Author: admin
ಹೂಡಿಕೆಯ ಬಗೆಗಿನ ಜಾಗೃತಿ ಯಶಸ್ವಿ ಜೀವನದ ಪ್ರಮುಖ ಅಂಗ. ಸಕಾಲದಲ್ಲಿ ತೆಗೆದುಕೊಳ್ಳುವ ಹೂಡಿಕೆಯ ನಿರ್ಧಾರಗಳು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಸಮಯವೇ ಹಣವಿದ್ದಂತೆ, ನಮ್ಮಲ್ಲಿನ ಉಳಿತಾಯ ಸರಿಯಾದ ಸಮಯದೊಂದಿಗೆ ನಷ್ಟ ಅನಿಶ್ಚಿತತೆಯನ್ನು ಎದಿರಿಸುವ ಮನೋಭಾವದೊಂದಿಗೆ ವಿವಿಧ ಹೂಡಿಕೆಗಳ ಆಳವಾದ ಅರಿವಿನೊಂದಿಗೆ ತೊಡಗಿದರೆ ಒಬ್ಬ ವ್ಯಕ್ತಿ ಶಕ್ತಿಯಾಗಿ ಬದಲಾಗಲು ಸಾಧ್ಯ ಎಂದು ಪ್ರೊ ಸುರೇಶ್ ರೈ ಕೆ ನುಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಶಾಸ್ತ್ರ ಶಿಕ್ಷಕರ ಸಂಘ (ಮುಕ್ತ) ಸಹಯೋಗದಲ್ಲಿ ಏರ್ಪಡಿಸಿದ “ಹೂಡಿಕೆದಾರರ ಜಾಗೃತಿಯ ಒಂದು ದಿನದ ಕಾರ್ಯಕ್ರಮ” ಉದ್ಘಾಟಿಸಿ ಪ್ರೊ ಸುರೇಶ್ ರೈ ಕೆ ಮಾತನಾಡಿದರು. ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಬಿಂದು ಟಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿ, ಪ್ರಸ್ತಾವಿಕ ಮಾತುಗಳನ್ನಾಡಿ ಗಣ್ಯರನ್ನು ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರಘು…
ಸಜ್ಜನ ಪ್ರಾಮಾಣಿಕ ರಾಜಕಾರಣಿಯಾದ ಕಾಂಗ್ರೆಸ್ ಪಕ್ಷವನ್ನು ಮುನ್ನೆಡಿಸಿ ಕಾರ್ಕಳ ಜನರ ಮನಸ್ಸಿನಲ್ಲಿ ಉಳಿದ ಧೀಮಂತ ನಾಯಕ ದಿ.ಗೋಪಾಲ ಭಂಡಾರಿಯವರ ಪ್ರತಿಮೆ ನಿರ್ಮಾಣಕ್ಕೆ ನನ್ನ ಮೊದಲ ಆದ್ಯತೆ ಎಂದು ಕಾರ್ಕಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು. ಅವರು ಎ.18 ರಂದು ಹೆಬ್ರಿ ಮೇಲ್ಪೇಟೆ ದಿ.ಪ್ರಸನ್ನ ಬಲ್ಲಾಳ ಅವರ ನಿವಾಸದಲ್ಲಿ ಆರಂಭಗೊಂಡ ಚುನಾವಣಾ ಪ್ರಚಾರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ಆಡಂಬರ ಇಲ್ಲ ಅಬ್ಬರದ ಪ್ರಚಾರ, ಸದ್ದು ಗದ್ದಲದಿಂದ ಮಾತ್ರ ಅಭಿವೃದ್ಧಿಯಲ್ಲ. ಸತ್ಯ ಧಮ೯, ಪ್ರಮಾಣಿಕತೆ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವುದು ಮುಖ್ಯ.ಈ ಬಾರಿ ಕಾರ್ಕಳ ಜನ ಬದಲಾವಣೆ ಬಯಸಿದ್ದಾರೆ ಎನ್ನುವುದು ಜನಬೆಂಬಲದಿಂದ ಗೊತ್ತಾಗುತ್ತಿದೆ. ಒಂದು ಬಾರಿ ಅವಕಾಶ ಕೊಡಿ. ಅಭಿವೃದ್ಧಿ ಏನು ಎಂಬುವುದನ್ನ ಮಾಡಿ ತೋರಿಸುತ್ತೇನೆ. ಈಗಾಗಲೇ ನಿಮ್ಮೆಲ್ಲ ಆಶೀರ್ವಾದ ಹಾಗೂ ಕಾರ್ಕಳ ಕಾಂಗ್ರೆಸ್ ನ ಹಿರಿಯರ ಮಾರ್ಗದರ್ಶನದಲ್ಲಿ ಯಾವುದು ಆಡಂಬರವಿಲ್ಲದೆ ನಾಮಪತ್ರ ಸಲ್ಲಿಸಿದ್ದೇನೆ ಎಂದರು. ಸತ್ಯ ಧರ್ಮದ ಮತಯಾಚನೆ :…
ಮಂಗಳೂರು ಹೊರವಲಯದ ದೇರಳಕಟ್ಟೆಯ ಎ. ಬಿ. ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಿರೀಕ್ಷಾ ಶೆಟ್ಟಿ ಅವರು ಸಲ್ಲಿಸಿದ ಮಹಾ ಪ್ರಬಂಧಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿದೆ. ಡಾ. ನಿರೀಕ್ಷಾ ಶೆಟ್ಟಿ ಅವರು ಎ. ಬಿ. ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ನ ವೈಸ್ ಪ್ರಿನ್ಸಿಪಾಲ್ ಡಾ. ಮಿತ್ರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ‘ಅಸೋಸಿಯೇಷನ್ ಆಫ್ ವಿಟಮಿನ್ ಡಿ ರಿಸೆಪ್ಟರ್ ಜೀನ್ ಪಾಲಿ ಮಾರ್ಪಿಸಮ್ ಆಂಡ್ ಆಂಟಿಮೈಕ್ರೋಬಿಯಲ್ ಪೆಪೈಡ್ ಎಲ್ ಎಲ್ -37 ಇನ್ ಡೆಂಟಲ್ ಕೇರೀಸ್’ ಎನ್ನುವ ಮಹಾಪ್ರಬಂಧವನ್ನು ಮಂಡಿಸಿದ್ದರು. ಇದಕ್ಕೆ ಮಾನ್ಯತೆ ನೀಡಿರುವ ನಿಟ್ಟೆ ವಿಶ್ವವಿದ್ಯಾನಿಲಯವು ಎ.15 ರಂದು ಪಿ ಎಚ್ ಡಿ ಪದವಿ ನೀಡಿದೆ. ಡಾ. ನೀರಿಕ್ಷಾ ಶೆಟ್ಟಿ ಅವರು 2018ರಿಂದ ಎ. ಬಿ. ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಬಿ. ಡಿಎಸ್ ಮತ್ತು ಎಂ.…
ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು, ನಿಸ್ವಾರ್ಥ ಸಮಾಜಸೇವೆ ಮೂಲಕ ಜನಮನ ಗೆದ್ದಿರುವ ಉದ್ಯಮಿಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಮಾಲಕರಾಗಿರುವ ಚೇತನ್ಕುಮಾರ್ ಶೆಟ್ಟಿಯವರು ಪ್ರಮುಖರಾಗಿದ್ದಾರೆಂಬುವುದು ಸಮಸ್ತ ಬಂಟ ಸಮಾಜಕ್ಕೆ ಸಂತಸದ ಸಂಗತಿ. ಎಚ್. ದಯಾನಂದ ಶೆಟ್ಟಿ ಮತ್ತು ನಾಗರತ್ನ ಡಿ. ಶೆಟ್ಟಿ ದಂಪತಿಗಳ ಸುಪುತ್ರರಾಗಿರುವ ಚೇತನ್ಕುಮಾರ್ ಶೆಟ್ಟಿಯವರು ಹೇರೂರಿನ ಎಚ್.ಪಿ. ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಕಲಿತರು. ಬ್ರಹ್ಮಾವರದ ಹಂಗಾರಕಟ್ಟೆ ಚೇತನಾ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ಓದಿದರು. ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದರು. ಕಾಲೇಜ್ ದಿನಗಳಲ್ಲೇ ನಾಯಕತ್ವದ ಗುಣಗಳನ್ನು ಹೊಂದಿದ್ದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಪ್ರತಿನಿಧಿ ಕೂಡಾ ಆಗಿದ್ದರು. ಇವರ ಅಣ್ಣ ಜೀವನ್ಕುಮಾರ್ ಶೆಟ್ಟಿಯವರು ಉಡುಪಿಯಲ್ಲಿ ಚಾಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಬ್ರಹ್ಮಾವರದಲ್ಲಿ ನ್ಯೂ ಕರ್ನಾಟಕ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮೂಲಕ ಉತ್ತಮ ಗುಣಮಟ್ಟದ ವಸತಿ ಸಮುಚ್ಚಯ ಹಾಗೂ ಇದರ ನಿರ್ಮಾಣ ಗುತ್ತಿಗೆದಾರರಾಗಿ ಗುರುತಿಸಿಕೊಂಡಿರುವ ಚೇತನ್ಕುಮಾರ್ ಶೆಟ್ಟಿಯವರು ಸರಳ ಸಜ್ಜನಿಕೆ,…
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿರುವ ಆಳ್ವಾಸ್ ಶಿಕ್ಷಣ ಫೌಂಡೇಷನ್ (ಎಇಎಫ್) ಕ್ಯಾಂಪಸ್ನಲ್ಲಿ ಡಿಸೆಂಬರ್ 21 ರಿಂದ 27 ವರೆಗೆ ಭಾರತದ ಮೊದಲ ಅಂತಾರಾಷ್ಟ್ರೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಜಾಂಬೂರಿ ನಡೆಯಲಿದೆ. ಈ ಜಾಂಬೂರಿಯಲ್ಲಿ 50,000 ಸ್ಕೌಟ್ಸ್ ಹಾಗೂ ಗೈಡ್ ಗಳು ಸೇರಿದಂತೆ ಒಟ್ಟು 63,000 ಮಂದಿ ಭಾಗವಹಿಸಲಿದ್ದಾರೆ. 10 ದೇಶಗಳಿಂದ 10,000 ಮಂದಿ ತರಬೇತಿ ನೀಡುವವರು ಹಾಗೂ 3,000 ಮಂದಿ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇದೇ ಮೊದಲು ಎನ್ನಲಾಗಿದೆ. ಈ ಕಾರ್ಯಕ್ರಮದ ಕುರಿತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. “ಈ ಜಾಂಬೂರಿಯಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ಮೇಳಗಳು ಇರಲಿವೆ. ಕೃಷಿ ಮೇಳ, ವಿಜ್ಞಾನ ಮೇಳ, ಆಹಾರ ಮೇಳ ಸೇರಿದಂತೆ ವಿವಿಧ ಮೇಳಗಳು ಇರಲಿವೆ. ಸುಮಾರು ಏಳು ಎಕರೆ ಪ್ರದೇಶದಲ್ಲಿ ಈ ಮೇಳ ನಡೆಯಲಿದೆ. 42 ಬಗೆಯ ಸಾಹಸ ಕಸರತ್ತುಗಳು ಇರಲಿವೆ. ತೋಟಗಾರಿಕಾ…
ಮಂಗಳೂರು: ಮ್ಯಾಕ್ಸ್ ಕ್ರಿಯೇಷನ್ ಲಾಂಛನದಲ್ಲಿ “ಪ್ರೊಡಕ್ಷನ್ ನಂಬರ್ 1” ಚಿತ್ರಕ್ಕೆ ಮುಹೂರ್ತ ಸಮಾರಂಭವು ಹರೇಕಳ ಸಂಪಿಗೆದಡಿ ಅರ್ಧನಾರೀಶ್ವರ ದೇವಸ್ಥಾನದಲ್ಲಿ ನೆರವೇರಿತು. ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಚಿತ್ರಕ್ಕೆ ಕ್ಲಾಫ್ ಮಾಡಿದರು. ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಕೆಮರಾ ಚಾಲನೆ ಮಾಡಿದರು. ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಸ್ವರಾಜ್ ಶೆಟ್ಟಿ ಉತ್ತಮ ಕಲಾವಿದ. ಮೊದಲ ಬಾರಿ ಕಥೆ ಚಿತ್ರಕತೆ ನಿರ್ದೇಶನದ ಜವಾಬ್ದಾರಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ನಮ್ಮ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ” ಎಂದರು. ಬಳಿಕ ಮಾತಾಡಿದ ಪ್ರಕಾಶ್ ಪಾಂಡೇಶ್ವರ್ ಅವರು, “ಸ್ವರಾಜ್ ಅನ್ನುವ ಪ್ರತಿಭೆ ಪೂರ್ಣ ಪ್ರಮಾಣದಲ್ಲಿ ಈ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ್ದಾರೆ. ಅವರಿಗೆ ಶುಭ ಹಾರೈಕೆಗಳು” ಎಂದರು. ಚಿತ್ರದ ನಿರ್ಮಾಪಕ ಭಾಗ್ಯರಾಜ್ ಶೆಟ್ಟಿ ಮಾತನಾಡಿ, “ಕನ್ನಡಿಗರು ಸಹಕಾರ ನೀಡಬೇಕು. ಚಿತ್ರದ ಕಥೆ ಸೊಗಸಾಗಿದ್ದು ತುಳುನಾಡಿನ ಹಲವಾರು ಕಲಾವಿದರು ಬಣ್ಣ ಹಚ್ಚಲಿದ್ದಾರೆ” ಎಂದರು. ಚಿತ್ರ…
ಪುತ್ತೂರಿನ ಪವಿತ್ರ ಶೆಟ್ಟಿ ಅವರು 2022 ರ ಜೂನ್ 26 ರಂದು ದುಬೈ ಸಿಲಿಕಾನ್ ಓಯಸಿಸ್ನ ರಾಡಿಸನ್ ರೆಡ್ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಯುಎಇ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಒಂದನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಯುಎಇಯಲ್ಲಿ ವಾಸಿಸುವ ಎಲ್ಲಾ ರಾಷ್ಟ್ರೀಯತೆಗಳಿಗೆ ಮುಕ್ತವಾಗಿರುವ ಈ ಸ್ಪರ್ಧೆಯು ಮಧ್ಯಪ್ರಾಚ್ಯದಲ್ಲಿ ಅತಿದೊಡ್ಡ ಮತ್ತು ಅತ್ಯಂತ ಪಾರದರ್ಶಕ ಸ್ಪರ್ಧೆಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಪ್ರತಿಷ್ಠಿತ ಶೀರ್ಷಿಕೆಗಳಲ್ಲಿ ಒಂದಾಗಿದೆ. ಹೆಚ್ಚುವರಿಯಾಗಿ, ಸ್ಪರ್ಧೆಯ ಭಾಗವಾಗಿ ಶ್ರೀಮತಿ ಫಿಟ್ನೆಸ್ ಕ್ವೀನ್ ಆಗಿ ಕಿರೀಟವನ್ನು ಸಹ ಪಡೆದಿರುವ ಪವಿತ್ರ ಶೆಟ್ಟಿಯವರಿಗೆ ತುಂಬು ಹೃದಯದ ಅಭಿನಂದನೆಗಳು. ಪವಿತ್ರ ಶೆಟ್ಟಿಯವರು ವೃತ್ತಿನಿರತ ಕರಾಟೆ ಶಿಕ್ಷಕರಾಗಿದ್ದಾರೆ. ರಾಹುಲ್ ಶೆಟ್ಟಿಯವರನ್ನು ವಿವಾಹವಾಗಿ ಮೂರು ವರ್ಷದ ಬಾಲಕನ ತಾಯಿಯಾಗಿ ತನ್ನ ವೃತ್ತಿಪರ ಮತ್ತು ಕೌಟುಂಬಿಕ ಜೀವನದ ನಡುವೆ ಯಶಸ್ವಿಯಾಗಿ ಕಳೆದ 9 ವರ್ಷಗಳಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ. ಪವಿತ್ರ ಶೆಟ್ಟಿ ಅವರು ಪುತ್ತೂರಿನಲ್ಲಿ ಹುಟ್ಟಿ ಬೆಳೆದು, ಸಂತ ವಿಕ್ಟರ್ಸ್ ಮತ್ತು ಸಂತ ಫಿಲೋಮಿನಾ ಪುತ್ತೂರಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಮೂಡುಬಿದಿರೆಯ ಆಳ್ವಾಸ್…
ಭೂತದ ನೆನಪಿಲ್ಲದ ವರ್ತಮಾನ ಭವಿಷ್ಯದ ಕಲ್ಪನೆ ಮಾಡಲಾರದು,ನೆಲದಲ್ಲಿ ಬೇರಿಳಿಸದ ವೃಕ್ಷ ಆಕಾಶದಲ್ಲಿ ಕೊಂಬೆಗಳನ್ನು ಚಾಚಲಾರದು ಎನ್ನುವ ವಸ್ತುಸ್ಥಿತಿ ನಮಗಿರಬೇಕು.ನಾವು ನಿಸರ್ಗದ ಕೂಸು,ಈ ಪ್ರಕೃತಿ ನಮ್ಮ ಆಡಂಬೋಲ. ನಮ್ಮ ಸಾಂಸ್ಕೃತಿಕ ಪ್ರಜ್ಞೆ, ಪಾರಂಪರಿಕ ಮೌಲ್ಯ, ನಾಗರಿಕತೆಯ ಅರಿವು, ಆಯುರ್ವೇದ ಸ್ಥಾಪಿತ ಆರೋಗ್ಯ ಸೂತ್ರಗಳು, ಜನಪದದ ಆಚರಣೆ, ಗುರುಹಿರಿಯರ ಜೀವನಾದರ್ಶ, ಸಂತರ ಪಥದರ್ಶನ, ದಾರ್ಶನಿಕರ ನಿರೂಪ….ಹೀಗೆ ಭಾರತೀಯ ಮಣ್ಣಲ್ಲಿ ಕಣ್ಣಾಗಿರುವ ಸಾವಿರದ ಸಾವಿರಸಾವಿರ ಜೀವನ ಪದ್ಧತಿಯ ಅಸಂಖ್ಯ ಎಳೆ ಎಳೆಯ ಸದ್ವಿಚಾರಗಳು, ಸದ್ವೃತ್ತದ ಔನ್ನತ್ಯ ನಮ್ಮ ಬದುಕಿನ ಭಾಗವಾಗಬೇಕು. ಕವಲು ಹಾದಿಯಲ್ಲಿ ನಿಂತ ನಾವೀಗ ಅಂತರಂಗಕ್ಕೆ ಕಿವಿಕೊಡಬೇಕು. ನಮ್ಮ ನಡೆ-ನುಡಿ, ಆಚಾರ-ವಿಚಾರ, ಹಾವ-ಬಾವ, ಆಹಾರ-ವಿಹಾರ, ವಿಧಿ-ನಿಷೇಧ…ಎಲ್ಲವುಗಳ ಬಗೆಗಾಗಿನ ಪರಿಕಲ್ಪನೆಯನ್ನು ಪುನರ್ ವ್ಯಾಖ್ಯಾನಿಸಬೇಕು. ಆತ್ಯಂತಿಕ ಸತ್ಯದ ಸ್ವರೂಪ, ಅಲ್ಲಿರುವ ಗಟ್ಟಿತನದ ಮಾನಕೀಕರಣ, ತಲೆಮಾರುಗಳಿಂದ ಆಚರಿಸಿ ಅನುಸರಿಸಿ ಅನುಭವಿಸಿದ ಗುಣಾತ್ಮಕ ಪರಿಣಾಮ ಆಯುರ್ವೇದದ ಆಹಾರ ಪದ್ಧತಿಯ ಪ್ರತಿ ಪದಗಳಲ್ಲಿ ಪ್ರತಿಫಲಿಸಿದೆ. “ಆಹಾರ” ಜನರ ಜೀವನ ನಿರ್ವಹಣೆಗೆ ಇಂಧನವಾಗಿ,ಆರೋಗ್ಯ ಕಾಪಾಡಲು ಔಷಧವಾಗಿ ಮತ್ತು ಧನಾತ್ಮಕ ಆರೋಗ್ಯದ ಮುಖೇನ ರೋಗರುಜಿನಗಳಿಂದ…
ನಗರದ ಪುರಭವನದಲ್ಲಿ ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಗ್ರಹಣ ಸಮಾರಂಭವು ದಿನಾಂಕ 30-09-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರಿಗೆ ‘ತುಳುವೆರೆ ಕರ್ಣೆ’ ಬಿರುದು ನೀಡಿ ಗೌರವಿಸಲಾಯಿತು. ಅವರು ಮಾತನಾಡುತ್ತಾ “ತುಳು ಭಾಷೆಯಲ್ಲಿ ವಿವಿಧ ರೀತಿಯ ಪ್ರಾದೇಶಿಕ ಬದಲಾವಣೆ, ಜಾತಿಯಲ್ಲಿಯೂ ಭಾಷೆಯ ಬದಲಾವಣೆಗಳಿವೆ. ಇದೆಲ್ಲವೂ ತುಳುನಾಡಿನ ತುಳು ಭಾಷೆಯ ವೈಶಿಷ್ಟ್ಯತೆ ಸಾರುತ್ತದೆ” ಎಂದು ಹೇಳಿದರು. ಈ ಸಮಾರಂಭವನ್ನು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಸಂಸದ ಶ್ರೀ ನಳಿನ್ ಕುಮಾರ್ ಕಟೀಲು, ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ, ವಿಶ್ವ ಬಂಟರ ಕೂಟಗಳ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ, ಮಾಜಿ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ವರುಣ್ ಚೌಟ, ವಕೀಲ ಶ್ರೀ ಪದ್ಮರಾಜ್, ಅಖಿಲ…
ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜರತ್ನ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರು ಕರ್ನಾಟಕ ಟೇಬಲ್ ಟೆನ್ನಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೌತಮ್ ಶೆಟ್ಟಿ ಅವರು ಧಾರವಾಡದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರಲಿದ್ದಾರೆ. ಆಯ್ಕೆಯ ಬಳಿಕ ಮಾತನಾಡಿದ ಗೌತಮ್ ಶೆಟ್ಟಿ “ಮಾನಸಿಕ ಮತ್ತು ದೈಹಿಕ ಅರೋಗ್ಯಕ್ಕೆ ಇದು ಪ್ರಯೋಜನಕಾರಿ, ಏಕಾಗ್ರತೆ ಹೆಚ್ಚಿಸುವ ಆಟಗಳಲ್ಲಿ ಟೇಬಲ್ ಟೆನಿಸ್ ಕೂಡ ಒಂದಾಗಿದ್ದು, ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದರು. ನೂತನವಾಗಿ ಆಯ್ಕೆಗೊಂಡ ತಂಡಕ್ಕೆ ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾಗೂ ಬಂಟ್ಸ್ ಬ್ರಿಗೇಡ್ ವತಿಯಿಂದ ಶುಭಾಶಯಗಳು.