ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವ ಆಗಸ್ಟ್ 3ರಂದು ಆರಂಭಗೊಂಡಿದ್ದು, ಅಕ್ಷರ ಯಜ್ಞ ಸೇವೆಗಾಗಿ ನೀಡಲಾಗುವ ಪುಸ್ತಕದ ಕುರಿತು ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈಯವರ ಪುಸ್ತಕದ ಪ್ರಾಯೋಜಕತ್ವ ವಹಿಸಿದ್ದರು ಭಾಗ್ಯೇಶ್ ರೈಯವರ ಪುತ್ರಿ ದೇವಿದ್ಯಾ ಮಕ್ಕಳಿಗೆ ಪುಸ್ತಕ ನೀಡುವ ಮೂಲಕ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.


ಈ ಪುಸ್ತಕದಲ್ಲಿ ಮಕ್ಕಳಿಂದ ‘ಶ್ರೀ ಶಾರದಾಂಬೆಯೈ ನಮಃ’ ಎಂದು 108 ಬಾರಿ ಬರೆಸಿ ಆಗಸ್ಟ್ 8ರ ಶಾರದಾ ದೇವಿಯ ಪ್ರತಿಷ್ಠೆ ದಿನದಂದು ಶ್ರೀ ದೇವಿಗೆ ಸಮರ್ಪಿಸಿ ಸರಸ್ವತಿ ಪೂಜೆ ನಡೆದ ಬಳಿಕ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುವುದು. ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿ ಗುತ್ತು ಸೀತಾರಾಮ ರೈ, ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರಾನಾಥ್ ಹೆಚ್, ಉಪಾಧ್ಯಕ್ಷ ಯಶವಂತ ಆಚಾರ್ಯ, ರಾಜೇಶ್ ಬನ್ನೂರು, ಐತ್ತಪ್ಪ ನಾಯ್ಕ್ ಯೋಗಾನಂದ ರಾವ್, ಪುಷ್ಪರಾಜ್ ಉರ್ಲಾಂಡಿ, ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.





































































































