Author: admin
“ಬಂಟರ ಯಾನೆ ನಾಡವರ ಮಾತೃ ಸಂಘದ ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಬಂಟರು ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸಿ ನಡೆಯುವ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ. ಈ ಮೂಲಕ ಎಲ್ಲಾ ಜಾತಿ ಧರ್ಮಗಳ ಜನರ ಮಧ್ಯೆ ಪ್ರೀತಿ, ಸೋದರತೆ ಬೆಳೆದು ಸ್ವಸ್ಥ ಸಾಮರಸ್ಯದ ಸಮಾಜ ನಿರ್ಮಾಣವಾಗಲಿ. ನಾನು ಸ್ಪೀಕರ್ ಆದ ಬಳಿಕ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಟ್ಟು ಸರಕಾರವನ್ನು ಸೂಕ್ತ ರೀತಿಯಲ್ಲಿ ನಡೆಯಲು ನನ್ನಿಂದಾದ ಸಹಕಾರ ನೀಡುತ್ತಿದ್ದೇನೆ. ಆದರೆ ಇದೇ ಕಾರಣಕ್ಕೆ ಸ್ಪೀಕರ್ ಸರಿಯಿಲ್ಲ ಎನ್ನುವವರೂ ಇದ್ದಾರೆ. ವಿಧಾನಸಭೆಯಲ್ಲಿ ನಡೆಯುವ ಗಲಾಟೆಗಳು ಕೇವಲ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತದೆ. ಹೊರಗಡೆ ಎಲ್ಲಾ ಪಕ್ಷಗಳ ನಾಯಕರು ಹೆಗಲ ಮೇಲೆ ಕೈ ಹಾಕಿಕೊಂಡು ಸ್ನೇಹಿತರಂತೆ ಇರುತ್ತಾರೆ. ಹೀಗಾಗಿ ಕೇವಲ ಗಲಾಟೆಯನ್ನು ಮಾತ್ರ ಟಿವಿಯಲ್ಲಿ ನೋಡಿ ಇಲ್ಲಿ ಗಲಾಟೆ ಮಾಡಿಕೊಳ್ಳಬೇಡಿ” ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಿವಿಮಾತು ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ…
ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಸಹಯೋಗದಲ್ಲಿ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ಸುರತ್ಕಲ್ ಬಂಟರ ಸಂಘದ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಬಂಟರ ಸಂಘದ ಮಾಜಿ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ ಅವರು, “ಆಟಿ ತಿಂಗಳು ತುಳುವರಲ್ಲಿ ಅತ್ಯಂತ ಭಿನ್ನವಾದುದು. ನಮ್ಮ ಪೂರ್ವಜರು ಆಟಿ ತಿಂಗಳನ್ನು ಕಷ್ಟದಿಂದ ಕಳೆಯುತ್ತಿದ್ದರು. ಇಂದಿನ ಕಾಲದಲ್ಲೂ ಯುವಜನತೆ ಆಟಿ ತಿಂಗಳ ಆಚರಣೆ, ಸಂಪ್ರದಾಯವನ್ನು ಮರೆಯದೆ ಇರುವುದು ಶ್ಲಾಘನೀಯ” ಎಂದರು. ಬಳಿಕ ಮಾತಾಡಿದ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಎ ಕೋಟ್ಯಾನ್ ಅವರು, “ಆಟಿ ತಿಂಗಳ ಕಷ್ಟ, ವಿಶೇಷವಾದ ತಿಂಡಿ ತಿನಿಸು, ನಮ್ಮ ಹಿರಿಯರ ನೆನಪು ಎಲ್ಲವೂ ಸದಾ ನೆನಪಲ್ಲಿ ಉಳಿಯುವಂತದ್ದು. ಅದನ್ನು ಇಂದು ಮಾತ್ರವಲ್ಲ ಮುಂದಿನ ಪೀಳಿಗೆಯ ಮಕ್ಕಳೂ ಕೂಡಾ ತಿಳಿಯುವಂತಾಗಬೇಕು. ಆಟಿ ತಿಂಗಳ ತುಳುನಾಡಿನ ಆಚರಣೆಗಳು ಮುಂದಿನ ತಲೆಮಾರಿಗೂ ಹೀಗೆಯೇ ಉಳಿಯಬೇಕು” ಎಂದರು. ಪುತ್ತೂರು ಕ್ಷೇತ್ರದ…
ಭಾರತದ ರಂಗಭೂಮಿಯಲ್ಲಿ ಯಕ್ಷಗಾನ ಒಂದು ಹೆಮ್ಮೆಯ ಕಲೆ, ಯಕ್ಷಗಾನ ಸಂಶೋಧನೆಯ ಮೂಲಕ ನೋಡಿದಾಗಲೂ ಯಕ್ಷಗಾನ ವಿಶ್ವಪ್ರಸಿದ್ದಿಯನ್ನು ಪಡೆದ ಕಲೆಯಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹೊಸ ಭಾಷ್ಯೆಯನ್ನು ಬರೆದಿದೆ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಷಿ ತಿಳಿಸಿದರು. ಅಡ್ಯಾರ್ ಗಾರ್ಡನ್ ನಲ್ಲಿ ಜರಗಿದ ಯಕ್ಷಧ್ರುವ ಪಟ್ಲ ಸಂಭ್ರಮ 2023 ರ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಲ ಭಾಗವತರ ಜನಪ್ರಿಯತೆ ಮತ್ತು ಜವಾಬ್ದಾರಿ ಏನು ಎಂಬುದನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನ ಮೂಲಕ ತಿಳಿಯಬಹುದು. ಪ್ರಸ್ತಾವಿಕವಾಗಿ ಮಾತನಾಡಿದ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮಾತನಾಡಿ ಯಕ್ಷಗಾನದ ಪಾರಂಪರಿಕೆ, ಸೊಗಡನ್ನು ಉಳಿಸುವ ಪ್ರಯತ್ನವೇ ಯಕ್ಷಗಾನ ಸ್ಪರ್ಧೆಯ ಉದ್ದೇಶವಾಗಿದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಹೇಶ್ ಮೋಟರ್ಸ್ ಸಂಸ್ಥೆಯ ಮಾಲಕ ಜಯರಾಮ ಶೇಖ, ಬಹರೈನ್ – ಸೌದಿ ಘಟಕದ ಅಧ್ಯಕ್ಷ ವಿ…
ಬಾಳ ತೊತ್ತಾಡಿ ಶ್ರೀ ನಾಗ ಬ್ರಹ್ಮ ಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳು ಸಂಪೂರ್ಣಗೊಂಡಿದ್ದು ಮೇ 2 ರಿಂದ ಮೇ 7 ರ ತನಕ ಶ್ರೀ ದೇವಸ್ಥಾನದಲ್ಲಿ ಶ್ರೀ ನಾಗಬ್ರಹ್ಮ ದೇವರ ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶಾಭೀಷೇಕ ಕಾರ್ಯಕ್ರಮಗಳು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿವೆ. ಮೇ 2 ರಂದು ತೋರಣ, ಉಗ್ರಾಣ ಮುಹೂರ್ತ, ಕುಣಿತ ಭಜನೆ, ಮೇ.4 ರಂದು ಶ್ರೀ ನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠೆ, ಮೇ. 5 ರಂದು ನಾಗದರ್ಶನ,ಮೇ.7 ರಂದು ಬ್ರಹ್ಮ ಕಲಶಾಭಿಷೇಕ ಹಾಗೂ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ.
ಸಹಕಾರಿ ವ್ಯವಸಾಯಿಕ ಸಂಘ ನಿ. ಶಿರ್ವ ಇಲ್ಲಿಯ ಪ್ರಧಾನ ಕಛೇರಿಯ ಆವರಣದಲ್ಲಿ ನೂತನ ಗೋದಾಮು ಹಾಗೂ ಬಹು ಸೇವಾ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು 21.02.2022 ರಂದು ಜರಗಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ಕುತ್ಯಾರು ಪ್ರಸಾದ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಜರಗಿತು. ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಸಮಾಜ ಸೇವಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, DCC ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಜೇಶ್ ರಾವ್, ಸಹಕಾರ ಸಂಘಗಳ ಸಹಾಯಕ ನಿಭಂದಕರಾದ ಶ್ರೀ ಅರುಣ್ ಕುಮಾರ್, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ. ರಾಮರಾಯ ಪಾಟ್ಕರ್, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲತಾ ಎಸ್ ಆಚಾರ್ಯ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯೋಗಿನಿ ಶೆಟ್ಟಿಯವರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮವನ್ನು ವೇದ ಮೂರ್ತಿ ಶ್ರೀನಿವಾಸ ಭಟ್ ಶಿರ್ವ ಅವರು ನೆರವೇರಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವಾರಿಜ ಪೂಜಾರ್ತಿಯವರು ಸ್ವಾಗತಿಸಿದರು ಹಾಗೂ ಮುಖ್ಯ…
ಮಲ್ಪೆ ವೀರಮಾರುತಿ ಫ್ರೆಂಡ್ಸ್ ತೆಂಕನಿಡಿಯೂರು ಇವರ ಆಶ್ರಯದಲ್ಲಿ ತೆಂಕನಿಡಿಯೂರು ಹೈಸ್ಕೂಲ್ ಮೈದಾನದಲ್ಲಿ ಮಲ್ಪೆ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ – 2023 ಜರುಗಿತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಮಾತನಾಡಿ, “ಸೋಲು ಗೆಲುವಿಗಿಂತ ಕ್ರೀಡಾಸ್ಪೂರ್ತಿ ಬಹುಮುಖ್ಯ. ಯುವಕರು ಕ್ರೀಡಾಸ್ಪೂರ್ತಿಯಿಂದ ಆಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಹಿಂದೆ ಮಲ್ಪೆ ಪರಿಸರದ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು ಯುವಕರು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ವೀರ ಮಾರುತಿ ಫ್ರೆಂಡ್ಸ್ ಸಾಧನೆ ಶ್ಲಾಘನೀಯ” ಎಂದರು. ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನವೆಂಬರ್ ದಿನಾಂಕ 18 ಮತ್ತು 19 ರಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಉಡುಪಿಯಲ್ಲಿ ಆಯೋಜಿಸಲಾದ “ಉದ್ಯೋಗ ಮೇಳ” ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಅತಿಥಿಯಾಗಿ ಭಾಗವಹಿಸಿದ ಸಂದರ್ಭ ವೇದಿಕೆಯಲ್ಲಿ ನೆರೆದಿರುವ ಗಣ್ಯತಿ ಗಣ್ಯರು ಗೌರವದಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಯವರಾದ ಶ್ರೀಮತಿ ಡಾ. ಕೆ. ವಿದ್ಯಾಕುಮಾರಿ, ಎಂ.ಆರ್.ಜಿ. ಗ್ರೂಪ್ಸ್ ನ ಆಡಳಿತ ನಿರ್ದೇಶಕ ಶ್ರೀ ಕೆ. ಪ್ರಕಾಶ್ ಶೆಟ್ಟಿ, ಶಾಸಕರಾದ ಸನ್ಮಾನ್ಯ ಶ್ರೀ ಸಿ. ಟಿ. ರವಿ, ಶ್ರೀ ಯಶ್ ಪಾಲ್ ಸುವರ್ಣ, ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಪ್ರಸಾದ್ ರಾಜ್ ಕಾಂಚನ್, ಶ್ರೀ ಮನೋಹರ್ ಶೆಟ್ಟಿ ಸಾಯಿರಾಧ, ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ವಿಜಿತ್ ಶೆಟ್ಟಿ, ಶ್ರೀ ಉಪೇಂದ್ರ ಶೆಟ್ಟಿ, ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಶ್ರೀ ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರಿ, ಶ್ರೀ ಕಾರ್ತಿಕ್ ಶೆಟ್ಟಿ…
ಬಂಟರ ಸಂಘ ಪುಣೆ ಉತ್ತರ ವಲಯ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗ ವರ ಮಹಾಲಕ್ಷ್ಮಿ ಪೂಜೆ ,ಅರಶಿನ ಕುಂಕುಮ ಕಾರ್ಯಕ್ರಮ
ಪುಣೆ : ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿಂದ ವರ ಮಹಾಲಕ್ಷ್ಮಿ ಪೂಜೆಯ ಶುಭ ದಿನವಾದ ಅ 25 ಶುಕ್ರವಾರದಂದು ಅರಶಿನ ಕುಂಕುಮ ಕಾರ್ಯಕ್ರಮವು ಕನ್ನಡ ಸಂಘದ ಡಾ ಶ್ಯಾಮ್ ರಾವ್ ಕಲ್ಮಾಡಿ ಕನ್ನಡ ಶಾಲೆಯ ಸಭಾಂಗಣದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು . ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಮಿಳಾ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿದ ಈ ಅರಸಿನ ಕುಂಕುಮ ಕಾರ್ಯಕ್ರಮದಂಗವಾಗಿ ಮೊದಲಿಗೆ ಸಮಿತಿಯ ಪದಾಧಿಕಾರಿಗಳು ಶ್ರೀ ಮಹಾಲಕ್ಷ್ಮಿ ದೇವಿ ಫೋಟೋಗೆ ಪೂಜೆ ಗೈದು ಮಹಾಮಂಗಳಾರತಿ ಬೆಳಗಿದರು ,ನಂತರ ಅಧ್ಯಕ್ಷೆ ಪ್ರಮಿಳಾ ಶೆಟ್ಟಿ ಮತ್ತು ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಯಶೋದ ಎಂ.ಶೆಟ್ಟಿ ಪ್ರಾರ್ಥನೆ ಗೈದರು. ಮಹಿಳಾ ವಿಭಾಗದ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು , ನಂತರ ಪ್ರಧಾನ ಕಾರ್ಯಕ್ರಮವಾದ ಅರಶಿನ ಕುಂಕುಮ ಕಾರ್ಯಕ್ರಮ ನೆರೆವೇರಿತು ,ಮುತ್ತೈದೆಯರು ಪರಸ್ಪರ ಅರಶಿನ ಕುಂಕುಮ…
ಬಂಟರ ಸಂಘ ಸಾಲೆತ್ತೂರು ವಲಯದಿಂದ ಆಯೋಜಿಸಲಾದ ? “ಆಟಿಡೊಂಜಿ ಬಂಟೆರ್ನ ಸ್ನೇಹಕೂಟ” ವಿಜಯ್ ಶ್ರೀ ಕಲ್ಯಾಣ ಮಂಟಪ ಕುಡ್ತಮುಗೇರುವಿನಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಗಂಟೆ ಒಂಬತ್ತಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘ ಬಂಟ್ವಾಳದ ಕಾರ್ಯದರ್ಶಿ ಶ್ರೀ ಜಗನ್ನಾಥ ಚೌಟ ಮಾಣಿ ವಹಿಸಿಕೊಂಡರು. ಶ್ರೀ ದೇವಣ್ಣ ಆಳ್ವ ಎರ್ಮೆನಿಲೆ ಪ್ರಗತಿಪರ ಕೃಷಿಕರು, ಶ್ರೀ ಜತ್ತಪ್ಪ ಪೂಂಜ ಕೊಡಂಗೆ ಪ್ರಗತಿಪರ ಕೃಷಿಕರು, ಶ್ರೀ ಕೆ.ಎಂ. ಶಿವರಾಮ ಶೆಟ್ಟಿ, ನಿವೃತ ಸೀನಿಯರ್ ಮ್ಯಾನೇಜರ್ ವಿಜಯ ಬ್ಯಾಂಕ್ ಇವರುಗಳು ಗೌರವ ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಸಮಾಜದ ಬಂಟ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ವರ್ಧೆಗಳು, ರಸಮಂಜರಿ ಮನೋರಂಜನಾ ಕಾರ್ಯಕ್ರಮ ಮುಂತಾದವುಗಳು ಜರುಗಿದವು. ಮದ್ಯಾಹ್ನ 12 ರ ನಂತರ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ದೇವಪ್ಪ ಶೇಖ ಅಧ್ಯಕ್ಷರು ಬಂಟರ ಸಂಘ ಸಾಲೆತ್ತೂರು ವಹಿಸಿಕೊಂಡರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದಂತಹ ಶ್ರೀ ಲೋಕೇಶ್ ಶೆಟ್ಟಿ – ಕೋಶಾಧಿಕಾರಿ ಬಂಟರ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಯೂರೋಪ್ ಪ್ರವಾಸದ ಮೊದಲ ದಿನದಂದು ಕನ್ನಡಿಗರು ಯು.ಕೆ ಆಶ್ರಯದಲ್ಲಿ ಲಂಡನ್ ನಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ಯುನೈಟೆಡ್ ಕಿಂಗ್ಡಮ್ (ಯು.ಕೆ) ಸರಕಾರದ ಸಂಸದೆ ಸೀಮಾ ಮಲ್ಹೋತ್ರ, ಮತ್ತು ದೀಪಕ್ ಚೌಧರಿ ಸಚಿವರು (ಸಮನ್ವಯ) ಭಾರತದ ಹೈಕಮಿಷನ್ ಇವರು ಉದ್ಘಾಟಿಸಿದರು. ಯಕ್ಷಗಾನವನ್ನು ನೋಡಿ ಆನಂದಿಸಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಾರ್ಯ ವೈಖರಿಯನ್ನು ಶ್ಲಾಘಿಸಿ ಯಕ್ಷಗಾನದ ಈ ಕಲೆಗೆ ವಿಶ್ವಮಾನ್ಯತೆ ಸಿಗುವಲ್ಲಿ ನಮ್ಮ ಸಂಪೂರ್ಣ ಸಹಕಾರ ಇರುವುದಾಗಿ ಘೋಷಿಸಿದರು. ಕನ್ನಡಿಗರು ಯು.ಕೆ ಯ ಮುಖ್ಯಸ್ಥ ಗಣಪತಿ ಭಟ್, ಡಾ. ಅನಂತರಾಮ್ ಶೆಟ್ಟಿ, ಯುಎಸ್ಎ ಘಟಕದ ಮುಖ್ಯಸ್ಥರು ಉಳಿ ಯೋಗೀಂದ್ರ ಭಟ್, ಫೌಂಡೇಶನ್ ತಂಡದ ಮುಖ್ಯಸ್ಥರು ಪಣಂಬೂರು ವಾಸು ಐತಾಳ್ ಯುಎಸ್ ಎ, ಫ್ರೊ ಎಂ ಎಲ್ ಸಾಮಗ ಉಪಸ್ಥಿತರಿದ್ದರು. ಪಟ್ಲ ಫೌಂಡೇಶನ್ ತಂಡದವರಿಂದ ಕೃಷ್ಣಲೀಲೆ ಕಂಸವಧೆ ಎನ್ನುವ ಪ್ರಸಂಗ ನಡೆಯಿತು.