ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಕಛೇರಿ (ಆಡಳಿತ) ಮಂಗಳೂರು ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಮತ್ತು ಮಂಗಳೂರು ದಕ್ಷಿಣ ವಲಯ, ಎಸ್ಡಿಎಮ್ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 06 ಚಿನ್ನ, 01 ಬೆಳ್ಳಿ, 01 ಕಂಚು ಒಟ್ಟು 08 ಪದಕಗಳೊಂದಿಗೆ 17 ವರ್ಷ ವಯೋಮಿತಿಯ ಬಾಲಕರ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಮುಂದಿನ ತಿಂಗಳು ನಡೆಯುವ ರಾಜ್ಯಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯಿಂದ 07 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ಫಲಿತಾಂಶ :
17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ರಜತ್ ಬಸು – 55 ಕೆಜಿ ವಿಭಾಗದಲ್ಲಿ (ಪ್ರಥಮ), ರಿತಿಕ್ ಕೆ ಜಿ – 60 ಕೆಜಿ ವಿಭಾಗದಲ್ಲಿ (ಪ್ರಥಮ), ತ್ರಿಭುವನ್ ಕೆ – 65 ಕೆಜಿ ವಿಭಾಗದಲ್ಲಿ (ಪ್ರಥಮ), ಕುಶಲ್ ಟಿ ಆರ್ – 80 ಕೆಜಿ ವಿಭಾಗದಲ್ಲಿ (ಪ್ರಥಮ), ಸಂಚಿತ್ ಕುಮಾರ್ – 92 ಕೆಜಿ ವಿಭಾಗದಲ್ಲಿ (ಪ್ರಥಮ), ರಾಹುಲ್ ಕೆ – 110 ಕೆಜಿ ವಿಭಾಗದಲ್ಲಿ (ಪ್ರಥಮ), ಸಂಗಮೇಶ್ – 51 ಕೆಜಿ ವಿಭಾಗದಲ್ಲಿ (ದ್ವಿತೀಯ), ವರದ ವಿನಾಯಕ – 65 ಕೆಜಿ ವಿಭಾಗದಲ್ಲಿ (ತೃತೀಯ) ಸ್ಥಾನ ಪಡೆದಿದ್ದಾರೆ.
ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.