Author: admin
ಗುರುಪುರ ಬಂಟರ ಮಾತೃ ಸಂಘದ ನೇತೃತ್ವದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡಂಬೈಲ್ ಡಾ.ರವಿ ಶೆಟ್ಟಿ ದೋಣಿಂಜೆಗುತ್ತು ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಮಾರಂಭವನ್ನು ಉದ್ಘಾಟಿಸಿದರು. ಆಶೀರ್ವಚನ ನೀಡಿದ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಡಾ. ರವಿ ಶೆಟ್ಟಿ ನಮ್ಮೂರ ದೊಡ್ಡ ಆಸ್ತಿ, ಮೇರು ಸಾಧಕರು ಹಾಗೂ ಅರ್ಹರಿಗೆ ಈ ಬಾರಿ ಪ್ರಶಸ್ತಿ ಬಂದಿದೆ, ಇದರಿಂದ ಪ್ರಶಸ್ತಿಯ ಘನತೆ ಹೆಚ್ಚಿದೆ ಎಂದರು. ಶಾಸಕ ಡಾ. ಭರತ್ ವೈ ಶೆಟ್ಟಿ ಮಾತನಾಡಿ, ದೂರದ ಕತಾರ್‍ನಲ್ಲಿದ್ದರೂ ಡಾ. ರವಿ ಶೆಟ್ಟಿ ಕೊರೋನಾ ಸಂದರ್ಭ ರಾಜ್ಯ ಮತ್ತು ನಾಡಿನ ಮಂದಿಗೆ ನೆರವಾಗಿರುವ ವ್ಯಕ್ತಿಯಾಗಿದ್ದಾರೆ ಸಮಾಜದ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸುವ ದೊಡ್ಡ ಗುಣ ಅವರಲ್ಲಿದೆ ಎಂದರು. ಮಾಜಿ ಸಚಿವ ರಮಾನಾಥ ರೈ,…
ಡಾ.ಜಗದೀಶ್ ಶೆಟ್ಟಿಯವರು ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ 12.03.1974 ರಲ್ಲಿ ಜನಿಸಿದರು.ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೋಟೇಶ್ವರದಲ್ಲಿ ಪೂರೈಸಿದ ಇವರು ವೈದ್ಯಕೀಯ ಶಿಕ್ಷಣವನ್ನು ಆಯ್ದುಕೊಳ್ಳುತ್ತಾರೆ. ವೈದ್ಯಕೀಯ ಶಿಕ್ಷಣವನ್ನು ಪೂರೈಸಿದ ನಂತರ ಕುಂದಾಪುರದ ವಿಜಯಶ್ರೀ ಆಸ್ಪತ್ರೆಯಲ್ಲಿ ಒಂದು ವರ್ಷ ಕಾಲ ಸೇವೆಯನ್ನು ಸಲ್ಲಿಸಿದ್ದರು . ಗ್ರಾಮೀಣ ಜನರ ಬದುಕಿನ ಬವಣೆಯನ್ನು ಮನಗಂಡು ಅವರ ಸೇವೆ ಮಾಡುವ ಉದ್ದೇಶದಿಂದ ಸುಮಾರು ಎರಡು ದಶಕಗಳ ಹಿಂದೆ ಕುಂದಾಪುರ ತಾಲ್ಲೂಕಿನ ಸಿದ್ದಾಪುರದಲ್ಲಿ ‘ವಾಸುಕಿ ಕ್ಲಿನಿಕ್’ ಎನ್ನುವ ತನ್ನ ಸ್ವಂತ ಕ್ಲಿನಿಕ್ ಅನ್ನು ಆರಂಭಿಸಿ ಈ ಭಾಗದ ಜನರ ನೋವು ನಲಿವು ಗಳೊಂದಿಗೆ ಬೆರೆತು ಜನಾನುರಾಗಿ ವೈದ್ಯರಾಗಿ ಹೆಸರು ಗಳಿಸಿಕೊಂಡವರು. ವೈದ್ಯಕೀಯ ವೃತ್ತಿಯ ಜೊತೆಜೊತೆಗೇ ಕ್ರೀಡಾ ಮತ್ತು ಸಾಂಸ್ಕೃತಿಕ ಲೋಕದಲ್ಲೂ ಇವರು ತಮ್ಮ ಗಮನಾರ್ಹ ಸೇವೆಯನ್ನು ಸಲ್ಲಿಸಿರುತ್ತಾರೆ.ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಮತ್ತು ಕೇರಂನಲ್ಲಿ ಇವರು ರಾಜ್ಯ ಮಟ್ಟದ ಪ್ರತಿಭೆ.ತನ್ನ ಆಕರ್ಷಕ ವಾಕ್ಪಟುತ್ವದ ಮೂಲಕ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಕ್ರಿಕೆಟಿನ ವೀಕ್ಷಕ ವಿವರಣಕಾರರಾಗಿ ಜಿಲ್ಲೆಯಲ್ಲಿ ಹೆಸರು ಮಾಡಿದವರು.…
ರೆಡ್ ಕ್ರಾಸ್ ಸೊಸೈಟಿ ಮೂಲಕ ನಿರಂತರ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ವಿಪುಲ ಅವಕಾಶವಿದೆ. ಜನತೆಯಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ವಿಶೇಷ ಆದ್ಯತೆ ನೀಡುವಂತೆ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ಡಾ. ಆನಂದ್ ಕೆ. ಹೇಳಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಆಡಳಿತ ಮಂಡಳಿ ಸದಸ್ಯ ಜತೆ ಸಮಾಲೋಚನೆ ನಡೆಸಿದ ಸಂದರ್ಭ ಮಾತನಾಡಿದ ಅವರು, ರೆಡ್ ಕ್ರಾಸ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ ಪಡೆದರು. ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ಕಾಮಗಾರಿ ಪ್ರಗತಿ ಬಗ್ಗೆ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ವಿವರ ನೀಡಿದರು. ಇದೇ ಸಂದರ್ಭ ರೆಡ್ ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಮಾರ್ಗದರ್ಶನ ನೀಡುವಂತೆ ಸಮಿತಿ ವತಿಯಿಂದ ಸಿಇಓ ಅವರನ್ನು ವಿನಂತಿಸಲಾಯಿತು. ಕೋವಿಡ್…
ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದ ಬಾಬಾ ಪರಮಾಣು ಸಂಶೋಧನಾ ಕೇಂದ್ರ ಮುಂಬಯಿ (BARC) ನಡೆಸುವ ರೆಡಿಯೋಲಾಜಿಕಲ್ ಸೇಫ್ಟಿ ಆಫಿಸರ್ (RSO) ಪರೀಕ್ಷೆಯಲ್ಲಿ ಪೇರಮೊಗರಿನ ದೀಕ್ಷಾ ಶೆಟ್ಟಿ ಉತ್ತೀರ್ಣರಾಗಿದ್ದಾರೆ. ಕೇಂದ್ರೀಯ ಮಟ್ಟದಲ್ಲಿ ನಡೆಯುವ ರೆಡಿಯೋಲಾಜಿಕಲ್ ಸೇಫ್ಟಿ ಆಫಿಸರ್ ಪರೀಕ್ಷೆಯಲ್ಲಿ ಉತ್ತಿರ್ಣರಾದ ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ಈಕೆ ಓರ್ವಳು. ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯ ರೇಡಿಯೇಶನ್ ವಿಭಾಗದಲ್ಲಿ ಮೆಡಿಕಲ್ ಫಿಸಿಸಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದೀಕ್ಷಾ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಭೌತಶಾಸ್ತ್ರದಲ್ಲಿ ವಿಭಾಗದಲ್ಲಿ ಎಂಎಸ್ಸಿ ವಿದ್ಯಾಭ್ಯಾಸ ಮಾಡಿದ್ದಾರೆ. ಗಡಿಯಾರ ಹಾಗೂ ಕಡೇಶಿವಲಾಯ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆ ವಿದ್ಯಾಭ್ಯಾಸ ಪೂರೈಸಿ , ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ನಂತರ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಮಾಡಿದ್ದರು. ಬಾಬಾ ಪರಮಾಣು ಸಂಶೋಧನಾ ಕೇಂದ್ರ ಮುಂಬೈ (BARC) ನಡೆಸುವ ರೆಡಿಯೋಲಾಜಿಕಲ್ ಸೇಫ್ಟಿ ಆಫಿಸರ್ (RSO) ಪರೀಕ್ಷೆ ಮುಂಬೈನಲ್ಲಿ ಜರಗುತ್ತದೆ. ದೀಕ್ಷಾ ಶೆಟ್ಟಿ ಎರಡನೇ ಅವಧಿಯಲ್ಲಿ ಈ ಪರೀಕ್ಷೆಯಲ್ಲಿ ಉತ್ತಿರ್ಣರಾದರು. ಒಬ್ಬರಿಗೆ ಈ ಪರೀಕ್ಷೆ ಬರೆಯಲು…
ಎಸ್ ಎಲ್ ವಿ ಪ್ರೊಡಕ್ಷನ್ ಹೌಸ್ ನಲ್ಲಿ ದಿವಾಕರ ದಾಸ್ ನಿರ್ಮಾಣ ವಿನು ಬಳಂಜ ನಿರ್ದೇಶನದಲ್ಲಿ ತಯಾರಾದ ವಿಭಿನ್ನ ಕಥಾವಸ್ತು ಒಳಗೊಂಡಿರುವ “ಬೇರ“ಕನ್ನಡ ಚಲನಚಿತ್ರ ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ಶುಕ್ರವಾರ ಬೆಳಗ್ಗೆ ಬಿಡುಗಡೆಗೊಂಡಿತು. ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಇಂದು ಕರ್ನಾಟಕ ರಾಜ್ಯದಾದ್ಯಂತ ಬೇರ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಹಿಂದೂ ಮುಸ್ಲಿಮರ ಬಾಂಧವ್ಯದ ಕತೆ ಇರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಚಿತ್ರಪ್ರೇಮಿಗಳು ಸಾಮಾಜಿಕ ಸಾಮರಸ್ಯ ಸಾರುವ ಇಂತಹ ಚಿತ್ರಗಳನ್ನು ಬೆಂಬಲಿಸಬೇಕು” ಎಂದರು. ಬಳಿಕ ನಟ ಸ್ವರಾಜ್ ಶೆಟ್ಟಿ ಮಾತನಾಡಿ, “ಇದೊಂದು ಡಿಫರೆಂಟ್ ಕಥಾ ಹಂದರವನ್ನು ಒಳಗೊಂಡ ಸಿನಿಮಾ. ಇದರಲ್ಲಿ ಅನೇಕ ಹಿರಿ ಕಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ಅವರಿಗೆ ನಿಮ್ಮೆಲ್ಲರ ಪ್ರೋತ್ಸಾಹದ ಅಗತ್ಯವಿದೆ. ಚಿತ್ರ ನೋಡಿ ಕಲಾವಿದರನ್ನು ಪ್ರೋತ್ಸಾಹಿಸಿ” ಎಂದರು. ಹಿರಿಯ ರಂಗಕರ್ಮಿ ವಿ. ಜಿ. ಪಾಲ್, ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಎಂ.…
ಈ ಸೃಷ್ಟಿಯಲ್ಲಿ ಮಾನವ ಶರೀರ ಉಳಿದೆಲ್ಲ ಜೀವ ಸಂಕುಲಗಳಿಗಿಂತ ಭಿನ್ನ ಮತ್ತು ಶ್ರೇಷ್ಠವಾಗಿದೆ. ಈ ಮಾನವ ಜನ್ಮ ಬರಬೇಕಾದರೆ ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರಬೇಕು. ಹೀಗೆ ಹಿಂದಿನ ಜನ್ಮದ ಪುಣ್ಯಫಲದಿಂದ ಬಂದಂತಹ ಈ ಮಾನವನ ಜನ್ಮವನ್ನು ವ್ಯರ್ಥವಾಗಿ ಹಾಳು ಮಾಡದೆ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಜೀವನದಲ್ಲಿ ಸುಖ-ಕಷ್ಟ ಎರಡು ಇರಬೇಕು. ಕೇವಲ ಸುಖವೇ ಇದ್ದರೆ ಕಷ್ಟದ ಅರಿವು ಗೊತ್ತಾಗದು. ಜೀವನ ದುದ್ದಕ್ಕೂ ಕಷ್ಟವೇ ಇದ್ದರೂ ಮಾನವ ಜೀವನ ಸಾರ್ಥಕ ಎನಿಸದು. ಸುಖ- ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವಿರಬೇಕು. ಸುಖ- ಕಷ್ಟಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇರುತ್ತವೆ. ಕಷ್ಟಗಳು ಮಾನವನಿಗೆ ಬಾರದೆ ಮರಕ್ಕೆ ಬರುತ್ತದೆಯೇ ಎಂದು ಹೇಳುವ ವಾಡಿಕೆ ಇದೆ. ಮುಖ್ಯವಾಗಿ ಮಾನವನಿಗೆ ವಿಪರೀತ ಸಾಲದ ಹೊರೆ, ಮಾನಸಿಕ ಖನ್ನತೆ, ಬಡತನ, ಪರೀಕ್ಷೆಯಲ್ಲಿ ಅನುತ್ತೀರ್ಣ, ಉತ್ತೀರ್ಣನಾದರೂ ಉತ್ತಮ ಅಂಕಗಳನ್ನು ಪಡೆಯಲಿಲ್ಲವೆಂಬ ಬೇಸರ, ವಿವಾಹವಾಗದಿರುವುದು, ಸಂತಾನಭಾಗ್ಯ ಇಲ್ಲದಿರುವುದು, ವಾಸಿಯಾಗದ ಕಾಯಿಲೆ, ಪ್ರೀತಿ ಪ್ರೇಮವೆಂಬ ನಾಟಕ, ವಿಪರೀತ ದುಶ್ಚಟಗಳ ಅಭ್ಯಾಸ, ವಿದ್ಯಾವಂತನಾದರೂ ನಿರುದ್ಯೋಗಿ ಯಾಗಿರುವುದು,…
ಕೇಸರಿ ಮಯವಾದ ಕಾವೂರು ರಸ್ತೆ, ಎಲ್ಲೆಡೆ ಹಾರಾಡಿದ ಬಿಜೆಪಿ ಧ್ವಜ. ಕೇಸರಿ ಪೇಟ, ಶಾಲು ಹಾಕಿದ ಕಾರ್ಯಕರ್ತರಿಂದ ಜೈಕಾರ ಘೋಷಣೆ. ರಸ್ತೆಯುದ್ದಕ್ಕೂ ಹುಲಿ ವೇಷ ಕುಣಿತದ ಅಬ್ಬರ. ಇದು ಮಂಗಳವಾರ ಡಾ. ಭರತ್ ಶೆಟ್ಟಿ ವೈ. ಅವರು ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಕಂಡು ಬಂದ ಉತ್ಸಾಹ. ಡಾ. ಭರತ್ ಶೆಟ್ಟಿ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಕೆಗೂ ಮುನ್ನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಬಳಿಕ ದೇವಸ್ಥಾನದಿಂದ ಕಾವೂರು ಮೈದಾನದವರೆಗೆ ಬೃಹತ್ ಕಾರ್ಯಕರ್ತರ ಪಾದೆ ಯಾತ್ರೆಯ ಜತೆ ಸಾಗಿ ಬಂದು ಬಳಿಕ ಸುಮಾರು 2.20ಕ್ಕೆ ನಾಮಪತ್ರ ಸಲ್ಲಿಸಿದರು. ಕ್ಷೇತ್ರದ ವಿವಿಧೆಡೆಯಿಂದ ಆಗಮಿ ಸಿದ ಕಾರ್ಯಕರ್ತರು, ನಾಯಕರು, ದೇವರ ಪ್ರಸಾದ, ಹೂವು ತಂದು ಶಾಸಕರಿಗೆ ನೀಡಿ ವಿಜಯೀಭವ ಎಂದು ಹರಸುತ್ತಾ ಇದ್ದುದು ಕಂಡು ಬಂತು. ಸಾವಿರಾರು ಕಾರ್ಯಕರ್ತರು ಶಿಸ್ತುಬದ್ಧವಾಗಿ ನಡೆಯುತ್ತಾ ಹುಲಿ ವೇಷದ ಕುಣಿತಕ್ಕೆ ನೃತ್ಯದ ಹೆಜ್ಜೆ ಹಾಕುತ್ತಾ ಬಿರು ಬಿಸಿಲನ್ನು ಲೆಕ್ಕಿಸದೆ ತಮ್ಮ…
ಆರಾಧನೆ, ಪುರಾತನ ಇತಿಹಾಸ, ಅಲ್ಲಿನ ಯತಿ ವರ್ಯರು ಅಥವಾ ಧರ್ಮಾಧಿಕಾರಿಗಳ ಶ್ರದ್ಧೆಯಿಂದ ಪ್ರತಿಯೊಂದು ಕ್ಷೇತ್ರ ಗುರುತಿಸಲ್ಪಡುತ್ತದೆ ಎಂದು ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಗುರು ಶಿವಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಅವರು ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾ ಪರಮೇಶ್ವರೀ ದೇಗುಲದಲ್ಲಿ ಕ್ಷೇತ್ರದ ವಾಯವ್ಯ ಭಾಗದ ಪುರಾತನ ಆಲಡೆ ಸಾನ್ನಿಧ್ಯಗಳ ಪುನಃ ಪ್ರತಿಷ್ಠಾಪನಾಂಗ ಬ್ರಹ್ಮಕಲಶೋತ್ಸವ, ಸಹಸ್ರ ಚಂಡಿಕಾ ಮಹಾಯಾಗ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪಳ್ಳಿ ಅಡಪಾಡಿಯಲ್ಲಿ ನಡೆದ ಕ್ಷೇತ್ರ ನಿರ್ಮಾಣ ಇಲ್ಲಿನ ಧರ್ಮದರ್ಶಿ ಪುಂಡಲೀಕ ನಾಯಕ್ ಅವರ ಶ್ರಮದ ಪರಿಣಾಮ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಅಡಪಾಡಿಯಲ್ಲಿ ಧಾರ್ಮಿಕ ಚಿಂತನೆ ನಡೆಯುತ್ತಿದೆ ಎಂದರು. ಸಚಿವ ಸುನಿಲ್ ಕುಮಾರ್, ಜೋತಿಷ ವಿ| ಪ್ರಸನ್ನ ಆಚಾರ್ಯ, ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್, ಶಾಸಕ ರಘುಪತಿ ಭಟ್, ಮಂಗಳೂರಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ…
ನಮ್ಮ ಟಿವಿ ವಾಹಿನಿಯು ಆಯೋಜಿಸುವ ಬಲೇ ತೆಲಿಪಾಲೆ 10 ನೇ ಆವೃತ್ತಿಯನ್ನು ನಮ್ಮ ಸಂಘದ ಭವನದಲ್ಲಿ ಆಯೋಜಿಸಲು ಅವಕಾಶ ನೀಡಿದ ವಾಹಿನಿಯ ಆಡಳಿತ ನಿರ್ದೇಶಕರಾದ ಡಾ. ಶಿವಶರಣ್ ಶೆಟ್ಟಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಳು ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸುವಲ್ಲಿ ನಿಸ್ವಾರ್ಥ ಭಾವದಿಂದ ಶ್ರಮಿಸುತ್ತಿರುವ ಸಂಸ್ಥೆ ಇದಾಗಿದ್ದು ಇವರು ಮಾಡುತ್ತಿರುವ ಕಾರ್ಯಕ್ರಮಕ್ಕೆ ಸಹಕಾರ ನೀಡುವುದಕ್ಕೆ ಹೆಮ್ಮೆಯೆನಿಸುತ್ತಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು. ಅವರು ಫೆ 26 ರಂದು ಪುಣೆ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ನಡೆದ ನಮ್ಮ ಟಿವಿ ವಾಹಿನಿಯ ಬಲೇ ತೆಲಿಪಾಲೆ ಸೀಸನ್ 10 ರ ಸ್ಪರ್ಧಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡುತ್ತಾ ನಮ್ಮ ಟಿವಿ ವಾಹಿನಿಯು ಬಲೇ ತೆಲಿಪಾಲೆ ಎನ್ನುವ ವಿನೂತನ ಪರಿಕಲ್ಪನೆಯ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಿ ಜನರನ್ನು ರಂಜಿಸುವ ಕಾರ್ಯಕ್ರಮಗಳಿಗೆ ಮುನ್ನುಡಿಯನ್ನು ಬರೆದಿದ್ದು ತದ…
ಕುಂದಾಪುರ ಮೂಲದ ಸಿದ್ಧಾಪುರದ ಕಡ್ರಿ ಜಯಕರ್ ಶೆಟ್ಟಿ ಯವರು ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿರುವ ಜಯಕರ್ ಶೆಟ್ಟಿಯವರು ಮೊಗೆಬೆಟ್ಟು ಪ್ರೇಮಾ ಶೆಟ್ಟಿ ಮತ್ತು ಸಿದ್ದಾಪುರದ ಕಡ್ರಿ ಗೋವಿಂದ ಶೆಟ್ಟರ ಸುಪುತ್ರ. ವೃತ್ತಿಯಲ್ಲಿ ಪ್ರಖ್ಯಾತ ದಂತವೈದ್ಯರಾಗಿದ್ದು ಹಲವು ವರ್ಷಗಳಿಂದ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ವೃತ್ತಿ ನಿರತರಾಗಿದ್ದಾರೆ. ಜಯಕರ್ ಶೆಟ್ಟಿಯವರು ಈ ಗೌರವಾನ್ವಿತ ಹುದ್ಧೆಯಲ್ದಿ ಯಶಸ್ಸನ್ನು ಕಾಣಲಿ ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತೇವೆ.