Author: admin

ಮೀರಾ ಭಯಂದರ್ ಮಹಾನಗರ ಪಾಲಿಕೆಯು ಮೀರಾ ರೋಡಿನ ವಿದ್ಯಾ ನಗರಿಯ ಫಸ್ಟ್ ಸ್ಟೆಪ್ ಗ್ಲೋಬಲ್ ಶಾಲೆಯ ಬಳ್ಳಿ ಸೌತ್ ಇಂಡಿಯನ್ ಭವನ ನಿರ್ಮಾಣದ ಶಿಲಾನ್ಯಾಸವನ್ನು ಉತ್ತರ ಮುಂಬಯಿಯ ಸಂಸದ ಗೋಪಾಲ್ ಸಿ ಶೆಟ್ಟಿ ಮತ್ತು ಮೀರಾ ಭಯಂದರ್ ನ ಶಾಸಕ ಪ್ರತಾಪ್ ಸರ್ ನಾಯಕ್ ಅವರೊಂದಿಗೆ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ಯವರು ಜೂನ್ 28 ರಂದು ನೆರವೇರಿಸಿದರು. ಅನಂತರ ಧಾರ್ಮಿಕ ಪೂಜಾ ಕಾರ್ಯಗಳು ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಶೆಟ್ಟಿ ದಂಪತಿಯ ಯಜಮಾನಿಕೆಯಲ್ಲಿ ವೇದಮೂರ್ತಿ ಕೃಷ್ಣರಾಜ ತಂತ್ರಿಯವರು ನಡೆಸಿದರು. ಪೂಜಾ ಕಾರ್ಯಗಳು ನಡೆದ ಬಳಿಕ ಬಂಟರ ಸಂಘ ಮುಂಬಯಿಯ ಆಯೋಜನೆಯಲ್ಲಿ ತುಳು ಕನ್ನಡಿಗರ ಸಹಕಾರದೊಂದಿಗೆ ಮೀರಾ ರೋಡಿನ ಠಾಕೂರ್ ಮಾಲ್ ಮತ್ತು ಪ್ರಸಾದ್ ಇಂಟರ್ ನ್ಯಾಷನಲ್ ಹೋಟೆಲ್ ಬಳಿ ಇರುವ ಭಾರತರತ್ನ ಗಾನ ಸಾಮ್ರಾಟ ಲತಾ ಮಂಗೇಶ್ಕರ್ ನಾಟ್ಯ ಗೃಹ ಆಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು…

Read More

ದೇಶದ ನೂತನ ಸಂಸತ್‌ ಭವನ ಉದ್ಘಾಟನೆಗೆ ಸಿದ್ಧವಾಗಿದ್ದು, ಇದೇ ರವಿವಾರ ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕಟ್ಟಡ ಉದ್ಘಾಟನೆ ನಡೆಸಲಿದ್ದು, ಇದಕ್ಕೆ ವಿಪಕ್ಷಗಳ ಕಡೆಯಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಕಾಂಗ್ರೆಸ್‌ ನೇತೃತ್ವದಲ್ಲಿ 20 ರಾಜಕೀಯ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿವೆ. ಸಾಮಾನ್ಯವಾಗಿ ಇಂಥ ಕಟ್ಟಡಗಳನ್ನು ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಯವರೇ ಉದ್ಘಾಟನೆ ಮಾಡಬೇಕು. ಆದರೆ ಈಗ ಪ್ರಧಾನಿಯವರು ಉದ್ಘಾಟನೆ ನಡೆಸುತ್ತಿದ್ದಾರೆ. ಪ್ರಧಾನಿಯವರು ಸರಕಾರದ ಮುಖ್ಯಸ್ಥರೇ ಹೊರತು, ದೇಶದ ಮುಖ್ಯಸ್ಥರಲ್ಲ. ಹೀಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಲೇ ಲೋಕಾರ್ಪಣೆ ಮಾಡಿಸಬೇಕಿತ್ತು ಎಂಬುದು ವಿಪಕ್ಷಗಳ ನಿಲುವು. ಈ ವಿಚಾರದಲ್ಲಿ ವಿಪಕ್ಷಗಳು ವೃಥಾ ರಾಜಕಾರಣ ಮಾಡುತ್ತಿವೆ ಎಂಬುದು ಬಿಜೆಪಿ ಆರೋಪ. ಈ ಹಿಂದೆಯೂ ಸಂಸತ್‌ನ ಕೆಲವು ವಿಭಾಗಗಳು ಮತ್ತು ಗ್ರಂಥಾಲಯವನ್ನು ಆಗಿನ ಪ್ರಧಾನಿಗಳೇ ಉದ್ಘಾಟನೆ ಮಾಡಿದ್ದರು. ಈಗೇಕೆ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಉದ್ಘಾಟನೆ ವಿಚಾರದಲ್ಲಿ ಈ ಮಟ್ಟದ ವಿವಾದ…

Read More

ಜಪ್ಪು ಬಂಟರ ಸಂಘ ವಾರ್ಷಿಕ ಮಹಾಸಭೆ ಇತ್ತೀಚಿಗೆ ಎಮ್ಮೆಕೆರೆಯ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ಪಿ. ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಗೋಪಿನಾಥ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಸಚ್ಚಿದಾನಂದ ಆಳ್ವ ಸ್ವಾಗತಿಸಿದರು. 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣಾಧಿಕಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ವಸಂತ ಶೆಟ್ಟಿ ನೆರವೇರಿಸಿದರು. ಸುನಿಲ್ ಶೆಟ್ಟಿ ಮುಳಿಹಿತ್ಲು ಅಧ್ಯಕ್ಷರಾಗಿ ಆಯ್ಕೆಯಾದರು. ಬಾಲಕೃಷ್ಣ ಶೆಟ್ಟಿ, ಸರಿತಾ. ಎಸ್. ಶೆಟ್ಟಿ ಉಪಾಧ್ಯಕ್ಷರು, ನಯನಾ ಪಿ. ಶೆಟ್ಟಿ ಕಾರ್ಯದರ್ಶಿ, ಸಚ್ಚಿದಾನಂದ ಆಳ್ವ ಜತೆ ಕಾರ್ಯದರ್ಶಿ, ಆಶಾ ಜೆ. ರೈ, ಕೆ. ಗೋಪಿನಾಥ್ ಶೆಟ್ಟಿ ಕೋಶಾಧಿಕಾರಿ, ಜಗದೀಶ್ ರೈ, ಬಾಲಮಣಿ ಜೆ. ಶೆಟ್ಟಿ ಕ್ರೀಡಾ ಕಾರ್ಯದರ್ಶಿ, ಪೂರ್ಣಿಮಾ ಎನ್. ಶೆಟ್ಟಿ, ರೇಖಾ ಆರ್ ನಾಯರ್ ಸಾಂಸ್ಕೃತಿಕ ಕಾರ್ಯದರ್ಶಿ, ಲಕ್ಶ್ಮಣ ಶೆಟ್ಟಿ ಗೌರವಾಧ್ಯಕ್ಷ, ಜೆ. ಜೀವನ್ ಶೆಟ್ಟಿ ಆಂತರಿಕ ಲೆಕ್ಕ ಪರಿಶೋಧಕ, ರಾಜ್ ಕುಮಾರ್ ಶೆಟ್ಟಿ ಪಿ, ಕೃಷ್ಣರಾಜ ಸುಲಾಯ, ರಾಜಶೆಟ್ಟಿ, ವಸಂತ…

Read More

ಸುಸರ್ಜಿತ ತಾಲೂಕು ಆಸ್ಪತ್ರೆ, ಇಂಡಸ್ಟ್ರಿ ನಿರ್ಮಾಣ, ನೀರಿನ ಸಮಸ್ಯೆಗೆ ಮುಕ್ತಿ, ಉದ್ಯೋಗಾವಕಾಶ ಸೃಷ್ಟಿ ಜೊತೆಗೆ ಕಂದಾಯ, ಸಬ್‌ ರಿಜಿಸ್ಟರ್‌ ಸೇರಿದಂತೆ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕತೆ ನೀಡಲು ಕನಸು ಕಂಡಿದ್ದೇವೆ ಅದರಂತೆ ಕೆಲಸ ಮಾಡಲಿದ್ದೇವೆ ಇದಕ್ಕಾಗಿ ಮತದಾರರು ಹೆಚ್ಚು ಅಂತರದಿಂದ ಗೆಲ್ಲಿಸಬೇಕು ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಡಾ| ಗೋವಿಂದಬಾಬು ಪೂಜಾರಿ ಹೇಳಿದರು. ಕಾರ್ಯಕರ್ತರಿಗಾಗಿಯೇ ನಾವು ಕಾರ್ಯಕರ್ತರ ಶ್ರಮ ತಿಳಿದಿದೆ ಅವರಿಗಾಗಿ ಜೀವನವೇ ಮೂಡಿಪಾಗಿಡುತ್ತೇವೆ. ಯಾವುದೇ ಸಮಸ್ಯೆಗಳಿದ್ದರು ಬಿಟ್ಟುಕೊಡುವುದೇ ಇಲ್ಲ, ಕ್ಷೇತ್ರದ ಜನಸಾಮಾನ್ಯರು, ತಾಯಿಯಂದಿರು ಮತ ನೀಡುವ ಮೂಲಕ ಸಾಮಾನ್ಯ ವ್ಯಕ್ತಿಯನ್ನು ಕೈ ಬೀಡುವುದಿಲ್ಲ ಎನ್ನುವುದನ್ನು ದೇಶಕ್ಕೆ ಸಾರಿ ಸಾರಿ ಹೇಳುವ ಅವಕಾಶ ನಮ್ಮ ಮುಂದಿದೆ ಎಂದರು. ನಿಮ್ಮೊಂದಿಗೆ ಚರ್ಚಿಸಿ ಅನುದಾನ ವಾರ್ಡ್‌ ಮತ್ತು ಗ್ರಾಮದಲ್ಲಿ ಪಕ್ಷದ ಬಗ್ಗೆ ಪಂ. ಸದಸ್ಯರು, ಕಾರ್ಯಕರ್ತರು ಇಟ್ಟಿರುವ ವಿಶ್ವಾಸವೇ ಗೆಲುವಿಗೆ ಕಾರಣವಾಗಲಿದೆ. ಸಮಗ್ರ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಪಂ.ಸದಸ್ಯರು, ಕಾರ್ಯಕರ್ತರು ಯೋಚಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯೋಜನೆಗಳು ಏನು ಬರುತ್ತದೆ, ಅನುದಾನಗಳನ್ನು ಎಲ್ಲಿ, ಹೇಗೆ ನೀಡಬೇಕು…

Read More

ಪ್ರತಿ ವರ್ಷದಂತೆ ಪುಣೆ ಕನ್ನಡ ಸಂಘದ ಪುರಂದರದಾಸರ ಕೀರ್ತನೆ ಸ್ಪರ್ಧೆಯು ಸಂಘದ ಕನ್ನಡ ಹೈಸ್ಕೂಲಿನ ದಿ. ಗುಂಡುರಾಜ್ ಎಂ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕುಶಾಲ್ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಆರಂಭವಾದ ಕಾರ್ಯಕ್ರಮದಲ್ಲಿ,ಮೂರು ವಿಭಾಗಗಳಲ್ಲಿ ಸುಮಾರು 50 ಜನರು ಭಾಗವಹಿಸಿದ್ದರು. ಕನ್ನಡ ಅಲ್ಲದೇ ತೆಲುಗು, ತಮಿಳು ಹಾಗೂ ಮರಾಠಿ ಭಾಷೆಯ ಮಕ್ಕಳು ಭಾಗವಹಿಸಿದ್ದರು. 5 ವರ್ಷದ ಪುಟಾಣಿ ಮಗು ವಿನಿಂದ 76 ವರ್ಷದ ಮಹಿಳೆ ಯ ವರೆಗಿನ ಕನ್ನಡಿಗರು, ತೆಲುಗು, ತಮಿಳು ಹಾಗೂ ಮರಾಠಿ ಭಾಷಿಕರು ದಾಸರ ಪದ ಹಾಡಿ, ಸಂಗೀತಕ್ಕೆ ಭಾಷೆ, ಜಾತಿಯ ಭೇದವಿಲ್ಲ ಎಂದು ತೋರಿಸಿಕೊಟ್ಟರು.ಕನ್ನಡ ಸಂಘದ ಅಧ್ಯಕ್ಷರಾದ ಕುಶಲ ಹೆಗ್ಡೆ ಅವರು ಮಕ್ಕಳ ಹಾಡುಗಳನ್ನು ಕೇಳಿ ಆನಂದಿಸಿದರು. ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನು ಇಂದಿರಾ ಸಾಲಿಯಾನ್ ಮತ್ತು ನಿರ್ಣಾಯಕರು ವಿತರಿಸಿದರು.…

Read More

ನಾಲ್ಕು ವರ್ಷದ ಪುಟ್ಟ ಬಾಲೆ ಇವಳು. ಆದರೆ, ಸಾಧನೆಯ ಪಟ್ಟಿ ನೋಡುತ್ತ ಹೋದರೆ, ಎಂತಹ ವಯಸ್ಕರೂ ನಾಚುವಂತಿದೆ. ಸರಿಯಾಗಿ ಹೆಜ್ಜೆ ಇಟ್ಟು ನಡೆಯುವುದೇ ಕಷ್ಟ ಎನ್ನುವ ಈ ವಯಸ್ಸಿನಲ್ಲಿ ಇಲ್ಲಿನ ಶಾರ್ವಿ, ಸಾಧನೆಗಳ ಮೆಟ್ಟಿಲುಗಳನ್ನು ಹತ್ತುತ್ತಲೇ ಇದ್ದಾಳೆ. ಇಂಡಿಯನ್‌ ಬುಕ್‌ ಆಫ್‌ ರಿಕಾರ್ಡ್, ಇಂಡಿಯಾ ಸ್ಟಾರ್‌ ಐಕಾನ್‌ ಕಿಡ್ಸ್ ಅಚೀವ್‌ಮೆಂಟ್ ಅವಾರ್ಡ್‌, ಮಾಜಿಕ್‌ ಬುಕ್‌ ಆಫ್‌ ರಿಕಾರ್ಡ್‌ ಬೆಸ್ಟ್‌ ಅಚೀವರ್ಸ್‌ ಅವಾರ್ಡ್‌, ಜಾಕಿ ಟ್ಯಾಲೆಂಟ್ ಐಕಾನ್‌ ಅವಾರ್ಡ್‌, ಗ್ರ್ಯಾಂಡ್‌ ಏಷ್ಯನ್‌ ಬುಕ್‌ ಆಪ್‌ ವರ್ಲ್ಡ್‌ ರಿಕಾರ್ಡ್‌, ವಂಡರ್‌ ಬಡ್ಡೀಸ್‌ ಗೋಲ್ಡನ್‌ ಐಕಾನ್‌ ಅವಾರ್ಡ್‌, ಕಾರ್ನಿವಲ್ ಫೆಸ್ಟ್ ಇಂಜ್ ಜಿನಿಯಸ್ ಟ್ಯಾಲೆಂಟ್ ಅವಾರ್ಡ್, ಯೂಥಿಸ್ತಾನ್‌ ಮ್ಯಾಥಮ್ಯಾಟಿಕಲ್‌ ಚಾಲೆಂಜ್‌ ಗೋಲ್ಡನ್‌ ಮೆಡಲ್‌ ಹೀಗೆ ಹತ್ತು ಹಲವು ದಾಖಲೆಗಳು ಶಾರ್ವಿ ಹೆಸರಿನಲ್ಲಿ ದಾಖಲಾಗಿವೆ. ಪಂಜುರ್ಲಿ ಗ್ರೂಪ್‌ನ ರವಿಕಾಂತ್‌ ಶೆಟ್ಟಿ ಹಾಗೂ ದಿವ್ಯಶ್ರೀ ಶೆಟ್ಟಿ ದಂಪತಿಯ ಪುತ್ರಿ ಶಾರ್ವಿಗೆ ಸದ್ಯ ನಾಲ್ಕು ವರ್ಷ ವಯಸ್ಸು. ಈಕೆ 10 ಬಣ್ಣಗಳು, 13 ಆಕೃತಿಗಳು, 15 ಕ್ರೀಡೆಗಳು, 26 ಕಾರು…

Read More

ದೇಶದ ಜನರಿಗೆ ಕೊರೋನಾ ಕಂಟಕ, ಚೀನಾದಲ್ಲಿ ಅಟ್ಟಹಾಸ ಮರೆಯುತ್ತಿದೆ ಡೆಡ್ಲಿ ವೈರಸ್…! ಈಗಲೇ ಕಟ್ಟಚ್ಚರ ಮಾಡಿದರೆ ಭಯಾನಕ ಕಾಯಿಲೆಯಿಂದ ಕರ್ನಾಟಕ ಸಕ್ಸಸ್….! ಕರ್ನಾಟಕಕ್ಕೆ ಡೆಡ್ಲಿ ವೈರಸ್ ಭೀತಿ, ಕರ್ನಾಟಕದಲ್ಲಿ ಕಟ್ಟೇಚ್ಚರಕ್ಕೆ ಸಿ.ಎಂ ಬೊಮ್ಮಾಯಿ ಕರೆ…! ಕಡ್ಡಾಯ ಮಾಸ್ಕ್, ರ್‍ಯಾಂಡಮ್ ಸ್ಯಾಂಪಲ್ಗೆ ಸೂಚನೆ…! – ಕೆ .ಸಂತೋಷ ಶೆಟ್ಟಿ, ಮೊಳಹಳ್ಳಿ ,ಕುಂದಾಪುರ ,ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) ದೇಶವನ್ನ ಕಾಡಿದ ವಿಚಿತ್ರ ಕಾಯಿಲೆಗಳಲ್ಲಿ ಕೊರೋನಾ ಹೆಮ್ಮಾರಿ ಜನರನ್ನ ಭಯ ವಾತಾವರಣದಲ್ಲಿ ಮಲಗಿಸಿತ್ತು ಆದರೆ ಅದೇ ವಾತಾವರಣ ಮತ್ತೆ ನಿರ್ಮಾಣ ಮಾಡಲು ಚೀನಾದಿಂದ ವೈರಸ್ ಗಳು ದೇಶವನ್ನು ಹೊಕ್ಕಲು ದೇಶವನ್ನ ಹಾಳು ಮಾಡಲು ಮತ್ತೆ ಸಂಚುರೂಪಿಸುತ್ತಿದೆ. ಕಾಣದ ಕೈಗಳಿಂದ ನಡೆದಂತಹ ದುರಂತ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿದ ಕರೋನ ವೈರಸ್, ದೇಶಾದ್ಯಂತ ಸಂಚಲನ ಮೂಡಿಸಿ ಸಾವಿರಾರು ಜನರ ಸಾವಿಗೆ ಕಾರಣವಾದ ಡೆಡ್ಲಿ ವೈರಸ್ ಮತ್ತೆ ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿದೆ ಸಾವಿರಾರು ರೋಗಿಗಳು ಬೀದಿ ಹೆಣವಾಗುತ್ತಿದ್ದಾರೆ ಸರಿಯಾದ ಚಿಕಿತ್ಸೆ ಸಿಗದೇ ಸಾರ್ವಜನಿಕರು ಕಂಗಲಾಗುತ್ತಿದ್ದಾರೆ…

Read More

ಕನ್ನಡ ಸೇವಾ ಸಂಘ ಪೊವಾಯಿ ಇದರ ರಜತ ಮಹೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದ ಅಂಗವಾಗಿ ಜನವರಿ ೨ ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಸಂಘದ ಗೌರವ ಅಧ್ಯಕ್ಷ ಮಹೇಶ್ ಯಸ್ ಶೆಟ್ಟಿಹಾಗೂ . ಅಧ್ಯಕ್ಷರಾದ ನ್ಯಾಯವಾದಿ ಅರ್ ಜಿ ಶೆಟ್ಟಿ ಇವರುಗಳ ನೇತೃತ್ವದಲ್ಲಿ ಬಂಟರ ಸಂಘ ಮುಂಬೈಯ ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಡಾಕ್ಟರ್ .ಸತ್ಯಪ್ರಕಾಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶಿಬಿರದಲ್ಲಿ ಸುಮಾರು ೧೫೦ ಮಂದಿ ಭಾಗವಹಿಸಿ ರಕ್ತ ದಾನ ಮಾಡಿದರು.

Read More

ಸಂಪ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ, ಆರ್ಯಾಪು ಗ್ರಾಮದ ಸಂಪ್ಯ ಕಂಬಳತ್ತಡ್ಡ ನಿವಾಸಿ ಸೀತಾರಾಮ ಶೆಟ್ಟಿ (47) ಆ.23ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ನೈತ್ತಾಡಿಯ ಕಲ್ಲಗುಡ್ಡೆಯಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ ಅನ್ನು ಲೀಸ್‌ ಆಧಾರದಲ್ಲಿ ನಡೆಸುತ್ತಿದ್ದ ಸೀತಾರಾಮ ಶೆಟ್ಟಿ ಅವರು ಬುಧವಾರ ಬೆಳಗ್ಗೆ ರೆಸ್ಟೋರೆಂಟ್‌ಗೆ ಬಂದಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ತತ್‌ಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಪುತ್ತೂರು ಯುವ ಬಂಟರ ಸಂಘದ ಅಧ್ಯಕ್ಷರಾಗಿ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷರಾಗಿದ್ದ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

Read More

ಗುರುಪ್ರಸಾದ್ ಹೆಗ್ಡೆ ನಮ್ಮವರು, ನಮ್ಮೂರಿನವರು. ರಂಗಭೂಮಿ, ಸಿನಿಮಾದ ಬಗ್ಗೆ ಆಸಕ್ತಿ ಬೆಳೆಸಿ ಪಡುಬಿದ್ರೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಗುರು ಹೆಗ್ಡೆಯಾಗಿ ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸು ಗಳಿಸುತ್ತಾರೆ. ಯಾವುದೇ ಪಾತ್ರಕ್ಕೂ ಜೀವ ತುಂಬುವ ಕಲಾವಿದರಾಗಿ ಬೆಳೆಯುತ್ತಾರೆ. ಈಗ ನಟನಿಂದ ಸಿನಿಮಾ ನಿರ್ಮಾಣಕ್ಕೆ ಭಡ್ತಿ ಪಡೆದಿದ್ದಾರೆ. ಮುಂದೊಂದು ದಿನ ನಿರ್ದೇಶಕನಾಗಿ ಬೆಳೆಯಬೇಕು ಎಂಬ ಹಂಬಲ, ತುಡಿತವೂ ಇದೆ. ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿಯವರೊಂದಿಗೆ ಅಮರ್ಥ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ. ಗುರು ಹೆಗ್ಡೆ- ಇವರದ್ದು ಕನ್ನಡ ಧಾರಾವಾಹಿ ಹಾಗೂ ಸಿನೆಮಾ ರಂಗದಲ್ಲಿ ಪರಿಚಿತ ಹೆಸರು. ಪಡುಬಿದ್ರಿ ಮೂಲದ ಗುರುಪ್ರಸಾದ್‌ ಹೆಗ್ಡೆ ಅವರು ಸಿನಿಮಾ ರಂಗಕ್ಕೆ ಸೇರಿದ ಬಳಿಕ ಹೆಸರನ್ನು ಗುರು ಹೆಗ್ಡೆ ಎಂದು ಬದಲಾಯಿಸಿಕೊಂಡರು. ಅವರ ಪರಿಶ್ರಮ, ನಟನಾ ಕೌಶಲ ಹಾಗೂ ಅದೃಷ್ಟದಿಂದಾಗಿ ಯಶಸ್ಸು ಕೈ ಹಿಡಿಯಿತು. ಈಗ ಇವರು ಸಿನಿಮಾ ನಿರ್ಮಾಪಕರಾಗಲು ಮುಂದಾಗಿದ್ದು, ಮುಂಬಯಿಯ ಖ್ಯಾತ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರ…

Read More