ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗೋವಾ ತುಳುಕೂಟದ ಉದ್ಘಾಟನಾ ಕಾರ್ಯಕ್ರಮವು ಅಕ್ಟೋಬರ್ 20 ರ ಆದಿತ್ಯವಾರ ಪೊರ್ವರಿಮ್ ನಾರ್ತ್ ನ ಪುಂಡಲೀಕ ದೇವಸ್ಥಾನದ ಸಭಾಗೃಹದಲ್ಲಿ ಜರಗಲಿದೆ. ಸ್ಥಾಪಕಾಧ್ಯಕ್ಷರಾದ ಹೋಟೆಲ್ ಉದ್ಯಮಿ, ಕಾರ್ಕಳ ಇರ್ವತ್ತೂರಿನ ಗಣೇಶ್ ಶೆಟ್ಟಿ ಮುಂದಾಳತ್ವದಲ್ಲಿ ಜರಗಲಿರುವ ಈ ಕಾರ್ಯಕ್ರಮವು ಮಧ್ಯಾಹ್ನ 2:30 ರಿಂದ ಆರಂಭಗೊಳ್ಳಲಿದೆ. ಉದ್ಘಾಟನೆಯನ್ನು ಕಾರ್ಕಳದ ಶಾಸಕ, ಕರ್ನಾಟಕ ಸರಕಾರದ ಇಂಧನ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗೋವಾ ಸರಕಾರ ಪ್ರವಾಸ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವ ರೋಹನ್ ಅಶೋಕ್ ಕೌಂಟೆ ಆಗಮಿಸಲಿದ್ದು, ಅತಿಥಿಗಳಾಗಿ ಕೆ. ಗುಣಪಾಲ ಕಡಂಬ (ಕಾರ್ಯಾಧ್ಯಕ್ಷ : ಜಿಲ್ಲಾ ಕಂಬಳ ಸಮಿತಿ), ವಿಜಯಕುಮಾರ್ ಕೊಡಿಯಲ್ ಬೈಲ್ (ರಂಗಭೂಮಿ ಮತ್ತು ತುಳು ಚಿತ್ರರಂಗದ ನಿರ್ದೇಶಕ), ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ (ಪ್ರಾಧ್ಯಾಪಕ : ಪುರಾತನ ವಸ್ತು ಸಂಗ್ರಹ, ಎಸ್. ಎನ್. ಎಸ್ ಕಾಲೇಜು ಸುಂಕದಕಟ್ಟೆ ಬಜ್ಪೆ ಮಂಗಳೂರು), ಪ್ರಸನ್ನ ಶೆಟ್ಟಿ ಬೈಲೂರು, (ನಟ, ಸಂಭಾಷಣೆಕಾರ), ಧನಕೀರ್ತಿ ಬಲಿಪ (ಅಧ್ಯಕ್ಷ: ತುಳುಕೂಟ ಮೂಡಬಿದ್ರೆ) ಹಾಗೂ ಗೋವಾ ತುಳು ಕೂಟದ ಸದಾನಂದ ಶೆಟ್ಟಿ ಬೆಳುವಾಯಿ, ಚಂದ್ರಹಾಸ ಅಮೀನ್, ವಿಜಯೇಂದ್ರ ಶೆಟ್ಟಿ, ಗಣೇಶ್ ಕೆ. ಶೆಟ್ಟಿ ಇರ್ವತ್ತೂರು, ಶಶಿಧರ ನಾಯ್ಕ್, ಸಿಎ ಪ್ರಶಾಂತ್ ಜೈನ್, ಅಶೋಕ್ ಶೆಟ್ಟಿ ಮುಡಾರು ವೇದಿಕೆಯಲ್ಲಿ ಉಪಸ್ಥಿತಲಿರುವರು.
ಮಧ್ಯಾಹ್ನ 2 ಗಂಟೆಗೆ ಅತಿಥಿಗಳ ಸ್ವಾಗತ, ಭಾಷಣ, 2:30 ಸಭಾ ಕಾರ್ಯಕ್ರಮದ ಚಾಲನೆ, ಸಾಯಂಕಾಲ 5:00 ಕ್ಕೆ ತುಳುಕೂಟ ಬೆದ್ರದ ಸದಸ್ಯರಿಂದ ತುಳು ತಿಂಗಳುಗಳಾದ ಪಗ್ಗುವಿನಿಂದ ಸುಗ್ಗಿ ತನಕ ತುಳುವರ 12 ತಿಂಗಳುಗಳ ಪರಿಚಯದೊಟ್ಟಿಗೆ ಆಯಾಯ ತಿಂಗಳ ಆಚಾರ- ವಿಚಾರಗಳ ನೆನಪು ಮಾಡಿಸುವಂತಹ ನೃತ್ಯಗಳನ್ನು ಮಾಡಿ ತೋರಿಸಲಿದ್ದಾರೆ. ತುಳುನಾಡ ಆರಾಧನೆ, ಆಚರಣೆಯ ಬಗೆಯ ವಸ್ತು ಪ್ರದರ್ಶನ ಹಿರ್ಗಾನ ನೆಲ್ಲಿಕಟ್ಟೆಯ ಸುಧಾಕರ್ ಶೆಟ್ಟಿಯವರ ಬಳಗದಿಂದ ನಡೆಯಲಿದೆ. ಪ್ರಾಚೀನ ನಗ – ನಾಣ್ಯಗಳ ವಸ್ತು ಪ್ರದರ್ಶನವನ್ನು ಕುಡ್ಲ ಇನ್ಫೋಸಿಸ್ ನ ಆಶಿತಾ ಎಸ್. ಕಡಂಬ ಮಾಡಲಿದ್ದಾರೆ. ನಂತರ ವಿಜಯ್ ಕುಮಾರ್ ಕೋಡಿಯಲ್ ಬೈಲ್ ನಿರ್ದೇಶನದ ಕಲಾ ಸಂಗಮದ ಕಲಾವಿದರಿಂದ ‘ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ.
ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತುಳುಕೂಟ ಗೋವಾದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ತುಳುಕೂಟ ಗೋವಾದ ಗೌರವ ಅಧ್ಯಕ್ಷರಾದ ಸದಾನಂದ ಶೆಟ್ಟಿ ಬೆಳುವಾಯಿ, ಚಂದ್ರಹಾಸ ಅಮೀನ್ ಮರಕದಬೈಲು ಗುತ್ತು ಬಂಟ್ವಾಳ, ವಿಜಯೇಂದ್ರ ಶೆಟ್ಟಿ ಕಬಿಯಾಡಿ, ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು, ಉಪಾಧ್ಯಕ್ಷರಾದ ಕೆ. ಶಶಿಧರ ರೈ ಪುತ್ತೂರು, ಪ್ರಕಾಶ್ ಪೂಜಾರಿ ಕೊಡಗು, ವಿಜಯ್ ಶೆಟ್ಟಿ ನಿಟ್ಟೆ, ನಾಗೇಶ್ ಪೂಜಾರಿ ಪಣಿಯೂರು, ಜಗದೀಶ್ ಶೆಟ್ಟಿ ಪಳ್ಳಿ, ನವೀನ್ ರಾವ್ ಉಡುಪಿ, ಕಾರ್ಯದರ್ಶಿ ಶಶಿಧರ ನಾಯ್ಕ್ ಬೋಂದೆಲ್, ಜೊತೆ ಕಾರ್ಯದರ್ಶಿ ಶ್ರೀಕಾಂತ್ ಅಮೀನ್ ಕಾಪು, ಕೋಶಾಧಿಕಾರಿ ಸಿಎ ಪ್ರಶಾಂತ್ ಜೈನ್ ಇರ್ವತ್ತೂರು, ಜೊತೆ ಕೋಶಾಧಿಕಾರಿ ಅಪ್ಪಾಜಿ ಶೆಟ್ಟಿ ಡೆಬ್ಬೇಲಿ ಹಾಗೂ ಸಾಮಾಜಿಕ ವಲಯದ ಪ್ರವೀಣ್ ರಾಜ್, ಪ್ರಮೋದ್ ಪೂಜಾರಿ ಸುರತ್ಕಲ್, ಚೇತನ್ ಪೂಜಾರಿ ಪೋಂಡಾ, ರಾಘವೇಂದ್ರ ಉಡುಪ, ಸಂಯೋಜಕ ಅಶೋಕ್ ಶೆಟ್ಟಿ ಅರಂತಬೆಟ್ಟು ಮುಡಾರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.