Author: admin
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ ನೆಲ್ಯಾಡಿ ಇವರ ಆಶ್ರಯದಲ್ಲಿ ‘ಸೋಣಡೊಂಜಿ ಬಂಟರೆ ಸೇರಿಗೆ’, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರವು ಆಗಸ್ಟ್ 18ರಂದು ನೆಲ್ಯಾಡಿ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು. ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು, ನೆಲ್ಯಾಡಿ ವಲಯ ಬಂಟರ ಸಂಘದ ಮೇಲೆ ಅಭಿಮಾನ, ನಂಬಿಕೆ, ಪ್ರೀತಿ, ವಿಶ್ವಾಸವಿದೆ. ಈ ಕಾರ್ಯಕ್ರಮದಲ್ಲಿ ನೆಲ್ಯಾಡಿ ವಲಯದ ಬಂಟ ಬಾಂಧವರೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ವಲಯದಲ್ಲಿ ಬಡವರಿಗೆ ಮನೆ ನಿರ್ಮಾಣ, ಮದುವೆ, ಚಿಕಿತ್ಸೆಗೆ ನೆರವು ನೀಡುತ್ತಿರುವುದು ಶ್ಲಾಘನೀಯ. ನೆಲ್ಯಾಡಿ ವಲಯ ಬಂಟರ ಸಂಘ ಎಲ್ಲರಿಗೂ ಮಾದರಿಯಾಗಿದೆ. ಈ ರೀತಿಯ ಕಾರ್ಯಕ್ರಮ ಎಲ್ಲಾ ವಲಯಗಳಲ್ಲೂ ಆಗಬೇಕು ಎಂದು ಹೇಳಿದರು. ಏಳು ಜನ್ಮದ ಪುಣ್ಯದ ಫಲವಾಗಿ…
ಕರಾವಳಿ ಕರ್ನಾಟಕ ನೃತ್ಯ ನಿರ್ದೇಶಕರ ಸಂಘ (ರಿ) ಮಂಗಳೂರು ವತಿಯಿಂದ ಕದ್ರಿ ಪಾರ್ಕ್ ಸಮೀಪದ ಬಾಲ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಗೌರವ ಸನ್ಮಾನ ಸಮಾರಂಭ ನಡೆಯಿತು. ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಬಿ. ರವೀಂದ್ರ ಶೆಟ್ಟಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಸಾಧಕ ರೇಮಂಡ್ ಡಿ ಸೋಜಾ ಅವರನ್ನು ಸ್ವಾತಂತ್ರ್ಯೋತ್ಸವ ಗೌರವ ಸನ್ಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭ ಅಮೃತ ಔಷಧಾಲಯ ತೊಕ್ಕೊಟ್ಟು ಇದರ ಮಾಲೀಕ ಡಾ.ಲಯನ್ ಗಣೇಶ್ ಕುಮಾರ್, ಮಲ್ಲಿಕಟ್ಟೆ ಸುಮಸಾಧನ ಸಭಾಭವನದ ಮಾಲೀಕರಾದ ಸುಮತಿ ಹೆಗ್ಡೆ, ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀಶ್ ಶೆಟ್ಟಿ, ಗೌರವಾಧ್ಯಕ್ಷ ಸೂರಜ್ ಶೆಟ್ಟಿ ಬಜ್ಪೆ, ಉಪಾಧ್ಯಕ್ಷರಾದ ಪ್ರಕಾಶ್ ಸಿಂಪೋಣಿ ಹಾಗೂ ಪ್ರಮೋದ್ ಆಳ್ವ ಉಪಸ್ಥಿತರಿದ್ದರು. ರಾಜೇಶ್ ಭಟ್ ಮೂಡಬಿದ್ರೆ ಕಾರ್ಯಕ್ರಮವನ್ನು ನಿರೂಪಿಸಿದರು.
ಕರ್ನಾಟಕ ರಾಜ್ಯ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಆಳ್ವಾಸ್ನ ಪುರುಷರ ಹಾಗೂ ಮಹಿಳೆಯರ ತಂಡ ಒಟ್ಟು ೬ ವಿಭಾಗದಲ್ಲೂ ಸಮಗ್ರ ತಂಡ ಪ್ರಶಸ್ತಿಗೆ ಪಾತ್ರ ಸತತ ಮೂರನೇ ವರ್ಷ ಆಳ್ವಾಸ್ ಸಮಗ್ರ ಚಾಂಪಿಯನ್ಸ್
ಮೂಡುಬಿದಿರೆ: ಕರ್ನಾಟಕ ರಾಜ್ಯ ವೇಟ್ ಲಿಫ್ರ್ಸ್ ಸಂಸ್ಥೆ (ರಿ.) ಹಾಗೂ ಮೈಸೂರು ಜಿಲ್ಲಾ ವೇಟ್ ಲಿಫ್ರ್ಸ್ ಸಂಸ್ಥೆ (ರಿ.) ಇವರ ಜಂಟಿ ಆಶ್ರಯದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ- ಯೂತ್, ಜೂನಿಯರ್, ಸೀನಿಯರ್ ಸೇರಿದಂತೆ ಇರುವ ಒಟ್ಟು ಆರು ವಿಭಾಗಳಲ್ಲೂ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪುರುಷರ ವಿಭಾಗದಲ್ಲಿ ಒಟ್ಟು ೯ ಚಿನ್ನ, ೧೦ ಬೆಳ್ಳಿ, ೬ ಕಂಚಿನೊಂದಿಗೆ ೨೫ ಪದಕ ಪಡೆದರೆ, ಮಹಿಳೆಯರ ವಿಭಾಗದಲ್ಲಿ ೯ ಚಿನ್ನ ೧೪ ಬೆಳ್ಳಿ ಹಾಗೂ ೫ ಕಂಚು ಸೇರಿದಂತೆ ಒಟ್ಟು ೨೮ ಪದಕ ಪಡದು, ಎರಡು ವಿಭಾಗದಲ್ಲಿ ಭರ್ಜರಿ ೫೩ ಪದಕ ಪಡೆದು ಪಾರಮ್ಯ ಮೆರೆದರು. ಪುರುಷರ ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು -೨ ಚಿನ್ನ, ೧ ಬೆಳ್ಳಿ, ೩ ಕಂಚು, ಜೂನಿಯರ್ ವಿಭಾಗದಲ್ಲಿ- ೩ ಚಿನ್ನ, ೪…
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹಾಗೂ ತಂಡದ ತುಳು ಚಲನಚಿತ್ರ “ಜೈ” ಇದರ ಟೈಟಲ್ ಅನಾವರಣ ಕಾರ್ಯಕ್ರಮ ಸಿಟಿ ಸೆಂಟರ್ ಮಾಲ್ ನಲ್ಲಿ ಜರುಗಿತು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಳಿಕ ಮಾತಾಡಿದ ಸ್ಪೀಕರ್ ಯು.ಟಿ ಖಾದರ್ ಅವರು, “ಹಿಂದೆ ತುಳು ಭಾಷೆ ನಮ್ಮ ಜಿಲ್ಲೆಗೆ ಮಾತ್ರ ಸೀಮಿತ ಎಂಬ ಮಾತಿತ್ತು. ಆದರೆ ಇಂದು ತುಳು ರಂಗಭೂಮಿ ಮತ್ತು ಸಿನಿಮಾ ರಂಗದಿಂದಾಗಿ ವಿದೇಶಗಳಲ್ಲೂ ತುಳು ಭಾಷೆ ಪ್ರಚಾರವಾಗುತ್ತಿದೆ. ರೂಪೇಶ್ ಶೆಟ್ಟಿ ಅವರಂತಹ ಯುವಕರು ಇಂದು ತುಳು ಭಾಷೆಯ ಬೆಳವಣಿಗೆಗೆ ಶ್ರಮ ಪಡುತ್ತಿದ್ದಾರೆ. ಅವರಿಗೆ ಶುಭಾಶಯಗಳು. ಸಿನಿಮಾ ಒಳ್ಳೆಯ ರೀತಿಯಲ್ಲಿ ಮೂಡಿ ಬಂದು ಜನರ ಮನ ಗೆಲ್ಲಲಿ” ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಂಸದ ಬೃಜೇಶ್ ಚೌಟ ಮಾತನಾಡಿ, “ತುಳು ಭಾಷೆಯ ಮೇಲೆ ಮಮತೆ ಇಟ್ಟು ಸಿನಿಮಾ ಮಾಡಿದ್ದಾರೆ. ಇಂದು…
ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ) : ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸೆ ಶಿಬಿರ
ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ) ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಟ್ರಸ್ಟಿನ ಕಾರ್ಯವೈಖರಿ ಸರ್ವರಿಗೂ ಮಾದರಿಯಾದದ್ದು ಹಾಗೂ ಇದನ್ನು ಫಲಾನುಭವಿಗಳು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೊಳಹಳ್ಳಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುರೇಂದ್ರ ಶೆಟ್ಟಿ ಹೇಳಿದರು. ಅವರು ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ) ಮೊಳಹಳ್ಳಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣ ವಿಭಾಗ) ಉಡುಪಿ ಇವುಗಳ ಜಂಟಿ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಪೊರೆ ಶಸ್ತ್ರಚಿಕಿತ್ಸೆ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜಯರತ್ನ ಟ್ರಸ್ಟ್ ನ ಪ್ರವರ್ತಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಮಾತನಾಡಿ, ಜನರು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ನಿಯಮಿತವಾಗಿ…
ತುಳುವರ ಸಭೆ ಸಮಾರಂಭಗಳಲ್ಲಿ ಕೈಗೆ ಮೈಕ್ ಸಿಕ್ಕ ಕೂಡಲೇ “ನಮ್ಮದು ಪರಶುರಾಮ ಸೃಷ್ಟಿ” ಎಂದು ಹೇಳುತ್ತಲೇ ಭಾಷಣ ಶುರು ಮಾಡುವವರು ಹಲವರಿದ್ದಾರೆ. ಆದರೆ ಈ ಕಥೆಯನ್ನು ಅವರೆಂದೂ ವಿಶ್ಲೇಷಿಸಿರುವುದಿಲ್ಲ. ನಿಜವಾಗಿ ತುಳುನಾಡನ್ನು ಪರಶುರಾಮ ಸೃಷ್ಠಿಸಿದ್ದು ಎಂಬ ಪೌರಾಣಿಕ ಕಥೆಗೆ ಯಾವುದೇ ಐತಿಹಾಸಿಕ ಅಥವಾ ವೈಜ್ಞಾನಿಕ ಆಧಾರಗಳಿಲ್ಲ. ಕೇರಳದ ತ್ರಿವೇಂದ್ರಂನಿಂದ ಹಿಡಿದು ಗುಜರಾತ್ನ ಉಮರ್ಗಾಮ್ವರೆಗಿನ ನಮ್ಮ ಪಶ್ಚಿಮ ಕರಾವಳಿ ಸೃಷ್ಠಿಯಾಗಿದ್ದು, ಸುಮಾರು ನಾಲ್ಕರಿಂದ ಆರು ಕೋಟಿ ವರ್ಷಗಳ ಹಿಂದೆ, ಅದೂ ಆಫ್ರಿಕಾ ಖಂಡದಿಂದ ತುಂಡಾಗಿ ಸರಿದು ಬಂದ ಭೂಭಾಗವಿದು. ಕೇರಳದಿಂದ ಮಹಾರಾಷ್ಟ್ರ ಗುಜರಾತ್ ಗಡಿಯವರೆಗೆ ಇರುವ ಸಹ್ಯಾದ್ರಿ ಪರ್ವತ ಶ್ರೇಣಿ ಹುಟ್ಟಿಕೊಂಡಿದ್ದೇ ಆಗ ನಡೆದ ಈ ಭೂಭಾಗಗಳ ಘರ್ಷಣೆಯಿಂದ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇಂಟರ್ನೆಟ್ ಸರ್ಚ್ನಲ್ಲಿ ಗೋಂಡ್ವಾನಾ ಲ್ಯಾಂಡ್ ಅಥವಾ ಕಾಂಟಿನೆಂಟಲ್ ಡ್ರಿಫ್ಟ್ ಎಂದು ಬರೆದು ಹುಡುಕಿದರೆ ಇದರ ಪೂರ್ಣ ಮಾಹಿತಿ ವೀಡಿಯೋದೊಂದಿಗೆ ಸಿಗುತ್ತದೆ. ಭೂ ವಿಜ್ಞಾನಿಗಳಿಗೆ ನಮ್ಮ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಿಕ್ಕಿರುವ ಜುರಾಸಿಕ್ ಯುಗದ ಸಸ್ಯಗಳ ಕಲ್ಲಾಗಿರುವ ಪಳೆಯುಳಿಕೆಯ ಆಧಾರದಲ್ಲಿ…
ದಿ. ತಿಮ್ಮಪ್ಪ ಪಕ್ಕಳ ಪೆರ್ಮಂಕಿಗುತ್ತು ಅವರ ಸವಿನೆನಪಿಗಾಗಿ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಆವರಣದಲ್ಲಿ ನಿವೇಶನ ನೀಡಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಚಾಲನೆ ನೀಡಿ ಲೋಕಾರ್ಪಣೆಗೊಳಿಸಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಅನಿತಾ ಚೆರಿಯಾನ್, ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಕುಮಾರ್, ವಸಂತಿ ತಿಮ್ಮಪ್ಪ ಪಕ್ಕಳ ಎಕ್ಕಾರು ಬೆಳ್ಳಿಮಾರುಗುತ್ತು, ಮೊಮ್ಮಗ ರಾಹುಲ್ ಅಶೋಕ್ ಪಕ್ಕಳ ಪೆರ್ಮಂಕಿಗುತ್ತು ಹಾಗೂ ಉದ್ಯಮಿ ಸುಧೀರ್ ಪಕ್ಕಳ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರಿಗೆ ಮಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅಭಿನಂದನಾ ಪ್ರಶಸ್ತಿ ಪತ್ರ ನೀಡಿ, ಸನ್ಮಾನಿಸಲಾಯಿತು. 2023 – 24 ರ ಸಾಲಿನ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ (ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ) ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆಯಲು ಡಾ. ದೀಪಕ್ ರೈ ಕಾರಣರಾಗಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸನ್ಮಾನಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಆರೋಗ್ಯಾಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.
ದೇಶಪ್ರೇಮ, ಧೈರ್ಯ, ಸಾಹಸ, ಕರ್ತವ್ಯ ನಿಷ್ಠೆಗೆ ಪಡುಕೂಡೂರು ಬೀಡು ಎಂ. ಡಿ ಅಧಿಕಾರಿ ಸಾಕ್ಷಿ. ಅವರು ದೇಹಕ್ಕೆ ಬೆಲೆ ಕೊಡದೇ ಜನಕ್ಕೆ ಬೆಲೆ ಕೊಟ್ಟು ದೊಡ್ಡವರಾದರು. ಒಕ್ಕಲಿನ ಸರ್ವರಿಗೂ ಭೂಮಿ ಬಿಟ್ಟುಕೊಟ್ಟು ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು. ಪಡುಕುಡೂರು ತ್ಯಾಗದ ಭೂಮಿ. ಅದೇ ಭೂಮಿಯ ಜನತೆಗೆ ಬಡವರು ಗೇಣಿದಾರರಿಗೆ ಭೂಮಿ ಕೊಟ್ಟು ಬದುಕು ಕೊಟ್ಟವರು. ಅವರು ಮರೆಯಲಾರದ ಅದ್ಭುತ ಶಕ್ತಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದರು. ಅವರು ಹೆಬ್ರಿ ತಾಲೂಕಿನ ಪಡುಕುಡೂರಿನಲ್ಲಿ ಸ್ವಾತಂತ್ರ್ಯೋತ್ಸವದಂದು ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಅಧಿಕಾರಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಅಧಿಕಾರಿಯವರ ಬಗೆಗೆ ಇರುವ ಅಭಿಮಾನಕ್ಕೆ ಪಡುಕುಡೂರು ಸಾಕ್ಷಿಯಾಗಿದೆ. ಪುತ್ಥಳಿ ಲೋಕಾರ್ಪಣೆ ಮಾಡುವ ಅವಕಾಶ ನನಗೆ ದೊರೆತಿರುವುದು ನನ್ನ ಭಾಗ್ಯ. ಎಂ.ಡಿ ಅಧಿಕಾರಿ ದಂಪತಿಗಳ ಪ್ರತಿಮೆ ಒಟ್ಟಿಗೆ ಪ್ರತಿಷ್ಠೆ ಆಗಬೇಕು ಎಂಬುದು ನನ್ನ ಆಶಯ. ನಾನು ಈ ಎತ್ತರಕ್ಕೆ ಏರಲು ಕಾರಣರಾದವರಲ್ಲಿ ಎಂ. ಡಿ ಅಧಿಕಾರಿಯವರು ಕೂಡ ಒಬ್ಬರು ಎಂದು…
ವಿದ್ಯಾಗಿರಿ: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿ ಕೊಂಡಾಗ ಯಶಸ್ಸು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಮತ್ತು ಮಹಿಳಾ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಪಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಋಣಾತ್ಮಕ ಚಿಂತೆಯನ್ನು ಬಿಡಬೇಕು. ಭಾವನಾತ್ಮಕ ವಿಷಯಗಳಿಗೆ ಮಹತ್ವ ನೀಡಬಾರದು. ದೈನಂದಿನ ಬದುಕಿನಲ್ಲಿ ಶೈಕ್ಷಣಿಕವಾಗಿ ಪರಿಶ್ರಮ ಹಾಕಬೇಕು. ವಾಣಿಜ್ಯ ಶಿಕ್ಷಣಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರೆತಿದ್ದು, ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕಿದರೆ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಹಾಗೂ ಕಲಾವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ…















