರ್. ಕೆ. ಶೆಟ್ಟಿ ( ಗೌ. ಕಾರ್ಯದರ್ಶಿ ಬಂಟರ ಸಂಘ ಮುಂಬೈ, ಆಡಳಿತ ನಿರ್ದೇಶಕರು ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ. ಲಿ. ಮುಂಬಯಿ ) ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬಯಿಯಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮಿಲನ ಕಾರ್ಯಕ್ರಮದ ಕಾರ್ಯಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾದ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ಪೋಷಕ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜ ಕಲ್ಯಾಣ ಕಾರ್ಯಕ್ರಮದ ಮೂಲಕ ಬಡವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಒಕ್ಕೂಟದ ಮೂಲಕ ಐಕಳ ಹರೀಶ್ ಶೆಟ್ಟಿ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ. ಜೆ ಶೆಟ್ಟಿ ಅವರು ಶ್ಲಾಘಿಸಿದರು. ಅವರು ಜೂನ್ 30ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ಬಳಿಯ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಂಟರ ಮಾತೃಸಂಘವು 100 ವರ್ಷವನ್ನು ದಾಟಿ ಬೆಳೆದಿದೆ. ಇಂದು ಪ್ರತಿ ತಾಲೂಕು, ಜಿಲ್ಲೆ, ರಾಜ್ಯ ದೇಶ-ವಿದೇಶಗಳಲ್ಲಿ ಬಂಟರ ಸಂಘ ಹೊಂದಿದೆ. ಆದರೆ ಐಕಳ ಹರೀಶ್ ಶೆಟ್ಟಿ ಅವರು ಮುಂಬೈನಲ್ಲಿದ್ದರೂ ಊರಿಗೆ ಬಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಯನ್ನು ವೈದ್ಯಕೀಯ, ಶಿಕ್ಷಣ, ಮನೆ…
ವಿಶ್ವ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ತುಳು ಮತ್ತು ಕನ್ನಡ ಯಕ್ಷಗಾನ ಪ್ರಸಂಗಗಳ ವಿಭಿನ್ನ ಗತಿಯ ವೇಷಧಾರಿ ಜಪ್ಪು ದಯಾನಂದ ಶೆಟ್ಟಿ ಆಯ್ಕೆ ಆಗಿದ್ದಾರೆ. ಪ್ರೊ.ಜಿ.ಆರ್.ರೈ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪಳ್ಳಿ ಕಿಶನ್ ಹೆಗ್ಡೆಯವರನ್ನು ಒಳಗೊಂಡ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ದಯಾನಂದ ಶೆಟ್ಟಿ ಜಪ್ಪು: ಕರ್ನಾಟಕ, ಕುಂಡಾವು, ದೇಲಂತಪುರಿ ಮತ್ತು ಸಸಿಹಿತ್ಲು ಮೇಳಗಳಲ್ಲಿ ಒಟ್ಟು 52 ವರ್ಷ ತಿರುಗಾಟ ಮಾಡಿರುವ ದಯಾನಂದ ಶೆಟ್ಟರು ಬೆಳ್ತಂಗಡಿ ಸವಣಾಲಿನ ದಿ.ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ದಂಪತಿಯ ಮಗನಾಗಿ 1948ರಲ್ಲಿ ಜನಿಸಿದರು. ಕೇವಲ ಎರಡನೆಯ ತರಗತಿ ಕಲಿತ ಇವರು ತನ್ನ 12ನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿಗಿಳಿದು ಹಲವು ಹಿರಿಯ ಕಲಾವಿದರ ಒಡನಾಟದಲ್ಲಿ ಖ್ಯಾತರಾದರು. ಕರ್ನಾಟಕ ಮೇಳವೊಂದರಲ್ಲೇ 36 ವರ್ಷ ಪೂರೈಸಿದ ಅವರು ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ರಾ.ಸಾಮಗ, ಮಿಜಾರು, ಅರುವ, ಕೋಳ್ಯೂರು ಮೊದಲಾದ ದಿಗ್ಗಜರೊಂದಿಗೆ ಸ್ತ್ರೀವೇಷ, ಪುಂಡು ವೇಷ,…
ಮಣ್ಣನ್ನು ಕೊಳಕು ಎಂದು ಅಂದುಕೊಳ್ಳುವುದು ಆಧುನಿಕರ ರೂಢಿ. ಕೊಳಕು ಎಂದರೆ ತ್ಯಾಜ್ಯ – ಯಾವುದು ಬಳಕೆಗೆ ಯೋಗ್ಯವಲ್ಲದ್ದೋ ಅದು, ಉಪಯೋಗ ಮುಗಿದು ಹೋದದ್ದು, ಎಸೆಯಬೇಕಾದ್ದು, ದೂರ ಇರಿಸಬೇಕಾದ್ದು. ಹೌದೇ ಇದು? ನಾವು ಯಾವುದನ್ನು ನಮ್ಮ ದೇಹ ಎಂದು ಹೇಳುತ್ತೇವೆಯೋ ಅದು ಈ ಭೂಮಿಯ ಒಂದು ಭಾಗ. ನಾವು ಸೇವಿಸಿದ ಆಹಾರದ ಸಂಸ್ಕರಿತ, ಪರಿಷ್ಕೃತ ಸಂಗ್ರಹ ರೂಪವೇ ಈ ದೇಹ. ಈ ಭೂ ಗ್ರಹದಿಂದ ಪುಟಿದೆದ್ದು ನಾಲ್ಕು ದಿನ ಕೈ ಕಾಲಾಡಿಸುವವರು ನಾವು. ಕೆಲವು ವರ್ಷಗಳ ಬಳಿಕ ಮತ್ತೆ ಅದೇ ಭೂಮಿಯಲ್ಲಿ ಒಂದು ಗುಪ್ಪೆಯಾಗಿ ಬಿಡುತ್ತೇವೆ. ಅಂದರೆ “ಕೊಳಕಿ’ಗೆ ಕಚ್ಚಾ ವಸ್ತುವಾಗುತ್ತೇವೆ. ನಮ್ಮ ದೇಶದಲ್ಲಿ ತಾಯ್ನಾಡು, ತವರು ನೆಲ, ಭೂಮಿ ತಾಯಿ ಎಂದೆಲ್ಲ ಕರೆಯುವ ಕ್ರಮವಿದೆ. ಎಲ್ಲವನ್ನೂ ಸಜೀವವಾಗಿ, ಬದುಕಿನ ಭಾಗವಾಗಿ ಕಾಣುವ ಸಂಸ್ಕೃತಿ ನಮ್ಮದು. ಆಹಾರ, ನೀರು, ನೆಲ, ಆಕಾಶ, ಸೂರ್ಯ, ಚಂದ್ರ, ಕಲ್ಲು, ಮರ –ಎಲ್ಲದಕ್ಕೂ ನಾವು ಶಿರಬಾಗಿ ನಮಿಸುವುದು ಇದೇ ಕಾರಣಕ್ಕೆ. ಯಾವುದನ್ನೂ ಉಪಯೋಗಿಸಿ ಎಸೆಯಬಹುದಾದದ್ದು ಎಂದು ನಾವು…
ಹುಟ್ಟಿದ ವ್ಯಕ್ತಿ ಎಷ್ಟು ದಿನ ಬದುಕಿದ ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಮುಖ್ಯವಾಗುತ್ತದೆ. ಮಾನವ ಬಡವನಾಗಿ ಹುಟ್ಟುವುದು ಅವನ ತಪ್ಪಲ್ಲ ಆದರೆ ಬಡವನಾಗಿ ಸಾಯುವುದು ತಪ್ಪು ಎಂಬ ಮಾತನ್ನು ಕೂಡಾ ನಾವು ಕೇಳುತ್ತಾ ಬಂದಿದ್ದೇವೆ. ಈ ಎಲ್ಲಾ ಮಾತುಗಳ ತಾತ್ಪರ್ಯ ಅಂದರೆ ಮನುಷ್ಯ ಕಷ್ಟಪಟ್ಟು ದುಡಿಯಬೇಕು, ಹುಟ್ಟಿದ ಮಾನವ ಏನನ್ನಾದರೂ ಸಾಧಿಸಬೇಕು, ಆತನಲ್ಲಿ ಕೃತ್ವಶಕ್ತಿ, ನಿರಂತರ ಶ್ರಮ, ಸಾಧಿಸುವ ಛಲ, ಹಠ ಎಲ್ಲಕ್ಕಿಂತ ಮಿಗಿಲಾಗಿ ಕನಸು ಇವೆಲ್ಲವೂ ಸಮ್ಮಿಳಿತವಾದಾಗ ಒಂದಲ್ಲ ಒಂದು ಫಲಪ್ರಾಪ್ತಿ ಆಗುವುದು ಖಚಿತ. ಜೊತೆಯಲ್ಲಿ ಸ್ವಲ್ಪ ಅದೃಷ್ಟವೂ ಇರಬೇಕೆನ್ನಿ. ನಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಹಿರಿಯರು ಕಟ್ಟಿಕೊಟ್ಟ ಬುತ್ತಿಯಲ್ಲ. ಅದನ್ನು ಬಿಚ್ಚಿಟ್ಟರೆ ನಮ್ಮದಾಗುವುದಿಲ್ಲ. ಅದಕ್ಕೆ ಬೇಕಾಗಿರುವುದು ನಿತ್ಯ ನಿರಂತರ ಪರಿಶ್ರಮ. ಪ್ರಾಮಾಣಿಕ ದುಡಿಮೆ ಇವೆಲ್ಲವೂ ಆವಿರ್ಭವಿಸಿದಾಗ ಸಾಧನೆಯ ಸಾರ್ಥಕತೆ ದೊರೆಯುತ್ತದೆ. ತನ್ನ ಜೀವನದುದ್ದಕ್ಕೂ ಪ್ರಾಮಾಣಿಕ ದುಡಿಮೆಯಿಂದ, ಅಚಲವಾದ ಶ್ರಮದಿಂದ ಇಂದು ಯಶಸ್ಸಿನ ಉತ್ತುಂಗಕ್ಕೇರಿದವರು, ಬಂಟ ಸಮಾಜಕ್ಕೆ ಕಿರೀಟಪ್ರಾಯರಾಗಿ ಹೆಸರುವಾಸಿಯಾದವರು ಶ್ರೀಕಾಂತ ಶೆಟ್ಟಿಯವರು. ಜೀವಂತಿಕೆಗೆ, ಲವಲವಿಕೆಗೆ, ಚೈತನ್ಯಶೀಲತೆಗೆ ಮತ್ತೊಂದು ಹೆಸರು…