ದೇಶಪ್ರೇಮ, ಧೈರ್ಯ, ಸಾಹಸ, ಕರ್ತವ್ಯ ನಿಷ್ಠೆಗೆ ಪಡುಕೂಡೂರು ಬೀಡು ಎಂ. ಡಿ ಅಧಿಕಾರಿ ಸಾಕ್ಷಿ. ಅವರು ದೇಹಕ್ಕೆ ಬೆಲೆ ಕೊಡದೇ ಜನಕ್ಕೆ ಬೆಲೆ ಕೊಟ್ಟು ದೊಡ್ಡವರಾದರು. ಒಕ್ಕಲಿನ ಸರ್ವರಿಗೂ ಭೂಮಿ ಬಿಟ್ಟುಕೊಟ್ಟು ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು. ಪಡುಕುಡೂರು ತ್ಯಾಗದ ಭೂಮಿ. ಅದೇ ಭೂಮಿಯ ಜನತೆಗೆ ಬಡವರು ಗೇಣಿದಾರರಿಗೆ ಭೂಮಿ ಕೊಟ್ಟು ಬದುಕು ಕೊಟ್ಟವರು. ಅವರು ಮರೆಯಲಾರದ ಅದ್ಭುತ ಶಕ್ತಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದರು. ಅವರು ಹೆಬ್ರಿ ತಾಲೂಕಿನ ಪಡುಕುಡೂರಿನಲ್ಲಿ ಸ್ವಾತಂತ್ರ್ಯೋತ್ಸವದಂದು ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಅಧಿಕಾರಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ ಅಧಿಕಾರಿಯವರ ಬಗೆಗೆ ಇರುವ ಅಭಿಮಾನಕ್ಕೆ ಪಡುಕುಡೂರು ಸಾಕ್ಷಿಯಾಗಿದೆ. ಪುತ್ಥಳಿ ಲೋಕಾರ್ಪಣೆ ಮಾಡುವ ಅವಕಾಶ ನನಗೆ ದೊರೆತಿರುವುದು ನನ್ನ ಭಾಗ್ಯ. ಎಂ.ಡಿ ಅಧಿಕಾರಿ ದಂಪತಿಗಳ ಪ್ರತಿಮೆ ಒಟ್ಟಿಗೆ ಪ್ರತಿಷ್ಠೆ ಆಗಬೇಕು ಎಂಬುದು ನನ್ನ ಆಶಯ. ನಾನು ಈ ಎತ್ತರಕ್ಕೆ ಏರಲು ಕಾರಣರಾದವರಲ್ಲಿ ಎಂ. ಡಿ ಅಧಿಕಾರಿಯವರು ಕೂಡ ಒಬ್ಬರು ಎಂದು ಅಧಿಕಾರಿಯವರ ಜೊತೆಗಿನ ಒಡನಾಟವನ್ನು ಸ್ಮರಿಸಿದರು.
ಪ್ರತಿಮೆ ಪ್ರತಿಷ್ಠಾಪನೆಯ ರೂವಾರಿ ಪಡಕುಪರ್ಕಳ ಶಂಕರ ಶೆಟ್ಟಿಯವರು ಮಾತನಾಡಿ, ಎಂ.ಡಿ. ಅಧಿಕಾರಿ ಅವರ ಪ್ರತಿಮೆ ಸ್ಥಾಪನೆ ನನ್ನ ಬಾಲ್ಯದ ಕನಸು. ಸರ್ವ ಸಹಕಾರದಲ್ಲಿ ಆ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಪಡುಕುಡೂರು ಪಟೇಲರ ಮನೆ ಜಗದೀಶ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಭ್ರಮದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಎಂ.ಡಿ. ಅಧಿಕಾರಿ ಸುಪುತ್ರಿ ನಿವೃತ್ತ ಉಪನ್ಯಾಸಕಿ ಅಭಯಲಕ್ಷ್ಮಿ ಮಾತನಾಡಿ, ತನ್ನನ್ನು ದೇಶಕ್ಕೆ ಸಮರ್ಪಿಸಿದ ನಮ್ಮ ತಂದೆಯವರ ಪುತ್ಥಳಿ ಸ್ಥಾಪನೆಯನ್ನು ಮಾಡಿದ ದೇಶಭಕ್ತರಾದ ಪಡುಪರ್ಕಳ ಶಂಕರ ಶೆಟ್ಟಿಯವರ ಸೇವೆ ಅದ್ಬುತ. ಪುಣ್ಯದ ಕಾರ್ಯ, ನಮ್ಮ ಕುಟುಂಬದ ಭಾಗ್ಯ, ನಮ್ಮ ಕುಟುಂಬ ಸದಾಕಾಲವೂ ಋಣಿಯಾಗಿದೆ. ವೀರಪ್ಪ ಮೊಯ್ಲಿಯವರ ಆಶಯದಂತೆ ನಮ್ಮ ಅಮ್ಮ ಸ್ವಾತಂತ್ರ್ಯ ಹೋರಾಟಗಾರರಾದ ಕಮಲಾವತಿ ಅಧಿಕಾರಿಯವರ ಮೂರ್ತಿಯನ್ನು ಒಟ್ಟಿಗೆ ಸ್ಥಾಪನೆ ಮಾಡುವುದಾದರೇ ಅದರ ಹೊಣೆಯನ್ನು ನಾನೇ ಹೊರುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಮೆ ಪ್ರತಿಷ್ಠಾಪನೆಯ ರೂವಾರಿ ಪಡುಪರ್ಕಳ ಶಂಕರಶೆಟ್ಟಿ ದಂಪತಿಯನ್ನು ಎಂ.ಡಿ. ಅಧಿಕಾರಿ ಕುಟುಂಬಸ್ಥರು ಗೌರವಿಸಿದರು. ಮಾಜಿ ಯೋಧರು, ಪಡುಕುಡೂರು ಪರಿಸರದ ಶೈಕ್ಷಣಿಕ ಸಾಧಕರು ಹಾಗೂ ದಾನಿಗಳಿಗೆ ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ವಕೀಲರಾದ ಕಾರ್ಕಳದ ಎಂ.ಕೆ. ವಿಜಯಕುಮಾರ್, ಡಾ. ಎಂ.ಎಸ್.ರಾವ್ ಮುದ್ರಾಡಿ, ಡಾ. ಜಯರಾಮ ಹೆಗ್ಡೆ ಪಡುಕುಡೂರು, ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಅಮೀನ್, ಪಡುಕುಡೂರು ದೇವಸ್ಥಾನದ ಆಡಳಿತ ಮೋಕ್ತೇಸರ ದೊಡ್ಡಮನೆ ಪ್ರಶಾಂತ ಶೆಟ್ಟಿ, ಪಡುಕುಡೂರಿನ ಗಣ್ಯರಾದ ಮೆಲ್ಬೇಟ್ಟು ಕೃಷ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಚಿಕ್ಕಮಾರಬೆಟ್ಟು, ಅರುಣ್ ಶೆಟ್ಟಿ ಮತ್ತಾವು, ಜಯಕರ ಶೆಟ್ಟಿ ಕೊಡಂಜ, ವರಂಗ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಆಚಾರ್, ಮುನಿಯಾಲು ಲಯನ್ಸ್ ಕ್ಲಬ್ ನ ಗೋಪಿನಾಥ್ ಭಟ್, ಪಡುಕುಡೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಮುಖ್ಯ ಶಿಕ್ಷಕ ಹರೀಶ್ ಪೂಜಾರಿ, ಸಮಿತಿಯ ಗೌರವಾಧ್ಯಕ್ಷ ಸದಾಶಿವ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಪರ್ಕಳ, ಕೋಶಾಧಿಕಾರಿ ಅಶೋಕ ಎಂ. ಶೆಟ್ಟಿ, ಉಪಾಧ್ಯಕ್ಷ ಹೃದಯ ಕುಮಾರ್ ಶೆಟ್ಟಿ, ಎಂ.ಡಿ.ಅಧಿಕಾರಿ ಕುಟುಂಬಸ್ಥರು, ಸಮಿತಿಯ ಸರ್ವ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಪಡುಪರ್ಕಳ ಶಂಕರ ಶೆಟ್ಟಿ ಸ್ವಾಗತಿಸಿ, ಶಂಕರ ಶೆಟ್ಟಿ ಪೂಜಾ ಪ್ರಾಥಮಿಕವಾಗಿ ಮಾತನಾಡಿದರು. ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಪಡುಕುಡೂರು ರಂಜಿತಾ ನಿರೂಪಿಸಿದರು. ಜನಾರ್ಧನ್ ಆಚಾರ್ಯ ಹೊಸವಕ್ಲು ವಂದಿಸಿದರು.