ಸುಮಾರು 96 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಆಂಡ್ ರೀಡಿಂಗ್ ರೂಮ್ ಸೊಸೈಟಿ ಇದರ ದ್ವೈವಾರ್ಷಿಕ ಮಹಾಸಭೆ ನಡೆಯಿತು. ಅಧ್ಯಕ್ಷ ಚಿತ್ತರಂಜನ್ ಹೆಗ್ಡೆ ಹರ್ಕೂರು ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಕಾಳಾವರ ವಾಚಿಸಿದರು. 2024 -26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಸುಭಾಷ್ ಚಂದ್ರ ಶೆಟ್ಟಿ ಸೌಕೂರು, ಉಪಾಧ್ಯಕ್ಷರಾಗಿ ಸುಧೀರ್ ಶೆಟ್ಟಿ ಕೆಂಚನೂರು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಹಿಲಿಯಾಣ, ಜೊತೆ ಕಾರ್ಯದರ್ಶಿಯಾಗಿ ಕೆ. ಸೂರ್ಯಕಾಂತ, ಕೋಶಾಧಿಕಾರಿಯಾಗಿ ನವೀನ್ ಕುಮಾರ್ ಹೆಗ್ಡೆ ಶಾನಾಡಿ ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಬೆಟ್ಟಿನ್ ಮತ್ತು ವಾಚನಾಲಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್. ಸದಾನಂದ ಶೆಟ್ಟಿ, ಸುಧೀರ್ ಕುಮಾರ ಶೆಟ್ಟಿ ಮಾರ್ಕೋಡು, ಸಂತೋಷ್ ಕುಮಾರ್ ನೂಜಾಡಿ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ತಮ್ಮಯ್ಯ ದೇವಾಡಿಗ ಮತ್ತು ಸುಂದರ ಶೆಟ್ಟಿ ದಾಸರಬೆಟ್ಟು ಸರ್ವಾನುಮತದಿಂದ ಆಯ್ಕೆಯಾದರು. ಬಿ. ಆರ್. ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು. ವೀರಣ್ಣ ಶೆಟ್ಟಿ ನಿರೂಪಿಸಿದರು.