ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಂತಳನಗರದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಮಣಿಪಾಲದ ವಿದ್ಯಾರ್ಥಿಗಳಿಗೆ ಒಂದು ದಿನದ ಕೌಶಲ ಮತ್ತು ವೃತ್ತಿ ಅಭಿವೃದ್ಧಿ ತರಬೇತಿಯು ಅಕ್ಟೋಬರ್ 19 ರಂದು ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ನಿಟ್ಟೆ ಡೀಮ್ಡ್ ಯುನಿವರ್ಸಿಟಿಯ ಉಪಾಧ್ಯಕ್ಷ ಡಾ. ಗೋಪಾಲ್ ಮೊಗೆರಾಯ ಮುಂಡ್ಕೂರು ಮಾತನಾಡಿ, ಆರಾಮ ವಲಯದಿಂದ ಹೊರ ಬಂದಾಗ ಸಾಧನೆ, ಬೆಳವಣಿಗೆ ಸಾಧ್ಯವಾಗುತ್ತದೆ. ಅದಾಗ ಅದ್ಬುತವಾದ ಜೀವನ ನಿರ್ಮಾಣವಾಗುತ್ತದೆ. ಆ ನಿಟ್ಟಿನಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇವರ ಮನುಕುಲದ ಸೇವೆಯು ಸ್ತುತ್ಯಾರ್ಹ ಎಂದರು.
ದಿಕ್ಸೂಚಿ ಮಾತುಗಳನ್ನಾಡಿದ ಮಲ್ಪೆ ರಾಜ್ ಫಿಶ್ ಮಿಲ್ ಆಯಿಲ್ ಕಂಪನಿ ಆಡಳಿತ ನಿರ್ದೇಶಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಮ್ಮ ಜೀವನ ಯಶಸ್ಸು ಮತ್ತು ವೈಫಲ್ಯಗಳ ಮೇಲೆ ನಿರ್ಧರಿತವಾಗುತ್ತದೆ. ದೇಶದ ಸಂಸ್ಕೃತಿ, ಸಂಸ್ಕಾರ, ಪ್ರಾಮಾಣಿಕತೆಯಿಂದ ಬದುಕು ಹಸನಾಗಬಲ್ಲುದು. ಭವಿಷ್ಯದ ಗರ್ಭದಲ್ಲಿ ಯಾರು ಏನಾಗುತ್ತಾರೋ ಎಂಬುದು ಗೊತ್ತಿಲ್ಲ. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಚಟುವಟಿಕೆಯು ವಿದ್ಯಾರ್ಥಿಗಳ ಭವಿಷ್ಯ ಉತ್ತುಂಗದ ಶಿಖರ ಏರಲು ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಬ್ರಹ್ಮಾವರ ಆಶ್ರಯ ಹೊಟೇಲ್ಸ್ ಆಡಳಿತ ನಿರ್ದೇಶಕ ಬಿ. ರಾಜಾರಾಮ್ ಶೆಟ್ಟಿ, ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಮಣಿಪಾಲದ ಉಪ ಪ್ರಾಂಶುಪಾಲ ಪ್ರೊ. ಶರತ್ ಎಸ್. ಆಳ್ವ, ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ, ದಯಾನಂದ ಶೆಟ್ಟಿ ಕಲ್ಮಂಜೆ, ರಂಜಿನಿ ಹೆಗ್ಡೆ ಬೆಳ್ಳೆ, ದಿವಾಕರ ಶೆಟ್ಟಿ, ಮೈಸ್ ಕಂಪ್ಯೂಟರ್ ತರಬೇತುದಾರ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಟ್ರಸ್ಟ್ ಕೋಶಾಧಿಕಾರಿ ವಿಜಿತ್ ಶೆಟ್ಟಿ ವಂದಿಸಿದರು. ಸಿಲ್ಕ್ ಡೆವಲಪ್ಮೆಂಟ್ ಸೆಂಟರ್ ನ ಕಾರ್ಯಕ್ರಮ ನಿರ್ದೇಶಕಿ ಪ್ರೊ. ದಿವ್ಯಾರಾಣಿ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ನ ಮೀಡಿಯಾ ಸ್ಟಡೀಸ್ ನ ಮುಖ್ಯಸ್ಥೆ ಡಾ. ಶುಭಾ ಎಚ್. ಎಸ್, ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕೋ ಆರ್ಡಿನೇಟರ್ ಸಿಐಎಸ್ ಡಿ ಸಹಾಯಕ ಪ್ರೊಫೆಸರ್ ಡಾ| ಪ್ರವೀಣ್ ಶೆಟ್ಟಿ, ಮಾಹೆ ಮಣಿಪಾಲದ ಸ್ಟೂಡೆಂಟ್ಸ್ ಆಫರ್ಸ್ ವಿಭಾಗದ ಸೀನಿಯರ್ ಸ್ಟೂಡೆಂಟ್ ಕೌನ್ಸಿಲರ್ ಡಾ ರಾಯನ್ ಮಥಾಯಸ್, ಮಣಿಪಾಲ ಡೋಲಿ ಡೆಸರ್ಟ್ ಸ್ಥಾಪಕಿ ಅನುಷಾ ಶೆಟ್ಟಿ, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ಟಿ. ಪಿ. ಸೆಲ್ ತರಬೇತಿ ಕೋ ಆರ್ಡಿನೇಟರ್ ಗ್ಲೆನ್ಸನ್ ಟೋನಿ, ಉಡುಪಿ ಲೀಡ್ ಬ್ಯಾಂಕ್ ನ ಡಿವಿಜನಲ್ ಮ್ಯಾನೇಜರ್ ಅರಿಸ್ ಜಿ.ಓ.ಪಿ ಜಿಂದಾಲ್ ಯೂನಿವರ್ಸಿಟಿಯ ಡಾಕ್ಟರೇಟ್ ರಿಸರ್ಚರ್ ಪ್ರೊ. ದಿವ್ಯಾರಾಣಿ ಅವರು ವಿವಿಧ ವಿಭಾಗಗಳಲ್ಲಿ ತರಬೇತಿಯನ್ನು ನೀಡಿದರು.