Author: admin
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ ಬುಧವಾರ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಬಂಟರ ಮಾತೃ ಸಂಘದ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರುಗಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಸುಧೀರ್ ಶೆಟ್ಟಿ ಅವರು, “ಕೈಯಲ್ಲಿ ಹಣ ಇಲ್ಲದೆ ಇದ್ದಾಗಲೂ ಸಾಲ ಮಾಡಿಯಾದರೂ ನಮ್ಮ ಸಮಾಜದ ಜನರ ಕಣ್ಣೀರು ಒರೆಸುವ ಸಂಘ ಇದ್ದರೆ ಅದು ಬಂಟರ ಸಂಘಗಳ ಒಕ್ಕೂಟ ಮಾತ್ರ. ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜದ ನೊಂದವರ ಕಣ್ಣೀರು ಒರೆಸುವ ಈ ಕಾರ್ಯ ಶ್ರೇಷ್ಠವಾದದ್ದು. ಮನುಷ್ಯ ಜನ್ಮ ಯಾವಾಗಲು ದೊಡ್ಡದು ನಮ್ಮ ಜೀವನ ನಿಂತ ನೀರಾಗಬಾರದು ಸದಾ ಹರಿಯುತ್ತ ಚಲನಶೀಲವಾಗಿರಬೇಕು. ಹೃದಯ ಶ್ರೀಮಂತಿಕೆಯ ಗುಣ ಇಂದು ಐಕಳ ಹರೀಶ್…
ನಮ್ಮ ಆರ್ಥಿಕತೆಯನ್ನು ಮುಂದುವರಿದ ರಾಷ್ಟ್ರಗಳು ಅಭ್ಯಸಿಸುವಂತೆ ಬೆಳೆದ ಭಾರತ ಒಂದು ಕಾಲದಲ್ಲಿ ಸಾಲ ಮಾಡಿ, ಚಿನ್ನದ ಗಣಿಯನ್ನೇ ಅಡವಿಟ್ಟು ಆಹಾರ ಮೂಲಸೌಕರ್ಯ ಒದಗಿಸಬೇಕಾದ ಸ್ಥಿತಿಯಿತ್ತು. ಮುಂದಿನ ಪ್ರಜೆಗಳಾದ ನೀವು ಅದೃಷ್ಟವಂತರು ಎಂದು ಸಿ.ಎ. ತುಕಾರಾಮ್ ರೈ ಬೆಂಗಳೂರು ನುಡಿದರು. ಅವರು ಕರ್ನಾಟಕ ಪ್ರೌಢಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಇವುಗಳ ಜಂಟಿ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ವಕೀಲರಾದ ಜತ್ತನಕೋಡಿ ಶ್ರೀ ಶಂಕರ್ ಭಟ್ ಮಾತನಾಡಿ, ಬಾಲ್ಯದ 14 ವರ್ಷದ ಬದುಕು, ಜೀವನ ಏನೆಂದು ತಿಳಿಸುತ್ತದೆ. ನಿರಂತರವಾದ ಅಭ್ಯಾಸ ಮತ್ತು ಸ್ಥಿರತೆ ಇದ್ದಾಗ ಜೀವನ ಸುಗಮ ಎಂದು ಶುಭ ಹಾರೈಸಿದರು. ಧ್ವಜಾರೋಹಣಗೈದ ಸಿ.ಹಿ. ಪ್ರಾ. ಶಾಲೆ ಅನಂತಾಡಿಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಮತ್ತು ಸಹ ಶಿಕ್ಷಕಿ ಸುನೀತಾ ಬಹುಮಾನ ವಿತರಣೆ ಮಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸ. ಪ. ಪೂ. ಕಾಲೇಜು ನಾರ್ಶಾ ಮೈದಾನದ ಶಿಕ್ಷಕರಾದ ಶ್ರೀ. ಗೋಪಾಲಕೃಷ್ಣ ನೇರಳಕಟ್ಟೆ, ಮಾಣಿ…
“ಯೋಗ್ಯತೆ ಎನ್ನುವುದು ಹೇಳಿಕೊಳ್ಳುವುದಲ್ಲ, ತೋರಿಸಿಕೊಳ್ಳುವುದೂ ಅಲ್ಲ. ನಾವು ಆಡುವ ಒಳ್ಳೆಯ ಮಾತು ಹಾಗೂ ಮಾಡುವ ಒಳ್ಳೆಯ ಕಾರ್ಯ ಬೇರೆಯವರ ಅನುಭವಕ್ಕೆ ಬರುವಂತಹದ್ದು. ಅದೇ ನಿಜವಾದ ಯೋಗ್ಯತೆ”. ಶ್ರೀಯುತ ಜಯರಾಮ ಎಂ ಶೆಟ್ಟಿಯವರ ಜೀವನದಲ್ಲಿ ಈ ಮಾತು ನೂರಕ್ಕೆ ನೂರು ಸತ್ಯ. ಮೂಲತಃ ಕಲ್ಲಮುಂಡ್ಕೂರಿನವರಾದ ಇವರು ಓರ್ವ ಯಶಸ್ವಿ ಉದ್ಯಮಿಯಾಗಿ ರೂಪುಗೊಳ್ಳಲು ಅವರ ಶ್ರಮ, ಅನುಭವ, ಬುದ್ಧಿ ಮತ್ತೆ ಹಾಗೂ ಸಂಘಟನಾ ಚಾತುರ್ಯ ಕಾರಣವಾಗಿದೆ. ಶ್ರೀಯುತ ಮಂಜಯ್ಯ ಶೆಟ್ಟಿ ಮತ್ತು ರುಕ್ಮಿಣಿ ಶೆಟ್ಟಿ ದಂಪತಿಗಳ ಸುಪುತ್ರರಾಗಿ 4-7-1966ರಲ್ಲಿ ಕಲ್ಲಮುಂಡ್ಕೂರು ಕೆಳಗಿನ ಮನೆಯಲ್ಲಿ ಜನಿಸಿದರು. ಪ್ರಾಥಮಿಕ ಶಾಲೆ ನಿಡ್ಡೋಡಿಯ ಸತ್ಯನಾರಾಯಣ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಕಲ್ಲ ಮುಂಡ್ಕೂರಿನ ಸರ್ವೋದಯ ಪ್ರೌಢಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಪಡೆದರು. ಆಗ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲವೆಂದು ಮುಂಬಾಯಿಗೆ ತೆರಳಿದ ಶ್ರೀಯುತರು ಅಲ್ಲಿ ದುಡಿಮೆಯ ಒಟ್ಟಿಗೆ ಪಿ.ಯು.ಸಿ. ಯನ್ನು ಮುಗಿಸಿ 3 ವರುಷಗಳ ನಂತರ ಊರಿಗೆ ತೆರಳಿದರು. ನಂತರ ಕಿನ್ನಿಗೋಳಿಯಲ್ಲಿ 3 ವರ್ಷ ದಿನಸಿ ವ್ಯಾಪಾರ ನಡೆಸಿದರು. ಹೀಗೆ ತೀರ…
ಹೊಸ ಜೀವ ಹೊಸ ಭಾವ ಹೊಸ ವೇಗ ತೋರುತಿದೆ, ಅಳುವ ಕಡಲೊಳು ಬಂತು ನಗೆ ಹಾಯಿಯ ದೋಣಿ ಮನುಜರೆದೆ ಬನದಲ್ಲಿ ಭಾವ ಕುಸುಮವು ಅರಳಿ ಓಡಲುರಿಯ ತಣಿಸಲು ತವಕದಲಿ ಸಾಗಿಹರು. ಇದು ಎಂ. ವೀರಪ್ಪ ಮೊಯ್ಲಿಯವರ ಶ್ರೀ ರಾಮಾಯಣ ಮಹಾನ್ವೇಷಣಂನಲ್ಲಿ ಬರುವ ಸಾಲುಗಳು. ಈ ಕವನದ ಸಾಲುಗಳಂತೆ ಅಯೋಧ್ಯೆಯ ರಾಮ ಮಂದಿರದಲ್ಲಿ 500 ವರ್ಷಗಳ ನಂತರ ಜ. 22 ರಂದು ಪುನರಪಿ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ದೇಶದ ಎಲ್ಲೆಡೆ ಉತ್ಸವದ ಉತ್ಸಾಹ, ಸಾಮುದಾಯಿಕತೆ ಮತ್ತು ಅನನ್ಯತೆಯ ನೆಲೆಯಲ್ಲಿ ರೂಪು ತಾಳುವ ಸಾಂಸ್ಕೃತಿಕ ವೈಭವವನ್ನು ಆಚರಿಸುತ್ತಾ ಶುಭ ಯಾತ್ರೆಯೊಂದಿಗೆ ರಾಮ ಭಕ್ತಿಯನ್ನು ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ ಘಾಟ್ಕೋಪರ್ ಪೂರ್ವ ಪಂತನಗರದ ಕನ್ನಡ ವೆಲ್ಫೇರ್ ಸೊಸೈಟಿಯು ಕೂಡಾ ಅಧ್ಯಕ್ಷರಾದ ನವೀನ್ ಶೆಟ್ಟಿ ಇನ್ನ ಬಾಳಿಕೆಯವರ ನೇತೃತ್ವದಲ್ಲಿ ಜ. 20 ರಂದು ರಾಮಲಲ್ಲಾನ ಶೋಭಾ ಯಾತ್ರೆಯನ್ನು ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಪುಷ್ಪಾಲಂಕೃತವಾದ ರಜತ ರಥದಲ್ಲಿ ಎಳೆಯ ಮಕ್ಕಳಿಂದ ರಾಮ, ಲಕ್ಷ್ಮಣ, ಸೀತೆಯವರ ವೇಷ…
‘ಆನಂದ ಸ್ವರೂಪ’ ಉದ್ಘಾಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಣ್ಣನೆ ‘ಆಳ್ವಾಸ್: ರಾಜ್ಯದ ಶೈಕ್ಷಣಿಕ ಮಿನುಗು ನಕ್ಷತ್ರ’
ವಿದ್ಯಾಗಿರಿ (ಮೂಡುಬಿದಿರೆ):‘ಆಳ್ವಾಸ್’ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಮಿನುಗು ನಕ್ಷತ್ರ. ಅದಕ್ಕೆ ‘ಆನಂದ ಸ್ವರೂಪ’ ವನ್ನು ಆಳ್ವರು ನೀಡಿದ್ದಾರೆ; ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಬಣ್ಣಿಸಿದರು. ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಆಳ್ವಾಸ್ ಪ್ರಾಥಮಿಕ ಶಾಲೆ ‘ಆನಂದ ಸ್ವರೂಪ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೂಡುಬಿದಿರೆಗೆ ಸಾಂಸ್ಕøತಿಕ ಹಾಗೂ ಶಿಕ್ಷಣ ಕಾಶಿ ಎಂಬ ಬಿರುದನ್ನು ತಂದವರು ಡಾ.ಎಂ. ಮೋಹನ ಆಳ್ವರು. ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣವನ್ನು ಮಾದರಿಯಾಗಿ ನೀಡುತ್ತಿದ್ದಾರೆ ಎಂದರು. ಮಹಾತ್ಮಗಾಂಧೀಜಿ ‘ರಾಮರಾಜ್ಯ’ದ ಕನಸನ್ನು ನನಸು ಮಾಡಲು ಕೇವಲ ಭದ್ರತೆ, ಅಭಿವೃದ್ಧಿ ಮತ್ತಿತರ ಕಾರ್ಯಗಳಿಂದಲೇ ಸಾಧ್ಯವಿಲ್ಲ. ಉತ್ತಮ ಮನಸ್ಸುಗಳನ್ನು ಕಟ್ಟಬೇಕು. ಪ್ರತಿ ವ್ಯಕ್ತಿಯನ್ನು ಮೌಲ್ಯಯುತ ವಾಗಿರೂಪಿಸಬೇಕು. ಅದಕ್ಕೆ ಮೌಲ್ಯಾಧಾರಿತ, ನೈತಿಕ, ಗುಣಮಟ್ಟದ ಶಿಕ್ಷಣ ಬಹುಮುಖ್ಯ. ಅಂತಹ ವ್ಯಕ್ತಿ ನಿರ್ಮಾಣದಿಂದಲೇ ರಾಷ್ಟ್ರ ನಿರ್ಮಾಣ ಸಾಧ್ಯ. ಆ ಮಾದರಿ ಕಾರ್ಯವನ್ನು ಆಳ್ವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೇವಲ ಉಳ್ಳವರಿಗೆ ಮಾತ್ರವಲ್ಲ, ವಂಚಿತರಿಗೂ ಅವಕಾಶ ಕಲ್ಪಿಸುವ ಅವರ ಮನಸ್ಸು ಆಳ್ವಾಸ್…
ಬಹರೈನ್ ಕನ್ನಡ ಸಂಘದ ನೂತನ ಅಧ್ಯಕ್ಷ ಅಮರನಾಥ ರೈ ಅವರ ನೇತೃತ್ವದ ಹೊಸ ಸಮಿತಿಯ ಪದಗ್ರಹಣವು ಬಹರೈನ್ ಕನ್ನಡ ಭವನದಲ್ಲಿ ನೆರವೇರಿತು. ಭಾರತೀಯ ರಾಯಭಾರಿ ವಿನೋದ್ ಕೆ. ಜಾಕಬ್ ಮಾತನಾಡಿ, ಕರ್ನಾಟಕದ ಸಾಧನೆಗಳನ್ನು ಶ್ಲಾಘಿಸಿ, ರಾಜ್ಯವು ಬಹರೈನ್ ನ ಸ್ಥಳೀಯ ಮತ್ತು ಎನ್ ಆರ್ ಐ ಗಳಿಗೆ ಅತ್ಯುತ್ತಮ ಹೂಡಿಕೆಯ ತಾಣವಾಗಿದೆ ಎಂದರು. ಸಂಘವು ನಾಲ್ಕು ದಶಕಗಳಿಂದ ಸಮುದಾಯಕ್ಕೆ ಸಲ್ಲಿಸಿದ ಸೇವೆ ಮತ್ತು ಹೊಸ ಕನ್ನಡ ಭವನವನ್ನು ನಿರ್ಮಿಸುವಲ್ಲಿ ಅದರ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಕರ್ನಾಟಕದ ಗೃಹ ಸಚಿವ ಡಾ. ಪರಮೇಶ್ವರ ಅವರು ಕರ್ನಾಟಕದ ಆರ್ಥಿಕ ಪ್ರಗತಿ ಮತ್ತು ಬಡತನ ನಿರ್ಮೂಲನೆ ಮತ್ತು ಸಮಾಜದ ಸ್ವಾಸ್ಥ್ಯದ ಬದ್ಧತೆಯ ಮೇಲೆ ಬೆಳಕು ಚೆಲ್ಲಿದರು. ರಾಜ್ಯವು ಪ್ರಸ್ತುತಪಡಿಸಿದ ಅನನ್ಯ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಲು ಅವರು ಹೂಡಿಕೆದಾರರನ್ನು ವಿನಂತಿಸಿದರು. ಇದೇ ವೇಳೆ ಕನ್ನಡ ಭವನಕ್ಕೆ ತಮ್ಮ ಕುಟುಂಬದ ಪ್ರತಿಷ್ಠಾನದಿಂದ 1 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು. ಅತಿಥಿಗಳಾಗಿ ಡಾ. ಆರತಿ ಕೃಷ್ಣ ರವಿಕುಮಾರ್ ಗೌಡ,…
ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿಗೆ ದೊರೆತ ಗೌರವ ‘ನಾರಿಶಕ್ತಿ’ ಮುನ್ನಡೆಸಲಿರುವ ಕ್ಯಾ.ಶರಣ್ಯಾ ರಾವ್ ಎಚ್
ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಹಿರಿಯ ವಿದ್ಯಾರ್ಥಿನಿ ಕ್ಯಾಪ್ಟನ್ ಶರಣ್ಯಾ ರಾವ್ ಎಚ್ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭೂಸೇನೆಯ ‘ನಾರಿಶಕ್ತಿ’ ತಂಡವನ್ನು ಕರ್ತವ್ಯ ಪಥ್ನಲ್ಲಿ ಮುನ್ನಡೆಸಲಿದ್ದಾರೆ. ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುವ ಗೌರವವು ದೇಶದ ಅತ್ಯುನ್ನತ ಸೇವೆ ಸಲ್ಲಿಸುವ ಅವಕಾಶಗಳಲ್ಲಿ ಒಂದಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯ ಕುಕ್ಕಲೂರು ಗ್ರಾಮದ ಹರೀಶ್ ರಾವ್ ಮತ್ತು ಮೈತ್ರಿ ರಾವ್ ಪುತ್ರಿ ಶರಣ್ಯಾ ರಾವ್ 2020-21ರಲ್ಲಿ ಆಳ್ವಾಸ್ನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದರು. ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದ ಅವರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ರೀಡಾ ದತ್ತು ಶಿಕ್ಷಣದ ವಿದ್ಯಾರ್ಥಿನಿಯಾಗಿದ್ದರು. ಮೂರು ವರ್ಷಗಳ ಹಿಂದೆ ಸೇನೆಗೆ ಆಯ್ಕೆಗೊಂಡ ಅವರು ಪ್ರಸ್ತುತ ಸೇನೆಯಲ್ಲಿ ಸೂಪರ್ನ್ಯೂಮರರಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾ.ಶರಣ್ಯಾ ರಾವ್ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ್ಯ ಡಾ ಕುರಿಯನ್ ಅಭಿನಂದಿಸಿದ್ದಾರೆ.…
ಸಂಸ್ಕ್ರುತಿ, ಸೌಂದರ್ಯ, ಸೃಜನಶೀಲತೆಯ ಅನಾವರಣ: 750ಕ್ಕೂ ಹೆಚ್ಚು ಮಳಿಗೆ ‘ಆಳ್ವಾಸ್ ವಿರಾಸತ್-23’ಕ್ಕೆ ‘ಸಪ್ತ ಮೇಳ’ಗಳ ಮೆರುಗು
ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವರ್ಷದ ‘ಆಳ್ವಾಸ್ ವಿರಾಸತ್ 2023’ ಡಿ.14ರಿಂದ 17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದೊಂದಿಗೆ ನಡೆಯುವ ವಿರಾಸತ್ ಅನ್ನು ದೇಶಕ್ಕಾಗಿ ದೇಹತ್ಯಾಗಿ ಮಾಡಿದ ವೀರಯೋದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ. ಮೊದಲ ದಿನವಾದ ಡಿ.14ರಂದು ಸಂಜೆ 5.30ಕ್ಕೆ ರಾಜ್ಯಪಾಲರಿಗೆ ಗೌರವ ರಕ್ಷೆ ನಡೆಯಲಿದೆ. ಬಳಿಕ 5.45ಕ್ಕೆ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ವಿರಾಸತ್ ಉದ್ಘಾಟಿಸುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಶಾಸಕರಾದ ಉಮನಾಥ ಎ.ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಾಜಿ ಸಚಿವ ಅಭಯಚಂದ್ರ ಜೈನ್, ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್. ಶಂಕರ್,…
ಬಂಟರ ಯಾನೆ ನಾಡವರ ಮಾತೃಸಂಘದ ಅಧೀನದಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ಅಮೃತ ಮಹೋತ್ಸವದ ಉದ್ಘಾಟನೆ ಸೆ. ೨೪ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಲ್ಗುತ್ತು, ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ವಿಬಿಎಂಎಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಅದಮ್ಯ ಚೇತನ ಪ್ರತಿಷ್ಠಾನದ ಸಿಇಒ ತೇಜಸ್ವಿನಿ ಅನಂತ ಕುಮಾರ್, ಸ್ತ್ರೀ ಸಶಕ್ತಿಕರಣ ಯೋಜನೆಯನ್ನು ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ, ಸುಜಾತ ಎಸ್. ಶೆಟ್ಟಿ, ಎಸ್ಆರ್ವಿ ಭವನದ ಧ್ವಾರ ಮತ್ತು ಪ್ರಯಾಣಿಕರ ತಂಗುದಾಣವನ್ನು ಬಂಟ್ಸ್ ಕತಾರ್ ಅಧ್ಯಕ್ಷ ಡಾ. ಪದ್ಮಶ್ರೀ ಆರ್. ಶೆಟ್ಟಿ ಉದ್ಘಾಟಿಸುವರು. ಸ್ಮರಣ ಸಂಚಿಕೆ ಅಮೃತ ಸಿರಿಯನ್ನು ಉದ್ಯಮಿ ಉಪೇಂದ್ರ ಶೆಟ್ಟಿ, ಪ್ರಗತಿ ಯು. ಶೆಟ್ಟಿ ಬಿಡುಗಡೆಗೊಳಿಸುವರು ಎಂದರು. ಈ ಸಂದರ್ಭದಲ್ಲಿ ಸಾಧಕಿಯರಾದ ವಿಧಾನ ಪರಿಷತ್…
ವಿದ್ಯಾಗಿರಿ: ‘ಹೆಣ್ಣು ಮಕ್ಕಳ ರಕ್ಷಣೆಯು ಭ್ರೂಣದಿಂದಲೇ ಆರಂಭಗೊಳ್ಳಬೇಕು’ ಎಂದು ಆಳ್ವಾಸ್ ಆರೋಗ್ಯ ಕೇಂದ್ರದ ಸ್ವ್ರೀರೋಗ ತಜ್ಞೆ ಡಾ ರೇವತಿ ಭಟ್ ಹೇಳಿದರು. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ‘ಹೆಣ್ಣು ಮಕ್ಕಳ ರಕ್ಷಣೆಗಾಗಿ ಆಂದೋಲನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳ ರಕ್ಷಣೆಗಾಗಿ ಜಾಗೃತಿಯ ಜೊತೆಗೆ ನಿರಂತರ ಕಾರ್ಯಕ್ರಮಗಳು ಅವಶ್ಯ. ಭ್ರೂಣದ ಲಿಂಗ ಪತ್ತೆ ಅಪರಾಧ ಎಂದರು. ಹೆಣ್ಣು ಇಲ್ಲದ ಸಮಾಜವನ್ನು ಊಹಿಸಲೂ ಸಾಧ್ಯವಿಲ್ಲ. ಆಕೆ ಸೃಷ್ಟಿಕರ್ತೆ. ಅದೇ ರೀತಿಯಲ್ಲಿ ಗಂಡು ಇಲ್ಲದೆಯೂ ಸಮಾಜ ಇಲ್ಲ ಎಂದ ಅವರು, ಹೆಣ್ಣು ಗಂಡು ಎಂಬ ಭೇದ ಅಥವಾ ತಾತ್ಸರವನ್ನು ಮಾಡಬಾರದು ಎಂದರು. ದಕ್ಷಿಣ ಕನ್ನಡ ಮುಂದುವರಿದಿದ್ದರೂ, ಇಲ್ಲಿನ ಹೆಣ್ಣು ಮಕ್ಕಳ ಲಿಂಗಾನುಪಾತವು ಆತಂಕ ಮೂಡಿಸುತ್ತದೆ. ಶಿಕ್ಷಣ ನೀಡುವ ಮೂಲಕ…