ಯುವ ಉದ್ಯಮಿ, ಸಮಾಜಸೇವಕ, ಪುತ್ತೂರು ಕಂಬಳ ಸಮಿತಿಯ ಉಪಾಧ್ಯಕ್ಷ ರೋಶನ್ ರೈ ಬನ್ನೂರು ಅವರನ್ನು ಪುತ್ತೂರು ನಗರಸಭೆ ಸದಸ್ಯರನ್ನಾಗಿ ಸರಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಸಭೆಗೆ ಈಗಾಗಲೇ 4 ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಉಳಿದ 1 ಸ್ಥಾನಕ್ಕೆ ಬನ್ನೂರು ನಿವಾಸಿ ರೋಶನ್ ರೈರವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.