ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮೂಲ್ಕಿ ಬಂಟರ ಸಂಘ ವ್ಯಾಪ್ತಿಯ ಕೆಮ್ರಾಲ್ ಪಂಚಾಯತ್ ನ ಕೊಯಿಕುಡೆ ಗ್ರಾಮದ ಸುಂದರ ಅಮೀನ್ ಮತ್ತು ಲಲಿತ ಅಮೀನ್ ಅವರ ಮನೆಗೆ ಭೇಟಿ ನೀಡಿದ್ದು, ಲಲಿತಾ ಅಮೀನ್ ಅವರಿಗೆ ಕೆಲ ವರ್ಷಗಳ ಹಿಂದೆ ಬೆಂಕಿ ಅಘಾತದಿಂದ ಕಾಲು ಸುಟ್ಟುಹೊಗಿದ್ದು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಂದರ ಅಮೀನ್ ಅವರೂ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ಮಕ್ಕಳು ಇಲ್ಲದ ಕಾರಣ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಕಣ್ಣಾರೆ ಕಂಡ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ವತಿಯಿಂದ ಪ್ರತೀ ತಿಂಗಳು ಅರ್ಥಿಕ ಸಹಕಾರ ನೀಡುವುದೆಂದು ತಿಳಿಸಿದರು.
ಈ ಸಂದರ್ಭ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಚಂದ್ರಕಲಾ ಶೆಟ್ಟಿ, ಪತ್ರಿಕಾ ಮತ್ತು ಪ್ರಚಾರ ವಿಭಾಗದ ನಿಶಾಂತ್ ಶೆಟ್ಟಿ ಕಿಲೆಂಜೂರು ಸಂತೋಷ್ ಶೆಟ್ಟಿ, ಗೀತಾ ಶೆಟ್ಟಿ, ರಾಮದಾಸ್ ಶೆಟ್ಟಿ ಮತ್ತಿತರರು ಇದ್ದರು.
Next Article ಪುಣೆ ಕನ್ನಡ ಸಂಘದ ವಾರ್ಷಿಕ ಕವಿಗೋಷ್ಠಿ.