ಮಳೆಗಾಲದಲ್ಲಿ ಹರಡುವ ಮಾರಕ ಡೆಂಗಿ ಜ್ವರ, ಮಲೇರಿಯ ಇತ್ಯಾದಿ ಸಾಂಕ್ರಾಮಿಕ ರೋಗ ಲಕ್ಷಣಗಳ ಬಗ್ಗೆ ಹಾಗೂ ಅವುಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರ್ಥಿಕ ಅಶಕ್ತ ಬಾಲಕರ ವಿದ್ಯಾರ್ಥಿ ನಿಲಯ ವಿಜಯ ಬಾಲನಿಕೇತನ ಆಶ್ರಮ ಮಟಪಾಡಿ ಬ್ರಹ್ಮಾವರ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಹ್ಮಾವರದ ಡಾ. ಮಹೇಶ ಐತಾಳ್, ಹಿರಿಯ ಸಹಾಯಕಿ ಶ್ರೀಮತಿ ಗೀತಾ, ಗ್ರಾಮ ಸಹಾಯಕಿ ಶೈಲಜ, ಆಶಾ ಕಾರ್ಯಕರ್ತೆ ಶ್ರೀಮತಿ ಮಮತಾ ಇವರು ಉಪಯುಕ್ತ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಬಿ ಪ್ರವೀಣ ಹೆಗ್ಡೆಯವರು ವಹಿಸಿದ್ದರು.