ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಹಿನ್ನೆಲೆಯಲ್ಲಿ ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ಮಾನವ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ, ಜಿಡಿಪಿಯಲ್ಲಿ ಭಾರತ ಮುಂದಿದ್ದರೂ ಮಾನವ ಹಕ್ಕುಗಳಲ್ಲಿ ಹಿಂದಿನ ಸ್ಥಾನ ಪಡೆಯಲು ಕಾರಣವೇನು? ಕುರಿತ ಸಂವಾದವನ್ನು ಡಿಸೆಂಬರ್ 9 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಬ್ಬನ್ ಪಾರ್ಕ್ ನಲ್ಲಿರುವ ಕರ್ನಾಟಕ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಯು.ಆರ್ ಉಪೇಂದ್ರ ಶೆಟ್ಟಿ ವಹಿಸಲ್ಲಿದ್ದಾರೆ. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ. ಅಶೋಕ್ ಬಿ ಹಿಂಚಿಗೇರಿ ಉಪಸ್ಥಿತರಿರುವರು. ಅತಿಥಿ ವಕ್ತಾರರಾಗಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸೀನಿಯರ್ ಫೆಲೋ, ಮಿತ್ತಲ್ ದಕ್ಷಿಣ ಏಷ್ಯಾ ಸಂಸ್ಥೆಯ ನಿವೃತ್ತ ಮಹಾ ಕಾರ್ಯದರ್ಶಿ ಅಮ್ನೆಸ್ಟಿ ಸಲೀಲ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ನಿರ್ದೇಶಕಿ ಡಾ| ಮೀರಾ ಕೃಷ್ಣಪ್ಪ ಉಪಸ್ಥಿತರಿರುವರು.













































































































