ದೈಹಿಕ ಶಕ್ತಿ ಆರೋಗ್ಯಪೂರ್ಣ ಜೀವನಕ್ಕೆ ಕ್ರೀಡೆ ಒಂದು ರೀತಿಯಲ್ಲಿ ಉತ್ತಮ ವ್ಯಾಯಾಮ ಇದ್ದ ಹಾಗೆ. ಜಾತಿ ಧರ್ಮ ಎನ್ನದೇ ಬೇಧ ಭಾವ ಇಲ್ಲದೆ ನಡೆಯುವ ಇಂತಹ ಕ್ರೀಡಾ ಅಯೋಜನೆಗಳು ದ್ವೇಷ ಭಾವವನ್ನು ಕೂಡಾ ದೂರ ಮಾಡುವ ವೇದಿಕೆ ಇದು. ಕ್ರೀಡೆಯ ಮೇಲಿನ ಪ್ರೀತಿ, ಆಸಕ್ತಿ ತೋರುವ ಮಕ್ಕಳು ಕಠಿನ ಪರಿಶ್ರಮದಿಂದ ಸಾಧನೆ ಮಾಡಬೇಕು. ಹೆಚ್ಚೆಚ್ಚು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗಿಗಲಾಗಬೇಕು. ತುಳುಕೂಟದ ರಜತ ಮಹೋತ್ಸವದ ಅಂಗವಾಗಿ ತುಳುಕೂಟದ ಎಲ್ಲಾ ಸದಸ್ಯರ ಸಹಕಾರದಿಂದ ತುಳುವರನ್ನು ಒಟ್ಟು ಸೇರಿಸಿಕೊಂಡು ಹೊಸ ರೂಪದಲ್ಲಿ ಪಂದ್ಯಾಟಗಳನ್ನು ಆಯೋಜಿಸಿದ್ದಾರೆ. ತುಳುವರಿಗಾಗಿ ಸಮಾಜಕ್ಕಾಗಿ ಆಯೋಜನೆ ಮಾಡುವ ಕೂಟಗಳಲ್ಲಿ ಎಲ್ಲಾ ತುಳು ಬಾಂಧವರು ಭಾಗಿಗಳಾಗಬೇಕು. ಇಲ್ಲಿ ಸೇರಿರುವ ಎಲ್ಲರಲ್ಲಿಯೂ ಪ್ರೀತಿಯ ಸಾಮರಸ್ಯ ಬೆಳೆಯಲಿ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್ ನುಡಿದರು.
ಪುಣೆ ತುಳುಕೂಟದ ರಜತ ಮಹೋತ್ಸವಕ್ಕೆ ಪೂರಕವಾಗಿ 25 ವಿವಿಧ ಕಾರ್ಯಕ್ರಮಗಳು ನಡೆಯಯುತ್ತಿದ್ದು ಅದರ ಭಾಗವಾಗಿ ಸೆಪ್ಟೆಂಬರ್ 21 ಮತ್ತು 22 ರಂದು ತುಳುವರ ಗೊಬ್ಬು ಹೆಸರಿನಲ್ಲಿ ಫುಟ್ಬಾಲ್ ಮತ್ತು ಬಾಕ್ಸ್ ಕ್ರಿಕೆಟ್ ಪಂದ್ಯಾಟಗಳು ಗರ್ವಾರೆ ಕಾಲೇಜಿನ ಎದುರುಗಡೆ ಇರುವ ಸೆಂಟ್ರೋ ಮಾಲ್ ನ ಮೇಲ್ಮಹಡಿಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಸೆಪ್ಟೆಂಬರ್ 21 ರಂದು ಬೆಳಗ್ಗೆ ಫುಟ್ಬಾಲ್ ಪಂದ್ಯಾಟವನ್ನು ಅತಿಥಿಗಳಾಗಿ ಆಗಮಿಸಿದ ಪುಣೆ ಬಂಟ್ಸ್ ಅಸೋಸಿಯೇಷನ್ ನ ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರ್ ಮತ್ತು ದೇವಾಡಿಗ ಸಂಘದ ಅಧ್ಯಕ್ಷರಾದ ನಾರಾಯಣ ದೇವಾಡಿಗರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭಗಳಲ್ಲಿ ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿ ಗುತ್ತು, ತುಳುಕೂಟದ ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ, ಗೌರವಾಧ್ಯಕ್ಷೆ ಸುಜತಾ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಮಹಿಳಾ ಕ್ರೀಡಾ ಕಾರ್ಯಾಧ್ಯಕ್ಷೆ ರಂಜಿತಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಜಿತ್ ಶೆಟ್ಟಿ, ಶ್ರುತಿ ಜೆ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಂದು ಸಂಜೆ ನಡೆದ ಫುಟ್ಬಾಲ್ ಪಂದ್ಯಾಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಕೋಶಾಧಿಕಾರಿ ದಿನೇಶ್ ಶೆಟ್ಟಿ ಉಜಿರೆ, ಉದ್ಯಮಿ ಸಮಾಜ ಸೇವಕ ಪ್ರಕಾಶ್ ಕರ್ಕೇರ ಉಪಸ್ಥಿತರಿದ್ದರು. ಅತಿಥಿ ಗಣ್ಯರನ್ನು ಪುಷ್ಪಗುಚ್ಛ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು.
ಸೆಪ್ಟೆಂಬರ್ 22 ರಂದು ನಡೆದ ಬಾಕ್ಸ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಪುಣೆಯ ಉತ್ತರ ವಲಯದ ಮಾಜಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ಪುಣೆ ತುಳುಕೂಟದ ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸದಾಶಿವ ಸಾಲ್ಯಾನ್, ಪುಣೆ ಬಂಟರ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ, ಅರ್.ಡಿ ಕನ್ಸ್ಟ್ರಕ್ಷನ್ ನ ಎಂಡಿ ದಯಾನಂದ ಸಪಲಿಗ ಆಗಮಿಸಿದ್ದರು. ವೇದಿಕೆಯಲ್ಲಿ ತುಳು ಕೂಟ ಮತ್ತು ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಅತಿಥಿಗಳನ್ನು ಪುಷ್ಪಗುಚ್ಛ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಜೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿಯವರು ಉಪಸ್ಥಿತರಿದ್ದರು. ರೋಹಿತ್ ಶೆಟ್ಟಿ ನಗ್ರಿ ಗುತ್ತು, ಉದಯ್ ಶೆಟ್ಟಿ ಕಳತ್ತೂರು, ಪ್ರಿಯಾ ದೇವಾಡಿಗ, ಸಂತೋಷ್ ಶೆಟ್ಟಿ ಎಣ್ಣೆಹೊಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ : ಹರೀಶ್ ಮೂಡುಬಿದಿರೆ