Author: admin
ಧಾರ್ಮಿಕ ಕ್ಷೇತ್ರಗಳು, ಸಂಘ ಸಂಸ್ಥೆಗಳು ಪ್ರಸ್ತುತ ಸೇವಾ ಚಟುವಟಿಕೆಗಳಲ್ಲಿ ತೊಡಗಿಸುವ ಅಗತ್ಯವಿದೆ ಎಂದು ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ ನುಡಿದರು. ಅವರು ಕೋರ್ದಬ್ಬು ದೈವಸ್ಥಾನ ಬೊಳೈರು ಸೂರಿಂಜೆ ಇಲ್ಲಿನ ವಾರ್ಷಿಕ ನೇಮೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋರ್ದಬ್ಬು ದೈವಸ್ಥಾನ ಸೇವಾ ಸಮಿತಿಯು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಮುಂದೆಯೂ ಇಂತಹ ಉತ್ತಮ ಕಾರ್ಯ ಮುಂದುವರಿಯಲಿ ಎಂದರು. ವೇದಿಕೆಯಲ್ಲಿ ಗುತ್ತಿಗೆದಾರ ನಾಗರಾಜ್ ಪೂಜಾರಿ ಕಡಂಬೋಡಿ, ಸೂರಿಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜೀತೆಂದ್ರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳೈರು ಸೂರಿಂಜೆಯ ಮುಖ್ಯ ಶಿಕ್ಷಕಿ ಸೇಸಮ್ಮ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಮನೋಹರ ಶೆಟ್ಟಿ ಸೂರಿಂಜೆ ವಹಿಸಿದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಮತ್ತು ಕಲಿಯುವಿಕೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮೂಡುಬಿದಿರೆ: ಇತ್ತೀಚಿಗೆ ಆಫ್ರಿಕಾದ ಟ್ಯೂನಿಷಿಯ ದೇಶದಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಹಾಗೂ ಆಫ್ರಿಕಾದ ಅತೀ ದೊಡ್ಡ ವಿಜ್ಞಾನ ಇಂಜಿನಿಯರಿಂಗ್ ತಂತ್ರಜ್ಞಾನ ಸಮ್ಮೇಳನ ಐ-ಫೆಸ್ಟ್ 2024ರಲ್ಲಿ ಮೂಡಬಿದಿರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿ ಅಮೋಘ ಹೆಬ್ಬಾರ್ ಪ್ರದರ್ಶಶಿಸಿದ ವಿಜ್ಞಾನ ಪ್ರಾಜೆಕ್ಟಿಗೆ ಬೆಳ್ಳಿ ಪದಕ ಲಭಿಸಿದೆ. ಈ ಸಮ್ಮೇಳನದಲ್ಲಿ ವಿಶ್ವದ ಸುಮಾರು 35 ದೇಶಗಳಿಂದ 400ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ವೈಜ್ಞಾನಿಕ ಪ್ರಾಜೆಕ್ಟ್‍ಗಳನ್ನು ಪ್ರದರ್ಶಿಸಿದ್ದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಅಜಿತ್ ಹೆಬ್ಬಾರ್ ಮಾರ್ಗದರ್ಶನ ನೀಡಿದ್ದರು. ಈ ಹಿಂದೆ ಸೈನ್ಸ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನಡೆದ ವಿಜ್ಞಾನ ಮೇಳದಲ್ಲಿ ಗೆಲ್ಲುವುದರ ಮೂಲಕ ಅಮೋಘ ಹೆಬ್ಬಾರ್ ಅಂತರಾಷ್ಟ್ರೀಯ ಮಟ್ಟದ ಈ ಸಮ್ಮೇಳನಕ್ಕೆ ಆಯ್ಕೆಯಾಗಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಅಖಿಲ ಭಾರತ ಬೀಚ್ ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಸಮಿತಿಯ ವಿಶೇಷ ಸಾಮಾನ್ಯ ಸಭೆಯಲ್ಲಿ ಅಖಿಲ ಭಾರತ ಬೀಚ್ ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಬಿ. ಗುಣರಂಜನ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಪ್ರತಿಷ್ಠಿತ ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿ ಇತ್ತೀಚಿಗಷ್ಟೇ ಆಯ್ಕೆಯಾಗಿದ್ದ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ಅವರು ನಡುಮೊಗರುಗುತ್ತು ವಿಠಲ ಶೆಟ್ಟಿ ಮತ್ತು ಬೆಳ್ಳಿಪ್ಪಾಡಿ ಊರಮಾಲುಗುತ್ತು ಪ್ರಪುಲ್ಲ ವಿ. ಶೆಟ್ಟಿ ದಂಪತಿಯ ಪುತ್ರ ಹಾಗೂ ಹಾಗೂ ಡಾ. ಸಾಯಿ ರಮೇಶ್ ಶೆಟ್ಟಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರ ಸಹೋದರ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಗುಣರಂಜನ್ ಶೆಟ್ಟಿ ಅವರು ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಬೆಂಗಳೂರು, ಐ ಕ್ಯಾರ್ ಬ್ರಿಗೇಡ್, ಐ ಕ್ಯಾರ್ ಫೌಂಡೇಶನ್, ಜಯಕರ್ನಾಟಕ ಜನಪರ ವೇದಿಕೆಯ ಸ್ಥಾಪಕಾಧ್ಯಕ್ಷರೂ ಆಗಿದ್ದು ಇತ್ತೀಚೆಗೆ ರಾಜ್ಯ ರಾಜಧಾನಿಯಲ್ಲಿ ಯಶಸ್ವಿಯಾಗಿ ನಡೆದು ಇತಿಹಾಸ ಸೃಷ್ಠಿಸಿರುವ ಬೆಂಗಳೂರು…
ಡೊಂಬಿವಲಿ ಪರಿಸರದ ಹೋಟೆಲ್ ಉದ್ಯಮಿ, ಶ್ರೇಷ್ಠ ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಸಮಾಜ ಸೇವೆಯೇ ತಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಕಳೆದ ಹಲವಾರು ದಶಕಗಳಿಂದ ಕಲ್ಯಾಣ್, ಡೊಂಬಿವಲಿ ಪರಿಸರದಲ್ಲಿ ಸಾಮಾಜಿಕ ಸೇವೆಯ ಮೂಲಕ ತುಳು ಕನ್ನಡಿಗರ ಹಾಗೂ ಭೂಮಿ ಪುತ್ರರ ಮನದಾಳದಲ್ಲಿ ವಿಶೇಷ ಸ್ಥಾನ ನಿರ್ಮಿಸಿಕೊಂಡ ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅವರ ಸಾಧನೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ, ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯವು ಮಾರ್ಚ್ 17 ರಂದು ಗೋವಾದಲ್ಲಿ ನಡೆದ ವೈಶಿಷ್ಟ್ಯಪೂರ್ಣ ಪ್ರಶಸ್ತಿ ಸಮಾರಂಭದಲ್ಲಿ 2023-2024 ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ನಮ್ಮ ಸಾಧನೆ ನಿಂತ ನೀರಾಗಿರದೆ ಹರಿಯುವ ನದಿಯಂತಿರಬೇಕು. ನಾವು ಎಷ್ಟು ದಿನ ಬದುಕಿದೆವು ಎನ್ನುವುದು ಮುಖ್ಯವಾಗಿರದೆ ಯಾವ ರೀತಿ ಬದುಕಿದೆವು ಎಂಬುದು ಮುಖ್ಯ. ಅದರೊಂದಿಗೆ ನಾವು ಎಷ್ಟು ಜನರ ಮಧ್ಯೆ ಇದ್ದೇವೆ ಎಂಬುವದಕ್ಕಿಂತ ಎಷ್ಟು ಜನರ ಮಸಸ್ಸಿನಲ್ಲಿ ನೆಲೆನಿಂತಿದ್ದೇವೆ ಎನ್ನುವುದು ಮುಖ್ಯ…
ಮುಂಬಯಿ ಸೃಜನಾ ಲೇಖಕಿಯರ ಬಳಗದ ಕಾರ್ಯಕ್ರಮಕ್ಕೆ ಹೋಗಲೆಂದು ಮಾಟುಂಗಾದಲ್ಲಿ ಮೈಸೂರು ಅಸೋಸಿಯೇಷನ್ ನತ್ತ ಹೆಜ್ಜೆ ಹಾಕುತ್ತಾ ಸಾಗುವಾಗ ಹಲಸಿನ ಹಣ್ಣಿನ ಘಮ-ಘಮ ಪರಿಮಳ ನನ್ನನ್ನು ಸೆಳೆಯಿತು. ಇನ್ನೂ ಹಲಸಿನ ಹಣ್ಣು ತಿನ್ನದೆ ಇರಲು ಸಾಧ್ಯವೇ? ಮಾರಾಟಗಾರನಲ್ಲಿ ವಿಚಾರಿಸಿದೆ. ಕಾಲು ಕೆಜಿ ಸೊಳೆಗೆ(ಬೀಜ ಸಹಿತ) 70 ರೂಪಾಯಿ ಎಂದ ಪುಣ್ಯಾತ್ಮ. ಈಗ ನೆನಪಾಯಿತು ನೋಡಿ ವಿವಿಧ ತಳಿಯ ಹಲಸಿನ ಹಣ್ಣು ಬೆಳೆವ ನನ್ನೂರು ಹಾಗೂ ಅಲ್ಲಿನ ಹಲಸಿನ ರುಚಿ. ಒಂದು ರೂಪಾಯಿಯೂ ನೀಡದೆ ಹೊಟ್ಟೆ ತುಂಬಾ ತಿಂದು ತೇಗಿದ ಆ ದಿನಗಳು, ಅಮ್ಮ ಮನೆಯಲ್ಲಿ ಮಾಡುತ್ತಿದ್ದ ಹಲಸಿನ ಬಗೆ ಬಗೆಯ ತಿಂಡಿಗಳೆಲ್ಲ ಒಮ್ಮೆಗೆ ನೆನಪಾದವು. ಹಲಸಿನ ಹಣ್ಣು ತಿನ್ನುವ ಬಯಕೆಯೊಂದಿಗೆ ಹಲಸಿನ ಬಗ್ಗೆ 2 ಅಕ್ಷರ ಬರೆಯೋಣ ಎಂದು ಯೋಚಿಸುತ್ತಾ ಚೌಕಾಸಿ ಮಾಡಿ ಕಾಲು ಕೆಜಿಗೆ 60 ರೂಪಾಯಿ ನೀಡಿ ಹಲಸಿನ ಸೊಳೆ ಖರೀದಿಸಿದಾಗಲೇ ಹಲಸಿನ ಮಹತ್ವ ಅರಿವಾಗಲು ಪ್ರಾರಂಭವಾಯಿತು. ನಮ್ಮ ಹಳ್ಳಿಗಳಲ್ಲಿ ಯಥೇಚ್ಛವಾಗಿ ಸಿಗುವ ಹಲಸಿನ ಬಗ್ಗೆ ಕೆಲವರಿಗೆ ತೀವ್ರ ಪ್ರೀತಿ…
ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ತಂಡ ‘ಏಕಾದಶಾನನ’ಕ್ಕೆ ರಾಷ್ಟ್ರೀಯ ರನ್ನರ್ ಅಪ್ ಗರಿ
ವಿದ್ಯಾಗಿರಿ: ಪಂಜಾಬ್ ರಾಜ್ಯದ ಲೂಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಆಶ್ರಯದಲ್ಲಿ ಮಾರ್ಚ್ 26ರಿಂದ ಏಪ್ರಿಲ್ 1ರ ವರೆಗೆ ನಡೆದ 37ನೇ ರಾಷ್ಟ್ರೀಯ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ತಂಡವು ಪ್ರದರ್ಶಿಸಿದ ‘ಏಕಾದಶಾನನ’ ದ್ವಿತೀಯ ರಾಷ್ಟ್ರೀಯ ರಂಗ ಪ್ರಶಸ್ತಿಗೆ ಪಾತ್ರವಾಗಿದೆ. ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಜನಪದ ವಾದ್ಯಮೇಳ ಹಾಗೂ ತಾಳವಾದ್ಯೇತರ ವಿಭಾಗಗಳಲ್ಲೂ ದ್ವಿತೀಯ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ. ಆಳ್ವಾಸ್ ಕಾಲೇಜಿನ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ತರಬೇತು ಪಡೆದ ವಿದ್ಯಾರ್ಥಿಗಳು ಶಶಿರಾಜ್ ಕಾವೂರು ಬರೆದ ‘ಏಕಾದಶಾನನ’ ನಾಟಕವನ್ನು ಜೀವನರಾಂ ಸುಳ್ಯ ಅವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ್ದರು. ಆಳ್ವಾಸ್ ಕಾಲೇಜಿನ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಜೀವನ್‍ರಾಂ ಸುಳ್ಯ ನಿರ್ದೇಶನದಲ್ಲಿ ತರಬೇತು ಪಡೆದ ‘ಏಕಾದಶಾನನ’ ನಾಟಕ ತಂಡವು ಈಗಾಗಲೇ ರಾಜ್ಯ, ದಕ್ಷಿಣ ವಲಯ ಹಾಗೂ 12ನೇ ಬಾರಿ ಅಖಿಲ ಭಾರತ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ನಾಟಕದ ತಂಡದಲ್ಲಿ ಆಳ್ವಾಸ್…
ವಿಶಿಷ್ಠ ಚೇತನ ಯಕ್ಷಗಾನ ಕಲಾವಿದ ಮನೋಜ್ ಕುಮಾರ್ ರವರಿಗೆ ಯಕ್ಷಧ್ರುವ ಪಟ್ಲಾಶ್ರಯ ಯೋಜನೆಯ 26 ನೇ ಮನೆ ಹಸ್ತಾಂತರ
ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಕನಸಿನ ಯೋಜನೆ “ಯಕ್ಷಧ್ರುವ ಪಟ್ಲಾಶ್ರಯ” ಯೋಜನೆಯಲ್ಲಿ 26ನೇ ಮನೆಯ ಹಸ್ತಾಂತರ ಫಲಾನುಭವಿಯಾದ ಪರಿಶಿಷ್ಟ ವರ್ಗಕ್ಕೆ ಸೇರಿದ ವಿಶಿಷ್ಠ ಚೇತನ ಯಕ್ಷಗಾನ ಕಲಾವಿದ ಮನೋಜ್ ಕುಮಾರ್ ವೇಣೂರು ಇವರಿಗೆ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ಟ್ರಸ್ಟಿನ ಬೆಳ್ತಂಗಡಿ ಘಟಕದ ಪದಾಧಿಕಾರಿಗಳ ಸಮಕ್ಷದಲ್ಲಿ ನೆರವೇರಿತು. ಈ ಮನೆಯ ನಿರ್ಮಾಣದ ವೆಚ್ಚವನ್ನು ಉದ್ಯಮಿ, ಯಕ್ಷಧ್ರುವ ಪಟ್ಲ ಟ್ರಸ್ಟಿನ ಮಹಾದಾನಿ ಹಾಗೂ ಪ್ರಧಾನ ಸಂಚಾಲಕರಾದ ಶಶಿ ಕೇಟರರ್ಸ್ ಮತ್ತು ಕಾಶೀ ಪ್ಯಾಲೇಸ್ ಉಜಿರೆಯ ಮಾಲಕ ಶಶಿಧರ ಶೆಟ್ಟಿ ಬರೋಡ ಇವರು ಕೊಡುಗೆಯಾಗಿ ನೀಡಿದರು. ಕಲಾವಿದ ಮನೋಜ್ ಕುಮಾರ್ ಒಂದು ಕಾಲನ್ನು ಕಳೆದುಕೊಂಡರೂ ಎದೆಗುಂದದೆ ಕೃತಕ ಕಾಲನ್ನು ಜೋಡಿಸಿ ಯಕ್ಷಗಾನ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷ. ಯಕ್ಷಗಾನ ಕಲೆಯ ಮೇಲಿರುವ ಪ್ರೀತಿ, ಅಭಿಮಾನ, ನಿಷ್ಠೆಯನ್ನು ದಾನಿಗಳಾದ ಶ್ರೀ ಶಶಿಧರ ಶೆಟ್ಟಿ, ಪಟ್ಲ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ, ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.…
ವಿದ್ಯಾಗಿರಿ: ಪ್ರಜಾಪ್ರಭುತ್ವದ ಬಲು ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ನಮ್ಮ ಕರ್ತವ್ಯವನ್ನು ಪಾಲನೆ ಮಾಡುವುದು ತುಂಬಾ ಮುಖ್ಯ ಎಂದು ಮಾದರಿ ನೀತಿ ಸಂಹಿತೆ ಅಧಿಕಾರಿ ಕೆ. ಇ . ಜಯರಾಮ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಶನಿವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಏಪ್ರಿಲ್ 26 ರಂದು ನಡೆಯುವ ಚುನಾವಣೆಯಲ್ಲಿ ನಿಮ್ಮ ಮತ ಚಲಾಯಿಸಿ, ನಿಮ್ಮ ಹಕ್ಕನ್ನು ಚಲಾಯಿಸಿ. ನೀವು ಅಷ್ಟೇ ಅಲ್ಲದೆ ನಿಮ್ಮ ನೆರೆಹೊರೆಯವರನ್ನು, ಸ್ನೇಹಿತರನ್ನು, ಬಂಧು ಬಳಗದವರನ್ನು ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಿ ಎಂದರು. ಮತದಾನ ದಿನದ ಹಿನ್ನೆಲೆ ಎಲ್ಲ ಶಾಲಾ ಕಾಲೇಜುಗಳ, ಸರ್ಕಾರಿ ಕಚೇರಿಗಳ ನೌಕರರಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಆದ್ದರಿಂದ ಆ ದಿನ ರಜೆ ದಿನ ಎಂದು ಅನ್ಯ ಕೆಲಸಗಳಿಗೆ ಸಮಯ ವ್ಯರ್ಥ ಮಾಡದೇ ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಹಾಕಿ ಎಂದರು. ಅತೀ ದೊಡ್ಡ ಪ್ರಜಾಪ್ರಭುತ್ವದ ವ್ಯವಸ್ತೆಯಲ್ಲಿ ನಾವು ಉತ್ತಮವಾಗಿ ನಡೆಯಬೇಕಾದರೆ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕಾದರೆ ನಮ್ಮ ಒಂದು ಮತ…
ದಕ್ಷಿಣ ಕನ್ನಡ ಹಾಲು ಒಕ್ಕೂಟ ನಿ. ಕುಲಶೇಖರ ಮಂಗಳೂರು ಇದರ, ಕುಂದಾಪುರ ತಾಲೂಕಿನ ಉಳ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2024 ನೇ ಸಾಲಿನ ಅಧ್ಯಕ್ಷರಾಗಿ ಉಳ್ತೂರು ಕಟ್ಟೆಮನೆ ರವೀಂದ್ರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಅದಲ್ಲದೇ ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಗಳಲ್ಲಿ ನಿರಂತರ ಕಾರ್ಯ ಪ್ರವರ್ತತೆ ಕಂಡುಕೊಂಡಿದ್ದಾರೆ. ಇವರು ಅಂಪಾರು ಉಡುಪನ ಜಡ್ಡು ದಿ.ಆನಂದ ಶೆಟ್ಟಿ ಮತ್ತು ಶ್ರೀಮತಿ ಪದ್ದಮ್ಮ ಶೆಟ್ಟಿ ಅವರ ಪುತ್ರರಾಗಿದ್ದು, ಧಾರ್ಮಿಕ ಚಿಂತನೆವುಳ್ಳ ಹಾಗೂ ಉತ್ತಮ ಆಡಳಿತ ಕೌಶಲ್ಯ ಹೊಂದಿದ್ದಾರೆ. ಧಾರ್ಮಿಕತೆಯ ಮನೋಭಾವವನ್ನು ಬೆಳೆಸಿಕೊಂಡ ರವೀಂದ್ರ ಶೆಟ್ಟಿ ಅವರು ಹಲವಾರು ದೇಗುಲಗಳ ಮೊಕ್ತೇಸರರಾಗಿ, ಸಂಘಟಕರಾಗಿ, ಗ್ರಾಮೀಣ ಭಾಗದ ರೈತರಾಗಿ ಉಳ್ತೂರು ಪರಿಸರದಲ್ಲಿ ಗುರುತಿಸಿಕೊಂಡವರು. ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡ ಇವರು ಈ ಸಾಲಿನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಹೈನೋಧ್ಯಮದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಮುಂದಿನ ದಿನದಲ್ಲಿ ಹಾಲು ಉತ್ಪಾದಕರ ಸಂಘದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇವರಿಗೆ ಸಂಘದ ಸದಸ್ಯರು,…
ಶಿಕ್ಷಣಕ್ಷೇತ್ರ ಮತ್ತು ಸಾರ್ವಜನಿಕ ವಲಯದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಮಾದರಿ ಅಧ್ಯಾಪಕ ಶ್ರೀ ಎಮ್ ಜಗನ್ನಾಥ ಶೆಟ್ಟಿ
ಓರ್ವ ಶಾಲಾ ಶಿಕ್ಷಕ ನಾಡಿನ ನವ ಜನಾಂಗವನ್ನು ಸುಶಿಕ್ಷಿತರನ್ನಾಗಿಸುವುದರ ಜೊತೆಗೆ ನಾಡು ಅಭಿಮಾನ ಪಡುವ ಪ್ರಜೆಗಳನ್ನಾಗಿ ರೂಪಿಸುವ ಶಿಲ್ಪಕಾರರು ಎಂದರೆ ವರ್ಣನೆಯ ಮಾತಾಗದು. ಅದರಲ್ಲೂ ತಾನು ಓರ್ವ ಶಿಕ್ಷಕನಾಗಿ ತನ್ನ ಸಾಮಾಜಿಕ, ಸಾರ್ವಜನಿಕ ಜೀವನದ ಬದ್ಧತೆಯನ್ನೂ ಚೆನ್ನಾಗಿ ಅರ್ಥಮಾಡಿಕೊಂಡು ತನ್ನ ಜೀವನವನ್ನು ಹೇಗೆ ಸಾರ್ಥಕಪಡಿಸಿ ಕೊಳ್ಳಬಹುದೆನ್ನುವುದಕ್ಕೆ ಆದರಣೀಯ ಆದರ್ಶ ಶಿಕ್ಷಕ ಶ್ರೀ ಎಮ್ ಜಗನ್ನಾಥ ಶೆಟ್ಟಿ ಅವರು ಉತ್ತಮ ಉದಾಹರಣೆ ಆಗಬಲ್ಲರು. ಅಂಪಾರು ಎಂಬಲ್ಲಿಯ ಕೋಟೆ ಬೆಟ್ಟು ಮೂಲದ ದಿವಂಗತ ಮಾದಯ್ಯ ಶೆಟ್ಟಿ ಹಾಗೂ ದಿವಂಗತ ಚಿಕ್ಕಮ್ಮ ಶೆಟ್ಟಿ ದಂಪತಿಯರಿಗೆ ದ್ವಿತೀಯ ಪುತ್ರನಾಗಿ ಜನಿಸಿದ ಶೆಟ್ಟರು ತನ್ನ ಪ್ರಾಥಮಿಕ ಶಿಕ್ಷಣವನ್ನು ಅಂಪಾರು ಮೂಡುಬಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಶಂಕರನಾರಾಯಣದಲ್ಲಿ ಪಡೆದು ಪದವಿ ಪೂರ್ವ ತರಗತಿ ಶಿಕ್ಷಣವನ್ನು ಬಸ್ರೂರು ಶಿಕ್ಷಣ ಸಂಸ್ಥೆಯ ಮುಖಾಂತರ ಪೂರ್ತಿಗೊಳಿಸಿ ನಂತರ ಶಿಕ್ಷಕ ತರಬೇತಿಗಾಗಿ ತುಮಕೂರಿಗೆ ತೆರಳಿ ಅಲ್ಲಿನ ಬೇಸಿಕ್ ಎಜ್ಯುಕೇಶನ್ ಟ್ರೈನಿಂಗ್ ಸೆಂಟರ್ ಮೂಲಕ ಶಿಕ್ಷಕ ತರಬೇತಿ ಪೂರ್ಣಗೊಳಿಸಿದರು. ತನ್ನ ವೃತ್ತಿ…