ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆಯೊಂದಿಗೆ, ಉದ್ಯೋಗ ಕ್ಷೇತ್ರದಲ್ಲಿ ಹತ್ತಾರು ಉದ್ಯೋಗ ಮೇಳಗಳನ್ನು, ವಿವಿಧ ಕ್ಷೇತ್ರದಲ್ಲಿ ಲಭ್ಯವಿರುವ ಖಾಸಗಿ ಉದ್ಯೋಗ ಅವಕಾಶಗಳಿಗೆ ಸಾವಿರಾರು ನೇರ ಸಂದರ್ಶನಗಳ ಮೂಲಕ ಯುವ ಜನತೆಗೆ ಉದ್ಯೋಗ ಕೊಡಿಸುವಲ್ಲಿ ವಿದ್ಯಾಮಾತಾ ಅಕಾಡೆಮಿ ತುಂಬಾನೇ ಮಹತ್ತರ ಕಾರ್ಯನಿರ್ವಹಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿರುವ ಸಂಸ್ಥೆಯಾಗಿ ಹೊರ ಹೊಮ್ಮಿದೆ. ರಾಜ್ಯ ಮಟ್ಟದಲ್ಲಿ ಮೂರು ಉದ್ಯೋಗ ಮೇಳವನ್ನು ಆಯೋಜಿಸಿ, ಹತ್ತಕ್ಕೂ ಮಿಕ್ಕಿದ ಗ್ರಾಮೀಣ ಉದ್ಯೋಗ ಮೇಳದ ಜೊತೆಗೆ ಸಾವಿರಾರು ಸಂದರ್ಶನದೊಂದಿಗೆ ನೂರಾರು ಕಾರ್ಯಗಾರ ಮೂಲಕ ಕಳೆದ ಆರು ವರ್ಷಗಳಲ್ಲಿ ಅತೀ ಕಡಿಮೆಯೆಂದರೂ ಆರು ಸಾವಿರ ಮೀರಿ ಉದ್ಯೋಗಕಾಂಕ್ಷಿಗಳಿಗೆ ವಿದ್ಯಾಮಾತಾ ಮೂಲಕ ಉದ್ಯೋಗ ಲಭಿಸಿದ್ದು, ಇವೆಲ್ಲವೂ ಅಕಾಡೆಮಿಯ ಪರಿಶ್ರಮಕ್ಕೆ ಸಿಕ್ಕ ಅಮೂಲ್ಯ ಉಡುಗೊರೆಯಾಗಿದೆ.
ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಸರಕಾರಿ ಹುದ್ದೆಯನ್ನೇರುವ ಅವರ ಪುಟ್ಟ ಕನಸುಗಳನ್ನು ನನಸಾಗಿಸಲು ವಿಫಲರಾಗುತ್ತಿರುವುದನ್ನು ಮನಗಂಡು ವಿದ್ಯಾಮಾತಾ ಫೌಂಡೇಶನ್ ಇದರ ಆಶ್ರಯದಲ್ಲಿ ವಿದ್ಯಾಮಾತಾ ಅಕಾಡೆಮಿ ಪ್ರಾರಂಭಿಸಲಾಗಿತ್ತು. ಈ ಅಕಾಡೆಮಿ ಮೂಲಕ ಸರಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಉದ್ಯೋಗ ಪಡೆಯಲು ಎದುರಿಸಬೇಕಾದ ಅಡೆತಡೆಗಳನ್ನು ನೀಗಿಸಲು ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ ಮಾಹಿತಿ ತರಬೇತಿ ಕೇಂದ್ರವನ್ನು ಪುತ್ತೂರು, ಸುಳ್ಯ ಮತ್ತು ಕಾರ್ಕಳದಲ್ಲಿ ಪ್ರಾರಂಭಿಸಿದೆ. ಹತ್ತಾರು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಏಕಕಾಲದಲ್ಲಿ ಒಂದೇ ಸೂರಿನಡಿ ತರಬೇತಿಯ ಜೊತೆಗೆ ಉಚಿತ ಸ್ಪೋಕನ್ ಇಂಗ್ಲೀಷ್, ಉಚಿತ ಕಂಪ್ಯೂಟರ್ ತರಬೇತಿ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ಅರ್ಜಿ ಸಲ್ಲಿಕೆ ಮತ್ತು ಸಶಸ್ತ್ರ ಪಡೆಗಳ ನೇಮಕಾತಿಗೆ ಪ್ರಯತ್ನಿಸುವವರಿಗೆ ದೈಹಿಕ ಸದೃಢತೆಗಾಗಿ ತರಬೇತಿ ನೀಡಲಾಗುತ್ತಿದೆ.
ಇಲ್ಲಿ ಯಾವೆಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಿಗಲಿದೆ? ಐಎಎಸ್, ಐಪಿಎಸ್, ಕೆಎಎಸ್, ಎಫ್ಡಿಎ, ಎಎಸ್ಡಿಎ, ಎನ್ ಡಿ ಎ, ಸಿಡಿಎಸ್, ಪಿಎಸ್ಐ, ಪಿಸಿ, ವಿಏಓ, ಪಿಡಿಓ, ಟಿಇಟಿ, ಜಿಪಿಎಸ್ಟಿಆರ್, ಎಚ್ ಎಸ್ ಟಿಆರ್, ಡಿಫೆನ್ಸ್ ಕೆಪಿಟಿಸಿಎಲ್, ಕೋ ಆಪರೇಟಿವ್, ರೈಲ್ವೇ, ಬ್ಯಾಂಕಿಂಗ್, ಎಸ್ ಎಸ್ ಸಿ, ಫಾರೆಸ್ಟ್, ಕೆಸೆಟ್ ಮತ್ತು ನೆಟ್ ಹಾಗೂ ನಮೋದಯ ಅಥವಾ ಸೈನಿಕ್ ಸ್ಕೂಲ್ ಎಂಟ್ರೆನ್ಸ್ ಎಕ್ಸಾಮ್ ತರಬೇತಿ ಸಂಸ್ಥೆಯ ಅಕಾಡೆಮಿಯಿಂದ ಸಿಗಲಿದೆ. ಎಲ್ಲಾ ತರಬೇತಿಗಳಿಗೆ ನೇರ ತರಗತಿಗಳು ವಾರದ ದಿನಗಳಲ್ಲಿ ಲಭ್ಯವಿದ್ದು, ಓದು ಮುಗಿಸಿ ಉದ್ಯೋಗಕ್ಕೆ ಪ್ರಯತ್ನ ಮಾಡುವವರು ಇದರ ಉಪಯೋಗ ಪಡೆದುಕೊಳ್ಳಬಹುದು. ಉದ್ಯೋಗಸ್ಥರು, ಗೃಹಿಣಿಯರು, ಸದ್ಯ ಓದುತ್ತಿರುವವರಿಗಾಗಿ ರಾತ್ರಿ ದಿನನಿತ್ಯ 8 ರಿಂದ 9ರವರೆಗೆ ಆನ್ಲೈನ್ ಮೂಲಕ ತರಗತಿಗಳು ನಡೆಯುತ್ತವೆ. 5 ರಿಂದ 15 ವರ್ಷದವರೆಗಿನ ವಿದ್ಯಾರ್ಥಿಗಳಿಗೆ ಅಬಕಾಸ್, ವೇದಿಕ್ ಗಣಿತ, ಮಾನಸಿಕ ಸಾಮರ್ಥ್ಯ ಆನ್ಲೈನ್ ತರಗತಿಗಳು ಪ್ರತಿ ಶನಿವಾರ, ಭಾನುವಾರ ರಾತ್ರಿ 7:30 ರಿಂದ 8:30ರ ವರೆಗೆ ನಡೆಯುತ್ತವೆ. 2022 ರ ಅಬಕಾಸ್ ನ್ಯಾಷನಲ್ ಚಾಂಪಿಯನ್, 2023 ರ ಸಾಲಿನಲ್ಲಿ ಇಂಟರ್ನ್ಯಾಷನಲ್ ಚಾಂಪಿಯನ್ ಗೌರವ ವಿದ್ಯಾಮಾತಾ ಅಕಾಡೆಮಿಗೆ ದೊರಕಿದೆ.
ಎರಡು ವರ್ಷಗಳಲ್ಲಿ ಕರ್ನಾಟಕ ಪೊಲೀಸ್, ಅಗ್ನಿಪಥ್, ಬ್ಯಾಂಕಿಂಗ್, ಶಿಕ್ಷಕರ ನೇಮಕಾತಿ, ಕೆಎಂಎಫ್ ಸಹಿತ 140 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕೆಸೆಟ್, ಕರ್ನಾಟಕ ಶಿಕ್ಷಕರ ಪರೀಕ್ಷೆ, ನಮೋದಯ ಸೈನಿಕ ಶಾಲಾ ಪರೀಕ್ಷೆಗಳಲ್ಲಿ ನಿರಂತರ ಅತ್ಯುತ್ತಮ ಫಲಿತಾಂಶ ದಾಖಲೆ ಮಾಡಿದ್ದು ವಿದ್ಯಾಮಾತಾ ಅಕಾಡೆಮಿಯ ಅತ್ಯುತ್ತಮ ತರಬೇತಿಗೆ ಹಿಡಿದ ಕೈಗನ್ನಡಿ ಎನ್ನಬಹುದು. ಮಾತೃ ಸಂಸ್ಥೆ ವಿದ್ಯಾಮಾತಾ ಫೌಂಡೇಶನ್ ಮೂಲಕ ಆರು ವರ್ಷಗಳಿಂದ ರಾಜ್ಯದಲ್ಲಿ 6000 ಮಿಕ್ಕಿದ ವಿದ್ಯಾರ್ಥಿಗಳಿಗೆ, ಸುಮಾರು 225 ವಿವಿಧ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಟ್ಟಿದೆ. ಇಂಡಿಯನ್ ಆರ್ಮಿ, ಏರ್ಪೋರ್ಸ್, ನೇವಿ, ಅಗ್ನಿಪತ್, ಕೋಸ್ಟ್ ಗಾರ್ಡ್, ಬಿ ಎಸ್ ಎಫ್, ಎಸ್ ಎ ಎಸ್ಬಿ, ಸಿಆರ್ಫಿಎಫ್, ಐಟಿಬಿಪಿ, ಎಸ್ ಎಸ್ ಎಫ್, ಎಆರ್, ಎನ್ ಎಸ್ ಜಿ, ಎಸ್ ಪಿ ಜಿ,, ಎನ್ಡಿ ಆರ್ ಎಫ್, ಆರ್ ಪಿ ಎಫ್, ಐಬಿ ಹಾಗೂ ಎಸ್ ಎಫ್ ಎಫ್ ಮತ್ತು ಎಸ್ ಎಸ್ ಸಿ ಜಿಡಿ ಈ ಸಶಸ್ತ್ರ ಪಡೆ ಹುದ್ದೆಗಳಿಗೆ ದೈಹಿಕ ಸದೃಢತೆಯ ಮತ್ತು ಲಿಖಿತ ತರಬೇತಿ ಪ್ರತಿ ಭಾನುವಾರ ಅಕಾಡೆಮಿ ವತಿಯಿಂದ ನಡೆಯುತ್ತದೆ.
ಭಾರತೀಯ ರಕ್ಷಣಾ ಪಡೆಗಳ ವಿವಿಧ ಪ್ರವೇಶ ಪರೀಕ್ಷೆಗಳಿಗೂ ಪ್ರತಿ ಭಾನುವಾರ ತರಬೇತಿ ಲಭ್ಯವಿದ್ದು ಅರ್ಹತಾ ಮಾನದಂಡಗಳು : ಐಎನ್ಇ ಟಿ (ಭಾರತೀಯ ನೌಕಾಸೇನಾ ಪ್ರವೇಶ ಪರೀಕ್ಷೆ) ಹುದ್ದೆಗೆ ವಿದ್ಯಾರ್ಹತೆ ಬಿ ಎಸ್ ಸಿ ಪದವಿಯಿಂದ ಎಂ ಟೆಕ್. ಎಎಫ್ಸಿಎಟಿ (ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ) ಅರ್ಹತೆ ಯಾವುದೇ ವಿಷಯದಲ್ಲೂ ಪದವಿ. ಆರ್ಮಿ ಟಿ ಇ ಎಸ್ (ಭಾರತೀಯ ಸೇನಾ ತಾಂತ್ರಿಕ ಪ್ರವೇಶ) ಯಾವುದೇ ಪದವಿ. ಎನ್ ಡಿ ಎ (ರಾಷ್ಟೀಯ ರಕ್ಷಣಾ ಅಕಾಡೆಮಿ ಪ್ರವೇಶ ಪರೀಕ್ಷೆ) ಅರ್ಹತೆ ಯಾವುದೇ ವಿಷಯದಲ್ಲಿ ಪಿಯುಸಿ. ಸಿಡಿಎಸ್ (ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ) ಅರ್ಹತೆ ಯಾವುದೇ ವಿಷಯದಲ್ಲಿ ಪದವಿ.
ಇವೆಲ್ಲವೂ ಹೆಸರಾಂತ ವಿದ್ಯಮಾತಾ ಅಕಾಡೆಮಿಯ ಪುತ್ತೂರು, ಸುಳ್ಯ, ಕಾರ್ಕಳ ತರಬೇತಿ ಕೇಂದ್ರಗಳಲ್ಲಿ ಲಭ್ಯವಿರುವ ತರಬೇತಿಗಳು. ಸಂಪರ್ಕಿಸಲು: ಭಾಗ್ಯೇಶ್ ರೈ 9620468869