Author: admin
ವಿಶ್ವವಿದ್ಯಾನಿಲಯ ಕಾಲೇಜುಡ್ ಅಪ್ಪೆ ಎನ್ನಪ್ಪೆ ತುಳು ನಾಟಕ ಪ್ರದರ್ಶನನ್ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜುದ ಪ್ರಾಂಶುಪಾಲರಾಯಿನ ಡಾ. ಲಕ್ಷ್ಮೀ ದೇವಿ. ಎಲ್ ತುಡರ್ ಪೊತ್ತದ್ ಉದಿಪನ ಮಲ್ದೆರ್. ತುಳು ಎಂ. ಎ ಸ್ನಾತ್ತಕೋತ್ತರ ಅಧ್ಯಯನ ವಿಭಾಗದ ಉಪಾನ್ಯಾಸಕಿ ಶ್ರೀಮತಿ ಮಣಿ. ಎಂ. ರೈ ಪ್ರಾರ್ಥನೆ ಮಂತೆರ್. ತುಳು ಎಂ. ಎ ಉಪನ್ಯಾಸಕಿ ಶ್ರೀಮತಿ ಸಂಧ್ಯಾ ಆಳ್ವ ಕಾರ್ಯಕ್ರಮನ್ ನಿರೂಪಣೆ ಮಂತ್ ದ್ ಸೊಲ್ಮೆಲ್ ಸಂದಿಸಯೆರ್. ಶ್ರೀ ಪ್ರಸಾದ್ ಅಂಚನ್ ಕಾರ್ಯಕ್ರಮಗ್ ಸಹಕಾರ ಕೊರ್ತೆರ್. ಸಭಾ ಕಾರ್ಯಕ್ರಮ ಆಯಿ ಬೊಕ್ಕ ಶ್ರೀ. ಗುರುರಾಜ ಮಾರ್ಪಳ್ಳಿ ನಿರ್ದೇಶನ ಮಂತಿನ ‘ಅಪ್ಪೆ ಎನ್ನಪ್ಪೆ’ ತುಳು ನಾಟಕ ಪ್ರದರ್ಶನ ಆಂಡ್. ಕಾರ್ಯಕ್ರಮಡ್ ಮಾಜಿ ಉಪಮೆಯರ್ ಬಶೀರ್ ಬೈಕಂಪಾಡಿ, ಡಾ. ಮಾಧವ ಎಂ, ಸುಕುಮಾರ್ ಮೋಹನ್, ಡಾ. ರಾಜೇಶ್ ಆಳ್ವ, ಡಾ. ಯತೀಶ್ ಕುಮಾರ್ ಪಾಲ್ ಪಡೆದ್ ಇತ್ತೆರ್.
ಬಂಟ್ಸ್ ಫ್ಯಾಮಿಲಿ ಯು.ಎ.ಇ ವತಿಯಿಂದ ಇತ್ತೀಚೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಭಕ್ತಿ ಸಡಗರದಿಂದ ಜರಗಿತು. ಯು.ಎ.ಇ.ಯ ಎಲ್ಲಾ ರಾಜ್ಯದ ಬಂಟ ಬಾಂಧವರು ಅಲ್ಲದೇ ಇತರ ಸಮಾಜದ ಸಾವಿರಾರು ಭಕ್ತರು ಪೂಜೆಗೆ ಆಗಮಿಸಿ ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾದರು. ದುಬಾಯಿಯ ಅಲ್ ಗುಸೈಸ್ ನ ಇಂಡಿಯನ್ ಅಕಾಡೆಮಿ ಸ್ಕೂಲ್ ನ ಸಭಾಂಗಣದಲ್ಲಿ ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನದವರೆಗೆ ಪುರೋಹಿತರಾದ ರಘು ಭಟ್ಟರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಪ್ರತಿನಿಧಿಯಾಗಿ ಧ್ರುವ ಶೆಟ್ಟಿ ಮತ್ತು ಶ್ರೀಮತಿ ದೀಕ್ಷಾ ಶೆಟ್ಟಿ ದಂಪತಿ ಹಾಗೂ ಪುರಂದರ ಶೆಟ್ಟಿ ಮತ್ತು ಶ್ರೀಮತಿ ಅಶ್ವಿನಿ ಶೆಟ್ಟಿ ದಂಪತಿಗಳು ಕುಳಿತುಕೊಂಡಿದ್ದರು. ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ದುಬೈ ವತಿಯಿಂದ ಭಕ್ತಿ ಭಜನೆ ಹಾಗೂ ಯು.ಎ.ಇ. ಬಂಟ್ಸ್ ಸದಸ್ಯ ಸದಸ್ಯೆಯರಿಂದ ನೃತ್ಯ ಭಜನೆ ಜರಗಿತು. ಯುಎಇಯ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಪೂಜೆಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಪೂಜೆಗೆ ಸಹಕಾರ ನೀಡಿದ ಶ್ರೀ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ, ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ದಿನಾಂಕ 28.10.2023ರಂದು “ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆ”ಯಲ್ಲಿ ನಡೆಯಲಿರುವ “ವಿಶ್ವ ಬಂಟರ ಕ್ರೀಡಾ ಕೂಟ” ಮತ್ತು ದಿನಾಂಕ 29.10.2023 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ “ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆ”ಯಲ್ಲಿ ನಡೆಯಲಿರುವ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮಗಳ ಕುರಿತ ಎಂಟನೇ ಪೂರ್ವಭಾವಿ ಸಭೆಯು ದಿನಾಂಕ 04/10/2023 ರಂದು ಬಂಟರ ಸಂಘ ಪುಣೆಯ ಸಭಾಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ಜರಗಿತು. ಸಭೆಯಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದ ಕರಪತ್ರವನ್ನು ಬಂಟರ ಸಂಘ ಪುಣೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟುರವರು ಅನಾವರಣಗೊಳಿಸಿದರು. ಸಭೆಯಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆಸಲಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು ಹಾಗೂ ವಿಶ್ವ ಬಂಟರ ಸಮ್ಮೇಳನದ…
ಬೆಳ್ತಂಗಡಿ ಬಂಟರ ಸಂಘದಿಂದ ವರ್ತಕ ಬಂಧು ಸಹಕಾರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮವು ಬೆಳ್ತಂಗಡಿ ಬಂಟರ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಕಾರ್ಯದರ್ಶಿ ಸಂಜೀವ ಶೆಟ್ಟಿ, ಉಪಾಧ್ಯಕ್ಷ ವಿಠ್ಠಲ್ ಶೆಟ್ಟಿ, ಕೋಶಾಧಿಕಾರಿ ಆನಂದ ಶೆಟ್ಟಿ, ಜೊತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಐಕಳ ಹರೀಶ್ ಶೆಟ್ಟಿಯವರು ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದು, ಆ ಮೂಲಕ ಬೇರೆಲ್ಲಾ ಜಾತಿ ಸಂಘಟನೆಗಳಿಗೆ ನಿಗಮ ಮಾಡಿ ಸ್ಥಾನಮಾನ ನೀಡುವುದಾದರೆ ಬಂಟ ಸಮಾಜವನ್ನು ಕಡೆಗಣಿಸುವ ಉದ್ದೇಶವಾದರೂ ಏನು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಟ ಸಮಾಜಕ್ಕೂ ನಿಗಮದ ಅಗತ್ಯತೆ ಇದ್ದು ಸಮಾಜಕ್ಕೆ ಮನ್ನಣೆ ನೀಡದಿದ್ದಲ್ಲಿ ಪೂರ ಬಂಟ ಸಮಾಜ ಒಂದಾಗಿ ಮುಂಬರುವ ಚುನಾವಣೆಯಲ್ಲಿ ಸಮಾಜದ ಶಕ್ತಿಯನ್ನು ತೋರಿಸಿ ಕೊಡುತ್ತೇವೆ ಎಂದು ಐಕಳ ಹರೀಶ್ ಶೆಟ್ಟಿಯವರು ನೀಡಿದ ಹೇಳಿಕೆಗೆ ಇಡೀ ಬಂಟ ಸಮಾಜ ಬದ್ಧವಾಗಿದೆ ಎಂದು ಹೇಳ ಬಯಸುತ್ತೇನೆ. ಸರಕಾರಿ ನೌಕರಿ, ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣದಲ್ಲಿ ಬಂಟ ಸಮಾಜ ಹಿಂದುಳಿಯಲು ಸರಕಾರದ ಈ ನೀತಿಯೇ ಕಾರಣವಾಗಿದೆ. ಬಂಟ ಸಮಾಜದಲ್ಲಿ ಉಳ್ಳವರು ಬಹಳಷ್ಟು ಜನರು ಇದ್ದಾರೆ, ಆದರೆ ಒಪ್ಪತ್ತಿನ ಊಟಕ್ಕೂ ಪರಿತಪಿಸುವ ಬಹಳಷ್ಟು ಜನ ಬಂಟ ಬಾಂಧವರೂ ಇದ್ದಾರೆ. ನಮ್ಮ ಸಮಾಜದಲ್ಲಿ ಶಾಸಕ ಸಂಸದರಾದವರು ತಮ್ಮ ಜಾತೀಯ ಸಂಘಟನೆಯನ್ನು ಬಲಪಡಿಸುವತ್ತ, ಸಮಾಜವನ್ನು…
ಕಾರ್ಕಳದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೂಡಬಿದಿರೆ ವಲಯದ ಯುವ ಬಂಟರು ಅತೀ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವುದರ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಾರ್ಕಳ ಯುವ ಬಂಟರ ಸಂಘದ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಮೂಡಬಿದಿರೆ ಯುವ ಬಂಟರ ಸಂಘವು ವಾಲಿಬಾಲ್ – ಪ್ರಥಮ, ತ್ರೋ ಬಾಲ್ – ಪ್ರಥಮ, ನೃತ್ಯ ಸ್ಪರ್ಧೆ – ತೃತೀಯ ಸ್ಥಾನವನ್ನು ಪಡೆದುಕೊಂಡು ಬಂಟ ಸಮಾಜದ ಪ್ರಶಂಸೆಗೆ ಪಾತ್ರವಾಯಿತು. ಯುವ ಬಂಟರ ಸಂಘದ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ಮನೋಜ್ ಕುಮಾರ್ ಶೆಟ್ಟಿ, ಅರುಣ್ ಶೆಟ್ಟಿ, ಪ್ರ ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಉಪಾಧ್ಯಕ್ಷರಾದ ರಮೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಶೃತಿ ಶೆಟ್ಟಿ, ಆದರ್ಶ್ ಶೆಟ್ಟಿ, ಸುಧೀರ್ ಶೆಟ್ಟಿ, ದೀಪಕ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಯುವಶಕ್ತಿ ನಿಜವಾದ ರಾಷ್ಟ್ರಶಕ್ತಿ ಎಂಬ ಘೋಷ ವಾಕ್ಯವನ್ನು ಆಗಾಗ ಉಲ್ಲೇಖಿಸುವ ನಮ್ಮ ನೆಚ್ಚಿನ ಪ್ರಧಾನಮಂತ್ರಿ ಮೋದೀಜಿಯವರ ಮಹಾದಿಚ್ಛೆಗೆ ಬಲ ತುಂಬುವ ಮಹಾನ್ ಕಾರ್ಯನಿರತ ರಾಕೇಶ್ ಅಜಿಲರ ಸಾಧನೆಯ ಕತೆ ನಿಜಕ್ಕೂ ರೋಚನೀಯ. ಅಜಿಲರು ಆರಿಸಿದ ಕ್ಷೇತ್ರ ಹಣ ಸಂಪಾದನೆಯದಲ್ಲ. ಆದರೆ ಅದೆಷ್ಟೋ ರಾಷ್ಟ್ರಪ್ರೇಮಿ ಯುವಕರಿಗೆ ಯೋಗ್ಯ ತರಬೇತಿ ನೀಡಿ NCC ಮತ್ತು ARMY ಗೆ ಆಯ್ಕೆಯಾಗಲು ಬೇಕಾಗುವ ಶಿಸ್ತು, ಆತ್ಮಸ್ಥೈರ್ಯ, ಕಷ್ಟ ಸಹಿಷ್ಣುತೆ, ದೇಹಬಲ ಹಾಗೂ ರಾಷ್ಟ್ರ ಪ್ರೇಮದ ತೇಜಸ್ಸು ತುಂಬುವ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ನೆನೆಸಿಕೊಂಡರೆ ಯಾರಿಗಾದರೂ ಅಭಿಮಾನ ಮೂಡದೇ ಇರದು. ರಾಕೇಶ್ ಅಜಿಲರು ಕವತ್ತಾರು ಬೈಲಗುತ್ತು ರಮೇಶ್ ಅಜಿಲ ಹಾಗೂ ಪಾಂಡ್ಯಾರು ಬರ್ಪಾಣಿ ಪ್ರಮೀಳಾ ಅಜಿಲ ದಂಪತಿಯರಿಗೆ ಹಿರಿಯ ಪುತ್ರನಾಗಿ ಜನಿಸಿದರು. ಹಾಸನದ ಕಡ್ಲೂರು ಎಂಬಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಮುಂದೆ STDP ಕಟೀಲು ಹಾಗೂ ಪೂರ್ಣ ಪ್ರಜ್ಞ ಅದಮಾರು ಇಲ್ಲಿ ಶಿಕ್ಷಣ ಮುಂದುವರಿಸಿದರು. ಪದವಿ ಪೂರ್ವ ತರಗತಿಯ ಹನ್ನೆರಡನೆ ತರಗತಿಯ ಇತಿಹಾಸ ವಿಷಯದಲ್ಲಿ ರಾಜ್ಯಕ್ಕೆ ಮೂರನೇ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ(ರಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿ ಬಳ್ಕುಂಜೆ ನಿವಾಸಿ ಗುಲಾಬಿಯವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದು ಅವರಿಗೆ ಮನೆ ನಿರ್ಮಾಣಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕನ್ನು ಗುಲಾಬಿಯವರಿಗೆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಉಪಸ್ಥಿತರಿದ್ದರು.
ಜೀವನ ಎಂಬ ದೋಣಿಗೆ ಸೂಕ್ತ ದಿಗ್ಸೂಚಿಯ ಅಗತ್ಯತೆ ಇದ್ದು, ಇತರರ ಸಲಹೆ ಸೂಚನೆ ಪಡೆದು ವಿದ್ಯಾರ್ಜನೆ ಗಳಿಸಿದರೆ ಯಶಸ್ಸು ಗಳಿಸಲು ಸಾಧ್ಯ ಎಂದು ಹೈದರಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷ ರತ್ನಾಕರ ರೈ ಅವರು ಹೇಳಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಿಕ್ಸೂಚಿ ಭಾಷಣ ಮಾಡಿದ ರಾಮಕೃಷ್ಣ ಪದವಿ ಕಾಲೇಜ್ ನ ಪ್ರಾಂಶುಪಾಲ ಪ್ರೊ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಷಯಗಳಲ್ಲೂ ಸಕ್ರಿಯರಾಗಿದ್ದರೆ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ ಎಂದರು. ಮುಖ್ಯ ಅತಿಥಿ ಒಡಿಯೂರು ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮಾತನಾಡಿ ವಿದ್ಯಾರ್ಥಿಗಳು ದೂರದರ್ಶಿತ್ವ ಹೊಂದಿ, ಸತತ ಪರಿಶ್ರಮ ಪಡೆಯಬೇಕು ಎಂದರು.…
ತುಳು ಚಿತ್ರರಂಗದ ಭರವಸೆಯ ಯುವನಟ, ಪಿಲಿ ತುಳು ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ, ಚಿತ್ರದ ಕಥೆಯನ್ನೂ ಬರೆದ ಭರತ್ ಭಂಡಾರಿ ನಟನೆಯ ಪಿಲಿ ತುಳು ಸಿನಿಮಾ ಮುಂಬಯಿಯಾದ್ಯಂತದ 9ನೇ ಪ್ರದರ್ಶನವು ಜೂನ್ 18 ರಂದು ಕನಕಿಯ ಮೂವಿಮೆಕ್ಸ್ ಥಿಯೇಟರ್ ನಲ್ಲಿ ತೆರೆ ಕಂಡಿತು. ಬಹು ಜನರ ಬೇಡಿಕೆಯಂತೆ ಏಕ ಕಾಲಕ್ಕೆ 2 ಪರದೆಯಲ್ಲಿ ಪ್ರದರ್ಶನ ಕಂಡ ಸಾಹಸ, ಪ್ರೇಮ, ಹಾಸ್ಯ, ಲವಲವಿಕೆಯಿಂದ ಕೂಡಿದ ಈ ಪಿಲಿ ಪ್ರದರ್ಶನದ ಶುಭಾರಂಭದ ನಿಮಿತ್ತ ನಡೆದ ಸರಳ ಸಮಾರಂಭಕ್ಕೆ ವಿಶೇಷ ಗಣ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಮಾತನಾಡುತ್ತಾ ನಾಯಕ ನಟ ಭರತ್ ಭಂಡಾರಿಯವರ ಇದು ಮೊದಲ ತುಳು ಸಿನೆಮಾ. ಯುವ ಹಾಗೂ ಪ್ರತಿಭಾವಂತನ ಈ ಸಾಹಸಕ್ಕೆ ಇನ್ನೂ ಹೆಚ್ಚಿನ ಜನಮನ್ನಣೆ ಪ್ರಾಪ್ತಿಯಾಗಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ವಿವಿಧ ಚಲನಚಿತ್ರಗಳು ತೆರೆ ಕಾಣಲಿ ಎಂದು ಶುಭ ಹಾರೈಸಿದರು. ಗಣ್ಯ ಅತಿಥಿಯಾಗಿ ಆಗಮಿಸಿದ ಐಕಳ ಹರೀಶ್ ಶೆಟ್ಟಿಯವರು ಚಿತ್ರರಂಗದಲ್ಲಿ…