Author: admin

ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಎಂದರೆ ನಮಗೆ ನೆನಪಾಗೋದು ಅವರ ಸಾಹಿತ್ಯ, ಜನಪದ ಜ್ಞಾನ. ಸಾಹಿತಿಯಾಗಿ, ಅತ್ಯುತ್ತಮ ಸಂಘಟನಾ ಪಟುವಾಗಿ, ಸಮಾಜಸೇವಕರಾಗಿ ಅವರು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ. ತುಳು ಬರಹಗಾರರಾಗಿ ಅವರು ತುಳುನಾಡಿನ ಪರಂಪರೆ ಶ್ರೇಷ್ಠತೆಗಳನ್ನು ಎತ್ತಿ ಹಿಡಿಯುವ ಕಾಯಕವನ್ನು ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಅಂಕಣಕಾರರಾಗಿದ್ದರು, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯೂ ಅವರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿ 1926ರ ಮಾರ್ಚ್ 19ರಂದು ಲಕ್ಶ್ಮೀನಾರಾಯಣ ಆಳ್ವರು ಜನಿಸಿದರು, `ಏರ್ಯ ಬೀಡು’ ಎಂಬ ಪ್ರತಿಷ್ಠಿತ ಮಾತೃ ಮೂಲ ಪದ್ಧತಿಯ, ದೈವಾರಾಧನೆಯ, ಕೃಷಿ ಪ್ರಧಾನ ಬಂಟ ಮನೆತನಕ್ಕೆ ಸೇರಿದವರು. ತಾಯಿ ಸೋಮಕ್ಕ ಮತ್ತು ತಂದೆ ಸುಬ್ಬಯ್ಯ ಆಳ್ವ. ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಬಂಟ್ವಾಳದಲ್ಲಿ. ಅವರು ಹೈಸ್ಕೂಲು ಓದಿದ್ದು ಕೆನರಾ ಹೈಸ್ಕೂಲು ಮಂಗಳೂರಿನಲ್ಲಿ. ಸ್ವಾತಂತ್ರ್ಯ ಹೋರಾಟಗಳು ತೀವ್ರವಾಗಿದ್ದ ಕಾಲದಲ್ಲಿ ಹುಟ್ಟಿದ್ದರಿಂದ ಸ್ವಾತಂತ್ರ್ಯಪೂರ್ವದ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. ಹೋರಾಟಗಾರರ ಚಿಂತನೆಗಳು ಮತ್ತು…

Read More

ಮೂಡುಬಿದಿರೆ: ‘ವರ್ಧಿತ ಜಲಜನಕ ಇಂಧನ ಕೋಶ’ (ಹೈಡ್ರೋಜನ್ ಫ್ಯುಯೆಲ್ ಸೆಲ್- ಎಚ್‍ಎಫ್‍ಸಿ) ತಂತ್ರಜ್ಞಾನಕ್ಕಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೊದಲ ಪೇಟೆಂಟ್ ಪಡೆದಿದ್ದು, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಾರಥ್ಯದಲ್ಲಿ ಪ್ರಾಧ್ಯಾಪಕ ಡಾ.ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಆವಿಷ್ಕಾರವು ಸಾಕಾರಗೊಂಡಿದೆ. ಪ್ರಾಧ್ಯಾಪಕ ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕರಾದ ಪ್ರೀತಮ್ ಕ್ಯಾಸ್ಟೆಲಿನೊ, ಜಯರಾಮ ಅರಸಳಿಕೆ, ಸತ್ಯನಾರಾಯಣ ಮತ್ತು ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಸೋಹನ್ ಪೂಜಾರಿ, ಸನ್ನಿ ರಾಮ್ನಿವಾಸ್  ಶರ್ಮಾ, ಪ್ರಶಾಂತ್ ಶೇಖರ್ ಪೂಜಾರಿ ಮತ್ತು ಚಿರಾಗ್ ಸತೀಶ್ ಪೂಜಾರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಪೇಟೆಂಟ್ (ಪೇಟೆಂಟ್ ಸಂಖ್ಯೆ -201941035383) ನಾವಿನ್ಯ ಆವಿಷ್ಕಾರವಾಗಿದ್ದು, ‘ಆಲ್ಟ್ರಾ ವಯಲೆಟ್ ಕಿರಣಗಳಿಗೆ ಅತ್ಯುತ್ತಮವಾಗಿ ತೆರೆದುಕೊಂಡ ನೆಫಿಯಾನ್ ಎಂಬ ಪೊರೆಯ ವರ್ಧಿತ ಕಾರ್ಯಕ್ಷಮತೆ ನೀಡುವ ಜಲಜನಕ ಇಂಧನ ಕೋಶ’ ವಾಗಿದೆ. (ಹೈಡ್ರೋಜನ್ ಫ್ಯುಯೆಲ್ ಸೆಲ್ಸ್ ಹ್ಯಾವಿಂಗ್ ಎನ್‍ಹ್ಯಾನ್ಸ್‍ಡ್ ಫರ್ಮಾರೆನ್ಸ್ ವಿದ್ ನಫೀಯಾನ್  ಪ್ರೊಟಾನ್ ಎಕ್ಸ್‍ಚೇಂಜ್ ಮೆಂಬ್ರೇನ್ ಆಪ್ಟಿಮಲ್ ಎಕ್ಸ್‍ಪೋಸ್ಡ್ ಟು ಆಲ್ಟ್ರಾವಯಲೆಟ್ ರೇಸ್). ಆಳ್ವಾಸ್ ಎಂಜಿನಿಯರಿಂಗ್ ಮತ್ತು…

Read More

ಮಕ್ಕಳಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ. ಸಮಾಜದ ಅನೇಕ ಮಂದಿ ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸ್ತ್ರೀ – ಪುರುಷರೆಂಬ ಬೇಧವಿಲ್ಲದೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಧನೆ ಇತರರಿಗೆ ಮಾದರಿಯಾಗಬೇಕು ಎಂದು ಉದ್ಯಮಿ, ಮೂಡಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಹೇಳಿದರು. ಅವರು ಬಂಟರ ಸಂಘ ವಾಮದಪದವು ವಲಯ ವತಿಯಿಂದ ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ ನೇತೃತ್ವದಲ್ಲಿ ಆಲದಪದವು ನಿವೇಶನದಲ್ಲಿ ಆಯೋಜಿಸಿದ್ದ ಪುರುಷರ ಮತ್ತು ಮಹಿಳೆಯರ ತಾಲೂಕು ಮಟ್ಟದ ಹಗ್ಗಜಗ್ಗಾಟ ಮತ್ತು ವಲಯ ಮಟ್ಟದ ಆಟೋಟ ಸ್ವರ್ಧೆ ಬಂಟ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಮದಪದವು ವಲಯ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಅಮ್ಮು ರೈ ಹರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಇರಾ ವಲಯ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಬಾಲಾಜಿಬೈಲು ಶುಭ ಹಾರೈಸಿದರು. ಮಂಗಳೂರು ಬಂಟರ…

Read More

ದಿನಾಂಕ 13-8-2023 ರ ರವಿವಾರ ಯುವ ಬಂಟರ ಸಂಘ (ರಿ) ಕಂಬಳಕಟ್ಟ ಕೊಡವೂರು ಇವರ ಆಶ್ರಯದಲ್ಲಿ ನಡೆಯಲಿರುವ ‘ಆಟಿ ಒಂಜಿ ನೆಂಪು’ ಸಭಾ ಕಾರ್ಯಕ್ರಮದಲ್ಲಿ ಶ್ರೀ ಯಶ್ ಪಾಲ್ ಎ.ಸುವರ್ಣ (ಮಾನ್ಯ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ ) ಇವರ ಗೌರವ ಉಪಸ್ಥಿತಿಯಿದ್ದು, ಮುಖ್ಯ ಅತಿಥಿಯಾಗಿ ಶ್ರೀ ಬಿ ಜಯಕರ್ ಶೆಟ್ಟಿ ಇಂದ್ರಾಳಿ (ಪ್ರಧಾನ ಕಾರ್ಯದರ್ಶಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು) ಇವರು ಭಾಗವಹಿಸಲಿದ್ದಾರೆ. ಆಟಿ ತಿಂಗಳ ಮಹತ್ವದ ಬಗ್ಗೆ ಮಾತುಕತೆಯನ್ನು ಶ್ರೀಮತಿ ವಂದನಾ ರೈ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕರು ಜೇಸಿ ವಿದ್ಯಾಸಂಸ್ಥೆ ಕಾರ್ಕಳ) ಇವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂದಗಾಣಿಸಿ ಕೊಡಬೇಕು ಎಂದು ಶ್ರೀ ಶಿವಪ್ರಸಾದ್ ಶೆಟ್ಟಿ , ಮಜಲಮನೆ (ಅಧ್ಯಕ್ಷರು), ಶ್ರೀ ಪುಷ್ಪರಾಜ ಶೆಟ್ಟಿ, ಆದಿ ಉಡುಪಿ (ಪ್ರಧಾನ ಕಾರ್ಯದರ್ಶಿ), ಶ್ರೀ ರಮೇಶ್ ಶೆಟ್ಟಿ, ಮೂಡುಬೆಟ್ಟು (ಖಜಾಂಚಿ ) ಹಾಗೂ ಸರ್ವ ಸದಸ್ಯರು, ಪದಾಧಿಕಾರಿಗಳು ಕೋರಿದ್ದಾರೆ. ವಿ.…

Read More

ಮಾನವರಿಗೆ ಮದುವೆ ಒಂದು ಸಾಮಾಜಿಕ ಸದಾಚಾರ. ಮನುಷ್ಯನಿಗೆ ನಾಗರೀಕತೆ ತಿಳಿಯದ ಆ ಕಾಲಘಟ್ಟದಲ್ಲಿ ಸ್ತ್ರೀ – ಪುರುಷರ ಮಧ್ಯೆ ಮದುವೆಯೆನ್ನುವುದೇ ಇರಲಿಲ್ಲ. ಸಾಮಾನ್ಯ ಪ್ರಾಣಿಗಳಂತೆ ಇಚ್ಛಕಾಮುಕರಾಗಿ ಇರುತ್ತಿದ್ದರು. ಮಕ್ಕಳನ್ನು ಸಾಕುವುದು, ಬೆಳೆಸುವುದು ಕೇವಲ ಹೆಂಗಸರ ಕೆಲಸವಾಗಿತ್ತು. ಹೆಣ್ಣನ್ನು ಸಂಭೋಗ ಸುಖಕ್ಕೋಸ್ಕರ ಮಾತ್ರ ಗಂಡಸು ಉಪಯೋಗಿಸುತ್ತಿದ್ದ ಕಾಲವದು. ಹೆಣ್ಣನ್ನು ಬಲಾತ್ಕಾರವಾಗಿ ಅನುಭವಿಸುತ್ತಿದ್ದರು. ಪುರುಷರು ಹೆಣ್ಣಿಗಾಗಿ ತಮ್ಮ ತಮ್ಮೊಳಗೆ ಕಾದಾಡುತ್ತಿದ್ದರು. ಪುರುಷರ ಜೊತೆ ಕಾದಾಡುವ ಶಕ್ತಿಯಿಲ್ಲದ ಹೆಣ್ಣು ಅಸಹಾಯಕಳಾಗಿ ಪುರುಷರ ಕಾಮದಾಹಕ್ಕೆ ಬಲಿಯಾಗುತ್ತಿದ್ದಳು. ಹೆಣ್ಣಿಗೆ ರಕ್ಷಣೆಯೇ ಇರುತ್ತಿರಲಿಲ್ಲ. ಇದನ್ನು ಅರಿತ ಋಷಿ ಸಮೂಹ ಒಂದು ಗಂಡಿಗೆ ಒಂದು ಹೆಣ್ಣು ಎಂಬಂತೆ ಕಟ್ಟಳೆಯನ್ನು ವಿಧಿಸಿದರು. ಅಲ್ಲಿಂದ ಹೆಣ್ಣಿಗೆ ರಕ್ಷಣೆಯ ಹಾದಿ ಸುಗಮವಾಯಿತು. ಸುಖ ಜೀವನಕ್ಕೆ ಹೆಣ್ಣು ಪಾದರ್ಪಣೆ ಮಾಡಿದಳು. ಸ್ತ್ರೀಯರನ್ನು ಪರಪುರುಷರ ಕಾಮಲಾಲಾಸೆಯಿಂದ ಕಾಪಾಡುವುದಕ್ಕಾಗಿ ಆ ಸಮಯದಲ್ಲಿ ಪಾತಿವೃತ್ಯ ಎಂಬ ಏಕಪುರುಷ ನಿಯಮವನ್ನು ಮಾಡಿದರು. ಈ ನಿಯಮದಿಂದಾಗಿ ಸ್ತೀಯರನ್ನು ಮನೆಯಲ್ಲಿ ಬಿಟ್ಟು ಪುರುಷ ಆಹಾರ ಸಂಪಾದನೆ ಮಾಡಿಕೊಂಡು ಬಂದು ರಕ್ಷಣೆ ನೀಡುವಂತಾಯಿತು. ಮುಂದೆ ಇದಕ್ಕೆ ಋಷಿಮುನಿಗಳು…

Read More

ಹಂಪಿ ಎಂದಾಕ್ಷಣ ರಾಜ ವೈಭವಗಳು ಕಣ್ಮಂದೆ ಎದ್ದು ಬರುತ್ತದೆ. ಇಂತಹ ಪಾರಂಪರಿಕ ‌ತಾಣವನ್ನು ಸುತ್ತಾಡುವುದೇ ಒಂದು ಸೊಗಸು. ವಾರಂತ್ಯದಲ್ಲಿ ಪಯಣಿಸಲು ಹಂಬಲಿಸುವ ಮನಕ್ಕೆ ಖಂಡಿತವಾಗಿ ಎರಡು ದಿನ ಸುತ್ತಿ ನೋಡುವಷ್ಟು ಇಲ್ಲಿದೆ. ಅದರಲ್ಲೂ ಮುಖ್ಯವಾಗಿ ವಿರೂಪಾಕ್ಷ ದೇವಾಲಯದ ಕೌತುಗಳು ಅನೇಕ. ಮುಂಜಾನೆ ಸುಮಾರು 8 ಗಂಟೆಗೆ ಹಂಪಿಯ ಅಂಗಣ ತಲುಪಿದ್ದೇವು ನಾವು. ಬಿಸಿಲಿನಲ್ಲಿ ಇಲ್ಲಿ ತಿರುಗಾಟ ಕಷ್ಟ ಅಂತ ಬೇಗನೆ ಬಂದು ನೋಡಿದರೆ ನಮ್ಮ ಗೈಡ್ ಒಂದು ಕಡೆ ನಮ್ಮ ವಾಹನ ನಿಲ್ಲಿಸಿ ‌ಹೇಳಿದರು, ಇಲ್ಲಿಂದಲೇ ‌ನಡೆದು ಸಾಗಬೇಕು. ಹಾಗೆ ಅಂದದ್ದೆ ತಡ ಕಾಲ್ನಡಿಗೆಯಲ್ಲಿ ಸಾಗಲು ಕೆಲವರು ನಮ್ಮಿಂದ ಅಸಾಧ್ಯ ಎಂದು ವಾಹನದಲ್ಲೇ ಕುಳಿತಿದ್ದರು. “ಕಣ್ಣಿದ್ದರೆ ಕನಕ‌ಗಿರಿ, ಕಾಲಿದ್ದರೆ‌ ಹಂಪಿ‌ ಎಂದೂ‌ ಹಂಪಿಯನ್ನು ನಡೆದು ‌ನೋಡು. ಉಜ್ಜಯಿನಿಯನ್ನು ಕುಂತು ನೋಡು” ಎಂದು ಬಣ್ಣಿಸಿದ್ದು ನಿಜವಾಗಿಯೂ ಸತ್ಯದ ನುಡಿ. ಈ ಕಲಾತ್ಮಕತೆಯನ್ನು ಗುರುತಿಸುವ ಒಳಗಣ್ಣು‌ ಬೇಕು. ಬಗೆದಷ್ಟು ದೊರಕುವ ಕೌತುಕ ಮೊಗೆದಷ್ಟೂ ಹೊಸತನ ಮೂಕ ವಿಸ್ಮಯಗೊಳಿಸುವ ಶಿಲ್ಪಕಲಾ ಬೆರಗು ಇಲ್ಲಿದೆ. ಆಚೆ ಈಚೆ…

Read More

ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಇದೀಗ ಯುವ ಬಂಟರ ಸಂಘ, ಕಂಬಳಕಟ್ಟ- ಕೊಡವೂರು ಇದರ ದಶಮಾನೋತ್ಸವದ ಪ್ರಯುಕ್ತ ಸಂಘ ವ್ಯಾಪ್ತಿಯ 25 ವರ್ಷದೊಳಗಿನ ಯುವಕ – ಯುವತಿಯರಿಗೆ ಬ್ಯಾಂಕಿಂಗ್ – ಫೈನಾನ್ಸ್, ಐಟಿ, ಏವಿಯೇಷನ್, ಟ್ರಾವೆಲ್ ಟೂರಿಸಂ, ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಸಂದರ್ಶನ ಕಲೆಯೊಂದಿಗೆ ಕೌಶಲ್ಯ ತರಬೇತಿ ನೀಡಿ ಉತ್ತಮ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ರೂಪಿಸಿದೆ. ಈ ತರಬೇತಿ ಪಡೆಯಲು ಇಚ್ಛಿಸುವ 10 ಅಭ್ಯರ್ಥಿಗಳಿಗೆ ಶುಲ್ಕದ ಶೇ. 50% ಸ್ಕಾಲರ್ ಶಿಪ್ ನ್ನು ಉನ್ನತಿ ಕೆರಿಯರ್ ಅಕಾಡೆಮಿಯು ನೀಡಲಿದೆ. ಈ ತರಬೇತಿಯೊಂದಿಗೆ ಅಭ್ಯರ್ಥಿಗಳು ಆನ್ ಲೈನ್ ಬಿ.ಕಾಂ, ಬಿಬಿಎ, ಬಿಸಿಎ, ಬಿಎ ಪದವಿಯನ್ನು ಅಥವಾ ಎಂಕಾಂ, ಎಂಬಿಎ, ಎಂಸಿಎ, ಎಂಎ ಸ್ನಾತಕೋತ್ತರ ಪದವಿಯನ್ನು ಪಡೆಯಲು ಇಚ್ಛಿಸಿದಲ್ಲಿ ಯುಜಿಸಿ ಮಾನ್ಯತೆಯುಳ್ಳ ದೇಶದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಾದ ಜೈನ್ ಯೂನಿವರ್ಸಿಟಿ, ಬೆಂಗಳೂರು, ಹಿಂದೂಸ್ತಾನ್ ಯೂನಿವರ್ಸಿಟಿ, ಚೆನ್ನೈ, ವಿಜ್ಞಾನ್ ಯೂನಿವರ್ಸಿಟಿ,…

Read More

ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು ಮುನ್ನಡೆದು ಸಾಧಕರಾಗಿ ಕಾಣಸಿಗುವವರು ವಿರಳ. ಇಂತಹ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಡೊಂಬಿವಲಿ, ಥಾಣೆ, ಮುಂಬಯಿ ಪರಿಸರದಲ್ಲಿ ಸಮಾಜಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೇ ಅದು ಅಡ್ವೋಕೇಟ್ ಸುರೇಶ್ ಶ್ಯಾಮ ಶೆಟ್ಟಿಯವರು. ಎಡಗೈಯ್ಯಲ್ಲಿ ನೀಡಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವ ಮನೋಧರ್ಮವನ್ನು ರೂಡಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು. ಸಾಂತೂರ್ ಬಾಳಿಕೆ ಶ್ಯಾಮ ಶೆಟ್ಟಿಯವರ ಸುಪುತ್ರರಾಗಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರು ಉಡುಪಿ ಜಿಲ್ಲೆಯಲ್ಲಿ ಮುಗಿಸಿ ಡಿಗ್ರೀ ಹಾಗೂ…

Read More

ಬದುಕಿನ ಮೂಲ ಸಂಸ್ಕೃತಿಯಾಗಿರುವ ಕೃಷಿ ಮತ್ತು ಮಣ್ಣಿನ ಗುಣವನ್ನು ಮುಂದಿನ ಯುವ ಪೀಳಿಗೆಗೆ ಅರ್ಥವತ್ತಾಗಿ ಪರಿಚಯಿಸುವ ಕಾರ್ಯ ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಿದೆ ಎಂದು ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ಬಂಟರ ಸಂಘ ಸುರತ್ಕಲ್ ವತಿಯಿಂದ ನಡೆದ ಕೃಷಿ, ತೋಟಗಾರಿಕೆ ಮತ್ತು ಪಶು ಇಲಾಖೆ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ನಡೆದ ಸಾರ್ವಜನಿಕ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಬೆನ್ನುಲುಬು ಕೃಷಿಕರಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರ ಕೃಷಿಕರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಅದರ ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯಬೇಕು ಎಂದರಲ್ಲದೆ ಬಂಟರ ಸಂಘವು ಈ ನಿಟ್ಟಿನಲ್ಲಿ ಕೃಷಿಗೆ ಅತ್ಯಂತ ಮಹತ್ವ ನೀಡಿದ್ದು ಶ್ಲಾಘನೀಯ ಎಂದರು. ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಕ್ಕಾರ್ ಸಿರಿ ಕುರಲ್ ರೈತ ಸಂಸ್ಥೆಯ ಅಧ್ಯಕ್ಷ ಸದಾಶಿವ ಶೆಟ್ಟಿ ಎಕ್ಕಾರು,…

Read More

ಕಡಂದಲೆ ಎಂದರೆ ನೆನಪಾಗುತ್ತಾರೆ ಹೆಸರಾಂತ ಸಾಹಿತಿಗಳು, ರಾಜಕಾರಣಿಗಳು, ಗುತ್ತಿನ ಗತ್ತಿನ ಬಂಟ ಮನೆತನದ ಉದ್ಯಮಿಗಳು, ಶಿಕ್ಷಣ ತಜ್ಞರು. ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತ ತುಳುನಾಡಿನ ಪವಿತ್ರ ನೆಲ ತುಳುವ ತುಂಡರ‌ಸರು ವೈಭವದಿಂದ ಆಳಿದ ನೆಲ. ಇಲ್ಲಿನ ಕಡಂದಲೆ ಪರಾರಿ ಎಂಬ ಕೂಡು ಕುಟುಂಬದ ಬಂಟರ ಐತಿಹಾಸಿಕ ಹಿನ್ನೆಲೆಯ ಸದಸ್ಯರೆಲ್ಲರೂ ಮೇಧಾವಿಗಳು, ಕಾನೂನು ಜ್ಞಾನವುಳ್ಳ ನ್ಯಾಯ ತೀರ್ಮಾನ ಸಮರ್ಥರು, ಪರಿಶ್ರಮಿಗಳು, ಕೃಷಿ ಬೇಸಾಯ ನಿರತರು, ಕೆಲವರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಅಂಥಹ ಪ್ರತಿಷ್ಠಿತ ಕುಟುಂಬದಲ್ಲಿ ಜನ್ಮ ತಾಳಿ ಇಂದು ಹತ್ತಾರು ಕ್ಷೇತ್ರಗಳಲ್ಲಿ ಶಾಶ್ವತ ಕೀರ್ತಿ ಪಡೆದ ಮಹನೀಯರಲ್ಲಿ ಆದರಣೀಯ ಕಡಂದಲೆ ಪರಾರಿ ಪ್ರಕಾಶ್ ಎಲ್ ಶೆಟ್ಟರು ಕೂಡಾ ಒಬ್ಬರು. ಬೊಡಂತಿಲ ಪಡು ದಿವಂಗತ ಲೋಕಯ್ಯ ಶೆಟ್ಟಿ ಹಾಗೂ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀಮತಿ ಜಲಜಾ ಎಲ್ ಶೆಟ್ಟಿ ದಂಪತಿಯರ ಕೀರ್ತಿ ವರ್ಧನ ಸಂತಾನವಾಗಿ ಜನಿಸಿದ ಶೆಟ್ಟರು ಬಾಲ್ಯದ ದಿನಗಳಿಂದಲೇ ಆಳ ಚಿಂತನೆಯ ಹೊಳೆವ ಕಂಗಳ ಪ್ರತಿಭಾವಂತ ಬಾಲಕರಾಗಿದ್ದರು. ಪ್ರಕಾಶ್…

Read More