ಕಾರ್ಕಳ ಜ್ಞಾನಸುಧಾ : ನುಡಿನಮನ ಗಣಿತನಗರ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಇತ್ತೀಚೆಗೆ ಅಗಲಿದ ಉದ್ಯಮ ಸಂತ, ಮಾತೃ ಹೃದಯಿ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ಶ್ರೀ ರತನ್ ಟಾಟಾ ಅವರಿಗೆ ನುಡಿನಮನವನ್ನು ಸಲ್ಲಿಸಲಾಯಿತು. ರತನ್ ಟಾಟಾರ ಜೀವನ ಗಾಥೆಯನ್ನು ಖ್ಯಾತ ವಾಗ್ಮಿ ಶ್ರೀ ರಾಜೇಂದ್ರ ಭಟ್ ಕೆ. ಪ್ರಸ್ತುತಪಡಿಸಿ ನುಡಿ ನಮನ ಸಲ್ಲಿಸಿದರು.
ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್, ಟ್ರಸ್ಟಿ ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ.ಕೊಡವೂರ್, ಉಪಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ ಮತ್ತು ಶ್ರೀಮತಿ ಉಷಾ ರಾವ್ ಯು ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ. ಉಪಸ್ಥಿತರಿದ್ದರು.