ಮಾಲಿನಿ ಶೆಟ್ಟಿ ಇನ್ನಂಜೆ ಅವರು ಶಂಕರಪುರ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ. ಕಾಪು ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ಮಾಲಿನಿ ಶೆಟ್ಟಿಯವರು ಇನ್ನಂಜೆ ಯುವತಿ ಮಂಡಲ ಇದರ ಪೂರ್ವ ಅಧ್ಯಕ್ಷೆಯಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇನ್ನಂಜೆ ಒಕ್ಕೂಟದ ಮಾಜಿ ಅಧ್ಯಕ್ಷೆಯಾಗಿ, ಕಾಪು ಬಂಟರ ಸಂಘ ಇದರ ಸದಸ್ಯೆಯಾಗಿ, ರೋಟರ್ಯಾಕ್ಟ್ ಕ್ವೀನ್ ಆಗಿ ಮೂಡಿ ಬಂದ ಇವರು 2018-19 ರಲ್ಲಿ ರೋಟರ್ಯಾಕ್ಟ್ ಡಿಸ್ಟ್ರಿಕ್ಟ್ -3182 ರ ಮೊದಲ ಮಹಿಳಾ ಜಿಲ್ಲಾ ಪ್ರತಿನಿಧಿಯಾಗಿ (ಡಿ ಆರ್ ಆರ್) ಸುಮಾರು 42 ಕ್ಲಬ್ ಗಳನ್ನು ಮಾಡಿ ಯಶಸ್ವಿ ಪರಿಚಯ ಕಾನ್ಫರೆನ್ಸ್ ಮಾಡಿದ ಹೆಗ್ಗಳಿಕೆ ಇವರದ್ದು. 2015 ರಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಇವರು ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯರಾಗಿ, 5 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಇನ್ನಂಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


2023 ರಲ್ಲಿ ಜೇಸಿಐ ಶಂಕರಪುರ ಜಾಸ್ಮಿನ್ ನ ಬೆಳ್ಳಿ ಹಬ್ಬದ ಅಧ್ಯಕ್ಷ ಚುಕ್ಕಾಣಿಯನ್ನು ಹಿಡಿದ ಇವರು ಜೇಸಿ ಸದಸ್ಯರ ಮತ್ತು ದಾನಿಗಳ ಸಹಕಾರದಿಂದ ಸುಮಾರು 7 ಲಕ್ಷ ರೂಪಾಯಿಯ ಶಾಶ್ವತ ಕೊಡುಗೆ ಬಸ್ಸು ತಂಗುದಾಣ, 4 ಕಡೆ ಹೈ ಮಾಸ್ಕ್ ಲೈಟ್, ಮಂಗಳೂರು ವಿಶೇಷ ಮಕ್ಕಳ ಶಾಲೆಗೆ ಕ್ಲಾಸ್ ರೂಮ್ ಗಳ ಕೊಡುಗೆ ನೀಡಿದ್ದು ಮಾತ್ರವಲ್ಲದೇ ಜೇಸಿಐ ಭಾರತದ ಅತೀ ದೊಡ್ಡ ಪ್ರಾಜೆಕ್ಟ್ ಆದ ಜೇಸಿಐ ಬ್ಲಾಕ್ ಟವರ್ ನ್ನು ನಿರ್ಮಿಸಿ ವಲಯದಲ್ಲಿ ಯಾರೂ ಮಾಡದ ಸಾಧನೆಗಾಗಿ 2023 ರಲ್ಲಿ ಬೆಂಗಳೂರಿನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಜೆಸಿಐ ಶಂಕರಪುರಕ್ಕೆ ಮೊತ್ತ ಮೊದಲ ಬಾರಿಗೆ 2 ನ್ಯಾಷನಲ್ ಅವಾರ್ಡ್ ನೊಂದಿಗೆ, ರಾಷ್ಟ್ರೀಯ ಅಧ್ಯಕ್ಷರ ವಿಶೇಷ ಮನ್ನಣೆಗೆ ಪಾತ್ರರಾಗಿದ್ದಾರೆ. ಬಿಜೆಪಿ ಕಾಪು ಕ್ಷೇತ್ರ ಕೋಶಾಧಿಕಾರಿಯಾಗಿ, ಇನ್ನಂಜೆ ಆಂಗ್ಲ ಮಾಧ್ಯಮದ ಪಿಟಿಎ ಪ್ರೆಸಿಡೆಂಟಾಗಿ, ಜೇಸಿ ವಲಯ 15 ರ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕೋ ಆರ್ಡಿನೆಟರ್ ಕಾರ್ಯ ನಿರ್ವಹಿಸುತ್ತಿರುವ ಇವರು ರೋಟರಿ ಕ್ಲಬ್ ಶಂಕರಪುರ ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ.


ಮಾಲಿನಿ ಶೆಟ್ಟಿಯವರನ್ನು ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ, ಮುಂಬಯಿ ಬಂಟರ ಸಂಘದ ಜೊತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ ಅಭಿನಂದಿಸಿದ್ದಾರೆ.









































































































