ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಪ್ರತೀ ವರ್ಷದಂತೆ ನಡೆಯುವ ಪುಣ್ಯ ಕ್ಷೇತ್ರಗಳ ದರ್ಶನದ ತೀರ್ಥಯಾತ್ರೆಯು ಈ ಬಾರಿ ಒರಿಸ್ಸಾದ ಪುರಿ ಜಗನ್ನಾಥ, ಕೊನಾರ್ಕ್ ಸೂರ್ಯ ದೇವಾಲಯ, ಭುಭನೇಶ್ವರ್ ಲಿಂಗರಾಜೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಲಾಯಿತು. ಒಡಿಯೂರಿನ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ ಶುಭಾಶೀರ್ವಾದದೊಂದಿಗೆ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅದ್ಯಕ್ಷರಾದ ಪ್ರಭಾಕರ ವಿ ಶೆಟ್ಟಿ, ಪ್ರ ಕಾರ್ಯದರ್ಶಿ ರೋಹಿತ್ ಡಿ ಶೆಟ್ಟಿಯವರ ಮುಂದಾಳತ್ವದಲ್ಲಿ ಸುಮಾರು 50 ಜನ ಯಾತ್ರಾರ್ಥಿಗಳು 4 ದಿನದ ಈ ಯಾತ್ರೆಯಲ್ಲಿ ಪಾಲ್ಗೊಂಡರು.
ಈ ಬಾರಿ ಭಾರತದ ಪವಿತ್ರವಾದ ಚಾರ್ ಧಾಮಗಳ ಪೈಕಿ ಅತ್ಯಂತ ವಿಶೇಷತೆಯ ಪುಣ್ಯ ಕ್ಷೇತ್ರ ಪುರಿ ಜಗನ್ನಾಥ, ಬಲರಾಮ, ಸುಭದ್ರೆ ದೇವರ ದರ್ಶನ ಮಾಡಲಾಯಿತು. ಅಲ್ಲದೇ ಭಾರತದ ಚಾರ್ ಧಾಮಗಳಾದ ದ್ವಾರಕಾದೀಶ, ಬದರಿನಾಥ ಹರಿನಾರಾಯಣ, ರಾಮೇಶ್ವರಂ ಸೇರಿದಂತೆ ನಾಲ್ಕು ಚಾರ್ ಧಾಮಗಳ ದರ್ಶನ ಬಳಗದ ಮೂಲಕ ಮಾಡಲಾಯಿತು. ಪುಣೆ ಶ್ರೀ ಗುರುದೇವ ಸೇವಾ ಬಳಗದ ಉಸ್ತುವಾರಿಯಲ್ಲಿ ಮತ್ತು ಮಾರ್ಗದರ್ಶನದಲ್ಲಿ ಭಾರತದ 12 ಜ್ಯೋತಿರ್ಲಿಂಗ ದರ್ಶನದ ಯಾತ್ರೆ ಮತ್ತು ಪುಣ್ಯ ಕ್ಷೇತ್ರಗಳ ಯಾತ್ರೆಗಳನ್ನು ಕೈಗೊಳ್ಳುವ ಸಂಕಲ್ಪವನ್ನು ಮಾಡಲಾಗಿದ್ದು, ಈ ವರಗೆ ಸೌರಾಷ್ಟ್ರ, ಸೋಮನಾಥ, ಶ್ರೀಶೈಲ ಮಲ್ಲಿಕಾರ್ಜುನಾಥೆಶ್ವರ, ಕಾಶಿ ವಿಶ್ವನಾಥೇಶ್ವರ, ಉಜ್ಜೈನಿ ಮಹಾಂಕಾಲೇಶ್ವರ ಮತ್ತು ಓಂಕಾರೇಶ್ವರ, ಪಾರ್ಲಿ ವೈದ್ಯನಾಥೆಶ್ವರ, ಭೀಮಶಂಕರ್ ಜ್ಯೋತಿರ್ಲಿಂಗ, ರಾಮೇಶ್ವರಂನ ರಾಮೇಶ್ವರ ಜ್ಯೋತಿರ್ಲಿಂಗ, ನಾಗೇಶ್ವರ ಜ್ಯೋತಿರ್ಲಿಂಗ, ತ್ರೈಂಭಕೇಶ್ವರ ಜ್ಯೋತಿರ್ಲಿಂಗ, ನಾಸಿಕ್, ಎಲ್ಲೋರಾ ಗ್ರೀಶ್ನೆಶ್ವೇರ ಜ್ಯೋತಿರ್ಲಿಂಗ, ಹಿಮಾಲಯದ ಕೇದಾರೇಶ್ವರ ಜ್ಯೋತಿರ್ಲಿಂಗಗಳ ದರ್ಶನ ಪೂರ್ತಿಗೊಳಿಸಿ ನಾಲ್ಕು ಪವಿತ್ರ ಚಾರ್ ಧಾಮಗಳ ದರ್ಶನ ಮಾಡಿದರು.
ಬಳಗದ ಮಾಜಿ ಅಧ್ಯಕ್ಷರಾದ ಸದಾನಂದ ಶೆಟ್ಟಿಯವರ ಸಲಹೆ, ಅಧ್ಯಕ್ಷರಾದ ಪ್ರಭಾಕರ ವಿ ಶೆಟ್ಟಿ, ಕಾರ್ಯದರ್ಶಿ ರೋಹಿತ್ ಡಿ ಶೆಟ್ಟಿ ನಗ್ರಿಗುತ್ತು, ಕೋಶಾಧಿಕಾರಿ ಹರೀಶ್ ಮೂಡಬಿದ್ರಿ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ, ಕಾರ್ಯದರ್ಶಿ ವೀಣಾ ಪಿ ಶೆಟ್ಟಿ ಸೇರಿದಂತೆ ಪ್ರಮುಖರು ಯಾತ್ರೆಯ ಜವಬ್ದಾರಿಯನ್ನು ವಹಿಸಿಕೊಂಡು ಸಹಕರಿಸಿದರು. ಬಳಗದ ಮಾಜಿ ಅಧ್ಯಕ್ಷರುಗಳು, ಉದ್ಯಮಿಗಳು ಮತ್ತು ಬಳಗದ ಪ್ರಮುಖರೆಲ್ಲರೂ ಸರ್ವ ರೀತಿಯಿಂದಲೂ ಸಹಕರಿಸಿದರು. ಹೆಚ್ಚಿನ ಸಂಖ್ಯೆಯ ದಂಪತಿಗಳು ಮತ್ತು ಮಹಿಳೆಯರು ಈ ಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಚಿತ್ರ, ವರದಿ : ಹರೀಶ್ ಮೂಡುಬಿದಿರೆ