ಆಟಿ ತಿಂಗಳ ಆಚರಣೆಗಳು ಮೂಲ ನಂಬಿಕೆಯಿಂದ ಕೂಡಿದೆ. ಆಟಿ ತಿಂಗಳ ನೆನಪು, ಅಂದಿನ ಆಚರಣೆಗಳನ್ನು ನೆನಪು ಮಾಡುವ ಕೆಲಸ ಅಗತ್ಯವಾಗಿ ನಡೆಯಬೇಕು ಎಂದು ಕದ್ರಿ ನವನೀತ ಶೆಟ್ಟಿ ಹೇಳಿದರು. ಅವರು ಬಂಟರ ಸಂಘ ಮೂಲ್ಕಿ ಇಲ್ಲಿನ ಮಹಿಳಾ ವಿಭಾಗದ ವತಿಯಿಂದ ನಡೆದ ಆಟಿದ ತಮ್ಮನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಆಟಿದ ತಮ್ಮನ ಕಾರ್ಯಕ್ರಮ ಉದ್ಘಾಟಿಸಿದರು.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಮೂಲ್ಕಿ ಬಂಟರ ಸಂಘ ಆಟಿ ಆಚರಣೆ ಮೂಲಕ ಹಿಂದಿನ ಆಟಿ ದಿನ ನೆನಪು ಮಾಡುತ್ತಿರುವುದು ಅಭಿನಂದನೀಯ. ಗ್ರಾಮೀಣ ಪ್ರದೇಶದ ಹಿಂದಿನ ಬದುಕು ಯುವ ಸಮಾಜಕ್ಕೆ ತೋರ್ಪಡಿಸುವ ಕಾರ್ಯ ನಿರಂತರ ನಡೆಯಬೇಕು ಎಂದರು. ಕದ್ರಿ ನವನೀತ ಶೆಟ್ಟಿ ಮತ್ತು ಲೋಲಾಕ್ಷಿ ನಾರಾಯಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಲೋಲಾಕ್ಷಿ ಶೆಟ್ಟಿ, ಚಂದ್ರಿಕಾ ಅಶೋಕ್ ಶೆಟ್ಟಿ, ಉಷಾ ನವನೀತ ಶೆಟ್ಟಿ, ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ ಮುಂಡ್ಕೂರು, ಯುವ ವಿಭಾಗದ ಅಧ್ಯಕ್ಷ ದಾಮೋದರ ಶೆಟ್ಟಿ, ಮಾಧ್ಯಮ ಸಂಚಾಲಕ ನಿಶಾಂತ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಶೆಟ್ಟಿ ಸ್ವಾಗತಿಸಿ, ಮಮತಾ ಶೆಟ್ಟಿ ವಂದಿಸಿದರು. ಶೈಲಜಾ ಶೆಟ್ಟಿ ಪಟ್ಟಿ ವಾಚಿಸಿದರು. ಜತೆ ಕಾರ್ಯದರ್ಶಿ ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರ್ವಹಿಸಿದರು.