ಪಡುಬಿದ್ರಿ ಬಂಟರ ಸಂಘ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಆಗಸ್ಟ್ 25 ರಂದು ಭಾನುವಾರ ಒಂದು ದಿನದ ಯುವಕರಿಗೆ ಮತ್ತು ಮಹಿಳೆಯರಿಗೆ ಒಂದು ದಿನದ “ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮ” ನಡೆಯಲಿದೆ. ಈ ಕಾರ್ಯಕ್ರಮ ಪಡುಬಿದ್ರಿ ಬಂಟರ ಸಂಘದ ಸಭಾಭವನದಲ್ಲಿ ನಡೆಯಲ್ಲಿದ್ದು, ಇದರ ಉದ್ಘಾಟನೆಯನ್ನು ಎಂ.ಆರ್.ಜಿ ಗ್ರೂಪ್ ನ ಛೇರ್ಮನ್ ಡಾ| ಕೆ. ಪ್ರಕಾಶ್ ಶೆಟ್ಟಿಯವರು ಮಾಡಲಿದ್ದು, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ಧಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ ಗ್ರಾಮೀಣ ಬಂಟರ ಸಂಘ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಎರ್ಮಾಳ್ ಶಶಿಧರ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ರವೀಂದ್ರನಾಥ್ ಜಿ ಹೆಗ್ಡೆ, ಸುರೇಶ್ ಶೆಟ್ಟಿ, ಸಾಂತೂರು ಭಾಸ್ಕರ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ ಇವರು ಭಾಗವಹಿಸಲ್ಲಿದ್ದಾರೆ. ಉದ್ಘಾಟನಾ ಸಮಾರಂಭ ಮುಗಿದ ಬಳಿಕ ಯಶಸ್ವಿ ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿಯವರು ಭಾಗವಹಿಸುವ ಅಭ್ಯರ್ಥಿಗಳಿಗೆ Motivational Speech ಮಾಡುವ ಜತೆಗೆ ತನ್ನ ಕಷ್ಟದ ದಿನಗಳು, ತನ್ನ ಉದ್ದಿಮೆ ಮಾಡುವ ಸಂದರ್ಭದಲ್ಲಿ ಬಂದಿರುವ ವಿವಿಧ ಸವಾಲುಗಳು, ಅವುಗಳನ್ನು ಎದುರಿಸಿ ಮುಂದೆ ಯಶಸ್ವಿ ಉದ್ಯಮಿಯಾಗಿ ಸಾಗಿ ಬಂದ ದಾರಿಯ ಬಗ್ಗೆ ಯುವಕರಿಗೆ ತಿಳಿಸಿ ಅವರು ಮುಂದಿನ ದಿನದಲ್ಲಿ ಸ್ವ- ಉದ್ಯೋಗ ಮಾಡಲು ಪ್ರೇರಣೆ ಕೊಡಲಿದ್ದಾರೆ.
ಪ್ರೊ. ದಿವ್ಯಾರಾಣಿ ಪ್ರದೀಪ್ ರವರು ಮಹಿಳಾ ಸಬಲೀಕರಣ ಮತ್ತು ಮಹಿಳೆಯರು ಯಾವ ತರಹದ ಉದ್ಯಮ ಮಾಡುವ ಮೂಲಕ ಬೆಳೆಯಬಹುದು ಎಂದು ತಿಳಿಸಲಿದ್ದಾರೆ. ಯುವ ಉದ್ಯಮಿ ಮೈತ್ರಿ ಮಲ್ಲಿ ಇವರು ತನ್ನ ಉದ್ಯಮವನ್ನು ಹೇಗೆ ಬೆಳೆಸುತ್ತಾ ಯಶಸ್ವಿ ಉದ್ಯಮಿಯಾಗಲು ಪ್ರಯತ್ನ ಪಡುವ ಬಗ್ಗೆ ಯುವಕರಿಗೆ Motivate ಮಾಡಲಿದ್ದಾರೆ. ನಂತರ ಡಾ. ಸಿ.ಕೆ ಮಂಜುನಾಥ್, ಡಾ. ಶುಭ, ಮಾಹೇ, ಪ್ರವೀಣ್ ಶೆಟ್ಟಿ, ಎಂ.ಐ.ಟಿ, ಡಾ. ಸುಧೀರ್ ರಾಜ್ ಇವರುಗಳು ಲೀಡರ್ ಶಿಪ್, ಕಮ್ಯುನಿಕೇಷನ್ ಸ್ಕಿಲ್, ಇಂಟರ್ವ್ಯೂ ತಯಾರಿ, ಬ್ಯಾಂಕ್ ಗಳಿಂದ ಉದ್ಯಮ ಮಾಡಲು ಸಿಗುವ ಸಹಾಯ ಮುಂತಾದ ಅನೇಕ ವಿಷಯಗಳ ಬಗ್ಗೆ ಟ್ರೈನಿಂಗ್ ನೀಡಲಿದ್ದಾರೆ. ಭಾಗವಹಿಸಿದ ಅಭ್ಯರ್ಥಿಗಳಿಗೆ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಸರ್ಟಿಫಿಕೇಟ್ ನೀಡಲಾಗುವುದು.
ಪತ್ರಿಕಾ ಗೋಷ್ಠಿಯಲ್ಲಿ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಇವರು ಸ್ವಾಗತಿಸಿ ಯುವಕರಿಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಅಗತ್ಯವಾದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. ಉಡುಪಿ ಗ್ರಾಮೀಣ ಬಂಟರ ಸಂಘ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ ಶೆಟ್ಟಿಯವರು ಕಾರ್ಯಕ್ರಮದ ವಿವರಣೆ ನೀಡಿದರು. ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯದರ್ಶಿ ವಿಜಿತ್ ಶೆಟ್ಟಿ ಮತ್ತು ಪಡುಬಿದ್ರಿ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.