ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ವತಿಯಿಂದ ಅಕ್ಟೋಬರ್ 19 ರ ಶನಿವಾರ ಮತ್ತು ಅಕ್ಟೋಬರ್ 20 ರ ರವಿವಾರದಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ಬಂಟರ ಭವನ ಭಂಡಾರಿ ಎಸ್ಟೇಟ್ ಕುರ್ಲಾ ಪೂರ್ವ ಇಲ್ಲಿ ಶೃಂಗಾರ ವಸ್ತುಗಳು ಮತ್ತು ಅಗತ್ಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಪ್ರದರ್ಶನ ಮತ್ತು ಮಾರಾಟದಲ್ಲಿ ಡೈಮಂಡ್ ಫ್ಯಾಕ್ಟರಿಯ ವಿವಿಧ ವಜ್ರದ ಆಭರಣಗಳು, ಚಿನ್ನದ ಆಭರಣಗಳು, ವಿವಿಧ ರೀತಿಯ ಸೀರೆಗಳು, ಡ್ರೆಸ್ ಮತ್ತು ಡ್ರೆಸ್ ಮೆಟೀರಿಯಲ್, ಇಮಿಟೇಷನ್ ಜ್ಯುವೆಲರಿ, ಕಾಟನ್ ಕುರ್ತಿಗಳು ಮತ್ತು ಗಾರ್ಮೆಂಟ್ಸ್, ವಿವಿಧ ಶೈಲಿಯ ಆಭರಣಗಳು, ಲೆದರ್ ಬ್ಯಾಗ್ ಪರ್ಸ್ ಗಳು, ಬ್ಯಾಗ್ ಗಳು, ಬೆಡ್ ಶೀಟ್ ಗಳು, ದೀಪಾವಳಿಯ ಡೆಕೋರೇಷನ್ ಗಳು, ತೋರಣಗಳು, ದೀಪಗಳು, ಭಗವದ್ಗೀತೆ ಪುಸ್ತಕಗಳು ಹಾಗೂ ಇನ್ನಿತರ ದಿನನಿತ್ಯದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇರುವುದು.
ಡೈಮಂಡ್ ಫ್ಯಾಕ್ಟರಿ ಅವರ ಸಂಪೂರ್ಣ ಸಹಕಾರದೊಂದಿಗೆ ನಡೆಯುವ ಈ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆಯನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾಡಲಿದ್ದಾರೆ. ಅತಿಥಿಗಳಾಗಿ ನಾಲಾಸೋಪಾರ ರಿಜೇನ್ಸಿ ಹೋಟೆಲ್ ನ ಮಾಲಕಿ ಶಶಿಕಲಾ ಶಶಿಧರ್ ಶೆಟ್ಟಿ ಇನ್ನಂಜೆ, ಶುಭಾರಂಭ ಹೋಟೆಲ್ಸ್ ಮತ್ತು ರೆಸಾರ್ಟ್ ಪ್ರೈ ಲಿ. ನ ಮ್ಯಾನೇಜಿಂಗ್ ಡೈರೆಕ್ಟರ್ ಪಲ್ಲವಿ ಅರವಿಂದ್ ಶೆಟ್ಟಿ ಮತ್ತು ಬ್ಯಾಂಕ್ ಆಫ್ ಬರೋಡಾ ಕಾರ್ಪೊರೇಟ್ ಸೆಂಟರ್ ನ ಪ್ರಬಂಧಕಿ ನವೀನಾ ಹರೀಶ್ ಶೆಟ್ಟಿ ಉಪಸ್ಥಿತರಿರುವರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿಯವರ ಮುತುವರ್ಜಿಯಲ್ಲಿ ನಡೆಯುವ ಶೃಂಗಾರ ಮತ್ತು ಅಗತ್ಯ ವಸ್ತುಗಳ ಪ್ರದರ್ಶನ, ಮಾರಾಟ ಮತ್ತು ಫನ್ ಫೇರ್ ನಲ್ಲಿ ಎಲ್ಲಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯರು, ಎಲ್ಲಾ ಪ್ರಾದೇಶಿಕ ಸಮಿತಿಯ ಸದಸ್ಯ ಬಾಂಧವರು ಹಾಗೂ ಇತರ ಸಮಾಜ ಬಾಂಧವರು ಭಾಗವಹಿಸಿ ಪ್ರದರ್ಶನವನ್ನು ಯಶಸ್ವಿಗೊಳಿಸಬೇಕೆಂದು ಬಂಟರ ಸಂಘ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕವಿತಾ ಐಆರ್. ಶೆಟ್ಟಿ, ಕಾರ್ಯದರ್ಶಿ ಆಶಾ ಸುದೀರ್ ಶೆಟ್ಟಿ, ಕೋಶಾಧಿಕಾರಿ ಸುಚಿತಾ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ವನಿತಾ ವೈ ನೋಂಡಾ, ಜತೆ ಕೋಶಾಧಿಕಾರಿ ಸರೋಜ ಬಿ. ಶೆಟ್ಟಿ ವಿನಂತಿಸಿದ್ದಾರೆ.