Author: admin
ಮುಂಬಯಿ, ಜೂ.02: ಬಂಟರೆಲ್ಲರೂ ದಾನಿಗಳಾಗಿದ್ದಾರೆ. ಆದರೆ ಕೆಲವರು ಆರ್ಥಿಕವಾಗಿ ಆಶಕ್ತರಿರಬಹುದು. ಬಂಟರಲ್ಲಿ ಸ್ವಾಭಿಮಾನ ಎಂದಿದೆ. ಯಾರಲ್ಲೂ ಕೈಚಾಚಿ ಸಣ್ಣವರಾಗುವ ಬಂಟರಿಲ್ಲ. ಆದರೂ ಅವಶ್ಯಕತೆಗೆ ಸ್ವಾಭಿಮಾನದಿಂದ ಹೊರಬಂದು ಸದೃಢರಾಗಿ ಸಮಾಜದ ಮುಂದೆ ಸ್ವತಂತ್ರರಾಗಿ ಬಾಳೋಣ. ಮುಂಬಯಿ ಬಂಟರಿಗೆ ಕೊಟ್ಟು ಗೊತ್ತಿದೆ ಹೊರತು ಪಡೆದು ಗೊತ್ತಿಲ್ಲ ಅನ್ನಿಸುತ್ತದೆ. ಅದರಲ್ಲೂ ಶೈಕ್ಷಣಿಕ, ಆರೋಗ್ಯ ಕಾಳಜಿಗಾಗಿ ಸ್ಪಂದಿಸಿ ದೇಣಿಗೆ ನೀಡುವುದು ಖುಷಿಯ ಕೆಲಸವಾಗಿದೆ. ಕಳೆದ ಸುಮಾರು 24 ವರ್ಷಗಳಿಂದ ನಡೆದು ಬರುತ್ತಿರುವ ಈ ಸಾಮಾಜಿಕ ಕ್ಷೇಮಾಭಿವೃದ್ಧಿ ಆರ್ಥಿಕ ಸಹಾಯಾಸ್ತ ಕಾರ್ಯಕ್ರಮ ಸಂತಸ, ನೆಮ್ಮದಿದಾಯಕವಾಗಿದೆ. ಅಗತ್ಯವುಳ್ಳವರಿಗೆ ನೀಡುವುದೇ ಧರ್ಮವಾಗಿದೆ. ಪಡೆದವರು ಮುಂದೆ ಪಡೆಯುವರಿಗೆ ಸಹಾಯಸ್ತ ನೀಡಬೇಕು. ಆವಾಗಲೇ ಸ್ವೀಕೃತ ಋಣ ಸಂದಾಯ ಸಾಧ್ಯ. ಶಿಕ್ಷಣ, ಆರೋಗ್ಯಕ್ಕೆ ನೀಡಿದ ದಾನ ಯಾವೊತ್ತೂ ಪುಣ್ಯಾಧಿಯಾಗಿದ್ದು ಇನ್ನೂ ಇಂತಹ ಪುನೀತ ಸೇವೆಯಲ್ಲಿ ಕೈ ಜೋಡಿಸೋಣ. ಸಮಾಜದ ಸಮಸ್ತ ಬಾಂಧವರ ಒಗ್ಗೂಡುವಿಕೆಯೇ ಸಮುದಾಯದ ಆಸ್ತಿಯಾಗಿದ್ದು ನಾವೂ ಒಗ್ಗೂಡಿ ಬಂಟಶಕ್ತಿ ಬಲಶಾಲಿಯಾಗಿಸೋಣ ಎಂದು ಎಂ ಆರ್ ಜಿ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ನ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ…
ಬಂಟರ ಸಂಘ (ರಿ) ಸುರತ್ಕಲ್ ಇದರ 24 ನೇ ವಾರ್ಷಿಕ ಮಹಾಸಭೆ, ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜೂನ್ 9 ರಂದು ಭಾನುವಾರ ಸಂಜೆ 5 ಗಂಟೆಗೆ ಬಂಟರ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 10.30 ಕ್ಕೆ ವಾರ್ಷಿಕ ಮಹಾಸಭೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸುರತ್ಕಲ್ ಬಂಟರ ಸಂಘದ ಗ್ರಾಮವಾರು ಸಾಂಸ್ಖೃತಿಕ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ಅಭಿನಂದನಾ ಸಮಾರಂಭ, ಸಹಾಯಹಸ್ತ, ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಸಮಾರಂಭವನ್ನು ಮುಂಬಯಿ ವಿ.ಕೆ. ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಕರುಣಾಕರ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ ವೈ ಭರತ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಅಡ್ಯಾರ್ ಗಾರ್ಡನ್ ನಲ್ಲಿ “ಪಟ್ಲ ಸಂಭ್ರಮ 2024” ಅದ್ದೂರಿಯಾಗಿ ಯಶಸ್ವಿಯಾಗಿ ನಡೆದ ಹಿನ್ನಲೆಯಲ್ಲಿ ಅಡ್ಯಾರ್ ನ ಸಂಭ್ರಮ ಸಭಾಂಗಣದಲ್ಲಿ ಧನ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಪಟ್ಲ ಸಂಭ್ರಮ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಯಶಸ್ವಿಯಾಗಿ ನಡೆಯಲು 40 ಘಟಕಗಳು ಅವಿರತವಾಗಿ ದುಡಿದಿರುವುದೇ ಕಾರಣವಾಗಿದೆ. ಬಂಧುಗಳ ಸಹಕಾರಕ್ಕಾಗಿ ಸದಾ ಚಿರಋಣಿಯಾಗಿದ್ದೇನೆ. ನನ್ನನ್ನು ಪ್ರೀತಿಸುವ ಬಂಧುಗಳನ್ನು ನನ್ನ ಹೃದಯದಲ್ಲಿ ಆರಾಧಿಸುತ್ತೇನೆ ಎಂದು ಭಾವನಾತ್ಮಕವಾಗಿ ನುಡಿದರು. ಎಲ್ಲರೂ ಸ್ವಇಚ್ಛೆಯಿಂದ ದುಡಿದಿದ್ದಾರೆ. ಚಲನಚಿತ್ರ ನಟ ಕಿಚ್ಚ ಸುದೀಪ್ ಸಮಾರಂಭದಲ್ಲಿ ಭಾಗವಹಿಸಿರುವುದರಿಂದ ಜನರನ್ನು ನಿಯಂತ್ರಿಸಲು ಸ್ವಲ್ಪ ಕಷ್ಟವಾಯಿತು. ಫೌಂಡೇಶನ್ ನ ಕಾರ್ಯಕ್ರಮವನ್ನು ನೋಡಿ ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದಾರೆ. ಮುಂದಿನ ವರ್ಷ ಪಟ್ಲ ಸಂಭ್ರಮದ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಎಷ್ಟು ದಿನ ಮಾಡಬೇಕು, ಕಾರ್ಯಕ್ರಮ ಯಾವ ರೀತಿ ನಡೆಯಬೇಕು ಎಂಬುದನ್ನು ಎಲ್ಲಾ ಘಟಕಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಲಾಗುವುದು…
ಮೂಡುಬಿದಿರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಮೊದಲ 10 ರ್ಯಾಂಕ್ನಲ್ಲಿ ಇಬ್ಬರು, ಮೊದಲ 50ರಲ್ಲಿ ಒಂಬತ್ತು, ಮೊದಲ 100ರಲ್ಲಿ 21, ಮೊದಲ 200ರಲ್ಲಿ 48, 300ರಲ್ಲಿ 85, 400ರಲ್ಲಿ 117, 500ರಲ್ಲಿ 157, 1000ದ ಒಳಗೆ 516, 2000ದ ಒಳಗೆ 1048, 3000ದ ಒಳಗೆ 1773, 4000ದ ಒಳಗೆ 2107, 5000ದ ಒಳಗೆ 2656 ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡಿದ್ದಾರೆ.ಪ್ರಮುಖವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 1000 ರ್ಯಾಂಕ್ಗಳಲ್ಲಿ 24 ವಿದ್ಯಾರ್ಥಿಗಳು, ಮೊದಲ 5000 ರ್ಯಾಂಕ್ನ ಒಳಗೆ 273 ವಿದ್ಯಾರ್ಥಿಗಳು, ಮೊದಲ 10000 ರ್ಯಾಂಕ್ಗಳಲ್ಲಿ ಒಟ್ಟು 738 ವಿದ್ಯಾರ್ಥಿಗಳು ರ್ಯಾಂಕ್ನ್ನು ಪಡೆದಿದ್ದು, ಇವೆರೆಲ್ಲರೂ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿದ್ದಾರೆ. ವರುಣ್ ವಿ- ಪಶು ವೈದ್ಯಕೀಯದಲ್ಲಿ 3ನೇ ರ್ಯಾಂಕ್, ಕೃಷಿಯಲ್ಲಿ 5 ರ್ಯಾಂಕ್, ಸಾಗರ್- ಕೃಷಿಯಲ್ಲಿ…
ವಿದ್ಯಾಗಿರಿ: ‘ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುವುದು ಶಿಕ್ಷಕರ ಹಾಗೂ ಪಾಲಕರ ಕರ್ತವ್ಯ ಎಂದು ಆಳ್ವಾಸ್ ಕಾ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಪದವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಪದವಿ ಕಾಲೇಜಿನ ದೃಶ್ಯ-ಶ್ರವಣ ಸಭಾಂಗಣದಲ್ಲಿ ಶನಿವಾರ ನಡೆದ 2024ನೇ ಸಾಲಿನ ‘ಶಿಕ್ಷಕ- ರಕ್ಷಕರ ಸಭೆ’ ಯಲ್ಲಿ ಅವರು ಮಾತನಾಡಿದರು. ಪದವಿ ಕಲಿಯುವ ಹಂತವು ನಮ್ಮನ್ನು ಎತ್ತರಕ್ಕೇರಿಸುವ ಒಂದು ಮೆಟ್ಟಿಲು ಅಥವಾ ಪಾತಾಳಕ್ಕಿಳಿಸುವ ಮೆಟ್ಟಿಲೂ ಆಗಬಹುದು. ಅದು ವಿದ್ಯಾರ್ಥಿಗಳ ಮೇಲೆ ನಿಂತಿರುತ್ತದೆ. ನಾವು ಇಲ್ಲೇಕೆ ಇದ್ದೇವೆ? ಈ ವಿಭಾಗವನ್ನು ಆಯ್ಕೆ ಮಾಡಿರುವುದು ಏಕೆ? ಇದೆಲ್ಲವನ್ನೂ ಸರಿಯಾಗಿ ಅರಿತಿರಬೇಕು. ಪ್ರತಿಯೊಬ್ಬರು ಅವರ ಬೆಳವಣಿಗೆ, ಏರಿಳಿತ, ಜ್ಞಾನದ ಮಟ್ಟ ಎಲ್ಲದಕ್ಕೂ ಅವರವರೇ ಕಾರಣರಾಗಿರುತ್ತಾರೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಮಕ್ಕಳ ಸವಾರ್ಂಗೀಣ ಪ್ರಗತಿಗಾಗಿ ಶೈಕ್ಷಣಿಕ ಸಂಸ್ಥೆ ಕಾರ್ಯನಿರ್ವಹಿಸಬೇಕು. ಕೇವಲ ಜ್ಞಾನ ನೀಡುವ ಕಾರ್ಯವಾಗದೇ ಮಕ್ಕಳ ಮನಸ್ಸು ಕಟ್ಟುವ ಕಾರ್ಯವಾಗಬೇಕು. ಪಾಲಕರೇ ಮಕ್ಕಳ ಮೊದಲ ಶಿಕ್ಷಕರಾಗಬೇಕು. ಶಿಕ್ಷಕರು ವಿದ್ಯಾರ್ಥಿಗಳ ಎರಡನೇ ಪಾಲಕರಾಗಬೇಕು. ವ್ಯಕ್ತಿತ್ವ…
ರಾಜ್ಯದಾದ್ಯಂತ ಜೂನ್ 3 ರಂದು ನಡೆಯಲಿರುವ ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹೆಬ್ರಿ ಬೀಡುವಿನ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಪ್ರೊ.ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ವರ್ದಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜು, ವಿವಿಧ ಹಂತಗಳ ಶೈಕ್ಷಣಿಕ ಸಂಸ್ಥೆಗಳ, ಭಾಷಾ ಮಾಧ್ಯಮದ, ಬೋಧಕ ವೃಂದದ, ಬೋಧಕೇತರರ, ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾಸಂಸ್ಥೆಗಳ, ಆಡಳಿತ ಮಂಡಳಿಗಳ ಬಹುಮುಖಿ ಸಮಸ್ಯೆಗಳನ್ನು ಆಯಾ ವರ್ಗದಲ್ಲಿ ತಜ್ಞರೆನಿಸಿದವರಿಂದ ಸಲಹೆ ಮಾರ್ಗದರ್ಶನ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವ ಭರವಸೆಯನ್ನು ನೀಡಿದ್ದಾರೆ ಹಾಗೂ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲು ಸಹಕಾರ, ಮಾರ್ಗದರ್ಶನ ಮತ್ತು ಉತ್ತೇಜನ ನೀಡುವಂತೆ ಮತದಾರರಲ್ಲಿ ಕೇಳಿಕೊಂಡರು. ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು ಎಂ.ಬಿ.ಬಿ.ಎಸ್, ಎಂ.ಎಸ್ ( ಸರ್ಜರಿ ) ಮತ್ತು ಎಂ.ಸಿ.ಎಚ್ (ಸಿ.ಟಿ.ವಿ.ಎಸ್) ಪದವಿ…
ಕಾಸರಗೋಡು ಜಿಲ್ಲೆಯ ಕುಂಬಳೆ ಮುಳ್ಳೇರಿಯ ಮಾರ್ಗದ ಬದಿಯಲ್ಲಿ ಮುರಕಲ್ಲು ಗುಡ್ಡದಲ್ಲಿ ಒಂದು ಉಮಾಮಹೇಶ್ವರಿ ದೇವಾಲಯವಿದೆ. ಸಾಧಾರಣ ನಾಲ್ಕು ದಶಕದ ಹಿಂದೆ ಗುಡ್ಡದ ಸಮತಟ್ಟು ಪ್ರದೇಶದಲ್ಲಿ ಮುಳಿಹುಲ್ಲು ಹೊದಿಸಿದ ಒಂದು ಸಣ್ಣ ಗುಡಿ. ಅದರ ಹತ್ತಿರದಲ್ಲಿ ಒಂದು ದೇವರ ಅಡುಗೆ ಮನೆ ಅದರ ಪಕ್ಕದಲ್ಲಿ ಒಂದು ಪುಟ್ಟ ಬಾವಿ. ಒಪ್ಪತ್ತಿನ ಪೂಜೆ ವರ್ಷದ ಮಹಾ ಶಿವರಾತ್ರಿಗೆ ಊರವರೆಲ್ಲಾ ಸೇರಿ ಸಮಾರಾಧನೆ ಮಾಡಿ ಹೋಗುತ್ತಿದ್ದರು. 1980 ನಂತರ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಈ ಊರಿನ ಆಸ್ತಿಕ ಭಕ್ತರೆಲ್ಲಾ ಪ್ರಶ್ನೆ ಚಿಂತಿಸಿ ಜೀರ್ಣಾವಸ್ಥೆಯಲ್ಲಿದ್ದ ದೇವಾಲಯವನ್ನು ಕೆಡಿಸಿ ಉತ್ತಮ ರೀತಿಯಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ನೂತನ ದೇವಾಲಯ ನಿರ್ಮಾಣವಾಯಿತು. ಹೆಚ್ಚು ಕಮ್ಮಿ 1990 ರಿಂದ 2015 ರವರೆಗೆ ನಾನಾ ಊರುಗಳಿಂದ ಇಷ್ಟಾರ್ಥ ಸಿದ್ಧಿಗಾಗಿ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಇಲ್ಲಿನ ಸ್ಥಳ ಮಹಾತ್ಮೆ ಎಂದರೆ ವಿವಾಹ ಭಾಗ್ಯ ಸಿದ್ಧಿಸುವುದು. ಅಂದರೆ ಸನ್ನಿಧಿಗೆ ಬಂದು ದೇವರ ಮುಂದೆ ಅರಿಕೆ ಪ್ರಾರ್ಥನೆ ಮಾಡಿಕೊಂಡರೆ ವರ್ಷದ ಒಳಗಾಗಿ ಮಾಂಗಲ್ಯ ಭಾಗ್ಯ ಲಭಿಸುವುದೆಂದು…
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಮೆರಿಟ್ ಹಾಸ್ಪಿಟಲಿಟಿ ಸರ್ವಿಸಸ್ ಪ್ರೈ.ಲಿ. ಮುಂಬಯಿಯ ಸಿಎಂಡಿ ಬೆಳ್ಳಾಡಿ ಅಶೋಕ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರ ವಿಶೇಷ ಮನವಿಗೆ ಸ್ವಂದಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದಾರೆ. ಅವರು ಈ ಹಿಂದೆ ಒಕ್ಕೂಟದ ನಿರ್ದೇಶಕರಾಗಿದ್ದರು. ಇನ್ನು ಮುಂದೆ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.
ಎಂ.ಆರ್.ಜಿ.ಗ್ರೂಪ್ ಮತ್ತು ಮ್ಯಾರಿಯೆಟ್ ಹೊಟೇಲ್ಸ್ ಸಹಯೋಗದಲ್ಲಿ ನವಿ ಮಂಬಯಿಯಲ್ಲಿ ಹೊಸ ಹೋಟೆಲ್ ‘ಮ್ಯಾರಿಯಟ್ ನವಿ ಮುಂಬಯಿ’
ಆತಿಥ್ಯ ಕ್ಷೇತ್ರದಲ್ಲಿ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರಾಗಿರುವ ಎಂ.ಆರ್.ಜಿ.ಗ್ರೂಪ್ ಮತ್ತು ಮ್ಯಾರಿಯೆಟ್ ಹೊಟೇಲ್ಸ್ ಗಳು ನವ ಮುಂಬಯಿಯಲ್ಲಿ ಜಂಟಿಯಾಗಿ ಆತಿಥ್ಯೋದ್ಯಮಕ್ಕೆ ಶುಭಾರಂಭ ಮಾಡಿವೆ. ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 26 ಕಿ.ಮೀ. ದೂರದಲ್ಲಿರುವ ನವಿ ಮುಂಬಯಿ ಮ್ಯಾರಿಯೆಟ್ ಹೊಟೇಲ್ ವ್ಯಾಪಾರೋದ್ಯಮಿ ಪ್ರವಾಸಿಗರು ಮತ್ತು ರಜೆ ಸಮಯ ಕಳೆಯುವ ಪ್ರವಾಸಿಗರಿಗೆ ಅನುಕೂಲಕರ ತಾಣವಾಗಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಅತಿಥಿಗಳಿಗೂ ಇದು ಅಡೆ ತಡೆ ರಹಿತ ಪ್ರಯಾಣಕ್ಕೆ ಅನುಕೂಲಕರವಾದಂತಹ ಸ್ಥಳದಲ್ಲಿದೆ. ಮಹಾರಾಷ್ಟ್ರದ ಕಡಲ ಕಿನಾರೆ ಇಲ್ಲಿ ಅತ್ಯಂತ ರಮಣೀಯವಾಗಿ ಅನಾವರಣಗೊಂಡಿದೆ. ಈ ಹೊಟೇಲು ಅತ್ಯಾಧುನಿಕ ಸವಲತ್ತುಗಳನ್ನು ಒಳಗೊಂಡಿದೆ. “ಎಂ.ಆರ್.ಜಿ.ಗ್ರೂಪಿನ ಹೊಸ ಸಾಧನೆ ಇದು. ನಾವು ಆತಿಥ್ಯೋದ್ಯಮದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆ ಎಂಬುದಕ್ಕೆ ಇದೊಂದು ನಿದರ್ಶನ. ಎಂ.ಆರ್.ಜಿ. ಗ್ರೂಪಿನ ದೇಶೀಯ ತಜ್ಞತೆ ಮತ್ತು ಮ್ಯಾರಿಯೆಟ್ ನ ಜಾಗತಿಕ ಪ್ರತಿಷ್ಠೆ ಜೊತೆಗೂಡಿ ಅತಿಥಿಗಳ ಪ್ರಯಾಣವನ್ನು ಮರುಕಲ್ಪಿಸುವ ಯತ್ನ ಇದು” ಎಂದು ಎಂ.ಆರ್.ಜಿ. ಗ್ರೂಪಿನ ಛೇರ್ಮನ್ ಕೆ.ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. …
ಡಾ. ಎಂ. ಮೋಹನ್ ಅಳ್ವ ನಮ್ಮ ಕಾಲಮಾನದ ಒಬ್ಬ ಮಹಾನ್ ಸಾಂಸ್ಕೃತಿಕ ರಾಯಭಾರಿ ಎಂಬುದು ವಿದ್ವತ್ ವಲಯದಿಂದ ಜನ ಸಾಮಾನ್ಯನವರೆಗೆ ಎಲ್ಲರೂ ಒಪ್ಪುವ ಮಾತು. ಮೋಹನ ಆಳ್ವರು ಮೂಲತಃ ಆಯುರ್ವೇದ ವೈದ್ಯರು. ಮೂಡುಬಿದಿರೆಯಲ್ಲಿ ಪುಟ್ಟ ಕ್ಲಿನಿಕ್ ತೆರೆದು ರೋಗಿಗಳಿಗೆ ಮದ್ದು ನೀಡಲಾರಂಭಿಸಿದ್ದ ಅವರು ವೃತ್ತಿಯ ಜತೆಗೆ ಪ್ರವೃತ್ತಿಯನ್ನೆಲ್ಲಾ ನಿರಂತರ ವಿಸ್ತರಿಸಿಕೊಂಡು ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಸಾಮಾಜಿಕ, ಸಾಂಸ್ಕೃತಿಕ ಚಿಕಿತ್ಸಕರಾಗಿ ಬೆಳೆದಿದ್ದಾರೆ. ಅವರ ಸಾಹಿತ್ಯ ಪ್ರೇಮ, ಸಾಂಸ್ಕೃತಿಕ ಸಂಘಟನೆ, ಶಿಸ್ತು, ಸೌಂದರ್ಯ ಪ್ರಜ್ಞೆ, ಸಮಯ ಪ್ರಜ್ಞೆ ಹೀಗೆ ಸೃಜನಶೀಲತೆಯ ವಿಸ್ತಾರ ಬಹು ದೊಡ್ಡದು. ವಿರಾಸತ್, ನುಡಿಸಿರಿಗಳ ಮೂಲಕ ಒಂದೆಡೆ ಸಾಹಿತ್ಯ – ಸಂಸ್ಕೃತಿ ಹಾಗೂ ಇನ್ನೊಂದೆಡೆ ಶಿಕ್ಷಣ, ಆರೋಗ್ಯ, ಕ್ರೀಡೆ ಹೀಗೆ ಬಹುಮುಖೀ ಸಾಧಕರಾಗಿದ್ದಾರೆ. ಮೋಹನ ಆಳ್ವರು 1952ರ ಮೇ 31 ರಂದು ಜನಿಸಿದರು. ತಂದೆ ಮಿಜಾರುಗುತ್ತು ಆನಂದ ಆಳ್ವ. ತಾಯಿ ಸುಂದರಿ ಆಳ್ವ. ಮೋಹನ ಆಳ್ವರು ಹುಟ್ಟು ಕೃಷಿಕರು. ಅವರು ವೈದ್ಯರಾಗಲು ಮನಸ್ಸು ಮಾಡಿದ್ದು ಕೊಂಚ ವಿಳಂಬವಾಗಿಯೇ. ಅಯುರ್ವೇದ ವೈದ್ಯರಾಗಿ…














