ಲಯನ್ಸ್ ಕ್ಲಬ್ ಬನ್ನಾಡಿ – ವಡ್ಡರ್ಸೆ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಜುಲೈ 27 ರಂದು ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಭವನದಲ್ಲಿ ಜರಗಿತು. ಮಾಜಿ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ ಪದಪ್ರಧಾನ ನೆರವೇರಿಸಿ ಮಾತನಾಡಿ, ಜಿಲ್ಲೆಯ ಅತ್ಯುತ್ತಮ ಕ್ಲಬ್ ಗಳಲ್ಲಿ ಬನ್ನಾಡಿ ವಡ್ಡರ್ಸೆ ಕೂಡಾ ಒಂದು ಲಯನ್ಸ್ ನ ನೀತಿ ನಿಯಮಗಳನ್ನು ಪಾಲಿಸಿಕೊಂಡು ಶಿಸ್ತು, ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದೆ ಎಂದರು.
ಕ್ಲಬ್ ನ ನೂತನ ಅಧ್ಯಕ್ಷರಾಗಿ ಬಿ. ಪ್ರವೀಣ್ ಹೆಗ್ಡೆ, ಕಾರ್ಯದರ್ಶಿಯಾಗಿ ಬನ್ನಾಡಿ ಆಶಿತ್ ಕುಮಾರ್ ಶೆಟ್ಟಿ, ಖಜಾಂಚಿಯಾಗಿ ಬನ್ನಾಡಿ ಸೂರ್ಯಕಾಂತ್ ಶೆಟ್ಟಿ ಅಈಜಿಕಾರ ಸ್ವೀಕರಿಸಿದರು. ಈ ಸಂದರ್ಭ 2023-2024 ನೇ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಡ್ಡರ್ಸೆ ಪ್ರೌಢಶಾಲೆಯ ಶ್ರಾವ್ಯ, ಅನುಪ್ರಿಯಾ ಹಾಗೂ ಕಾವಡಿ ಶಾಲೆಯ ಸ್ವಸ್ತಿಕ್ ಜೋಗಿ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೈದ್ಯಕೀಯ ನೆರವು ನೀಡಲಾಯಿತು. ಹಿರಿಯರಾದ ಸೀತಾರಾಮ ಶೆಟ್ಟಿ ಕಲ್ಕಟ್ಟೆ, ಶೀನಪ್ಪ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಕಾವಡಿ, ಶಿವರಾಮ ಶೆಟ್ಟಿ ವಡ್ಡರ್ಸೆ, ಬಾಲಕೃಷ್ಣ ಶೆಟ್ಟಿ ಮತ್ತು ನವೀನ್ ಶ್ಯಾನುಭಾಗ್ ಅವರನ್ನು ಸನ್ಮಾನಿಸಲಾಯಿತು. ನೂತನ ಸದಸ್ಯರಾಗಿ ರಾಜು ಪೂಜಾರಿ ಬನ್ನಾಡಿ, ದೀಪಕ್ ಶೆಟ್ಟಿ ಬನ್ನಾಡಿ, ಸುದೇಶ್ ಶೆಟ್ಟಿ ಶಾನಾಡಿ ಸೇರ್ಪಡೆಯಾದರು.
ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೊಮೆ, ಜಿಲ್ಲಾ ಲಯನ್ಸ್ ಅಂಬಾಸೀಡರ್ ಅರುಣ್ ಕುಮಾರ್ ಹೆಗ್ಡೆ, ರೀಜನ್ ಚಯರ್ ಪರ್ಸನ್ ಬನ್ನಾಡಿ ಸೋಮನಾಥ ಹೆಗ್ಡೆ, ರೀಜನ್ ಸೆಕ್ರೆಟರಿ ಕಬ್ಬೈಲು ಆನಂದ್ ಶೆಟ್ಟಿ, ಝೋನ್ ಚಯರ್ ಪರ್ಸನ್ ಧರ್ಮರಾಜ್ ಇದ್ದರು. ಸುರೇಂದ್ರ ಕೊಮೆ ಸ್ವಾಗತಿಸಿ, ಚಂದ್ರಶೇಖರ ಶೆಟ್ಟಿ ರಾಜಾರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಶಿತ್ ಕುಮಾರ್ ಶೆಟ್ಟಿ ವಂದಿಸಿದರು.