ಎಸ್.ಯು. ಪಣಿಯಾಡಿಯವರ ಉತ್ಸಾಹ ಕನಸುಗಳೊಂದಿಗೆ 1928ರ ಸೆಪ್ಟೆಂಬರ್ 23 ರಂದು ಉಡುಪಿಯಲ್ಲಿ ತುಳುವ ಮಹಾಸಭೆ ಸ್ಥಾಪನೆಗೊಂಡಿತು. ತುಳುವ ಮಹಾಸಭೆಯ ಪ್ರಥಮ ವರ್ಷದ ಕಾರ್ಯಕಾರಿ ಸಮಿತಿ ಹೀಗಿತ್ತು. ಅಂಜಾರು ರಾಮಣ್ಣ ಹೆಗ್ಗಡೆ (ಅಧ್ಯಕ್ಷ), ಎಸ್.ಯು. ಪಣಿಯಾಡಿ (ಕಾರ್ಯದರ್ಶಿ), ಸದಸ್ಯರು – ಡಾ. ಯು. ರಾಮಚಂದ್ರ ರಾವ್, ಹಿರಿಯಡ್ಕ ನಾರಾಯಣ ರಾವ್, ಯು. ವೆಂಕಪ್ಪಯ್ಯ, ಮುಂತಾದವರು.1984 ರವರೆಗೆ ಪೊಳಲಿ ಸೀನಪ್ಪ ಹೆಗ್ಡೆ ಮತ್ತು ಬಡಕ ಬಯಲು ಪರಮೇಶ್ವರಯ್ಯನವರು ನಡೆಸಿಕೊಂಡು ಬಂದಿದ್ದರು. ಇನ್ನು ನಾಲ್ಕು ವರ್ಷಗಳಲ್ಲಿ ಐತಿಹಾಸಿಕ ಈ ತುಳು ಚಳುವಳಿಗೆ ನೂರು ವರ್ಷ ತುಂಬಲಿದೆ. ಅವರ ಹೋರಾಟದ ಕಿಚ್ಚು ತುಳುವರಲ್ಲಿ ಸ್ವಾಭಿಮಾನ ಮೂಡಿಸಿ ಇದುವರೆಗೆ ತುಳುವನ್ನು ಉಳಿಸಿಕೊಂಡು ಬಂದಿದೆ. ಆದರೆ ತುಳುವ ಮಹಸಭೆಯ ಯಾವುದೇ ಬೇಡಿಕೆಗಳು ಇದುವರೆಗೆ ಪೂರ್ತಿಯಾಗಿಲ್ಲ ಎನ್ನುವುದು ಖೇದಕರ. ತುಳುವ ಮಹಾಸಭೆಯ 96ನೇ ವರ್ಷದ ಈ ಸಂದರ್ಭದಲ್ಲಿ ಹಿರಿಯರ ಯೋಚನೆ ಯೋಜನೆಗಳನ್ನು ಮರು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ತುಳುವರ್ಲ್ಡ್ ಫೌಂಡೇಶನ್ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡಿದೆ.
ತುಳುವ ಮಹಾಸಭೆಯ ಪ್ರಕಾರ ತುಳುವವರೆಂದರೆ; ತುಳು ಮಾತೃಭಾಷೆ ಮಾತನಾಡುವವರು, ತುಳು ಭಾಷೆ ತಿಳಿದವರು, ತುಳುನಾಡಿನಲ್ಲಿ ವಾಸಿಸುವವರು. ಈ ದೃಷ್ಟಿಯಲ್ಲಿ ತುಳುನಾಡಿನಾದ್ಯಂತ ಅಲ್ಲಲ್ಲಿ “ತುಳುವ ಮಹಾಸಭೆ” ಪರಸ್ಪರ ಸಹಾಯ ನಾಟ್ (ನಾಡು) ಕೂಟಗಳನ್ನು ರೂಪೀಕರಿಸಲಾಗುವುದು.
ಉದ್ದೇಶ ಲಕ್ಷ್ಯಗಳು ; ತುಳುನಾಡಿನಲ್ಲಿ ಜಾತಿ ಮತ ಭಾಷಾ ಸೌಹಾರ್ದತೆಗಳನ್ನು ಮೂಡಿಸುವುದು, ತುಳುನಾಡಿನ ಮತ್ತು ತುಳು ಜನರ ಆರ್ಥಿಕ ಮತ್ತು ಬದುಕಿಗೆ ಅಭಿವೃದ್ಧಿಗೆ ಪೂರಕವಾದ ಯೋಚನೆಗಳನ್ನು ರೂಪಿಸುವುದು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವುದು, ಯುವಕರಲ್ಲಿ ಸ್ವಾವಲಂಬನೆ ಮತ್ತು ಉದ್ಯೋಗ ಶೀಲತೆಯನ್ನು ಪ್ರೇರೇಪಿಸುವುದು, ತುಳುನಾಡಿನ ಕೃಷಿ ಪದ್ಧತಿ, ತುಳುವ ತಳಿಗಳ ಮರುಬಳಕೆ ಮತ್ತು ಕುಲ ಕಸುಬುಗಳನ್ನು ಪ್ರೋತ್ಸಾಹಿಸುವುದು, ತುಳುಪದ (ಜನಪದ) ಉಳಿಸುವುದು ಮತ್ತು ಬೆಳೆಸುವುದು ತುಳುನಾಡಿನ ವಾದ್ಯೋಪಕರಣಗಳ ಮರುಬಳಕೆ, ಜಗತ್ತಿನ ಅತ್ಯಂತ ಪ್ರಾಚೀನ ಯುದ್ಧ ತಲೆ “ತುಳುನಾಡು ಕಳರಿ” ಮತ್ತು ಮರ್ಮ ಚಿಕಿತ್ಸೆಯ ಪುನಶ್ಚೇತನಕ್ಕೆ ಪ್ರಯತ್ನಪಡುವುದು, ಪ್ರಾದೇಶಿಕ ಅಭಿವೃದ್ಧಿ, ವೈಯುಕ್ತಿಕ ಬೆಳವಣಿಗೆ, ಸಂಸ್ಕೃತಿ, ಕ್ರೀಡೆ ಮತ್ತು ಸಂಸ್ಕೃತಿಯ ಜೊತೆ ಆಧುನಿಕತೆಗೆ ಬದಲಾಗುವ ತರಬೇತಿಗಳನ್ನು ನೀಡುವುದು, ತುಳುನಾಡಿನ ಆರಾಧನಾ ಕೇಂದ್ರಗಳಲ್ಲಿ ಬಳಸುವ ಸಮಿತ್ತುಗಳನ್ನು ಸ್ಥಳೀಯವಾಗಿ ಬೆಳೆಸಲು ಮತ್ತು ತಯಾರಿಸಲು ಹಾಗೂ ಉಪಯೋಗಿಸಲು ಪ್ರೋತ್ಸಾಹಿಸುವುದು ಮತ್ತು ಈ ಮೂಲಕ ಆರ್ಥಿಕ ಸಬಲೀಕರಣಕ್ಕೆ ಪ್ರೇರಣೆ ನೀಡುವುದು, ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ತುಳುನಾಡು ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದು ಹಾಗೂ ಅಭಿಮಾನವನ್ನು ಹೆಚ್ಚಿಸುವುದು, ನಮ್ಮ ಭಾಷಾ ಸಂಸ್ಕೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು. ಮುಂತಾದ ಹತ್ತು ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲು ತುಳುವ ಮಹಾಸಭೆಯ ಮೂಲಕ ಚಾಲನೆ ನೀಡಲಾಗುವುದು.