ಮಾಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಿಂದಿ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರೊಫೆಸರ್ ನಾಗರತ್ನ ರಾವ್ ಮಾತನಾಡಿ, ಭಾಷೆ ಎಲ್ಲರನ್ನೂ ಒಗ್ಗೂಡಿಸುವ ಪರಸ್ಪರನ್ನು ಬೆಸೆಯುವ ಕೆಲಸ ಮಾಡುತ್ತದೆ. ಹಿಂದಿ ಇಂದು ಕೇವಲ ಒಂದು ಭಾಷೆ ಮಾತ್ರವಾಗಿ ಉಳಿದಿಲ್ಲ ಬದಲಾಗಿ ಹಲವಾರು ಉದ್ಯೋಗಗಳನ್ನು ನೀಡುವ ಒಂದು ಅವಕಾಶವಾಗಿ ಮಾರ್ಪಟ್ಟಿದೆ. ದಕ್ಷಿಣ ಕನ್ನಡದಲ್ಲಿರುವ ಕೇಂದ್ರ ಸರ್ಕಾರದ ಕಾರ್ಯಾಲಯಗಳಲ್ಲಿ ಹಲವಾರು ಅವಕಾಶಗಳು ನಮ್ಮ ಮುಂದಿದೆ. ವಿದ್ಯಾರ್ಥಿಗಳು ಬ್ಯಾಂಕ್ ಗಳಲ್ಲಿ ಎಂಆರ್ಪಿಎಲ್, ಎಂಸಿಎಫ್, ರೈಲ್ವೆ ಮತ್ತು ಏಪೆರ್Çೀರ್ಟ್ ಹೀಗೆ ಹತ್ತು ಹಲವು ಕಡೆ ಹಿಂದಿ ಉದ್ಯೋಗಾವಕಾಶಗಳು ತೆರೆದಿವೆ ಎಂದರು.
ಕಳೆದ 9 ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಸ್ನಾತಕೋತ್ತರ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳು ಇಂದು ನೂರಕ್ಕೆ ನೂರು ಉದ್ಯೋಗಗಳನ್ನು ಹೊಂದಿರುವುದು ಇದಕ್ಕೆ ಸಾಕ್ಷಿ ಎಂದರು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ ಮಾತನಾಡಿ, ಹಿಂದಿ ಭಾಷೆ ಭಾರತವನ್ನು ಒಂದು ಸೂತ್ರವಾಗಿ ಒಗ್ಗೂಡಿಸಿದೆ. ಈ ಏಕ ಸೂತ್ರ ಭಾರತದ ಇಂದಿನ ಅವಶ್ಯಕತೆಯೂ ಆಗಿದೆ. ಪೂರ್ವದಿಂದ ಪಶ್ಚಿಮದ ವರೆಗೆ ದಕ್ಷಿಣದಿಂದ ಉತ್ತರದವರೆಗೆ ಹಿಂದಿ ತನ್ನ ಪ್ರಭಾವವನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಹಿಂದಿ ಭಾರತದಲ್ಲಿ ಅತ್ಯಂತ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ. ಭಾಷೆಯಲ್ಲಿ ಭೇದವಿಲ್ಲ. ಎಲ್ಲವೂ ಸಮಾನವಾದದು. ಅದರಲ್ಲಿ ಯಾವ ಮೇಲು ಕೀಳು ಎಂಬ ಭಾವವಿಲ್ಲ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರಯ ಹೆಗಡೆ ಮನುಷ್ಯನ ಅವಿಷ್ಕಾರಗಳಲ್ಲಿ ಉತ್ಕøಷ್ಟವಾದ ಅವಿಷ್ಕಾರ ಭಾಷೆ. ಇದನ್ನು ಮಾನವನ ಏಳಿಗೆಗಾಗಿ ಬಳಸಬೇಕು. ಭಾಷೆಗಳು ಪರಸ್ಪರ ಪೂರಕವಾಗಿರುತ್ತವೆಯೇ ವಿನಾಃ ಒಂದನ್ನೊಂದು ದ್ವೇಷಿಸುವುದಿಲ್ಲ ಎಂದರು.
ಕಾರ್ಯಕ್ರಮವನ್ನು ಕಾರ್ತಿಕ್ ನಿರೂಪಿಸಿ, ಸಮೃದ್ಧಿ ಪ್ರಭು ಸ್ವಾಗತಿಸಿ, ವಿನೆಟ್ ವಾಸ್ ಅತಿಥಿಯನ್ನು ಪರಿಚಯಿಸಿ, ಕುಂಜಲ್ ನಾಯಕ್ ವಂದಿಸಿದರು.