ಬಂಟರ ಸಂಘ ಪಾಣಾಜೆ ವತಿಯಿಂದ ‘ಬಂಟೆರೆನ ಆಟಿಡೊಂಜಿ ದಿನ’ ಕಾರ್ಯಕ್ರಮ ಆಗಸ್ಟ್ 11ರಂದು ಸೂರಂಬೈಲು ತರವಾಡು ಮನೆಯಲ್ಲಿ ನಡೆಯಿತು. ಹಿರಿಯರಾದ ನಾರಾಯಣ ರೈ ಸೂರಂಬೈಲು, ವಿಠಲ ರೈ ಕಡಮ್ಮಾಜೆ, ಜಗನ್ಮೋಹನ ರೈ ಕೆದಂಬಾಡಿ, ಕಿಟ್ಟಣ್ಣ ಶೆಟ್ಟಿ ಕೋಟೆ, ಸೀತಾರಾಮ ರೈ ಪಡ್ಯಂಬೆಟ್ಟು ಹಾಗೂ ಜತ್ತಪ್ಪ ರೈ ಕೊಂಡೆಪ್ಪಾಡಿಯವರು ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು.
ಆ ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಮಹನೀಯರಿಗೆ ವಿವಿಧ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೂರಂಬೈಲು ತರವಾಡು ಟ್ರಸ್ಟ್ ಅಧ್ಯಕ್ಷ, ಹಿರಿಯರಾದ ಆನಂದ ರೈ ಸೂರಂಬೈಲು ಆಟಿದ ವಿಶೇಷದ ಬಗ್ಗೆ ಮಾತನಾಡಿದರು. ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಣಾಜಿ ಬಂಟರ ಸಂಘದ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲುರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಾಧ್ಯಕ್ಷ ಲಕ್ಷ್ಮಿನಾರಾಯಣ ರೈ ಕೆದಂಬಾಡಿ ಸ್ವಾಗತಿಸಿ, ಕೋಶಾಧಿಕಾರಿ ಸುಧಾಕರ ರೈ ಗಿಳಿಯಾಲು ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಮಾನಾಥ ರೈ ಪಡ್ಯಂಬೆಟ್ಟು ವರದಿ ವಾಚಿಸಿದರು.
ಪ್ರತಿಭಾನ್ವಿತ ಪ್ರಶಸ್ತಿಯನ್ನು ಧ್ವನಿ ರೈ ಕೋಟೆ, ತನ್ವಿ ಶೆಟ್ಟಿ ಮತ್ತು ಕೃತಿ ರೈಯವರಿಗೆ ನೀಡಲಾಯಿತು. ಕ್ರೀಡಾ ಪ್ರಶಸ್ತಿಯನ್ನು ರಿತ್ವಿ ರೈ, ದೇಶ ಸೇವಾ ಪ್ರಶಸ್ತಿಯನ್ನು ಮಾಜಿ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು, ಸಮಾಜ ಸೇವಾ ಪ್ರಶಸ್ತಿಯನ್ನು ಯತಿರಾಜ್ ಶೆಟ್ಟಿ, ಯತೀಶ್ ರೈ ಮತ್ತು ಸಂಜೀವ ರೈಯವರಿಗೆ, ಧಾರ್ಮಿಕ ಪ್ರಶಸ್ತಿಯನ್ನು ಸೀತಾರಾಮ ರೈ ಕೊಂದಲ್ಕಾನ ಮತ್ತು ಕಲಾ ಪ್ರಶಸ್ತಿಯನ್ನು ದೀಪಕ್ ರೈ ಪಾಣಾಜೆ ಅವರಿಗೆ ನೀಡಿ ಗೌರವಿಸಲಾಯಿತು.