ಪ್ರಪಂಚವನ್ನು ನಡೆಸುವ ನಿಯಮಗಳ ಹಾಗೆ ಅಧ್ಯಾತ್ಮದಲ್ಲೂ ಧರ್ಮ ತತ್ವಗಳಿವೆ. ಸನಾತನ ಧರ್ಮದ ಪ್ರಕಾರ ಆಧ್ಯಾತ್ಮಿಕ ಎಂದರೆ ಆತ್ಮಕ್ಕೆ ಆಧ್ಯತೆಯನ್ನು ನೀಡುವ ಜೊತೆಯಲ್ಲಿ ಪ್ರೀತಿಯನ್ನು ಕೊಡುತ್ತದೆ. ಶರೀರದ ಪಂಚೇದ್ರಿಯಾ ಮೂಲಕ ಷಡ್ವೈರಿಗಳನ್ನು ಹೊಡೆದೋಡಿಸಿ ಸನ್ಮಾರ್ಗದ ಮೂಲಕ ಸತ್ಕರ್ಮಗಳನ್ನೂ ಮಾಡುವುದರಿಂದ ಆತ್ಮ ಶುದ್ದಿಕರಣವಾಗುತ್ತದೆ. ಕರ್ಮ ಸಿದ್ದಾಂತದ ಪ್ರಕಾರ ನಾವು ಮಾಡುವ ಯಾವುದೇ ಕಾರ್ಯವಿರಲಿ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಹೊರತು ನಾವು ಎಣಿಸಿದಂತೆ ಸಿಗಲು ಸಾದ್ಯವಿಲ್ಲ. ಧರ್ಮದ ನೆಲೆಯಲ್ಲಿ ವಿವೇಕವನ್ನು ಬಳಸಿ ಮಾಡಿದ ಕರ್ಮಕ್ಕೆ ಪೂರ್ಣತೆ ಬರುವುದು ದೈವೀ ಕೃಪೆಯಿಂದ ಮಾತ್ರ. ಧರ್ಮ ಮಾರ್ಗ, ಕರ್ಮ ಮಾರ್ಗ, ಜ್ಞಾನ ಮಾರ್ಗ, ಭಕ್ತಿ ಮಾರ್ಗದಿಂದ ದೇವರನ್ನು ಒಲಿಸಬಹುದು ಎಂಬುವುದೇ ಶ್ರೀನಿವಾಸ ಕಲ್ಯಾಣೋತ್ಸವ ಮಾಡುವ ಚಿಂತನೆಯ ನಮ್ಮ ಈ ಆರಾಧನೆಯ ಮೂಲ ಉದ್ದೇಶ. ನಿರ್ಮಲ ಮನಸ್ಸಿನಿಂದ, ಶ್ರದ್ದೆ ಭಕ್ತಿಯಿಂದ ದೇವರನ್ನು ಅರಾದಿಸಿದರೆ ನಮ್ಮ ಸಕಲ ಇಷ್ಟಾರ್ಥ ಸಿದ್ದಿಗಳು ಫಲಿಸಬಹುದು ಎಂದು ಆಧ್ಯಾತ್ಮಿಕ ಚಿಂತಕ, ಧಾರ್ಮಿಕ ಪ್ರವಚನಕಾರ ಮುಲುಂಡ್ ಬಂಟ್ಸ್ ನ ಮಾಜಿ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ ನುಡಿದರು.
ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಸಮಾರಂಭವು ಆಗಸ್ಟ್ 24 ರಂದು ಪುಣೆ ಬಂಟರ ಸಂಘದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಧಾರ್ಮಿಕ ಸಮಾರಂಭದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಡಾ. ಸತ್ಯ ಪ್ರಕಾಶ್ ಶೆಟ್ಟಿಯವರು ಮಾತನಾಡಿ, ಅಂತರಂಗ, ಬಾಹ್ಯರಂಗ ಶುದ್ದಿಗೆ ವೃತ, ಉಪವಾಸ, ದೇವರ ಸ್ಮರಣೆ, ಪ್ರಾರ್ಥನೆಯಿಂದ ಸಾದ್ಯ. ಹಾಗೆಯೇ ಶಾರೀರಿಕ ಆರೋಗ್ಯ, ಮಾನಸಿಕ ಅರೋಗ್ಯ, ಸಾಮಾಜಿಕ ಆರೋಗ್ಯ ಮತ್ತು ಧರ್ಮ ಮಾರ್ಗವಿದ್ದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಬಹುದು. ಭಕ್ತಿಗೆ ಇರುವ ಶಕ್ತಿ ಬೇರೆ ಯಾವುದಕ್ಕೂಇಲ್ಲ. ಅದರಲ್ಲೂ ದೇವರನ್ನು ಭಕ್ತಿಯಿಂದ ಭಜನೆಯ ಮೂಲಕ ಸ್ತುತಿಸಿದರೆ ಒಲಿಯುತ್ತಾರೆ. ವೆಂಕಟರಮಣ ದೇವರ ಜೊತೆಯಲ್ಲಿ ದೇವಿ ಅಂಶ ಭೂದೇವಿ, ಶ್ರೀದೇವಿಯರ ಶ್ರೀನಿವಾಸ ಕಲ್ಯಾಣೋತ್ಸವ ಮಾಡಿದರೆ ಸಕಲರಲ್ಲೂ ಧರ್ಮ ಜಾಗೃತಿ ಮೂಡಿ ನಮ್ಮ ಹಿಂದೂ ಸಮಾಜದಲ್ಲಿ ಬ್ರಾತೃತ್ವ ಬೆಳೆಯಲು ಅನುಕೂಲಕರವಾಗುತ್ತದೆ ಎಂದು ತಿಳಿಸುತ್ತಾ ಸಂಪೂರ್ಣ ತಿರುಪತಿ ಚಿತ್ರಣವನ್ನು ಮತ್ತು ಕಲ್ಯಾಣೋತ್ಸವ ಬಗ್ಗೆ ಧಾರ್ಮಿಕ ಚಿಂತನೆಯ ಪ್ರವಚನ ನೀಡಿದರು. ಸಾಧನೆಯ ಮೂಲಕವೇ ಅತ್ಯಂತ ಯಶಸ್ವಿ ಅಧ್ಯಕ್ಷನೆಂದು ಹೆಸರು ಪಡೆದ ಸಂತೋಷ್ ಶೆಟ್ಟಿ ಮತ್ತು ಅವರ ಎಲ್ಲಾ ಸದಸ್ಯರ ಸೇವಾ ಕಾರ್ಯ ಪುಣೆ ಬಂಟರಿಗೆ ಲಭಿಸಿದೆ ಎಂದರು.
ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಲ್ ಹೆಗ್ಡೆಯವರ ಗೌರವಾಧ್ಯಕ್ಷತೆಯಲ್ಲಿ ಸಂಘದ ಹಾಗೂ ಮಹೋತ್ಸವದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟುರವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಗೌರವ ಅತಿಥಿಗಳಾದ ಪುಣೆ ಬಂಟರ ಸಂಘದ ಟ್ರಸ್ಟಿ, ಶಬರಿ ಇಂಡಸ್ಟ್ರೀಯಲ್ ಹಾಸ್ಪಿಟಾಲಿಟಿ ಸರ್ವಿಸಸ್ ನ ಸಿ.ಎಂ.ಡಿ ಕೆ.ಕೆ ಶೆಟ್ಟಿ, ಬಂಟರ ಸಂಘದ ಟ್ರಸ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರ್, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕೇಂದ್ರ ರಾಜ್ಯ ಸಭಾ ಸದಸ್ಯೆ ಮೇಧಾ ಕುಲಕರ್ಣಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ಸಂಘದ ಉಪಾಧ್ಯಕ್ಷರುಗಳಾದ ವೈ ಚಂದ್ರಹಾಸ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಪ್ರ. ಕಾರ್ಯದರ್ಶಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೇರ್ಡೆ ಬೀಡು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ಕಾರ್ಯಾಧ್ಯಕ್ಷೆ ಯಶೋದ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಕಾರ್ಯಾಧ್ಯಕ್ಷೆ ಪ್ರೇಮ ಅರ್ ಶೆಟ್ಟಿ, ಪೂರ್ವ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುನಿಲ್ ಶೆಟ್ಟಿ, ಕಾರ್ಯದರ್ಶಿ ಶಾಲಿನಿ ಶೆಟ್ಟಿಯವರು ಉಪಸ್ಥಿತರಿದ್ದರು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅತಿಥಿ ಗಣ್ಯರು ದೀಪ ಬೆಳಗಿಸಿ ಕಲ್ಪವೃಕ್ಷ ಹೂ ಅರಳಿಸಿ ಚಾಲನೆ ನೀಡಿದರು. ವಿಜಯ ಶೆಟ್ಟಿ ಮೂಡುಬೆಳ್ಳೆ ದೇವರ ಸ್ತುತಿ ಹಾಡುವ ಮೂಲಕ ಪ್ರಾರ್ಥನೆಗೈದರು.
ಸಂತೋಷ್ ಶೆಟ್ಟಿಯವರು ಸ್ವಾಗತಿಸಿ ಸುವರ್ಣ ಮಹೋತ್ಸವ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಗಣ್ಯರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ನಿಟ್ಟೆ ಕಲ್ಯಾಣೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಭಾ ಸದಸ್ಯೆ ಮೇಧಾ ಕುಲಕರ್ಣಿಯವರನ್ನು ಸತ್ಕರಿಸಲಾಯಿತು. ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಲ್ ಹೆಗ್ಡೆ, ಗೌರವಾಧ್ಯಕ್ಷೆ ಜಯಂತಿ ಜೆ ಶೆಟ್ಟಿ, ಕಾರ್ಯಾಧ್ಯಕ್ಷೆ ದೇವಿಕಾ ಶೆಟ್ಟಿ ಮತ್ತು ಹಿರಿಯರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಪುಣೆಯ ಧಾರ್ಮಿಕ ಸೇವಾ ಸಂಸ್ಥೆಗಳು ಹಾಗೂ ಸಂಸ್ಥೆಗಳ ಪ್ರಮುಖರು, ಧಾರ್ಮಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಗಣ್ಯರಾದ ಪುಣೆಯ ಹೆಸರಾಂತ ಪುರೋಹಿತರುಗಳಾದ ಹರೀಶ್ ಐತಾಳ್, ಓಂಕಾರ್ ಭಟ್, ರಾಘವೇಂದ್ರ ಭಟ್ ಪಿಂಪ್ರಿ, ಹರೀಶ್ ಭಟ್ ಮತ್ತು ರಾಘವೇಂದ್ರ ಭಟ್, ಬೆಂಗಳೂರು ರಾಮಾನುಜ ಮಠದ ಮೋಹನ್ ಕೃಷ್ಣ ಭಟ್, ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ಪುಣೆ ಬಂಟರ ಸಂಘದ ಭಜನಾ ಮಂಡಳಿಯ ಪ್ರಮುಖರಾದ ಶ್ರೀಮತಿ ಯಶೋದಾ ಶೆಟ್ಟಿ ಮತ್ತು ತಂಡ, ಪುಣೆ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ ಶೆಟ್ಟಿ, ಅಮೃತಾನಂದಮಯಿ ಟ್ರಸ್ಟ್ ಪುಣೆಯ ಪ್ರಮುಖರಾದ ಉಮಾ ಡಿ ಶೆಟ್ಟಿ, ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಪಾಂಗಾಳ, 71 ಬಾರಿ ಶಬರಿಮಲೆ ಯಾತ್ರೆಗೈದ ಪ್ರಭಾಕರ್ ಗುರುಸ್ವಾಮಿ, ಪಿಂಪ್ರಿ ಅಯ್ಯಪ್ಪ ಸೇವಾ ಮಂಡಲದ ಅಧ್ಯಕ್ಷ ಶ್ರೀಧರ್ ಶೆಟ್ಟಿಯವರನ್ನು ದಂಪತಿ ಸಮೇತರಾಗಿ ಶಾಲು, ಪಲಪುಷ್ಪ, ಭಗವದ್ಗೀತೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅತಿಥಿ ಅಭ್ಯಾಗತರನ್ನು ಶಾಲು ಫಲ ಪುಷ್ಪ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು ಹಾಗೂ ಕಲ್ಯಾಣೋತ್ಸವದಲ್ಲಿ ಉಪಸ್ಥಿತರಿದ್ದ ವಿವಿಧ ಕ್ಷೇತ್ರದ ಗಣ್ಯರನ್ನು, ಪುಣೆಯ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಅತಿಥಿ ಗಣ್ಯರು ಸಾಂದರ್ಭಿಕವಾಗಿ ಮಾತನಾಡಿದರು. ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ದಕ್ಷಿಣ ಉತ್ತರ ಮತ್ತು ಪೂರ್ವ ಪ್ರಾದೇಶಿಕ ಸಮಿತಿಗಳು ಹಾಗೂ ಸಮಾಜ ಬಾಂಧವರು ಶ್ರೀನಿವಾಸ ಕಲ್ಯಾಣೋತ್ಸವದ ಯಶಸ್ವಿಗೆ ಸಹಕರಿಸಿದರು. ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿ ಮತ್ತು ತಾರಾನಾಥ್ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿ, ಪ್ರ ಕಾರ್ಯದರ್ಶಿ ಅಜಿತ್ ಹೆಗ್ಡೆ ಧನ್ಯವಾದ ಸಲ್ಲಿಸಿದರು.
ಚಿತ್ರ, ವರದಿ : ಹರೀಶ್ ಮೂಡುಬಿದಿರೆ