Author: admin
ಆಳ್ವಾಸ್ ಕಾಲೇಜಿನಲ್ಲಿ ಚಿಗುರು ವಿದ್ಯಾರ್ಥಿ ವೇದಿಕೆಯಿಂದ ‘ಯೋಧನ ಮನ’ ಉತ್ಸಾಹಭರಿತ ಬದುಕು ಸುಂದರ: ಕ್ಯಾ.ಕಾರ್ಣಿಕ್
ವಿದ್ಯಾಗಿರಿ (ಮೂಡುಬಿದಿರೆ): ಸೈನಿಕ ಸವೆಸುವ ಜೀವನ, ನಾವೆಲ್ಲಾ ಸಾಧಿಸಿ ನಡೆಸುವ ಉತ್ಕ್ರುಷ್ಟ ಜೀವನಕ್ಕಿಂತಲೂ ಶ್ರೇಷ್ಠವಾದುದು ಹಾಗೂ ಅನುಕರಣೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು. ಅವರು ಆಳ್ವಾಸ್ ಕಾಲೇಜು ಚಿಗುರು ವಿದ್ಯಾರ್ಥಿ ವೇದಿಕೆ ಶುಕ್ರವಾರ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘ಯೋಧನ ಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಸಾಧಿಸಬೇಕು ಎಂಬ ಛಲ ಪ್ರತಿಯೊಬ್ಬರಲ್ಲಿ ಇರಬೇಕು. ಎಲ್ಲರಲ್ಲೂ ಗುರಿ ಸಾಧಿಸುವ ಛಲ ಇದ್ದಾಗ ದೇಶ ಯಶಸ್ಸು ಕಾಣಲು ಸಾಧ್ಯ’. ಉತ್ಸಾಹ ಇದ್ದಾಗ ಮಾತ್ರ ಬದುಕು ಸುಂದರವಾಗಲು ಸಾಧ್ಯ ಎಂದರು. ‘ಗುರಿ ಸಾಧಿಸುವ ನಿಟ್ಟಿನಲ್ಲಿ ಛಲ ಮುಖ್ಯ. ಇದನ್ನು ನಾವು ಯೋಧರಲ್ಲಿ ಕಾಣಬಹುದು. ಅಂತಹ ಶಿಸ್ತುಬದ್ಧ ಬದುಕು ರೂಢಿಸಿಕೊಳ್ಳಬೇಕು’ ಎಂದರು. ಈ ದೇಶದ ಪ್ರತಿಯೊಬ್ಬ ಪ್ರಜೆಯು ಹಗ್ಗ ಜಗ್ಗಾಟದಲ್ಲಿರುವ ಎರಡು ಗುಂಪುಗಳಂತೆ ವಿರುದ್ಧ ದಿಕ್ಕಿನಲ್ಲಿ ಹಗ್ಗವನ್ನು ಜಗ್ಗದೆ, ರಥವನ್ನು ಎಲ್ಲರೂ ಸೇರಿ ಭಕ್ತಿಯಿಂದ ಒಂದೆಡೆಗೆ ಒಯ್ಯುವಂತೆ, ನಮ್ಮ ಮನಸ್ಥಿತಿ ಹೊಂದಿರಬೇಕು ಎಂದರು . ನಾವೆಲ್ಲ ಜೊತೆಯಾಗಿ ಒಂದೆ ಮನಸ್ಸಿನಿಂದ,…
ಏನೇ ತಿನ್ನಲೀ ಮೊದಲು ನಾವು ರುಚಿಯನ್ನು ಇಷ್ಟ ಪಡುತ್ತೇವೆ. ಬಳಿಕ ಆರೋಗ್ಯದ ಬಗ್ಗೆ ಯೋಚಿಸುತ್ತೇವೆ. ಆರೋಗ್ಯಕರ ಎಂದುಕೊಂಡಿರುವ ಎಲ್ಲಾ ಆಹಾರಗಳು ಪರಿಪೂರ್ಣವಾಗಿರುವುದಿಲ್ಲ. ಪ್ರತಿಯೊಂದರಲ್ಲೂ ಒಂದಲ್ಲ ಒಂದು ರೀತಿಯ ಕೊರತೆಗಳು ಇರುತ್ತವೆ. ಜತೆಗೆ ಒಂದಷ್ಟು ಕಶ್ಮಲಗಳೂ ದೇಹ ಸೇರುತ್ತವೆ. ಇದರಿಂದ ಆರೋಗ್ಯ, ಸೌಂದರ್ಯ ಹಾಳಾಗುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದನ್ನು ನಿರ್ಲಕ್ಷ್ಯಸಿದರೆ ಕ್ಯಾನ್ಸರ್ನಂಥ ಮಾರಕ ಕಾಯಿಲೆಗೂ ಕಾರಣವಾಗುತ್ತದೆ. ಹೀಗಾಗಿ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲೇಬೇಕು. ಇದಕ್ಕೆ ಕೆಲವು ಪಾನೀಯಗಳು ಹೆಚ್ಚು ಉಪಯುಕ್ತ. ಸೇಬು, ಬೀಟ್ರೂಟ್, ಕ್ಯಾರೆಟ್ನೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಜ್ಯೂಸ್ ಮಾಡಿ ಕುಡಿದರೆ ದೇಹಾರೋಗ್ಯ ವೃದ್ಧಿಸುವುದು ಮಾತ್ರವಲ್ಲ ತ್ವಚೆಯ ಕಾಂತಿಯೂ ಹೆಚ್ಚಾಗುತ್ತದೆ. ಈ ಜ್ಯೂಸ್ಗೆ ಸಕ್ಕರೆ ಬಳಸಬಾರದು. ಸ್ವಲ್ಪ ಜೇನು ಸೇರಿಸಿ ಕುಡಿಯಬಹುದು. ಇದು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುತ್ತದೆ. ಸೌತೆಕಾಯಿ, ಪುದೀನಾ, ನಿಂಬೆ ರಸದೊಂದಿಗೆ ನೀರು ಹಾಕಿ ತಯಾರಿಸುವ ಜ್ಯೂಸ್ ಕೂಡ ದೇಹದಲ್ಲಿ ನೀರಿನಾಂಶವನ್ನು ರಕ್ಷಿಸುತ್ತದೆ. ತ್ವಚೆಯ ಆರೋಗ್ಯ ಕಾಪಾಡುತ್ತದೆ ಮತ್ತು ಕಶ್ಮಲಗಳನ್ನು ಹೊರಹಾಕಲು ಸಹಾಯಮಾಡುತ್ತದೆ. ಹುರಿಗಡಲೆ ದೇಹದಲ್ಲಿರುವ ಕಶ್ಮಲವನ್ನು…
ಒಂದು ಕಾಲದಲ್ಲಿ ಬಂಟರಿಗೆ ಕೃಷಿಯೇ ಆಧಾರ: ಸುರತ್ಕಲ್ ಬಂಟರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ಯಾ. ಬ್ರಿಜೇಶ್ ಚೌಟ
ಒಂದು ಕಾಲದಲ್ಲಿ ಬಂಟರಿಗೆ ಕೃಷಿಯೇ ಆಧಾರವಾಗಿತ್ತು. ಕೂಡು ಕುಟುಂಬದೊಂದಿಗೆ ಪ್ರೀತಿ ಬಾಂಧವ್ಯದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಬಂಟರು ಬದಲಾದ ಕಾಲಘಟ್ಟದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬದುಕಲಾರಭಿಸಿದರು. ಕೋಲ, ನೇಮ ಬಲಿ ಮೊದಲಾದ ಆಚರಣೆಗಳಿಂದ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಬಂಟರು ಮುಂದೆಯೂ ಇದನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು. ಸುರತ್ಕಲ್ ಗೋವಿಂದ ದಾಸ ಕಾಲೇಜ್ ನ ಮೈದಾನದಲ್ಲಿ ಬಂಟರ ಸಂಘ (ರಿ,) ಸುರತ್ಕಲ್ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಬಂಟರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಂಟರಲ್ಲಿನ ಕೂಡು ಕುಟುಂಬ ಇಂದು ಕಡಿಮೆಯಾದರೂ ಇಂತಹ ಕ್ರೀಡಾಕೂಟಗಳನ್ನು ಬಂಟರ ಸಂಘಗಳು ಆಯೋಜಿಸುವಾಗ ನಾವು ಒಂದೇ ಸೂರಿನಡಿ ಸೇರಿದಾಗ ಪ್ರೀತಿ ಬಾಂಧವ್ಯ ಹುಟ್ಟುತ್ತದೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದವರು ತಿಳಿಸಿದರು. ಬಂಟರ ಯಾನೆ…
ನಮ್ಮ ಬಂಟ ಜನಾಂಗದ ವ್ಯಕ್ತಿಯೋರ್ವ ಉತ್ತಮ ಅವಕಾಶಗಳನ್ನು ಅರಸುತ್ತಾ ವಿಶ್ವದ ಯಾವ ಮೂಲೆಗೆ ಹೋಗಿ ಅಲ್ಲಿ ನೆಲೆ ನಿಂತು ತಮ್ಮ ಉದ್ಯೋಗವಿರಲಿ, ವ್ಯಾಪಾರ ವ್ಯವಹಾರಗಳಿರಲಿ ಅವರು ತಮ್ಮ ಜನ್ಮಭೂಮಿ ಹಾಗೂ ಜಾತಿ ವಿಶೇಷತೆಗಳ ಪ್ರತ್ಯೇಕತೆಯನ್ನು ಉಳಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಪ್ರತಿಭಾ ಸಾಮರ್ಥ್ಯ, ಕಾರ್ಯದಕ್ಷತೆ, ಕಠಿಣ ಪರಿಶ್ರಮಗಳಿಂದ ವಿಶ್ವದ ಉದ್ದಗಲ ತಮ್ಮ ಕೀರ್ತಿಯನ್ನು ಪಸರಿಸಿದ್ದಾರೆ. ಅಂಥಹ ವಿಶೇಷ ವ್ಯಕ್ತಿತ್ವಗಳ ಸಾಲಿಗೆ ಸೇರುವ ಸಾಧಕರು ಶ್ರೀ ದೀಪಕ್ ಶೆಟ್ಟಿ ಚುಚ್ಚಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅರೆಶಿರೂರು ಗ್ರಾಮದ ಚುಚ್ಚಿ ಎಂಬ ಹಳ್ಳಿಯಲ್ಲಿ 1971ರಲ್ಲಿ ಜನಿಸಿದ ದೀಪಕ್ ಶೆಟ್ಟರು ಇಂಜಿನಿಯರಿಂಗ್ ಪದವಿಧರು. ವಿಜಯಾ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಸದಾನಂದ ಕೆ ಶೆಟ್ಟಿ ಹಾಗೂ ಸುಶೀಲಾ ಸದಾನಂದ ಶೆಟ್ಟಿ ದಂಪತಿಯರ ಸುಪುತ್ರ. ಸಕಲೇಶಪುರ ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಬಿ.ವಿ ಹೆಗ್ಡೆ ಮತ್ತು ಕೊಳ್ಕೆಬೈಲ್ ಮಾಲತಿ ಹೆಗ್ಡೆ ದಂಪತಿಯ ಪುತ್ರಿ ಅಕ್ಷಯಾ ಶೆಟ್ಟಿ ಅವರನ್ನು…
ಬಿಎಸ್ಕೆಬಿಎ-ಗೋಪಾಲಕೃಷ್ಣ ಟ್ರಸ್ಟ್ ನ ಗೋಕುಲಕ್ಕೆ ಕರ್ನಾಟಕ ಮುಖ್ಯಮಂತ್ರಿ ಭೇಟಿ ದೇವಸ್ಥಾನ ಕಟ್ಟುವ ಭಾಗ್ಯ ಎಲ್ಲರಿಗೂ ಸಿಗದು : ಬಸವರಾಜ ಬೊಮ್ಮಾಯಿ (ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಾಯಿ , ಸೆ.18: ವಲಸೆ ಬಂದ ಜನರಲ್ಲಿ ನಮ್ಮವರು ಅನ್ನುವ ಭಾವನೆ ಹೆಚ್ಚಾಗಿರುತ್ತದೆ. ಪರವೂರಲ್ಲಿ ಎಲ್ಲರನ್ನೂ ತಮ್ಮವರನ್ನಾಗಿಸಿ ಬಾಳುವ ಮೂಲಕ ಬಂಧುತ್ವದ ಕೊರತೆ ನೀಗಿಸುತ್ತಾ ಎಲ್ಲರೂ ಬಂಧುಗಳಾಗುತ್ತಾರೆ. ಕರ್ಮಭೂಮಿಯಲ್ಲಿ ಬದುಕು ಕಟ್ಟಿಕೊಳ್ಳುವ ಜೊತೆಗೆ ಮಂದಿರವನ್ನೂ ಕಟ್ಟಿಕೊಂಡಿರುವುದು ಪುಣ್ಯದ ಕೆಲಸವಾಗಿದೆ. ದೇವಸ್ಥಾನ ಕಟ್ಟುವ ಭಾಗ್ಯ ಎಲ್ಲರಿಗೂ ಸಿಗದು ಇಂತಹ ಯೋಗ ಬರೇ ಭಾಗ್ಯವಂತರಿಗೆ ಮಾತ್ರ ಪ್ರಾಪ್ತಿಸುವುದು. ಶ್ರೀಕೃಷ್ಣನು ಸತ್ಯ, ಧರ್ಮ, ನ್ಯಾಯ, ನೀತಿದಾಯಕನಾಗಿದ್ದು ಈ ಬದುಕೇ ಶ್ರೀಕೃಷ್ಣನಿಗೆ ಪ್ರೀತಿದಾಯಕ. ಕೃಷ್ಣನು ಸರ್ವವ್ಯಾಪಿ, ಸರ್ವಸ್ಪರ್ಶಿ ಆಗಿದ್ದು ಕೃಷ್ಣನ ಲೀಲೆಯಲ್ಲಿ ಎಂದೂ ದುಃಖವಿಲ್ಲ ಆದರೆ ಕಷ್ಟವಿದೆ. ದುಃಖ ಮತ್ತು ಕಷ್ಟಗಳಿಗೆ ವ್ಯತ್ಯಾಸವಿದ್ದು ಕಷ್ಟಗಳು ಜೀವನ ಪರೀಕ್ಷೆಗಾಗಿ ಬರುತ್ತಿದ್ದು ಇದು ಪವಿತ್ರಗ್ರಂಥ ಭಗವದ್ಗೀತೆ ಓದಿದಾಗ ನಿವಾರಣೆಯಾಗುವುದು. ಉಡುಪಿಯಲ್ಲಿದ್ದಂತಹ ಕೃಷ್ಣನನ್ನು ಮುಂಬಯಿಯಲ್ಲೂ ಕಾಣುವಂತೆ ಮಾಡಿದ ತಾವೆಲ್ಲರೂ ಧನ್ಯರು ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ತಿಳಿಸಿದರು. ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಪುನರಾಭಿವೃದ್ಧಿಯೊಂದಿಗೆ ನವೀಕೃತ ಗೋಕುಲ ಮಂದಿರಕ್ಕೆ ಇಂದಿಲ್ಲಿ…
ಕುಂದಾಪುರ ಮುಖ್ಯರಸ್ತೆಯ ಗಾಂಧಿ ಮೈದಾನದ ಎದುರುಗಡೆ ಸುಸಜ್ಜಿತವಾಗಿ “ಯುವ ಮನೀಶ್ ಬ್ಯುಸಿನೆಸ್ ಹೋಟೆಲ್” ಸಜ್ಜುಗೊಂಡಿದ್ದು, ಇದೇ ಬರುವ ಭಾನುವಾರ ದಿನಾಂಕ 28.01.2024 ರಂದು ಪೂರ್ವಾಹ್ನ 10.30 ಕ್ಕೆ ಸರಿಯಾಗಿ ಉದ್ಘಾಟನಾ ಸಮಾರಂಭವು ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿರುವುದು. ಘನ ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ ಆದರಣೀಯ ಶ್ರೀ ಸತೀಶ್ ಜಾರಕಿಹೊಳಿ ಅವರ ದಿವ್ಯಹಸ್ತದಿಂದ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠ ಘಟಪ್ರಭಾ ಇಲ್ಲಿನ ಪೂಜ್ಯ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ದಿವ್ಯಾಂಗ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ ಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಇವರು ದೀಪ ಪ್ರಜ್ವಲನೆ ಮಾಡಲಿದ್ದು, ಅರಬಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸರ್ವ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಮಾಜಿ…
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜನವರಿ 5 ರಿಂದ 7 ರವರೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಜರಗಲಿದ್ದು, ರಾಜ್ಯದ ಮೂವತ್ತು ಜಿಲ್ಲಾ ತಂಡ ಹಾಗೂ ಮುಂಬಯಿ ಮತ್ತು ಗಡಿನಾಡ ಕಾಸರಗೋಡು ತಂಡಗಳು ಭಾಗವಹಿಸಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರನ್ನು ಆಹ್ವಾನಿಸಲಾಯಿತು. ಐಕಳ ಹರೀಶ್ ಶೆಟ್ಟಿ ಅವರು ಬ್ರೋಶರ್ ನ್ನು ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಸಂಘ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಗೆ ಕ್ರೀಡೆಗೂ ಉತ್ತೇಜನ ನೀಡಿ ಪಂದ್ಯಾಟವನ್ನು ಆಯೋಜಿಸುತ್ತಿರುವುದು ಒಳ್ಳೆಯ ಕೆಲಸ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ರಾಷ್ಟ್ರೀಯ ಪತ್ರಿಕಾ ಮಂಡಳಿಯ ಸದಸ್ಯ ಪಿ ಬಿ ಹರೀಶ್ ರೈ, ದ.ಕ. ಜಿಲ್ಲಾ ಕಾರ್ಯ…
ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ.ಕ.ಮಂಗಳೂರು ಆಶ್ರಯದಲ್ಲಿ ಅ.28 ಮತ್ತು 29ರಂದು ಉಡುಪಿಯಲ್ಲಿ ನಡೆಯಲಿರುವ ‘ವಿಶ್ವ ಬಂಟರ ಸಮ್ಮೇಳನ -2023’ (ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ಸಂಭ್ರಮ) ಆಮಂತ್ರಣ ಪತ್ರಿಕೆಯ ಬಿಡುಗಡೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ, ಬಂಟ ಸಮುದಾಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಯೋಚಿಸಿ ಯೋಜನೆಗಳನ್ನು ರೂಪಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ವಿವಿಧ ಕೋರ್ಸ್ ಗಳಿಗೆ ಪೂರಕವಾದ ತರಬೇತಿ ಕೇಂದ್ರಗಳನ್ನು ತೆರೆಯುವ ಕೈಂಕರ್ಯವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಾಡಬೇಕಾಗಿದೆ ಎಂದರು. ರಾಜ್ಯ ಮೀಸಲಾತಿಯ 3 ಬಿ ಪಟ್ಟಿಯಲ್ಲಿ ಬಂಟರಿಗೂ ಮೀಸಲಾತಿ ಸೌಲಭ್ಯ ಪಡೆಯಲು ಅವಕಾಶವಿದೆ. ಈ ಮಾನದಂಡದಡಿ ಅರ್ಜಿ ಸಲ್ಲಿಸಿದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೌಲಭ್ಯ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಬಂಟರ ಸಂಘಗಳ ಒಕ್ಕೂಟ ಕಾರ್ಯ ಪ್ರವೃತವಾಗಬೇಕು ಎಂದವರು…
‘43ನೇ ರಾಜ್ಯಮಟ್ಟದ ಕಬ್ಸ್- ಬುಲ್ಬುಲ್ಸ್ ಉತ್ಸವ’ದಲ್ಲಿ ಡಾ.ಎಂ. ಮೋಹನ ಆಳ್ವ ‘ಪಠ್ಯದಿಂದ ಜ್ಞಾನ, ಪಠ್ಯೇತರದಿಂದ ಮನಸ್ಸು’
ಮೂಡುಬಿದಿರೆ: ‘ಪಠ್ಯದ ಜ್ಞಾನದ ಜೊತೆ ಪಠ್ಯೇತರ ಚಟುವಟಿಕೆ ಮೂಲಕ ಮನಸ್ಸು ಕಟ್ಟಿದಾಗ ಅತ್ಯುತ್ತಮ ನಾಗರಿಕನಾಗಲು ಸಾಧ್ಯ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡುಬಿದಿರೆ ಘಟಕವು ನಗರದ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಂಡ ‘43ನೇ ರಾಜ್ಯಮಟ್ಟದ ಕಬ್ಸ್- ಬುಲ್ಬುಲ್ಸ್ ಉತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ, ವಿಜ್ಞಾನ, ಗಣಿತ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯ ಇರಲಿ, ಅವು ನೀಡುವ ಜ್ಞಾನ ಬುದ್ಧಿಗೆ ಮಾತ್ರ. ಮನುಷ್ಯನಿಗೆ ಜ್ಞಾನ, ಬುದ್ಧಿಯ ಜೊತೆ ಮನಸ್ಸು ಬೇಕು ಎಂದರು. ನಮ್ಮ ದೇಶದ ದೊಡ್ಡ ಶಕ್ತಿಯೇ ಯುವಶಕ್ತಿ. ಅಮೇರಿಕಾ ಭೌಗೋಳಿಕವಾಗಿ ದೊಡ್ಡ ದೇಶವಾದರೂ, ಕಡಿಮೆ ಜನಸಂಖ್ಯೆ ಹೊಂದಿದೆ. ನಮ್ಮ ದೇಶದಲ್ಲಿ 1 ರಿಂದ 12 ತರಗತಿಯಲ್ಲಿ 39 ಕೋಟಿ ಮಕ್ಕಳು ಇದ್ದಾರೆ. 18 ರಿಂದ…
ಬಂಟ ಸಮಾಜ ಬಾಂಧವರ ಐಕ್ಯಮತ ಒಗ್ಗಟ್ಟಿನಿಂದ ಪುಣೆಯಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ಬಂಟರ ಸಂಘದ ಸ್ಥಾಪನೆಯಾಗಿ ಸಂಘದ ಸ್ಥಾಪಕರಿಂದ ಹಿಡಿದು ಸಮಾಜದ ಹಿರಿಯರು, ದಾನಿಗಳು, ಸೇವಾಕರ್ತರು, ಪ್ರೋತ್ಸಾಹಕರು, ಮಹಿಳೆಯರು, ಯುವ ಸಂಘಟನೆಯ ಸಹಕಾರದಿಂದ ಬೆಳೆದು ಬಂದು ಇದೀಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ. ಸಂಸ್ಥೆಯ ಬೆನ್ನೆಲುಬಾಗಿ ನಿಂತು ಸಮಾಜದ ಅಭಿವೃದ್ದಿಗಾಗಿ, ಸಂಘಟನೆಗಾಗಿ ದುಡಿದವರು ಬಹಳಷ್ಟು ನಮ್ಮ ಹಿರಿಯರಿದ್ದಾರೆ. ಪರಿಶ್ರಮದಿಂದ ಫಲ ಪ್ರಾಪ್ತಿ ಎಂಬಂತೆ ಕೆಲವು ವರ್ಷಗಳ ಹಿಂದೆ ನಮ್ಮ ನೇತೃತ್ವದಲ್ಲಿ ಹೆಮ್ಮೆಯ ಭವ್ಯ ಬಂಟರ ಭವನ ನಿರ್ಮಾಣ ಆಗಿ, ಇದೀಗ ಇದೇ ಭವನದಲ್ಲಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸುವ ಭಾಗ್ಯ ನಮಗೆ ಒದಗಿ ಬಂದಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ನುಡಿದರು. ಡಿ 5ರಂದು ಪುಣೆ ಬಂಟರ ಭವನದ ಪ್ರತಿಭಾ ದಯಾಶಂಕರ್ ಶೆಟ್ಟಿ ಕಾನ್ಫರೆನ್ಸ್ ಹಾಲ್ ನಲ್ಲಿ ಜರಗಿದ ಬಂಟರ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ…