ರೋಟರಿ ಜಿಲ್ಲೆ 3181 ರ ವಲಯ -1 ರ ನೂತನ ಸಹಾಯಕ ಗವರ್ನರ್ ಆಗಿ ಪತ್ರಕರ್ತ, ರಂಗ ಸಂಘಟಕ ಶರತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ರಂಗ ನಟ, ಯಕ್ಷಗಾನ ಕಲಾವಿದ, 26 ವರ್ಷಗಳಿಂದ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು ರಂಗಭೂಮಿ ಸಂಘಟನೆಗೆ 2005 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹುಟ್ಟೂರು ಸಂಕಲಕರಿಯ ವಿಜಯಾ ಯುವಕ ಸಂಘ, ಸಂಕಲಕರಿಯ ಹಾಲು ಉತ್ಪಾದಕರ ಸಂಘ, ಮುಲ್ಕಿ ವಲಯ ಪತ್ರಕರ್ತರ ಸಂಘ, ಕಿನ್ನಿಗೋಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಐಕಳ ಪೊಂಪೈ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜು ವಿದ್ಯಾರ್ಥಿ ಸಂಘ, ಕಿನ್ನಿಗೋಳಿ ರೋಟರಾಕ್ಟ್ ಗಳಲ್ಲಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕಿನ್ನಿಗೋಳಿ ರೋಟರಿಯ ಶತಮಾನೋತ್ಸವ ಸಾಲಿನ ವಲಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಮುಂಡ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪತ್ನಿ ಮಮತಾ ಶೆಟ್ಟಿ ಕಿನ್ನಿಗೋಳಿ ಇನ್ನರ್ ವೀಲ್ ಮಾಜಿ ಅಧ್ಯಕ್ಷೆಯಾಗಿದ್ದು, ಪುತ್ರಿ ಶಮಾ ಶೆಟ್ಟಿ ಮಂಗಳೂರಿನ ಎ.ಜೆ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಪುತ್ರ ಮನೀಶ್ ಶೆಟ್ಟಿ ಮೂಡಬಿದ್ರೆ ಆಳ್ವಾಸ್ ನಲ್ಲಿ ದ್ವೀತಿಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಸದಾ ಸೇವಾನಿರತ ಮನೋಭಾವನೆಗಳಿಂದ ಮಿತೃತ್ವ- ಭ್ರಾತೃತ್ವಗಳ ಮೂಲಕ ಎಲ್ಲರ ಜತೆ ಬೆರೆತು ಬಾಳುತ್ತಾ ರೋಟರಿಯೇ ನನ್ನ ಉಸಿರು ಎಂಬ ನಿರಂತರ ಉದ್ಘೋಷ ಶರತ್ ಶೆಟ್ಟಿಯವರದಾಗಿದ್ದು, ರೋಟರಿ ಜಿಲ್ಲಾ ಗವರ್ನರ್ ರೋ|ವಿಕ್ರಮ್ ದತ್ತರವರು ಇವರನ್ನು ವಲಯದ ಸಹಾಯಕ ಗವರ್ನರ್ ಆಗಿ ನಿಯುಕ್ತಿಗೊಳಿಸಿದ್ದಾರೆ. ಇವರು ಕಿನ್ನಿಗೋಳಿ, ಮುಲ್ಕಿ, ಬಜಪೆ ಹಾಗೂ ಮೂಡಬಿದ್ರೆ ಮಿಡ್ ಟೌನ್ ರೋಟರಿ ಸಂಸ್ಥೆಗಳಿಗೆ ಸಹಾಯಕ ಗವರ್ನರ್ ಆಗಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಸಾಮಾಜಿಕ ಕಳಕಳಿಯ ಚಿಂತಕ ಮುಂಡ್ಕೂರು ರತ್ನಾಕರ ಶೆಟ್ಟಿ, ಕಲಾ ಸಂಘಟಕ ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್, ಕಲಾ ಪೋಷಕರಾದ ವಿರಾರ್ ಶಂಕರ ಶೆಟ್ಟಿ, ಕಡಂದಲೆ ಸುರೇಶ್ ಭಂಡಾರಿ, ಏಳಿಂಜೆ ಕೋಂಜಾಲು ಗುತ್ತು ಅನಿಲ್ ಶೆಟ್ಟಿ, ಬಳ್ಕುಂಜೆ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಏಳಿಂಜೆ ಕೋಲ್ಯೊಟ್ಟು ಗಿರೀಶ್ ಶೆಟ್ಟಿ, ಜಿ.ಕೆ ಕೆಂಚನಕೆರೆ, ಏಳಿಂಜೆ ಸದಾಶಿವ ಪೂಜಾರಿ, ಎಳಿಂಜೆ ಸತ್ಯನ್ ಶೆಟ್ಟಿ, ವಿನಯ್ ಶೆಟ್ಟಿ ಏಳಿಂಜೆ, ಸಂತೋಷ್ ಶೆಟ್ಟಿ ಮಾಡರ್ನ್ ಅಭಿನಂದಿಸಿದ್ದಾರೆ.