ಸೆಪ್ಟೆಂಬರ್ 15 ರಂದು ಆದಿತ್ಯವಾರ ಸಂಜೆ ‘ಇಂಜಿನಿಯರ್ಸ್ ಡೇ’ ಪ್ರಯುಕ್ತ, ಸಮಾಜಮುಖಿ ಸೇವಾ ಮನೋಭಾವದ, ಪರೋಪಕಾರಿ, ಪ್ರಾಮಾಣಿಕ, ಕರ್ತವ್ಯ ಪ್ರಜ್ಞೆಯ ಸರಕಾರಿ ಅಧಿಕಾರಿ, ಕೋಟ ಮೆಸ್ಕಾಂ ನಲ್ಲಿ ಇಂಜಿನಿಯರ್ ಆಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ, ಜನಮನ್ನಣೆ ಗಳಿಸಿದ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರನ್ನು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಬನ್ನಾಡಿ ಪ್ರವೀಣ್ ಹೆಗ್ಡೆಯವರು ‘ಇಂಜಿನಿಯರ್ಸ್ ಡೇ’ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು.ಲಯನ್ಸ್ ಕ್ಲಬ್ ನ ಸ್ಥಾಪಕ ಕಾರ್ಯದರ್ಶಿ ಲಯನ್ ಪ್ರೊಫೆಸರ್ ಕಲ್ಕಟ್ಟೆ ಚಂದ್ರ ಶೇಖರ್ ಶೆಟ್ಟಿಯವರು ಸನ್ನಾನಿತಗೊಂಡ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರ ಬಗ್ಗೆ ಹಾಗೂ ಇಂಜಿನಿಯರ್ಸ್ ಡೇ ಮಹತ್ವದ ಕುರಿತು ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರು, ಸರ್ ಎಮ್. ವಿಶ್ವೇಶ್ವರಯ್ಯರವರ ಜೀವನ ಕುರಿತು ಮಾತನಾಡಿ, ಇಂಜಿನಿಯರ್ಸ್ ಡೇ ಪ್ರಯುಕ್ತ ತನ್ನನ್ನು ಸನ್ಮಾನಿಸಿದ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸದಸ್ಯರಿಗೆ ಕೃತಜ್ನತೆಗಳನ್ನು ಸಲ್ಲಿಸಿ ಶುಭ ಹಾರೈಸಿದರು. ಈ ಸಂದರ್ಭ ಲಯನ್ ಇಂಜಿನಿಯರ್ ಹಾಲಾಡಿ ಪ್ರಶಾಂತ್ ಶೆಟ್ಟಿಯವರ ತಂದೆ, ತಾಯಿ, ಪತ್ನಿ, ಮಕ್ಕಳು ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಲಯನ್ ಬನ್ನಾಡಿ ಸೂರ್ಯಕಾಂತ್ ಶೆಟ್ಟಿ, ಪ್ರಥಮ ಉಪಾಧ್ಯಕ್ಷರಾದ ಲಯನ್ ಬನ್ನಾಡಿ ಪ್ರಭಾಕರ್ ಶೆಟ್ಟಿ, ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಅಚ್ಲಾಡಿ ಸುರೇಂದ್ರ ಶೆಟ್ಟಿ ಕೊಮೆ, ಮಾಜಿ ಅಧ್ಯಕ್ಷರಾದ ಲಯನ್ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಲಯನ್ ಕಲ್ಕಟ್ಟೆ ರಾಜಾರಾಮ್ ಶೆಟ್ಟಿ ಹಾಗೂ ಹಿರಿಯ ಲಯನ್ ಸದಸ್ಯರಾದ ಲಯನ್ ವಸಂತ್ ವಿ ಶೆಟ್ಟಿ ಅಚ್ಲಾಡಿ, ಲಯನ್ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಕೆ, ಲಯನ್ ಉಪ್ಲಾಡಿ ಸುಗುಣಾಕರ್ ಶೆಟ್ಟಿ, ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಲಯನ್ ರಾಜೀವ ಶೆಟ್ಟಿ ಅಚ್ಲಾಡಿ, ಲಯನ್ ಮಧುವನ ಕರುಣಾಕರ್ ಶೆಟ್ಟಿ, ಲಯನ್ ಕೂರಾಡಿ ಸಂತೋಷ್ ಕುಮಾರ್ ಶೆಟ್ಟಿ, ಲಯನ್ ಅಚ್ಲಾಡಿ ಸುಧಾಕರ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಲಯನ್ ಕೊತ್ತಾಡಿ ಅಜಿತ್ ಕುಮಾರ್ ಶೆಟ್ಟಿ, ಲಯನ್ ಉಪ್ಲಾಡಿ ಜೀವನ್ ಬಿ.ಬಿ, ಲಯನ್ ಅಚ್ಲಾಡಿ ಲಕ್ಷ್ಮಣ್ ಶೆಟ್ಟಿ ಕೊಮೆ, ಲಯನ್ ಮಧುವನ ನಿತೀಶ್ ಆಚಾರ್, ಲಯನ್ ಅಚ್ಲಾಡಿ ಶರತ್ ಶೆಟ್ಟಿ ಕೊಮೆ, ಲಯನ್ ಮಧುವನ ರಂಜಿತ್ ಶೆಟ್ಟಿ, ಲಯನ್ ವಿನಯ್ ಕುಮಾರ್ ಶೆಟ್ಟಿ, ಲಯನ್ ಮಧುವನ ಆಶ್ವಥ್ ಶೆಟ್ಟಿ ಸಹಿತ ಒಟ್ಟು 25 ಲಯನ್ ಸದಸ್ಯರು ಉಪಸ್ಥಿತರಿದ್ದರು.ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲಯನ್ ಬನ್ನಾಡಿ ಆಶಿತ್ ಕುಮಾರ್ ಶೆಟ್ಟಿ ವಂದಿಸಿದರು. ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಹಾಗೂ ಪ್ರಸ್ತುತ ರೀಜನ್ V ರ ರೀಜನ್ ಚೇರ್ ಪರ್ಸನ್ ಲಯನ್ ಬನ್ನಾಡಿ ಸೋಮನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.