ಶ್ರೀನಿವಾಸ್ ವಿಶ್ವವಿದ್ಯಾಲಯದ ಎಂಬಿಎ ವಿದ್ಯಾರ್ಥಿ ಚಿರಾಗ್ ರೈ ಮೇಗಿನಗುತ್ತು ಅವರು ಅಕ್ಟೋಬರ್ 30ರಿಂದ ಚೆನ್ನೈಯಲ್ಲಿ ನಡೆಯಲಿರುವ ದಕ್ಷಿಣ ವಲಯ ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶ್ರೀನಿವಾಸ್ ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಚಿರಾಗ್ ರೈ ಅವರು ಸರ್ವೆ ಗ್ರಾಮದ ಮೇಗಿನಗುತ್ತಿನಲ್ಲಿ ವಾಸವಾಗಿದ್ದು, ಇವರ ತಂದೆ ಯತೀಶ್ ರೈ ಮುಂಡೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿದ್ದಾರೆ. ತಾಯಿ ಯೋಗಿನಿ ರೈ ಮುಂಡೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.