ಮೂಡುಬಿದಿರೆ: ಕೆ.ಸಿ.ಇ.ಟಿ. ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು ಉತ್ತಮ ಅಂಕಗಳೊAದಿಗೆ ಅರ್ಹತೆ ಪಡೆದು ಸಾಧನೆ ಮಾಡಿದ್ದಾರೆ.
ಈ ಮೂಲಕ ಆಳ್ವಾಸ್ ಈ ಬಾರಿಯೂ ಉನ್ನತ ಸಾಧನೆ ಮಾಡಿದೆ. ನಿಸರ್ಗ ಎಸ್. 21ನೇ ರ್ಯಾಂಕ್, ಮೃಣಾಲಿನಿ ಎಸ್. ಪೂಜಾರಿ 29ನೇ ರ್ಯಾಂಕ್, ಪಾಹಿಮಾ ಹೇಮಚಂದ್ರ 38ನೇ ರ್ಯಾಂಕ್, ಎಮ್. ರಾಮ್ಪ್ರಸಾದ್ ಮಲ್ಯ 266ನೇ ರ್ಯಾಂಕ್, ಎಮ್.ವಿ. ಚಿರಾಂತ್ 290ನೇ ರ್ಯಾಂಕ್, ಆಕಾಶ್ ಬಸವರಾಜ್ ಬಚಲಾಪುರ 298ನೇ ರ್ಯಾಂಕ್, ಜೈ ಅಶೋಕ್ ರಾಚನ್ನವರ್ 402ನೇ ರ್ಯಾಂಕ್ನೊAದಿಗೆ ತೇರ್ಗಡೆ ಹೊಂದಿದ್ದಾರೆ.
ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಂಸ್ಥೆಯ ಪ್ರಾಚರ್ಯ ಮೊಹಮ್ಮದ್ ಸದಾಕತ್ ಅಭಿನಂದಿಸಿದ್ದಾರೆ.