ಉತ್ತರ ಕರ್ನಾಟಕದ ಪ್ರತಿಷ್ಠಿತ ರೋಟರಿ ಕ್ಲಬ್ ಹುಬ್ಬಳ್ಳಿ ಮಿಡ್ ಟೌನ್ ನ 2024-25 ರ ಅಧ್ಯಕ್ಷರಾಗಿ ದಿನೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಮೂಲತಃ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ದರ್ಖಾಸ್ತು ಶ್ರೀ ಸಂಜೀವ ಶೆಟ್ಟಿ, ಶ್ರೀಮತಿ ಶಶಿಕಲಾ ಶೆಟ್ಟಿ ಇವರ ಪುತ್ರ, ಪ್ರಸ್ತುತ ಹುಬ್ಬಳಿಯ ಗ್ಲೋಬಲ್ ಮೀಡಿಯಾದ ಪಾಲುದಾರರಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಯಶಸ್ವೀ ಉದ್ಯಮಿಯಾಗಿರುವ ದಿನೇಶ್ ಶೆಟ್ಟಿಯವರು ಸಮಾಜ ಸೇವಕರಾಗಿಯೂ ಗುರುತಿಸಿಕೊಂಡು ಹುಬ್ಬಳಿ ಧಾರವಾಡ ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದಾರೆ. ಕ್ಲಬ್ ನ ಕಾರ್ಯದರ್ಶಿಯಾಗಿ ಪ್ರವೀಣ ಭನಸಾಲಿ ಹಾಗೂ ಖಜಾಂಚಿಯಾಗಿ ಸಂಗಮೇಶ ಹಂದಿಗೋಳ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.