Author: admin
ಸಿಎ ಫೌಂಡೇಶನ್ ಪರೀಕ್ಷೆ : ರಾಷ್ಟ್ರೀಯ ಫಲಿತಾಂಶ- ಶೇ 29.99, ಆಳ್ವಾಸ್- ಶೇ 69 ಆಳ್ವಾಸ್ ಕಾಲೇಜಿನ ಉತ್ತಮ ಸಾಧನೆ
ವಿದ್ಯಾಗಿರಿ: ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಕಾಲೇಜು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. 2023-24 ಡಿಸೆಂಬರ್- ಜನವರಿಯಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಶೇಕಡ 29.99 ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ ಶೇಕಡ 69% ಫಲಿತಾಂಶ ಗಳಿಸಿದೆ. ಆಳ್ವಾಸ್ ಕಾಲೇಜಿನ 74 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಶಿವಪ್ರಸಾದ್, ಕನ್ಯಾ ಪ್ರಭು, ಆಕಾಶ್ ಜೆ. ಭಟ್, ಹಿತೇಶ್ ಎಂ.ಎಸ್, ವೈಷ್ಣವಿ ಯು.ಕೆ., ನಿಧಿ ಆರ್.ಕೆ., ಅನಿಷಾ ಮತ್ತು ತಿಲಕ್ ರಾಜ್ ಒಟ್ಟು 400ರಲ್ಲಿ 250ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಶ್ರೆಜಾ ಎಸ್., ಜ್ಞಾನೇಶ್ ಆರ್., ಐಶ್ವರ್ಯ, ಫಾಹಿಮ್, ಆದಿಶಾ, ಡಿಯೋನಾ ವಾಸ್, ಸಾಕ್ಷಿ ಹೆಗ್ಡೆ, ಸುಮೇಧ್, ರಕ್ಷಿತಾ ಜಿ, ಅಮೃತಾ, ಲಲಿತಾ, ಸನ್ನಿಧಿ ಎಸ್., ವೈಷ್ಣವಿ ಎ.ಎಂ, ಅನ್ವಿತಾ, ವೃಂದಾ ವಿ.ವಿ., ವರ್ಷಾ, ದೀಕ್ಷಾ ಎಸ್., ಸಂಜನಾ ಎಸ್.ವಿ., ಹರ್ಷಿತಾ ಎಸ್., ಸುಜ್ಞಾನ್, ಲೆನಿಷಾ, ಗಗನ್‍ದೀಪ್, ಸ್ವಾತಿ, ಸಾವಿತ್ರಿ ಹೆಗ್ಡೆ, ಇಸ್ಮಾಯಿಲ್ ಅರ್ಫಾನ್, ಅಪೂರ್ವ ಎಸ್.ಎಚ್, ಚೇತಲಿ, ಚಿರಂತ್…
ಮೀರಾರೋಡ್ ನಿಂದ ದಹಾಣೂ ತನಕದ ಬಂಟ ಸಮಾಜ ಬಾಂಧವರನ್ನು ಒಗ್ಗೂಡಿಸಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಕ್ರೀಡೆ ಮುಂತಾದ ಹತ್ತು ಹಲವಾರು ಸಮಾಜಮುಖಿ ಸೇವೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಹಲವಾರು ವರ್ಷಗಳ ಹಿಂದೆ ವಿರಾರ್ ಶಂಕರ್ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಮೀರಾ ದಹಾಣೂ ಬಂಟ್ಸ್ ಇದರ ವಾರ್ಷಿಕ ಕ್ರೀಡೋತ್ಸವ ಇದೇ ಬರುವ ಫೆಬ್ರವರಿ 10 ರ ಶನಿವಾರದಂದು ವಿಜೃಂಭಣೆಯಿಂದ ನಡೆಯಲಿದೆ. ವಿರಾರ್ ನ ಹಳೇ ವಿವಾ ಕಾಲೇಜಿನ ಮೈದಾನ, ವಿರಾರ್ ಇಲ್ಲಿ ನಡೆಯಲಿರುವ ಈ ಕ್ರೀಡೋತ್ಸವವು ಬೆಳಿಗ್ಗೆ ಗಂಟೆ 7 ರಿಂದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭಗೊಳ್ಳಲಿದೆ. ಹತ್ತು ಹಲವಾರು ಕ್ರೀಡೆಗಳು ಜರುಗಿ ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭವು ನಡೆಯಲಿದೆ. ವಿವಿಧ ವೈವಿಧ್ಯತೆಗಳಿಂದ ಕೂಡಿದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೀರಾ ದಹಾಣೂ ಬಂಟ್ಸ್ ಇದರ ಅಧ್ಯಕ್ಷರಾದ ವಸಾಯಿಯ ಪ್ರಕಾಶ್ ಎಂ ಹೆಗ್ಡೆಯವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ…
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ವಿಭಾಗ ‘ಬದುಕಿನ ಯಶಸ್ಸಿಗೆ ಬುದ್ಧಿ ಜೊತೆ ಭಾವನೆ ಬೆರೆತಿರಲಿ’
ಮೂಡುಬಿದಿರೆ: ‘ಉದ್ಯೋಗ ಪಡೆಯಲು ಬುದ್ಧಿಮತ್ತೆಯ ಪ್ರಮಾಣ (ಐಕ್ಯು) ಮುಖ್ಯವಾದರೆ, ಯಶಸ್ವಿಯಾಗಲು ಭಾವನಾತ್ಮಕ ಪ್ರಮಾಣ ಬಹುಮುಖ್ಯ(ಇಕ್ಯೂ)’ ಎಂದು ಸೇಂಟ್ ಅಲೋಶಿಯಸ್ ಕಾಲೇಜಿನ ಕುಲಸಚಿವ ಡಾ.ಆಲ್ವಿನ್ ವಿ. ಡೇಸಾ ಹೇಳಿದರು. ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಬುಧವಾರ 2023-25ನೇ ಸಾಲಿನ ಎಂಬಿಎ ತಂಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿಮ್ಮ ಕೌಶಲ ವೃದ್ಧಿಸಲು ಬಹುಭಾಷೆಗಳನ್ನು ಕಲಿಯಿರಿ ಎಂದ ಅವರು, ವೃತ್ತಿಯಲ್ಲಿ ಯಶಸ್ಸು ಸಾಧಿಸುವ ಮಾರ್ಗಗಳ ಕುರಿತು ತಿಳಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿನಿ, ಥಾಮ್ಸನ್ ರಾಯಿಟರ್ಸ್ (ಪರೋಕ್ಷ ತೆರಿಗೆ) ಪ್ರಬಂಧಕಿ, ರೂಪಶ್ರೀ ಹೆಗ್ಡೆ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕೃತಕ ಬುದ್ಧಿಮತ್ತೆ(ಎಐ) ಎಂದಿಗೂ ಮನುಷ್ಯನ ಉದ್ಯೋಗವನ್ನು ನಿಭಾಯಿಸಲು ಸಾಧ್ಯವಿಲ್ಲ. ಅದು ಮಿತಿಮೀರಿದ ಹಾಗೂ ಪುನರಾವರ್ತಿತ ಕೆಲಸವನ್ನು ಕಡಿಮೆ ಮಾಡಬಹುದಷ್ಟೇ ಎಂದು ಅವರು ಅಭಿಪ್ರಾಯ ಪಟ್ಟರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಸಂಪೂರ್ಣ ಪರಿಶ್ರಮದ ಮೂಲಕ ಯಶಸ್ಸು…
ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಬೇಕು ಎಂಬ ಉದ್ದೇಶದಿಂದ ಅನೇಕ ಕೆಲಸ ಕಾರ್ಯಗಳನ್ನು ಹುಡುಕಾಟದಲ್ಲಿಯೇ ಸಮಯ ಕಳೆಯುತ್ತಾನೆ. ಆದರೂ ಯಾವುದೇ ಕೆಲಸವೂ ದೊರೆಯುವುದಿಲ್ಲ. ಕೊನೆಗೆ ಜೀವನದ ದಾರಿ ತಿಳಿಯಲಾರದೆ ತಾನು ನಂಬಿದ ಒಬ್ಬ ಗುರೂಜಿ ಬಳಿ ಬಂದು ತನ್ನ ಕಷ್ಟವನ್ನು ಹೇಳುತ್ತಾನೆ. ಆತನ ಕಷ್ಟಗಳನ್ನು ಆಲಿಸಿದ ಗುರೂಜಿ ಅವನಿಗೆ ಒಂದು ಹೂವಿನ ತೋಟಕ್ಕೆ ಹೋಗಿ ಒಂದು ಸುಂದರ ಪುಷ್ಪ ಕಿತ್ತುಕೊಂಡು ಬಾ, ಆದರೆ ಒಂದು ಷರತ್ತು. ಒಂದು ಪುಷ್ಪವನ್ನು ತಿರಸ್ಕರಿಸಿ ಮುಂದೆ ಸಾಗಿದರೆ ಅದನ್ನು ಮರಳಿ ಆಯ್ಕೆ ಮಾಡಕೂಡದು ಎಂಬ ಚಟುವಟಿಕೆ ನೀಡುತ್ತಾನೆ. ಗುರೂಜಿಯ ಮಾತಿನಂತೆ ವ್ಯಕ್ತಿ ತೋಟಕ್ಕೆ ಹೋಗುತ್ತಾನೆ. ಆಯ್ದುಕೊಳ್ಳಲು ತೋಟದ ತುಂಬಾ ಸೊಗಸಾದ ಪುಷ್ಪಗಳನ್ನು ನೋಡಿ ಹಿಗ್ಗಿದ. ಅನಂತರ ಪುಷ್ಪವನ್ನು ಆಯ್ದುಕೊಳ್ಳಲು ಹೋದಾಗ ಸ್ವಲ್ಪ ದೂರ ಸಾಗಿದಾಗ ಒಂದು ಸುಂದರ ಪುಷ್ಪದ ತುಂಬಾ ದುಂಬಿಗಳು ತುಂಬಿರುತ್ತವೆ. ಅದನ್ನು ತಿರಸ್ಕರಿಸಿ ಮುಂದೆ ಸಾಗಿದಾಗ ಮತ್ತೊಂದು ಪುಷ್ಪ ನೋಡಿದ. ದಳಗಳು ಉದುರಿದ ಹಾಗೆ ಕಾಣಿಸಿತು. ಮುಂಚೆ ನೋಡಿದ ಪುಷ್ಪಕ್ಕೆ ಹೋಲಿಸಿ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಮೂಡುಬಿದಿರೆಯ ಸಹಕಾರಿ ಸೇವಾ ಸಂಘ ಸಹಯೋಗದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾಮಂದಿರ ಬಳಿ ಫೆಬ್ರುವರಿ 10ರಂದು ಶನಿವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ಗಂಟೆಯ ವರೆಗೆ ಸ್ಥೂಲಕಾಯ ಮಾಹಿತಿ ಹಾಗೂ ಉಚಿತ ಆರೋಗ್ಯ ತಪಾಸಣ ಶಿಬಿರ ನಡೆಯಲಿದೆ. ತಜ್ಞ ವೈದ್ಯಕೀಯ ವೃತ್ತಿಪರರಿಂದ ಸಮಗ್ರ ಮೌಲ್ಯಮಾಪನ, ತಜ್ಞರೊಂದಿಗೆ ಸಮಾಲೋಚನೆ, ಸ್ಥೂಲಕಾಯ ಹಾಗೂ ಅದನ್ನು ತಡೆಗಟ್ಟುವ ಕ್ರಮಗಳ ತಿಳಿವಳಿಕೆ ಮತ್ತು ಪರಿಣಿತರೊಂದಿಗೆ ಸಂವಾದಾತ್ಮಕ ಪ್ರಶ್ನೋತ್ತರ ಶಿಬಿರ ಇದಾಗಿದೆ. ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಮೂಡುಬಿದಿರೆಯ ಸಹಕಾರಿ ಸೇವಾ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು (ಮೊ. 9742473545) ಸಂಪರ್ಕಿಸಬಹುದು.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂಹವನ ವಿಭಾಗದ Advertising and PR ಮುಕ್ತ ಆಯ್ಕೆಯ (ಓಪನ್ ಇಲೆಕ್ಟಿವ್) ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾರ್ಯದ ಭಾಗವಾಗಿ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಹಮ್ಮಿಕೊಂಡಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕಿ ಸುಚಿತಾ ಎಂ ತಿಳಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೂಡುಬಿದಿರೆಯ ಪುರಸಭೆಯ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಸ್ವರಾಜ್ಯ ಮೈದಾನದಲ್ಲಿ ಫೆಬ್ರವರಿ 09 ಸಂಜೆ 03:30ಕ್ಕೆ ಪುರಸಭಾ ಮುಖ್ಯಾಧಿಕಾರಿ ಇಂದು ಎಂ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುರಸಭೆಯ ಪರಿಸರ ಇಂಜಿನಿಯರ್ ಶಿಲ್ಪಾ ಎಸ್, ಹಿರಿಯ ಹೆಲ್ತ್ ಇನ್ಸ್ಪೆಕ್ಟರ್ ಶಶಿರೇಖಾ, ಕೌನ್ಸಿಲರ್‍ಗಳಾದ ರಾಜೇಶ್ ನಾಯ್ಕ್, ಶಕುಂತಲಾ ಹರೀಶ್ ದೇವಾಡಿಗ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಕುರಿಯನ್ ಭಾಗವಹಿಸಲಿದ್ದಾರೆ. ಬೀದಿ ನಾಟಕವನ್ನು ಆಳ್ವಾಸ್ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಸುಧೀಂದ್ರ ಶಾಂತಿ ನಿರ್ದೇಶಿಸಲಿದ್ದಾರೆ. ವಿದ್ಯಾರ್ಥಿಗಳ ತಂಡವು ನಗರದ ಮಾರ್ಕೆಟ್ ರೋಡ್…
ಕರ್ನಾಟಕ ರಾಜ್ಯದಲ್ಲಿ ಭೂ ಸುಧಾರಣೆ ಕಾನೂನಿನ ಅಡಿಯಲ್ಲಿ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಜಾರಿಗೆ ಬಂದಾಗ ಅಪಾರ ಸಂಖ್ಯೆಯಲ್ಲಿ ತಮ್ಮ ತಮ್ಮ ಭೂಮಿಯನ್ನು ಕಳೆದುಕೊಂಡವರು ಬಂಟ ಸಮಾಜದವರು. ಇದು ವಸ್ತು ಸ್ಥಿತಿಯೂ ಹೌದು. ಆದರೆ, ನಂತರದ ದಿನಗಳಲ್ಲಿ ವಿಜಯಾ ಬ್ಯಾಂಕ್ ಮತ್ತು ಹೋಟೆಲು ಉದ್ಯಮದ ಮೂಲಕ ಬಂಟ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೇ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಯನ್ನು ಕಂಡಿದೆ. ಇಂದು ಬಂಟರು ಬಹುದೊಡ್ಡ ಮಟ್ಟದಲ್ಲಿ ಎಲ್ಲಾ ಕ್ಷೇತ್ರದಲ್ಲಿ ದೇಶ ವಿದೇಶದ ನೆಲದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಸಾಧನೆಯ, ಶಿಖರವನ್ನೇರಿ ಮೆರೆದವರಿದ್ದಾರೆ. ಬಂಟ ಸಮಾಜದ ಗುರುತರವಾದ ಸಾಧನೆಯನ್ನು ಕಂಡಾಗ ಅಭಿಮಾನವಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಜಯಕರ ಶೆಟ್ಟಿ ಎಂ. ತಿಳಿಸಿದರು. ದೇಶ ವಿದೇಶದಲ್ಲಿ ಅದೆಷ್ಟೋ ವಿಶ್ವವಿದ್ಯಾಲಯಗಳಿವೆ. ಆದರೆ, ನಮ್ಮ ದೇಶದ ವಿಶ್ವವಿದ್ಯಾಲಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿವೆ ಎನ್ನುವಂತದ್ದು ನಮಗೆ ಹೆಮ್ಮೆ. ದೇಶದ ಪ್ರಗತಿಯ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಕೊಡುಗೆ ಅಪಾರ ಎನ್ನುತ್ತಾ, ವಿವಿಧ ವಿಶ್ವವಿದ್ಯಾಲಯಗಳ ಜೊತೆಗೆ ಬೆಂಗಳೂರು…
ವಿದ್ಯಾಗಿರಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಸಹಯೋಗದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ದ ಯಕ್ಷರೂಪಕ ಸ್ಪರ್ಧೆಗಳಲ್ಲಿ ಮುಲ್ಲಕಾಡು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ (ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆ) ತಂಡ ಹಾಗೂ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (ಪ್ರೊ.ಎಂ.ಎ.ಹೆಗಡೆ ವೇದಿಕೆ) ತಂಡಗಳು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡವು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಡೆದ ಯಕ್ಷರೂಪಕ ಸ್ಪರ್ಧೆಯಲ್ಲಿ ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಯ ರಾಕೇಶ್ ರೈ ಅಡ್ಕ ನೇತೃತ್ವದ ತಂಡವು ದಶಾವತಾರ ಆಖ್ಯಾನಕ್ಕೆ ಪ್ರಥಮ ತಂಡ ಪ್ರಶಸ್ತಿ ಪಡೆಯಿತು. ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ(ಗುರುಪುರ)ಯ ದೀವಿತ್ ಎಸ್. ಕೆ. ಪೆರಾಡಿ ನೇತೃತ್ವದ ತಂಡವು ಶ್ರೀ ರಾಮಾಯಣ ದರ್ಶನಂ ಆಖ್ಯಾನಕ್ಕೆ ದ್ವಿತೀಯ ಹಾಗೂ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ (ಹರೇಕಳ)ಯ ಅಶ್ವತ್ ಮಂಜನಾಡಿ ನೇತೃತ್ವದ ತಂಡವು ಕ್ಷೀರಾಬ್ಧಿ ಮಥನ ಆಖ್ಯಾನಕ್ಕೆ ತೃತೀಯ ತಂಡ ಪ್ರಶಸ್ತಿ…
ನಿರಂತರ ಅಭ್ಯಾಸ, ಪ್ರಾಮಾಣಿಕತೆ, ಆತ್ಮವಿಶ್ವಾಸದ ಜತೆಗೆ ಕೌಶಲಾಭಿವೃದ್ಧಿಯಿಂದ ಸುಭದ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ಕೌಶಲಾಭಿವೃದ್ಧಿ, ಉದ್ಯೋಗಾವಕಾಶ, ಉಚಿತ ಕಂಪ್ಯೂಟರ್ ತರಬೇತಿಯ ಸದಾವಕಾಶ ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಿರಿ ಎಂದು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಕರೆ ನೀಡಿದರು. ಕುಂತಳನಗರದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ ನ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ ಪ್ರಾಯೋಜಕತ್ವದಲ್ಲಿ ನಡೆದ 14ನೇ ಬ್ಯಾಚ್ ನ ಉಚಿತ ಕಂಪ್ಯೂಟರ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಪಡುಬಿದ್ರಿ ಬಂಟರ ಸಂಘ ಮತ್ತು ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಆತ್ಮಸ್ಥೈರ್ಯದೊಂದಿಗೆ ನಿಖರ ಗುರಿಯೊಂದಿಗೆ ಭವಿಷ್ಯವನ್ನು ಸುಭದ್ರಗೊಳಿಸಿರಿ ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ 13 ನೇ…
ವಿದ್ಯಾಗಿರಿ: ‘ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ನಾವು ನಮ್ಮನ್ನುಅಳವಡಿಸಿಕೊಳ್ಳಬೇಕು’ಎಂದುಯೆನಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಗುರುರಾಜ ಎಚ್. ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ ಬುಧವಾರ ಡಾ.ವಿಎಸ್ ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ 2020-2021 ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಂಪನ್ನಮ್ ಸಮಾರಂಭದಲ್ಲಿ ಅವರು ಮಾತನಾಡಿದರು. ಎನ್‍ಎಬಿಎಚ್, ಎನ್‍ಎಎಸಿ ನಂತಹ ಮಾನ್ಯತೆ ಪಡೆಯುವುದು ಬಹುಮುಖ್ಯ. ವೈದ್ಯಕೀಯ ಆಕಾಂಕ್ಷಿಗಳು ಅಂತಹ ಮಾನ್ಯತೆ ಪಡೆದ ಸಂಸ್ಥೆಯನ್ನು ಆಯ್ಕೆ ಮಾಡುತ್ತಾರೆ ಎಂದರು. ಇಂದು ಹೆಚ್ಚಿನ ರೋಗಿಗಳು ಗೂಗಲ್ ಮತ್ತು ಇತರ ಸಾಮಾಜಿಕ ಜಾಲತಣವನ್ನು ಬಳಸಿ ವೈದ್ಯರನ್ನು ಆಯ್ಕೆ ಮಾಡುತ್ತಾರೆ. ಆದ್ದರಿಂದ ನೀವು ಅಂತಹದರಲ್ಲಿ ಸಕ್ರಿಯರಾಗಿರಬೇಕು ಎಂದರು. ನಾವು ಮಾನಸಿಕ ಚಿಕಿತ್ಸಕರು, ಶ್ರವಣಶಾಸ್ತ್ರಜ್ಞರು, ಸ್ಪೀಚ್ ಚಿಕಿತ್ಸಕರು, ಮನೋವೈದ್ಯರಂತಹ ಸಮಕಾಲೀನ ಜನರೊಂದಿಗೆ ಸಂಪರ್ಕ ಹೊಂದಬೇಕು, ನಾವು ಸಾಮಾನ್ಯವಾಗಿ ಅಂತಹ ಚಿಕಿತ್ಸೆಯೊಂದಿಗೆ ವ್ಯವಹರಿಸುತ್ತೇವೆ. ನಾವು ಯಾವುದೇ ರೀತಿಯ ಚಿಕಿತ್ಸೆಯನ್ನು ಅಳವಡಿಸಿಕೊಂಡರೂ ಉತ್ತಮ ಫಲಿತಾಂಶ ನೀಡಲು ಅವರ ಸಹಭಾಗಿತ್ವದ ಅಗತ್ಯ ಇದೆ ಎಂದರು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಷ್ಟಪಟ್ಟು ಕೆಲಸ…