Author: admin
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ, ಸಾಂಸ್ಕೃತಿಕ ಜ್ಞಾನ ಮತ್ತು ಕೌಶಲ್ಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರಿಯಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ಸಾವಿರಾರು ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಗಳು, ವಿದ್ಯಾರ್ಥಿಗಳು ಮತ್ತು ಘಟಕದ ನಾಯಕರು ಮತ್ತು ವಿದೇಶಗಳ ವಿದ್ಯಾರ್ಥಿಗಳು ಹಾಗೂ ನಾಗರೀಕರೂ ಕೂಡ ಭಾಗವಹಿಸಿದ್ದಾರೆ. ಡಿಸೆಂಬರ್ 21 ರಿಂದ 7 ದಿನಗಳವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶ ಮತ್ತು ರಾಜ್ಯದ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನೇಕ ಕಲಾವಿದರು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದರು. ಜವಾಬ್ದಾರಿಯುತ ನಾಗರಿಕರಾಗಿ ದೇಶದ ಸೇವೆ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೊಡುಗೆ ನೀಡಬಹುದು. ಕರ್ನಾಟಕ ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿವೆ.…
ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಎಂದರೆ ನಮಗೆ ನೆನಪಾಗೋದು ಅವರ ಸಾಹಿತ್ಯ, ಜನಪದ ಜ್ಞಾನ. ಸಾಹಿತಿಯಾಗಿ, ಅತ್ಯುತ್ತಮ ಸಂಘಟನಾ ಪಟುವಾಗಿ, ಸಮಾಜಸೇವಕರಾಗಿ ಅವರು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ. ತುಳು ಬರಹಗಾರರಾಗಿ ಅವರು ತುಳುನಾಡಿನ ಪರಂಪರೆ ಶ್ರೇಷ್ಠತೆಗಳನ್ನು ಎತ್ತಿ ಹಿಡಿಯುವ ಕಾಯಕವನ್ನು ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಅಂಕಣಕಾರರಾಗಿದ್ದರು, ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯೂ ಅವರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿ 1926ರ ಮಾರ್ಚ್ 19ರಂದು ಲಕ್ಶ್ಮೀನಾರಾಯಣ ಆಳ್ವರು ಜನಿಸಿದರು, `ಏರ್ಯ ಬೀಡು’ ಎಂಬ ಪ್ರತಿಷ್ಠಿತ ಮಾತೃ ಮೂಲ ಪದ್ಧತಿಯ, ದೈವಾರಾಧನೆಯ, ಕೃಷಿ ಪ್ರಧಾನ ಬಂಟ ಮನೆತನಕ್ಕೆ ಸೇರಿದವರು. ತಾಯಿ ಸೋಮಕ್ಕ ಮತ್ತು ತಂದೆ ಸುಬ್ಬಯ್ಯ ಆಳ್ವ. ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಬಂಟ್ವಾಳದಲ್ಲಿ. ಅವರು ಹೈಸ್ಕೂಲು ಓದಿದ್ದು ಕೆನರಾ ಹೈಸ್ಕೂಲು ಮಂಗಳೂರಿನಲ್ಲಿ. ಸ್ವಾತಂತ್ರ್ಯ ಹೋರಾಟಗಳು ತೀವ್ರವಾಗಿದ್ದ ಕಾಲದಲ್ಲಿ ಹುಟ್ಟಿದ್ದರಿಂದ ಸ್ವಾತಂತ್ರ್ಯಪೂರ್ವದ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. ಹೋರಾಟಗಾರರ ಚಿಂತನೆಗಳು ಮತ್ತು…
ಮುಲ್ಕಿ ತಾಲ್ಲೂಕಿನ ಕರ್ನಿರೆ ಗ್ರಾಮದ ಕಾರ್ಣಿಕದ ದೈವ ಕ್ಷೇತ್ರವಾಗಿರುವ ಶ್ರೀ ಜಾರಂದಾಯ ದೈವಕ್ಕೆ ಗ್ರಾಮಸ್ಥರ ಸೇವಾ ರೂಪದ ಬಂಗಾರದ ಮೊಗವನ್ನು ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ತಂದು ಶ್ರೀ ಜಾರಂದಾಯ ಸ್ಥಾನಕ್ಕೆ ಸಮರ್ಪಣೆ ಮಾಡಿದರು. ಕರ್ನಿರೆ ಧರ್ಮ ದೈವ ಜಾರಂದಾಯ ದೈವದ ಬಂಗಾರದ ಮುಗವನ್ನು ಗ್ರಾಮ ದೇವರು ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪೂಜೆ ಮಾಡಿ, ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗ್ರಾಮದ ಮುಖ್ಯಸ್ಥರಾದ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ ಗಂಗಾಧರ ಎನ್ ಅಮೀನ್ ಕರ್ನಿರೆ, ಹರೀಶ್ಚಂದ್ರ ಶೆಟ್ಟಿ ಕರ್ನಿರೆ, ವಾಸುದೇವ ಶೆಟ್ಟಿ ಕರ್ನಿರೆ ಮತ್ತು ಊರ ಹತ್ತು ಸಮಸ್ತರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ದೈವಸ್ಥಾನಕ್ಕೆ ಮುಗವನ್ನು ಅರ್ಪಿಸಲಾಯಿತು. ಜಾರಂದಾಯ ದೈವದ ಮುಗವನ್ನು ಬಂಗಾರದ ಮುಗವನ್ನಾಗಿ ಪರಿವರ್ತಿಸುವುದು ಊರಿನ ಪ್ರಮುಖರು ಹಾಗೂ ಊರಿನ ಸಮಸ್ತ ದೈವ ಭಕ್ತರ ಇಚ್ಛೆಯಾಗಿತ್ತು. ಇದುವರೆಗೆ ಮುಗಕ್ಕೆ ನಾಲಗೆ, ಕಿವಿ ಮತ್ತು ಸತ್ತಿಗೆಯನ್ನು ಬಂಗಾರದಿಂದ…
ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಭಾಸ್ಕರ ರೈ ಕುಕ್ಕುವಲ್ಲಿ ಅವರು ಸಂಯೋಜಿಸಿದ ‘ತುಳುನಾಡ ಆಟಿದ ಕೂಟ’ ಪಟ್ಟಾಂಗ ಕಾರ್ಯಕ್ರಮ ಇದೇ ಜುಲೈ 29 ರಂದು ಶನಿವಾರ ಬೆಳಿಗ್ಗೆ 9.30 ರಿಂದ ಪ್ರಸಾರಗೊಳ್ಳಲಿದೆ. ಇದರಲ್ಲಿ ತುಳುನಾಡಿನ ಆಟಿ ತಿಂಗಳ ವಿಶೇಷತೆ, ಆಟಿ ಮತ್ತು ಆಷಾಢಕ್ಕಿರುವ ವ್ಯತ್ಯಾಸ, ಆಟಿಯ ಆಚರಣೆಗಳು, ತಿಂಡಿ – ತಿನಿಸು, ಪಾಲೆ ಕಷಾಯ, ಆಟಿ ಕಳೆಂಜ, ಚೆನ್ನೆಮಣೆ ಮತ್ತಿತರ ಆಟಗಳ ಕುರಿತು ಸ್ವಾರಸ್ಯಕರ ಚರ್ಚೆ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂವಾದದಲ್ಲಿ ಕನ್ನಡ ಹಾಗೂ ತುಳು ಎರಡೂ ಭಾಷೆಗಳನ್ನು ಬಳಸಲಾಗಿದೆ. ಮಾತುಕತೆಯಲ್ಲಿ ಜಾನಪದ ತಜ್ಞ ಹಾಗೂ ಲೇಖಕ ಡಾ. ಗಣನಾಥ ಶೆಟ್ಟಿ ಎಕ್ಕಾರ್, ಲೇಖಕಿಯರಾದ ವಿಜಯಲಕ್ಷ್ಮೀ ಕಟೀಲ್, ಅಕ್ಷತಾ ರಾಜ್ ಪೆರ್ಲ ಹಾಗೂ ಜನಪದ ಗಾಯಕಿ ಅಕ್ಷತಾ ಕುಡ್ಲ ಭಾಗವಹಿಸಿದ್ದಾರೆ. ಮಾಧ್ಯಮ ಸಂಯೋಜಕ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂವಾದವನ್ನು ನಡೆಸಿಕೊಡುವರು. ಜುಲೈ 22 ರಂದು ಬೆಂಗಳೂರು ದೂರದರ್ಶನದ ಸ್ಟುಡಿಯೋದಲ್ಲಿ ಕಾರ್ಯಕ್ರಮದ ಚಿತ್ರೀಕರಣ ನಡೆದಿದೆ. ಹಿರಿಯ ಕಾರ್ಯಕ್ರಮ ನಿರ್ಮಾಪಕಿ…
ಬಂಟರ ಯಾನೆ ನಾಡವರ ಸಂಘ ಹಾಗೂ ಬೈಂದೂರು ತಾಲೂಕು ಯುವ ಬಂಟರ ವೇದಿಕೆ ಜಂಟಿ ಆಶ್ರಯದಲ್ಲಿ ಸೂರು ಇಲ್ಲದ ಕುಟುಂಬಕ್ಕೆ 2 ನೇ ಮನೆ ಹಸ್ತಾಂತರ ಕಾರ್ಯಕ್ರಮ ಹೇರೂರಿನಲ್ಲಿ ನಡೆಯಿತು. ಪ್ರಥಮ ದರ್ಜೆ ಗುತ್ತಿಗೆದಾರ ಟಿ. ಎನ್. ರಘುರಾಮ್ ಶೆಟ್ಟಿ ನೂತನ ಮನೆಯನ್ನು ಉದ್ಘಾಟಿಸಿದರು. ನಾಗೂರು ಶ್ರೇಷ್ಠಪಾನಿ ಕ್ಲಿನಿಕ್ ಡಾ. ಪ್ರವೀಣ್ ಶೆಟ್ಟಿ ಅವರು ನಾಮಫಲಕ ಅನಾವರಣಗೊಳಿಸಿದರು. ಬೈಂದೂರು ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷ ಜಿ. ಗೋಕುಲ್ ಶೆಟ್ಟಿ ಉಪ್ಪುಂದ ದೀಪ ಬೆಳಗಿಸಿದರು. ಬಂಟ ಸಮುದಾಯದ ಕಡು ಬಡತನದ ಹೇರೂರಿನ ಜ್ಯೋತಿ ಗಣೇಶ್ ಶೆಟ್ಟಿ ಅವರಿಗೆ ಬೈಂದೂರು ತಾಲೂಕು ಯುವ ಬಂಟರ ವೇದಿಕೆಯ ಗೌರವ ಸಲಹೆಗಾರ ಸಮರ್ ಶೆಟ್ಟಿ ನೂತನ ಮನೆಯ ಕೀ ಹಾಸ್ತಾಂತರಿಸಿದರು. ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎಚ್. ವಸಂತ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಕುದ್ರುಕೋಡು, ಯುವ ಬಂಟರ…
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಯಕ್ಷಧ್ರುವ ಪಟ್ಲ ಪೌಂಡೇಶನ್ ಯು.ಎ.ಇ. ಘಟಕ ಜಂಟಿ ಸಂಯೋಜನೆಯ ವಿಶ್ವ ಪಟ್ಲ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವ 2023 ಅಂಗವಾಗಿ ನಡೆಯಲಿರುವ “ದಶಾವತಾರ” ಯಕ್ಷಗಾನ ಪ್ರಸಂಗದ ಪ್ರವೇಶ ಪತ್ರ -ಅಮಂತ್ರಣಗಳ ಬಿಡುಗಡೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ದಿನಾಂಕ 11-06-2023 ರಂದು ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ(ಇಂಡಿಯನ್ ಸ್ಕೂಲ್ ಕರಮ- ವೂದ್ ಮೆಹತಾ ) ನಡೆಯಲಿರುವ ಬಹು ನಿರೀಕ್ಷಿತ ವಿಶ್ವ ಪಟ್ಲ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವದ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಕಾರ್ಯಕ್ರಮ ದಶಾವತಾರ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶ ಪತ್ರದ ಬಿಡುಗಡೆ ಸಮಾರಂಭ ಇತ್ತೀಚೆಗೆ ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ, ಪಟ್ಲ ಪೌಂಡೇಶನ್ ದುಬಾಯಿ ಘಟಕದ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಶ್ರೀಯುತರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾರ್ಯಕ್ರಮದಲ್ಲಿ ಪ್ರಮುಖ ಅಭ್ಯಾಗತರಾಗಿ ಭಾಗವಹಿಸಲಿರುವ, ಪಟ್ಲ ಟ್ರಸ್ಟ್ ನ ಗೌರವಾಧ್ಯಕ್ಷರಾದ ಸದಾಶಿವ ಶೆಟ್ಟಿ…
ಯಕ್ಷಗಾನ ಕಲೆಯನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ಬೆಳೆಸಿಕೊಂಡವರು ಹಲವರಿದ್ದಾರೆ. ಆದ್ಯಾತ್ಮ ಆದರೆ ಅವೆರಡನ್ನೂ ಬಿಟ್ಟು ಅಧ್ಯಾತ್ಮದ ಹಾದಿ ತುಳಿದವರು ವಿರಳ. ಅಂತಹ ವಿರಳಾತಿ ವಿರಳದಲ್ಲಿ ಸೊರ್ನಾಡು ವಿಶ್ವನಾಥ ಶೆಟ್ಟಿಯವರು ಪ್ರಮುಖರು. ಬಂಟ್ವಾಳ ತಾಲೂಕಿನ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಸ್ಥಾಪಕರಾಗಿ ವೈರಾಗ್ಯದ ಹಾದಿ ತುಳಿದ ಅವರು ವಿಶ್ವನಾಥ ಸ್ವಾಮಿಯಾಗಿ ಪ್ರಸಿದ್ದರಾಗಿದ್ದರು. ಕುಪ್ಪೆಪದವು ಸಮೀಪದ ಕೊಂಜಿಬೆಟ್ಟು ಗುತ್ತುಮನೆ ಬಿರ್ಮಣ್ಣ ಶೆಟ್ಟಿ ಮತ್ತು ಚೆನ್ನಮ್ಮ ದಂಪತಿಯ ಐದು ಮಕ್ಕಳಲ್ಲಿ ಒಬ್ಬರಾಗಿರುವ ವಿಶ್ವನಾಥ ಶೆಟ್ಟಿ ಅರಳ ಶಾಲೆಯಲ್ಲಿ ಒಂಭತ್ತನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದರು. ಅವರ ಹಿರಿಯಣ್ಣ ಮೂಲ್ಕಿಯ ಹೆಸರಾಂತ ವೈದ್ಯ ಮತ್ತು ಸಮಾಜ ಸೇವಕ ದಿ. ಡಾ. ಎಂ. ಬಾಬು ಶೆಟ್ಟಿ. ಅವರು ಲಯನ್ಸ್ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದವರು. ಎಳವೆಯಲ್ಲೇ ಅಧ್ಯಾತ್ಮದತ್ತ ಹೆಚ್ಚು ಒಲವಿದ್ದ ವಿಶ್ವನಾಥ ಶೆಟ್ಟರು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದರು. ಆರಂಭದಲ್ಲಿ ಎಂಕು ಭಾಗವತರಿಂದ ಚೆಂಡೆ ಮದ್ದಳ ಅಭ್ಯಸಿಸಿದ ಅವರು ಮೂಡಬಿದ್ರೆ ವಾಸು ಅವರಿಂದ ಯಕ್ಷಗಾನದ ಕುಣಿತ ಹಾಗೂ…
ಕಟೀಲು ಸಮೂಹ ಶಿಕ್ಷಣ ಸಂಸ್ಥೆಗಳ ನುಡಿಹಬ್ಬ ಭ್ರಮರ-ಇಂಚರ ಸಮಾರೋಪ ಡಾ| ಸುರೇಶ್ ರಾವ್ಗೆ `ಕಟೀಲು-ಸಾಧಕ ಹಿರಿಯ ವಿದ್ಯಾರ್ಥಿ ಪ್ರಶಸ್ತಿ’ ಪ್ರದಾನ
ಮುಂಬಯಿ (ಆರ್ಬಿಐ), ಡಿ.07: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಕಳೆದ (ಡಿ.02-04) ಆಯೋಜಿಸಲಾದ ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ ಸಮಾರಂಭ ಕಳೆದ ಭಾನುವಾರ ಸಂಜೆ ಕಟೀಲು ಪದವೀಪೂರ್ವ ಕಾಲೇಜ್ನ ಶ್ರೀವಿದ್ಯಾ ಸಭಾಭವನದಲ್ಲಿ ಜರುಗಿತು. ಡಾ| ಪಾದೆಕಲ್ಲು ವಿಷ್ಣು ಭಟ್ಟ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಸಂಜೀವನಿ ಟ್ರಸ್ಟ್ ಮುಂಬಯಿ ಇದರ ಕಾರ್ಯಾಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಇವರಿಗೆ `ಕಟೀಲು ವಿದ್ಯಾಲಯದ ಹೆಮ್ಮೆಯ ಸಾಧಕ ಹಿರಿಯ ವಿದ್ಯಾರ್ಥಿ ಪ್ರಶಸ್ತಿ’ ಪ್ರದಾನಿಸಿ ಗೌರವಿಸಲಾಯಿತು. ಸುರೇಶ್ ರಾವ್ ಅವರ ಜನನಿದಾತೆ ಕಾತ್ಯಾಯಿನಿ ಸಂಜೀವ ರಾವ್ ಅವರೊಂದಿಗೆ ಗೌರವಿಸಲಾಗಿದ್ದು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತ್ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ ಜಿಲ್ಲಾ ಮಾಜಿ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ಉದ್ಯಮಿಗಳಾದ ಬಜಪೆ ರಾಘವೇಂದ್ರ ಆಚಾರ್ಯ, ಗಿರಿಧರ ಶೆಟ್ಟಿ ಮಂಗಳೂರು, ನಮ್ಮ ಕುಡ್ಲ ಮುಖ್ಯಸ್ಥ ಲೀಲಾಕ್ಷ ಕರ್ಕೇರ, ಯುಗ ಪುರುಷ ಕಿನ್ನಿಗೋಳಿ ಇದರ ಮುಖ್ಯಸ್ಥ ಕೊಡೆತ್ತೂರುಗುತ್ತುಭುವನಾಭಿರಾಮ ಉಡುಪ, ಶ್ರೀ…
ಮುಂಬಯಿ (ಆರ್ಬಿಐ), ಡಿ.06: ಅಮೇರಿಕಾದ ಯುಎಸ್ಎ ಟೆನ್ನೆಸ್ಸೀ ಇಲ್ಲಿನ ನ್ಯಾಶ್ವಿಲ್ಲೆ ಇಲ್ಲಿ 2023ರ ಜುಲಾಯಿ 25-28ರ ತನಕ ಜರುಗುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಆರ್ಡಿಟಿ ) ಶೃಂಗಸಭೆಯ ಸಭಾಪತಿ (ಕನೆಕ್ಸಿಯಾನ್ ವಲಯದ ಭಾಷಣಕಾರ) ಆಗಿ ಮಿಲಿಯನ್ ಡಾಲರ್ ರೌಂಡ್ ಟೇಬಲ್ (ಎಂಆರ್ಡಿಟಿ ) ಸ್ಪೀಕರ್ ಆಗಿ ಬೃಹನ್ಮುಂಬಯಿಯಲ್ಲಿನ ಪ್ರತಿಷ್ಠಿತ ಆರ್ಥಿಕ ಮೇಧಾವಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಆರ್.ಕೆ ಶೆಟ್ಟಿ (ರಾಧಾಕೃಷ್ಣ ಕೃಷ್ಣ ಶೆಟ್ಟಿ) ನೇಮಕ ಗೊಂಡಿದ್ದಾರೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ ಆಫ್ ಇಂಡಿಯಾ) ಇದರ ಸರ್ವೋತ್ಕೃಷ್ಟ ಅಧಿಕಾರಿ ಆಗಿದ್ದು ಇತ್ತೀಚೆಗಷ್ಟೇ ಎಂಆರ್ಡಿಟಿ) ಇದರ ಕ್ವಾರ್ಟರ್ ಸೆಂಚುರಿ ಕ್ಲಬ್ ಸದಸ್ಯರಾಗಿ ಆಯ್ಕೆ ಆಗಿರುವ ಡಾ| ಆರ್.ಕೆ ಶೆಟ್ಟಿ ಇತ್ತೀಚೆಗಷ್ಟೇ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣಾ ಮಂಗಳೂರು ವಿವಿ ಗೌರವಕ್ಕೂ ಪಾತ್ರರಾಗಿದ್ದರು. ಮುಂಬಯಿಯಲ್ಲಿನ ಇಸ್ಸಾರ್ ಫೈನಾನ್ಶಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್ ಕೆ ಶೆಟ್ಟಿ ಎಂಡ್ ಕಂಪೆನಿ ಇದರ ಆಡಳಿತ ನಿರ್ದೇಶಕರಾಗಿರುವ ಆರ್ಕೆಎಸ್ ಸದ್ಯ…
ರಂಗಚಾವಡಿ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯ ವರ್ಷದ ಹಬ್ಬ-ರಂಗಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ, ಚಲನ ಚಿತ್ರ ನಿರ್ಮಾಪಕ, ಡಾ ಸಂಜೀವ ದಂಡೆಕೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ರಂಗ ಚಾವಡಿ ಸಂಘಟನೆ ಕಳೆದ 23 ವರ್ಷಗಳಿಂದ ನಿರಂತರವಾಗಿ ಕಲೆ ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ಸೇವೆ ಸಲ್ಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಅದೆಷ್ಟೋ ಹಿರಿಯ, ಕಿರಿಯ ಕಲಾವಿದರಿಗೆ ಸಂಘಟನೆ ಆಸರೆಯಾಗಿ ಬೆಳೆಸಿದೆ. ಸಂಘಟನೆಯು ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ” ಎಂದು ಅವರು ಶುಭ ಹಾರೈಸಿದರು. ವೇದಿಕೆಯಲ್ಲಿ ಹಿರಿಯ ಸಾಹಿತಿ, ಜಾನಪದ ಸಂಶೋಧಕ ಮುದ್ದು ಮೂಡುಬೆಳ್ಳೆ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಮುದ್ದು ಮೂಡುಬೆಳ್ಳೆ ಅವರು, “ಎಲ್ಲ ಪ್ರಯತ್ನಗಳೂ ಯಶಸ್ಸು ತಂದುಕೊಡುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಪ್ರಯತ್ನದ ಬೆನ್ನಿಗೆ ಮತ್ತೊಂದು ಪ್ರಯತ್ನ ನಿರಂತರವಾಗಿ ನಡೆಸುತ್ತಲೇ ಇರಬೇಕು. ಅದು ಮುಂದೊಂದು ದಿನ ನಮಗೆ…