Author: admin

ಸವಣೂರು ಗ್ರಾ. ಪಂ. ಮಾಜಿ ಉಪಾಧ್ಯಕ್ಷ, ಸವಣೂರು ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಪುಣ್ಚಪ್ಪಾಡಿ ದೇವಸ್ಯ ಪಿ.ಡಿ. ಗಂಗಾಧರ್ ರೈ ಮತ್ತು ಸುವಾಸಿನಿ ಜಿ.ರೈ ಕಳ್ಳಿಗೆ ಬೀಡುರವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಮಾರಂಭವು ಅದ್ದೂರಿಯಾಗಿ ಮೇ 22 ರಂದು ಪುತ್ತೂರು ದರ್ಬೆ ಪ್ರಶಾಂತ್ ಮಹಲ್ ನ ಸಭಾಭವನದಲ್ಲಿ ಜರಗಿತು. ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಯಜಮಾನ ವಿಶ್ವನಾಥ ರೈ ದಂಪತಿ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆಗೈದರು. ಗಂಗಾಧರ ರೈ ಮತ್ತು ಸುವಾಸಿನಿ ಜಿ. ರೈಯವರುಗಳು ಪರಸ್ಪರ ಹಾರಾರ್ಪಣೆಗೈದರು, ಬಳಿಕ ಕೇಕ್ ಕತ್ತರಿಸಿದರು. ಸರ್ವ ಕ್ಷೇತ್ರದಲ್ಲೂ ಸೈ ಎನಿಸಿದ ಗಂಗಣ್ಣ – ರಾಕೇಶ್ ರೈ : ಕಾರ್ಯಕ್ರಮದ ನಿರೂಪಕರಾದ, ದ. ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡಿಂಜಿರವರು ಮಾತನಾಡಿ ಪಿ.ಡಿ. ಗಂಗಾಧರ ರೈ ಮತ್ತು ಸುವಾಸಿನಿ ಜಿ. ರೈಯವರ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಣೆಯನ್ನು ನೋಡುವ ಸೌಭಾಗ್ಯ ನಮಗೆ ದೊರೆತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಪಿ.ಡಿ. ಗಂಗಾಧರ ರೈಯವರು…

Read More

ಮುಂಗಾರು ಪೂರ್ವ ಮಳೆ ಕೈ ಕೊಟ್ಟರೂ ಮುಂಗಾರು ಶುಭಾರಂಭಗೊಂಡಿದೆ. ಮಳೆಗಾಲವೆಂದರೆ ಇಳೆ ತಂಪಾಗಿ ಜೀವ ಜಲ ಸಮೃದ್ದವಾಗುವ ಕಾಲ. ಗುಡುಗು ಸಿಡಿಲುಗಳ ಆರ್ಭಟದ ಜೊತೆಗೆ ನೆರೆಯ ಭೀತಿಯೂ ಮಳೆಗಾಲದಿಂದ ಹೊರತಾಗಿಲ್ಲ. ಮುಖ್ಯವಾಗಿ ಮಳೆಗಾಲದಲ್ಲಿ ಎಚ್ಚರಿಕೆಯಲ್ಲಿರಬೇಕಾದವರು ವಾಹನ ಸವಾರರು. ಅದರಲ್ಲಿಯೂ ಬೈಕ್ ಸವಾರರು. ನಿಮ್ಮ ಮನೆಯಲ್ಲಿ ಬೈಕ್ ಕ್ರೇಝ್ ಇರುವ ಮಕ್ಕಳಿದ್ದರೆ ಅವರನ್ನ ಕರೆದು ಇಂದೇ ತಿಳಿಹೇಳಿರಿ, ಮಳೆಗಾಲದಲ್ಲಿ ರಸ್ತೆ ಜಾರುತ್ತಿರುತ್ತದೆ. ವಾಹನಗಳ ಓಡಾಟದಿಂದಾಗಿ ಲೀಕೇಜ್ ಆಗುವ ಪ್ಯೂಯಲ್, ವಾಹನಗಳು ಹೊರಬಿಡುವ ಹೊಗೆಯ ಕಾರಣಕ್ಕೆ ಎಣ್ಣೆಯಂತೆ ಜಾರುವ ಅಂಶಗಳು ರಸ್ತೆಯಲ್ಲಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತಗಳಾಗುವ ಸಂಭವ ಅತೀ ಹೆಚ್ಚು. ವಾಹನಗಳ ಬ್ರೇಕ್ ನಿರೀಕ್ಷೆಯಂತೆ ಕೆಲಸ ಮಾಡುವುದಿಲ್ಲ! ಕೆಲವು ರಸ್ತೆಗಳು ಹೊಂಡಗಳಿಂದ ಕೂಡಿರುತ್ತವೆ ಎಲ್ಲೆಲ್ಲಿ ಹೊಂಡಗಳಿವೆ, ಮ್ಯಾನ್ ಹೋಲುಗಳಿವೆ? ಚರಂಡಿ ಓಪನ್ ಆಗಿದೆ ಎನ್ನುವುದನ್ನ ಊಹಿಸುವುದೂ ಸಾಧ್ಯವಿಲ್ಲ. ಹಾಗಾಗಿ ಎಚ್ಚರಿಕೆಯ ಕಣ್ಣೊಂದು ಆ ಕಡೆಗಿದ್ದರೆ ಉತ್ತಮ. ಸರ್ಕಸ್ ಮಾಡಲೇ ಬೇಡಿ : ಕೆಲವು ಸವಾರರಿಗೆ ಒಂದು ಛೇಷ್ಠೆ ಇದ್ದೇ ಇರುತ್ತದೆ.…

Read More

ಪ್ರಪಂಚ ಎನ್ನುವ ಹೂಗಿಡದಿಂದ ನಾಳೆಗೆ ಅರಳುವ ಮೊಗ್ಗುಗಳನ್ನು ಮಾತ್ರ ತೋಟಗಾರರಂತೆ ಬಿಡಿಸಿಕೊಳ್ಳಬೇಕೆ ಹೊರತು, ಇದ್ದಿಲು ಮಾಡುವವನ ಹಾಗೆ ಬುಡಕ್ಕೆ ಪೆಟ್ಟು ಹಾಕಬಾರದು ಎಂದು ಉಪದೇಶ ಮಹಾಭಾರತ 21 ನೇ ಶತಮಾನದಲ್ಲಿ ಬದುಕುತ್ತಿರುವ ನಮಗೆ ಇದಕ್ಕಿಂತ ಪ್ರಸ್ತುತವಾದ ಉಪದೇಶ ಕಿವಿಮಾತು ಇನ್ನೊಂದು ಇರಲಿಕ್ಕೆ ಸಾಧ್ಯವಿಲ್ಲ. ಶಿಲಾಯುಗ, ಲೋಹಗಳ ಯುಗವನ್ನು ದಾಟಿ ಈಗ ಇಲೆಕ್ಟ್ರಾನಿಕ್ಸ್ ಯುಗದಲ್ಲಿದ್ದೇವೆ. ಕೈಗಾರಿಕಾ ಕ್ರಾಂತಿಯಿಂದ ಪಡೆದ ಲಾಭವನ್ನು ಈಗ ತೀವ್ರಗತಿಯಲ್ಲಿ ಪಡೆಯಲು ಕಾತರರಾಗಿದ್ದೇವೆ. ಇದರಿಂದಾಗಿ, ಆಧುನಿಕ ಮನುಷ್ಯನ ಆಸೆ, ದುರಾಸೆಯಾಗಿದೆ. ತಾನೂ ಒಂದು ಪ್ರಾಣಿ ಪ್ರಬೇಧ ಎಂಬುದನ್ನು ಮರೆತು ಉಳಿದ ಪ್ರಾಣಿ ವರ್ಗದ ಮೇಲೆ ಸಸ್ಯ ವರ್ಗದ ಮೇಲೆ, ಅಷ್ಟೇ ಸಾಲದು ಎಂಬಂತೆ ಗಾಳಿ, ನೀರು, ನೆಲ, ಆಕಾಶಗಳ ಮೇಲೂ ಪ್ರಭುತ್ವ ಹೊರಟಿದ್ದಾನೆ. ಇಂದಿನ ಮಾನವನ ಆಕ್ರಮಣಕಾರಿ, ಅತಿಕ್ರಮಣಕಾರಿ, ಸ್ವಾರ್ಥ ಮನೋಭಾವ, ಪ್ರಕೃತಿಯ ಸಮತೋಲನವನ್ನು ಹಾಳುಮಾಡಿದೆ. ಕೃತಕ ಸರೋವರಗಳನ್ನು ನಿರ್ಮಿಸುವುದು, ವನ್ಯಮೃಗಗಳ ಆಹಾರ ವಿಹಾರ ವಸ್ತುಗಳಿಗೆ ಕೊಂದು, ಕಳ್ಳಸಾಗಣಿಕೆ ಮಾಡುವುದು, ನೈಸರ್ಗಿಕ ಕಾಡುಗಳನ್ನು ಹಾಳು ಮಾಡಿ ವನಗಳನ್ನು ಬೆಳೆಸುವುದು, ಭೂಗರ್ಭದಲ್ಲಿ,…

Read More

ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ನೂತನ ಅಧ್ಯಕ್ಷರಾಗಿ ತಾಲೂಕು ಯುವ ಬಂಟರ ಸಂಘದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ ಶೆಟ್ಟಿ ಮಚ್ಚಟ್ಟು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಉಪನ್ಯಾಸಕ ವೆಂಕಟರಮಣ ನಾಯಕ್ ಬೈಂದೂರು, ಕೋಶಾಧಿಕಾರಿಯಾಗಿ ಅಂಪಾರು ಸಂಜಯ ಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉದಯಕುಮಾರ್ ಆಯ್ಕೆಯಾಗಿದ್ದಾರೆ ಎಂದು ಕ್ಲಬ್ ನ ಪ್ರಕಟಣೆ ತಿಳಿಸಿದೆ.

Read More

ನಿವೃತ್ತ ಪ್ರಾಧ್ಯಾಪಕ, ಸಾಹಿತಿ, ಅರ್ಥಧಾರಿ ಮತ್ತು ಮಾಧ್ಯಮ ತಜ್ಞ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಮೇ 24 ರಂದು ಪುತ್ತೂರು ತಾಲೂಕು ಬೆಟ್ಟಂಪಾಡಿಯಲ್ಲಿ ‘ಹುಟ್ಟೂರ ಸಮ್ಮಾನ’ ಜರಗಲಿದೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪತ್ತನಾಜೆ ಉತ್ಸವ ಸಂದರ್ಭ ಜರಗುವ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಸಲುವಾಗಿ ಕ್ಷೇತ್ರದ ‘ಬಿಳ್ವ ಶ್ರೀ’ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಬಹುಮುಖೀ ಸಾಧಕ ಭಾಸ್ಕರ ರೈ ಕುಕ್ಕುವಳ್ಳಿ: ಯಕ್ಷಗಾನ, ಸಾಹಿತ್ಯ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ವಿರಳ ಪಂಕ್ತಿಗೆ ಸೇರಿದ ಓರ್ವ ಬಹುಶ್ರುತ ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಇರ್ದೆ ಬೆಟ್ಟಂಪಾಡಿಯಲ್ಲಿ ದಿ. ಕಲ್ಲಡ್ಕ ಕರಿಯಪ್ಪ ರೈ ಮತ್ತು ಗಿರಿಜಾ ರೈ ಕುಕ್ಕುವಳ್ಳಿ ದಂಪತಿಯ ಸುಪುತ್ರರು. ದರ್ಬೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ, ಪ್ರೌಢ ಶಿಕ್ಷಣವನ್ನು ಬೆಟ್ಟಂಪಾಡಿಯ ನವೋದಯ ಪ್ರೌಢಶಾಲೆ ಮತ್ತು ಕಾಲೇಜು…

Read More

ಮೂಡುಬಿದಿರೆ: ಸಂಚಾರ ನಿಯಮ ಪಾಲಿಸಿಕೊಂಡು ವಾಹನ ಚಲಾಯಿಸಿದರೆ, ಅಪಘಾತ ತಡೆಗಟ್ಟಲು ಸಾಧ್ಯ ಎಂದು ಎಚ್‍ಎಸ್‍ಇ ಆ್ಯಂಡ್ ಟಿ ಏಷಿಯಾ ಫೆಸಿಫಿಕ್ ವ್ಯವಸ್ಥಾಪಕ ಸಂಜಯ್ ಕರಾಜಗಿಕರ್ ಹೇಳಿದರು ಆಳ್ವಾಸ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಶೋಭಾವನ ಸಭಾಂಗಣದಲ್ಲಿ ಬುಧವಾರ ಒಶಾಯಿ ಫೌಂಡೇಷನ್ ಹಾಗೂ ಬಿಎಸಿಸಿಇ ಫೌಂಡೇಷನ್ ಸಹಯೋಗದಲ್ಲಿ ನಡೆದ ಸೇಫ್ಟಿ ಹ್ಯಾಕಥಾನ್- ‘ಜಾಗೃತಿ -2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಹನದಲ್ಲಿ ಪ್ರಯಾಣಿಸುವಾಗ ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಬೇಕು. ಇದರಿಂದ ಅವಘಡದ ಪರಿಣಾಮವನ್ನು ಶೇ50 ರಷ್ಟು ತಡೆಗಟ್ಟಬಹುದು ಎಂದರು. ಪ್ರತಿದಿನವೂ ನಾವು ಸ್ವ ಸುರಕ್ಷತೆಯನ್ನು ಮಾಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲು ಸುರಕ್ಷತೆಯ ಅನುಸರಿಸುವಂತೆ ಜಾಗೃತಿ ಮೂಡಿಸಬೇಕು ಎಂದರು. ಬದುಕಿನಲ್ಲಿ ನೀತಿ ನಿಯಮವನ್ನು ಪಾಲಿಸುವುದರಿಂದ, ಉನ್ನತ ಸ್ಥಾನಕ್ಕೆ ತಲುಪಬಹುದು. ಸುರಕ್ಷತಾ ಭಾವನೆಯನ್ನು ಮೂಡಿಸಬಹುದು ಎಂದರು. ಎಸ್‍ಎಫ್‍ಇಜಿಒ ಮತ್ತು ಒಶಾಯಿ ಫೌಂಡೇಷನ್ ನಿರ್ದೇಶಕ ಅವ್‍ದೇಶ್ ಮಲಯ್ಯಾ ಮಾತನಾಡಿ, ಮನುಷ್ಯ ಸಂಪನ್ಮೂಲವಾಗಿದ್ದು, ಅವನ ಜೀವವನ್ನು ಉಳಿಸುವುದರಿಂದ ಸಮಾಜ ಮತ್ತು ದೇಶ ಅಭಿವೃದ್ಧಿ ಸಾಧ್ಯ ಹಾಗೂ ಮನುಷ್ಯ ಸತ್ತಾಗ ಮಾತ್ರ ಅವನ…

Read More

ಬ್ರಹ್ಮಾವರ ಮೇ 23: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಸಂಸ್ಥೆಯ ಶಿಕ್ಷಕರಿಗೆ ನೂತನ ಪಠ್ಯಕ್ರಮ ‘ಓರಿಯೆಂಟ್ ಬ್ಲ್ಯಾಕ್ಸ್ವಾನ್’ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಅಂತರಾಷ್ಟ್ರೀಯ ಮಟ್ಟದ ತರಬೇತುದಾರ ಜಾನ್ ನೌಗ್ಸಾರಿಯಾ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ನೂತನ ಪಠ್ಯಕ್ರಮದ ಗುರಿ, ಉದ್ದೇಶ, ಬೋಧನೆ, ಕಲಿಕಾ ಉಪಕರಣಗಳು ಮತ್ತು ಮೌಲ್ಯಮಾಪನದ ಕುರಿತು ತರಬೇತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಇಂದು ಶಾಲೆಗಳಲ್ಲಿವಿವಿಧ ಪ್ರಕಾಶನ ಪುಸ್ತಕಗಳನ್ನು ಪಠ್ಯಕ್ರಮದಲ್ಲಿ ಬಳಸುತ್ತಿದ್ದು ಶಿಕ್ಷಕರಿಗೆ ಅವುಗಳ ಬೋಧನೆಯ ಅರಿವಿದ್ದರೆ ಮಾತ್ರ ಮಕ್ಕಳಲ್ಲಿ ಪರಿಪೂರ್ಣ ಕಲಿಕೆ ಸಾಧ್ಯ, ಜಿ ಎಮ್ ಅತ್ಯಾಧುನಿಕ ಪಠ್ಯಕ್ರಮದ ಜೊತೆಗೆ ಶಿಕ್ಷಕರಿಗೆ ಪರಿಣಾಮಕಾರಿ ಬೋಧನೆಯ ತರಬೇತಿಯನ್ನು ನೀಡುತ್ತಿದೆ ಎಂದರು. ಕಾರ್ಯಾಗಾರದಲ್ಲಿ ‘ಓರಿಯೆಂಟ್ ಬ್ಲ್ಯಾಕ್ಸ್ವಾನ್’ ನ ಚೇತನ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Read More

2023-2024 ನೇ ಶೈಕ್ಷಣಿಕ ಸಾಲಿನ 12 ನೇಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ವಸಾಯಿ ವರ್ತಕ್ ಕಾಲೇಜಿನ ವಿದ್ಯಾರ್ಥಿ ಲಕ್ಷ ಎಸ್ ಶೆಟ್ಟಿಗೆ ಶೇ 85.17 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಈತ ಸಾಣೂರು ಹೊಸಮನೆ ಸುರೇಶ್ ಎಂ ಶೆಟ್ಟಿ ಹಾಗೂ ಕರ್ನಿರೆ ಹೊಸಮನೆ ಲೋಲಾಕ್ಷಿ ಎಸ್ ಶೆಟ್ಟಿ ದಂಪತಿಯ ಸುಪುತ್ರ.

Read More

ಇತ್ತೀಚೆಗೆ ಮಂಗಳೂರು ನಗರದ ಪುರಭವನದಲ್ಲಿ ನಡೆದ ಅದ್ದೂರಿಯ ಕಾರ್ಯಕ್ರಮ ಅಂತರ್ಜಾಲ ಮಾಧ್ಯಮ ಸಂಸ್ಥೆ ಬಂಟ್ಸ್ ನೌ ತಾನು ಒಂದೂವರೆ ದಶಕ ಪೂರೈಸಿದ ಸಂಭ್ರಮವನ್ನು ತ್ರಿಪಂಚಕ ಅನುಬಂಧ ಎಂಬ ವಿಶೇಷ ಶೀರ್ಷಿಕೆಯಡಿ ದೇಶ ವಿದೇಶಗಳ ಪ್ರತಿಷ್ಠಿತ ಘಟಾನುಘಟಿ ಬಂಟ ನಾಯಕರ ಉಪಸ್ಥಿತಿಯಲ್ಲಿ ವಿಜೃಭಣೆಯಿಂದ ಆಚರಿಸಿ ಜಾಗತಿಕ ಮಟ್ಟದ ಬಂಟ ವಲಯದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ಅಂದು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಬಂಟ ನಾಯಕ ಮಣಿಗಳನ್ನು ಬಂಟರತ್ನ, ಬಂಟ ವಿಭೂಷಣ ಹಾಗೂ ಯುವ ಬಂಟ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಜೊತೆಗೆ ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ ಸಾಧನೆ ತೋರಿ ಗಮನ ಸೆಳೆಯುತ್ತಿರುವ ವ್ಯಕ್ತಿಗಳನ್ನು ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸತ್ಕರಿಸಿ ಸ್ಮರಣಿಕೆ ನೀಡಲಾಯಿತು. ರಂಜಿತ್ ಶೆಟ್ಟಿ ಸ್ಥಾಪಿಸಿ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಂಟ್ಸ್ ನೌ ಅಂತರ್ಜಾಲ ಮಾಧ್ಯಮ ಬಂಟ ಬಾಂಧವರ ಚಟುವಟಿಕೆಗಳನ್ನು ಎಚ್ಚರಿಕೆ ಕಣ್ಣುಗಳಿಂದ ಗಮನಿಸುತ್ತಾ ವರದಿ ಮಾಡುವುದರ ಜೊತೆಗೆ ವಿಶೇಷ ಸುದ್ಧಿಗಳು, ವೈಚಾರಿಕ ಸಾಂದರ್ಭಿಕ ಲೇಖನಗಳು, ಅಂಕಣ…

Read More

ತುಳುನಾಡ ನುಡಿ ಸಂಸ್ಕೃತಿ ಸಂಸ್ಕಾರ ಬದ್ಕ್ ನ್ ಮುಡೆದ್ ಕೊರಿನ “ಧರ್ಮದೈವ” ಸಿನಿಮಾದ ಅಧಿಕೃತ ಆಫಿಶಿಯಲ್ ಪೋಸ್ಟರ್ ನೆನ್ನ್, ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಸಮಾಜ ಸೇವೆ ಇಂಚನೇ ಅವೇತೋ ಸಾಧನೆಲೆಗ್ ಕಾರಣವಾದ್ ಇನಿ ಲೋಕೊರ್ಮೆ ಪುದಾರ್ ಪಡೆಯಿನ ಮೂಡುಬಿದಿರೆ ಆಳ್ವಾಸ್ ಕಾಲೇಜಿದ ಸಂಸ್ಥಾಪಕ ಮುಖ್ಯೆಸ್ಥೆರ್ ಶ್ರೀ ಡಾ. ಎಂ. ಮೋಹನ್ ಆಳ್ವ ಮೂಡಬಿದಿರೆ, ಲೋಕಾರ್ಪಣೆ ಮಲ್ತ್ ದ್ “ಚಿತ್ರ ಲೋಕೊರ್ಮೆ ಬೆಳಗಡ್ಂದ್ ಎಡ್ಡೆಪ್ಪುದ ಮದಿಪು ಕೊರ್ಯೆರ್. ಮಾಂತಾ ಯುವಕೆರೇ ಕೂಡ್ದು ಮಲ್ತಿನ “ಧರ್ಮದೈವ” ಸಿನಿಮಾದ ನಿರ್ಮಾಪಕೆರ್ ಶ್ರೀ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, ಕಥೆ ಬರೆದ್ ನಿರ್ದೇಶನ ಮಲ್ತಿನಾರ್ ಪ್ರಶಸ್ತಿ ಪುರಸ್ಕೃತ ಯುವ ನಿರ್ದೇಶಕೆ ಶ್ರೀ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು, ಖ್ಯಾತ ರಂಗನಟೆ ವಿಕ್ರಾಂತ ಸೇರ್ದ್ ತುಳು-ಕನ್ನಡ ಇಂಚ ಸುಮಾರ್ 60-69 ಸಿನಿಮೊಲೆಡ್ ನಟನೆ ಮಲ್ತಿನ ಶ್ರೀ ರಮೇಶ್ ರೈ ಕುಕ್ಕುವಳ್ಳಿ ಸೇರಿನಂಚ, ಹಿರಿಯ ಯುವ ಕಲಾವಿದೆರ್ ನಟನೆ ಮಲ್ತಿನ ಎಡ್ಡೆ ಸಂಗೀತೊ ಪದೊ ತಂತ್ರಜ್ಞಾನ ಕೌಶಲ್ಯ ಪಡೆಯಿನ…

Read More