Author: admin

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡುಬಿದಿರೆ ವಲಯ ಹಾಗೂ ಸರ್ಕಾರಿ ಪ್ರೌಢ ಶಾಲೆ, ಪಡುಕೊಣಾಜೆ ಇವರ ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು 14 ಮತ್ತು 17 ವರ್ಷ ವಯೋಮಿತಿಯ ಬಾಲಕರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಮುಂದೆ ನಡೆಯುವ ಜಿಲ್ಲಾ ಮಟ್ಟದ ತ್ರೋಬಾಲ್ ಸ್ಪರ್ಧೆಗೆ ಆಳ್ವಾಸ್ ಶಾಲೆಯಿಂದ ಆಯ್ಕೆಯಾದ 24 ಕ್ರೀಡಾಪಟುವಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಪುಣೆಯ ಬಂಟ ಸಮಾಜದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ನೂತನ ಅಧ್ಯಕ್ಷರಾಗಿ ಪುಣೆಯ ಉದ್ಯಮಿ, ಸಮಾಜ ಸೇವಕ ನಗ್ರಿಗುತ್ತು ರೋಹಿತ್ ಡಿ ಶೆಟ್ಟಿಯವರು ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ರೇಷ್ಮಾ ಅರ್ ಶೆಟ್ಟಿಯವರು ಅವಿರೋದವಾಗಿ ಆಯ್ಕೆಯಾದರು. ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 8 ರಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರುರವರ ಅಧ್ಯಕ್ಷತೆಯಲ್ಲಿ ಪುಣೆಯ ಕ್ಯಾಂಪ್ ನಲ್ಲಿಯ ಪೂನಾ ಕ್ಲಬ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಜರಗಿತು. ಈ ಸಂದರ್ಭದಲ್ಲಿ 2024-26 ರ ಸಾಲಿಗೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರನ್ನಾಗಿ ರೋಹಿತ್ ಡಿ ಶೆಟ್ಟಿಯವರನ್ನು ಸಭೆಯಲ್ಲಿ ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೋಹಿತ್ ಶೆಟ್ಟಿ ಯವರಿಗೆ ಗಣೇಶ್ ಹೆಗ್ಡೆಯವರು ಪುಷ್ಪಗುಚ್ಚ ನೀಡಿ ಅಭಿನಂದಿಸಿ ಗೌರವಿಸಿದರು. ನಗ್ರಿಗುತ್ತು ರೋಹಿತ್…

Read More

ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ದಿನಾಂಕ 08 ಸೆಪ್ಟೆಂಬರ್ 2024ರಂದು 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ದ್ವಿತೀಯ ದಿನದ ಸಭಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ “ಕಳೆದ ಹದಿನೇಳು ವರ್ಷಗಳಿಂದ ಬಂಟರ ಮಾತೃ ಸಂಘವು ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಒಳಗೊಂಡು ಗಣೇಶೋತ್ಸವವನ್ನು ಆಚರಿಸುತ್ತಿರುವುದು ಮಾನವ ಸಮಾಜಕ್ಕೆ ಮಾದರಿಯಾಗಿದೆ” ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ಸಂಘದ ‘ನಮ್ಮ ಸಂಪರ್ಕ’ ಮಾಸಪತ್ರಿಕೆಯ ಸಂಪಾದಕ ಬಿ. ರವೀಂದ್ರ ಶೆಟ್ಟಿ, ಪತ್ರಿಕೆಯ ನಿಕಟ ಪೂರ್ವ ಸಂಪಾದಕ, ಸಾಹಿತಿ ಮತ್ತು ಸಂಘಟಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಧಾರ್ಮಿಕ ಮುಂದಾಳು ಟಿ. ಭಾಸ್ಕರ ರೈ ಬ್ರಹ್ಮಾವರ ಹಾಗೂ ಅಂತಾರಾಷ್ಟ್ರೀಯ ಈಜುಪಟು ಚಿಂತನ್ ಎಸ್. ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.…

Read More

ಯಕ್ಷಗಾನ ಕಲೆಯ ದಿಗ್ವಿಜಯವನ್ನು ಅಮೇರಿಕಾ ದೇಶದಲ್ಲಿ ಕೈಗೊಂಡಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಜುಲೈ 27 ನೇ ತಾರೀಕನ್ನು ಯಕ್ಷದ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ ಬೆನ್ನಲ್ಲೇ, ಇದೀಗ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್ಫೀಲ್ಡ್ ನಗರದಲ್ಲಿ ನಡೆದ ಯಕ್ಷಗಾನ ಕಲೆಯನ್ನು ಹಾಗೂ ಪಟ್ಲ ಫೌಂಡೇಶನ್ ಕೈಗೊಂಡಿರುವ ಮಹಾನ್ ಕಾರ್ಯವನ್ನು ಶ್ಲಾಘಿಸಿ ಅಲ್ಲಿಯ ಮೇಯರ್ ಸ್ಟೀವನ್ ವಿ ಪೋಂಟೋ ಅವರು ಕೂಡಾ ಆಗಸ್ಟ್ 18ನೇ ತಾರೀಖು ಬ್ರೂಕ್ಫೀಲ್ಡ್ ನಗರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದಾರೆ. ಈ ಸಾಧನೆಯಲ್ಲಿ ನಿರ್ಣಾಯಕ ಬೆಂಬಲ ನೀಡಿದ ಮಿಲ್ವಾಕೀ ಕನ್ನಡ ಸಂಘಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ತಿಳಿಸಿದ್ದಾರೆ.

Read More

ಸುರತ್ಕಲ್ ಎನ್ ಐಟಿಕೆ (ಕೆಆರ್ ಇಸಿ) ಯ ನಿವೃತ್ತ ಪ್ರಾಂಶುಪಾಲ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾಗಿದ್ದ ಡಾ| ಪಿ. ಸುಧಾಕರ ಶೆಟ್ಟಿ (86) ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 12ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿ ಮಣಿಪಾಲ ಕೆ.ಎಂ.ಸಿ.ಯ ಗೈನಕಾಲಜಿ ವಿಭಾಗದ ಪ್ರೊಫೆಸರ್ ಹಾಗೂ ಯೂನಿಟ್ ಹೆಡ್ ಆಗಿರುವ ಡಾ. ಜ್ಯೋತಿ ಶೆಟ್ಟಿ, ಅಳಿಯ ಅಶೋಕ್ ಕುಮಾರ್ ಶೆಟ್ಟಿ, ಪುತ್ರ ಬಂಟ್ವಾಳ ನರಿಕೊಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೀವನ್ ಶೆಟ್ಟಿ ಅವರನ್ನು ಅಗಲಿದ್ದಾರೆ. ಅವರು ಮೂಲತಃ ಪಡುಬಿದ್ರಿ ಕೆರಮ ಮೂಡು ಮನೆಯವರಾಗಿದ್ದು, ಪ್ರಸ್ತುತ ಸುರತ್ಕಲ್ ನ ಕೇಶವ ಚೌಟ ಕಂಪೌಂಡ್ ನಿವಾಸಿಯಾಗಿದ್ದರು ಹಿಂದಿನ ಕೆ.ಆರ್‌.ಇ.ಸಿಯಲ್ಲಿ ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ನಲ್ಲಿ ಪ್ರೊಫೆಸರ್ ಆಗಿ, ಅನಂತರ ಹೆಡ್ ಆಫ್ ದ ಡಿಪಾರ್ಟ್ಮೆಂಟ್ ಆಗಿ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಶಿವಮೊಗ್ಗ ಜವಹರಲಾಲ್ ನೆಹರೂ ನ್ಯಾಷನಲ್ ಕಾಲೇಜು ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾಗಿ ಹಾಗೂ ವಾಮಂಜೂರು ಸಂತ…

Read More

ಬ್ರಹ್ಮಾವರ ಬಂಟರ ಯಾನೆ ನಾಡವರ ಸಂಘ (ರಿ.) ಬ್ರಹ್ಮಾವರ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 22-9-2024 ನೇ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಬ್ರಹ್ಮಾವರ ಬಂಟರ ಭವನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಮೈರ್ಮಾಡಿ ಸುಧಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಬ್ರಹ್ಮಾವರ ಬಂಟರ ಸಂಘದ ಸರ್ವ ಸದಸ್ಯರು ಸಭೆಗೆ ಹಾಜರಾಗಿ ಕಾರ್ಯ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿಯವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Read More

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಮಂಗಳವಾರದಂದು ಜರುಗಿದ ಮೂಡುಬಿದಿರೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಬಿ.ಪಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ ಮಧು ಎಂ ಜಿ, ತರಬೇತುದಾರರಾದ ಪ್ರದೀಪ್, ರವಿ, ಅಕ್ಷಿತ್ ಶೆಟ್ಟಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ನವೀನ್ ರೈ ಮತ್ತು ಹರ್ಷಿತಾ ಶೆಟ್ಟಿ ಇದ್ದರು.

Read More

ಪುಣೆ ಪಿಂಪ್ರಿ ಚಿಂಚ್ವಾಡ್ ನ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ಸಮಾಜ ಸೇವಕ ಜಗದೀಶ್ ಶೆಟ್ಟಿಯವರು ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾದರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 11ರಂದು ಸಂಘದ ಮಿನಿ ಹಾಲ್ ಎಂ.ಎಸ್.ಆರ್ ಸ್ಕ್ವೇರ್ ಕ್ವೀನ್ಸ್ ಟೌನ್ ಸೊಸೈಟಿ ಚಿಂಚ್ವಾಡ್ ಇಲ್ಲಿ ಜರಗಿತು. ಈ ಸಂದರ್ಭದಲ್ಲಿ 2024-26 ನೇ ಸಾಲಿಗೆ ಬಂಟರ ಸಂಘದ ಅಧ್ಯಕ್ಷರನ್ನಾಗಿ ಜಗದೀಶ್ ಶೆಟ್ಟಿಯವರನ್ನು ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಪ್ರಭಾ ಸೀತಾರಾಮ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೆಟ್ಟಿಯವರಿಗೆ ರಾಕೇಶ್ ಶೆಟ್ಟಿ ಬೆಳ್ಳಾರೆಯವರು ಪುಷ್ಪಗುಚ್ಚ ನೀಡಿ ಅಭಿನಂದಿಸಿ ಗೌರವಿಸಿದರು. ಪ್ರಭಾ ಶೆಟ್ಟಿಯವರಿಗೆ ಜ್ಯೋತಿ ವಿ ಶೆಟ್ಟಿಯವರು ಪುಷ್ಪಗುಚ್ಛ ನೀಡಿ…

Read More

ನಮ್ಮಲ್ಲಿನ ಸಾಮರ್ಥ್ಯಗಳು ಹುಟ್ಟಿನಿಂದ ಬರುವಂತದ್ದಲ್ಲ. ಸತತ ಪ್ರಯತ್ನದಿಂದ ಜೀವನದಲ್ಲಿ ಗುರಿಯನ್ನು ತಲುಪಲು ಸಾಧ್ಯ. ಆದ್ದರಿಂದ ವ್ಯಕ್ತಿಗೆ ಜೀವನದಲ್ಲಿ ಗುರಿಮುಖ್ಯ ಎಂದು ಎಫ್.ಎಂ.ರೇಡಿಯೋ ಮಂಗಳೂರಿನ ಶ್ರೀಮತಿ ಆರ್.ಜೆ.ನಯನ ಹೇಳಿದರು. ಅವರು ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲ್‍ನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಯಾವುದೇ ಕೆಲಸ ಮಾಡಬೇಕೆಂದರೆ ಅದರಲ್ಲಿ ನಂಬಿಕೆ ಮುಖ್ಯ. ಹುಟ್ಟುವಾಗಲೇ ಮನುಷ್ಯನಿಗೆ ಪ್ರತಿಭೆ ಎನ್ನುವುದು ಬರುವುದಿಲ್ಲ. ಅದು ಮನುಷ್ಯನು ವಿಕಸನಗೊಂಡಾಗಲೇ ಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವಿಶಿಷ್ಟ ಪ್ರತಿಭೆ ಮತ್ತು ಆಸಕ್ತಿಗಳಿರುತ್ತದೆ. ನಾವು ಅದನ್ನು ಗ್ರಹಿಸಿ ಉತ್ತಮಪಡಿಸಿಕೊಳ್ಳಬೇಕು ಎಂದು ಅವರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸೂತ್ರವನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ.ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ)ಇದರ ಅಧ್ಯಕ್ಷರಾದ ಎಂ.ಮಹೇಶ ಹೆಗ್ಡೆ ಅವರು ಮಾತನಾಡಿ ವಿದ್ಯಾರ್ಥಿಗಳು ಓದಿನೊಂದಿಗೆ ನಿಮ್ಮ ಗುಣ ನಡತೆಯನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮುಖ್ಯ. ಅದು ನಾವು ಆರಿಸಿಕೊಳ್ಳುವ…

Read More

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ರೋಟರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ರೋಟರಿ ಪದವಿ ಪೂರ್ವ ಕಾಲೇಜು ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ರೋಟರಿ ಪದವಿ ಪೂರ್ವ ಕಾಲೇಜಿನ ತಂಡವನ್ನು 2-1 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.

Read More