ಮಂಗಳೂರು ಮತ್ತು ಮುಂಬಯಿ ಮಧ್ಯೆ ಪ್ರಯಾಣಿಸುವ ಹೆಚ್ಚಿನ ಪ್ರಯಾಣಿಕರ ಆಯ್ಕೆ ಮತ್ಸ್ಯಗಂಧ ಅಥವಾ ಮ್ಯಾಂಗಲೋರ್ ಎಕ್ಸ್ಪ್ರೆಸ್ ರೈಲುಗಳು. ಈ ರೈಲುಗಳಲ್ಲಿ ಪ್ರಯಾಣಿಕರ ಒಡವೆ, ಹಣ ಹಾಗೂ ಮೊಬೈಲ್ ಫೋನ್ ಕಳವಾಗುವ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಇದು ರೈಲ್ವೆ ಪೊಲೀಸರ ಮೂಗಿನ ಅಡಿಯಲ್ಲೇ ನಡೆಯುತ್ತಿದೆ ಅನ್ನೋದು ಸಂಶಯಾತೀತ. ಈಗ ನಾನು ಹೇಳ ಹೊರಟಿರುವುದು ಅದಕ್ಕಿಂತಲೂ ದೊಡ್ಡ ದರೋಡೆಯ ಬಗ್ಗೆ.

ನಾನು ಮೊನ್ನೆ ದಿನಾಂಕ ಮೂಲ್ಕಿಯಿಂದ ಮಂಗಳೂರಿಗೆ 3 ಟೈಯರ್ ಎಸಿಯಲ್ಲಿ ಪ್ರಯಾಣಿಸುತ್ತಿದ್ದೆ. ರಾತ್ರಿ ಸುಮಾರು 8:30ರ ಹೊತ್ತಿಗೆ ಮಡ್ಗಾವ್ ನಲ್ಲಿ ಊಟ ಕೊಡುವವರು ಬಂದು ಊಟ ಬೇಕೆ ಅಂತ ಕೇಳುತ್ತಿದ್ದರು. ನಾನು ರೂಪಾಯಿ 95 ಕೊಟ್ಟು ಒಂದು ಎಗ್ ಬಿರಿಯಾನಿ ಖರೀದಿಸಿದೆ. ಎಗ್ ಬಿರಿಯಾನಿ ಕೊಟ್ಟವ ನನ್ನಿಂದ ಹಣ ಪಡೆದು ಅಲ್ಲಿಂದ ಮಾಯವಾದ. ಎಗ್ ಬಿರಿಯಾನಿಯ ಡಬ್ಬಿ ಓಪನ್ ಮಾಡಿದಾಗ ಅದರಲ್ಲಿ ಎರಡು ಬೇಯಿಸಿದ ಮೊಟ್ಟೆ ಹಾಗೂ ಸುಮಾರು 50 ಗ್ರಾಮಿನಷ್ಟು ಹಳದಿ ಬಣ್ಣದ ಅನ್ನ ಇತ್ತು. ಅದರಲ್ಲಿ ಯಾವುದೇ ರೀತಿಯ ಉಪ್ಪು ಖಾರ ಮಸಾಲೆ ಇರಲಿಲ್ಲ. ನಾನು ಅದನ್ನು ಅಲ್ಲೇ ಇದ್ದ ಟೀಸಿಗೆ ತೋರಿಸಿ ನನಗೆ ಕಂಪ್ಲೆಂಟ್ ಕೊಡಲಿಕ್ಕಿದೆ ಅಂತ ಹೇಳಿದೆ. ಆಗ ಟಿಸಿ ಅವರ ಮ್ಯಾನೇಜರ್ ಗೆ ಫೋನ್ ಮಾಡಿ ಕ್ಯಾಟ್ರಿಂಗ್ ಮಾಡುವವರ ಮ್ಯಾನೇಜರನ್ನು ಕರೆದ. ನಾನು ಅವನನ್ನು ಕರೆದಾಗ ನಾನು ಜನರಲ್ ಡಬ್ಬದಲ್ಲಿದ್ದೇನೆ, ಮುಂದಿನ ಸ್ಟೇಷನ್ನಲ್ಲಿ ಟ್ರೈನ್ ನಿಂತಾಗ ಬರುತ್ತೇನೆ ಅಂತ ಹೇಳಿದ. ನಾನು ಅವನಿಗೆ ಕೊಟ್ಟ ಬಿರಿಯಾನಿಯ ದುಃಸ್ಥಿತಿಯ ಬಗ್ಗೆ ವಿವರಿಸಿದೆ. ಮುಂದಿನ ಸ್ಟೇಷನ್ನಲ್ಲಿ ಬೇರೊಂದು ಬಿರಿಯಾನಿ ಪ್ಯಾಕೆಟ್ ಹಿಡಿದು ಆತ ನನ್ನಲ್ಲಿ ಬಂದಾಗ ಅವನಿಗೆ ನಾನು ಅರ್ಧ ತಿಂದು ಮುಗಿಸಿದ ಬಿರಿಯಾನಿ ತೋರಿಸಿದೆ. ನೀನು ಇಷ್ಟು ಬೇಗ ಬೇರೆ ಬಿರಿಯಾನಿ ಹೇಗೆ ತಂದಿ? ಅಂದರೆ ನಿಮ್ಮಲ್ಲಿ ಎರಡು ಬಗೆಯ ಬಿರಿಯಾನಿ ಮಾಡುತ್ತಾರೆಯೇ ಅಂತ ಕೇಳಿದಾಗ ಅವನಲ್ಲಿ ಉತ್ತರ ಇರಲಿಲ್ಲ. ರೈಲಿನಲ್ಲಿ ಚಾ ತಿಂಡಿ ಊಟ ಮಾರಾಟ ಮಾಡುವ ಯಾವುದೇ ನೌಕರರ ಬಳಿ ಐಡೆಂಟಿಟಿ ಕಾರ್ಡ್ ಕೂಡ ಇರಲಿಲ್ಲ. ನಾನು ಅವನ ಬಿರಿಯಾನಿಯನ್ನು ಹಾಗೆ ಹಿಂದೆ ಕೊಟ್ಟು ಮುಂಬಯಿಗೆ ಬಂದ ತಕ್ಷಣ ರೈಲ್ವೆ ಬೋರ್ಡ್ ಗೆ, ರೈಲ್ವೆ ಮಂತ್ರಿಗೆ, ಕೊಂಕಣ್ ರೈಲ್ವೆಗೆ ನನ್ನ ದೂರನ್ನು ಸಲ್ಲಿಸಿದೆ.
ಇವತ್ತು ಕೊಂಕಣ್ ರೈಲ್ವೆಯವರು ನನಗೆ ಫೋನ್ ಮಾಡಿ ಏನು ಸಮಸ್ಯೆ ಇತ್ತು ಅಂತ ವಿಚಾರಿಸಿದ್ದರು. ನಾನು ಅವರಿಗೆ ಎಲ್ಲಾ ವಿಷಯಗಳನ್ನು ತಿಳಿಸಿದ್ದೇನೆ. ಅವರು “ಮುಂದಿನ ಕ್ರಮ” ಕೈಗೊಳ್ಳುವುದಾಗಿ ವಾಗ್ದಾನ ಮಾಡಿರುತ್ತಾರೆ. ಆದರೆ ನುಂಗಣ್ಣಗಳೇ ತುಂಬಿರುವ ರೈಲ್ವೆ ಇಲಾಖೆಯಿಂದ ನನಗೆ ನ್ಯಾಯ ದೊರಕುವ ಯಾವ ಭರವಸೆಯೂ ಇಲ್ಲ. ಮತ್ತೆ ಅಕ್ಕಪಕ್ಕದವರನ್ನು ನೋಡಿದಾಗ ನನ್ನಂತೆ ಊಟದ ಬಗ್ಗೆ ಗೊಣಗುತ್ತಿರುವ ಅನೇಕರನ್ನು ನೋಡಿದೆ. ಆದರೆ ಯಾರೂ ಮಾತನಾಡಲು ಸಿದ್ದರಿಲ್ಲ. ದುಡ್ಡು ಕೊಟ್ಟ ಕರ್ಮಕ್ಕೆ ತಿಂದು ಮುಗಿಸುತ್ತಿದ್ದರು. ಕೊಂಕಣ್ ರೈಲ್ವೆಯಲ್ಲಿ ಪ್ರಯಾಣಿಸುವ ಎಲ್ಲಾ ತುಳು ಕನ್ನಡಿಗರಲ್ಲಿ ನನ್ನದೊಂದು ವಿನಂತಿ, ದಯವಿಟ್ಟು ಯಾರೂ “Jolina Caterers” ಕಂಪನಿಯ ಆಹಾರ ಪದಾರ್ಥಗಳನ್ನು ಖರೀದಿಸಬೇಡಿ. ರಾತ್ರಿ ಊಟಕ್ಕೆ ನಿಮ್ಮದೇ ವ್ಯವಸ್ಥೆ ಮಾಡಿಕೊಂಡು ಹೋಗಿ. ಇದು ಎಂಜಲು ಬೆವರು ಮೂತ್ರ ಸೇರಿಸಿದ ಹಲಾಲ್ ಊಟವಾಗಿರಲೂ ಸಾಕು.
ದಾಮೋದರ ಶೆಟ್ಟಿ, ಇರುವೈಲು








































































































