ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ನೂತನ ಅಧ್ಯಕ್ಷರಾಗಿ ಕೆ ಬಾಬು ಹೆಗ್ಡೆ ತಗ್ಗರ್ಸೆಯವರು ಆಯ್ಕೆಯಾಗಿದ್ದಾರೆ. ದೇವಸ್ಥಾನದ ಜಗದಾಂಬಿಕ ವಸತಿ ಗೃಹದ ಆಡಳಿತ ಮಂಡಳಿಯ ಸಂಕೀರ್ಣದಲ್ಲಿ ನಡೆದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರ ಪ್ರಥಮ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಕುಂದಾಪುರ ಸಹಾಯಕ ಕಮಿಷನರ್ ಮಹೇಶ್ಚಂದ್ರ, ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಶೆಟ್ಟಿಯವರನ್ನು ವ್ಯವಸ್ಥಾಪನ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಕೋಟೇಶ್ವರ ಸಹನಾ ಗ್ರೂಪ್ ಆಫ್ ಕಂಪನಿ ಸಿಎಂಡಿ ಸುರೇಂದ್ರ ಶೆಟ್ಟಿಯವರು ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.