ಬೆಂಗಳೂರಿನ ಉದ್ಯಮಿ, ಚಲನಚಿತ್ರ ನಿರ್ಮಾಪಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕುಂಬ್ರ ರಘುನಾಥ ರೈ (71 ವರ್ಷ)ರವರು ಹೃದಯಾಘಾತದಿಂದ ಆಗಸ್ಟ್ 26 ರಂದು ನಿಧನರಾದರು. ಬಾಳಿಲ ಗ್ರಾಮದ ದೋಳ್ತೋಡಿ ದಿ. ಸುಬ್ಬಯ್ಯ ರೈಯವರ ಪುತ್ರ ಕುಂಬ್ರ ರಘುನಾಥ ರೈ ಅವರು ‘ಕಂಚಿಲ್ದ ಬಾಲೆ’, ‘ಮಾರಿ ಬಲೆ’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

ಕುಂಬ್ರ ರಘುನಾಥ ರೈ ಅವರ ನಿಧನಕ್ಕೆ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಸಮಾಜಸೇವಕ ಅಗರಿ ನವೀನ್ ಭಂಡಾರಿ, ಬೆಂಗಳೂರು ಬಂಟರ ಸಂಘದ ಮಹಿಳಾ ಉಪಾಧ್ಯಕ್ಷೆ ಕಾಂತಿ ಶೆಟ್ಟಿಯವರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಸಹೋದರರನ್ನು ಅಗಲಿದ್ದಾರೆ.














































































































