ತುಳುಕೂಟ ಉಡುಪಿ ವತಿಯಿಂದ ತುಳು ಭಾಷೆಯ ಪ್ರಪಥಮ ಕಾದಂಬರಿಕಾರ ದಿ. ಎಸ್ ಯು ಪಣಿಯಾಡಿ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಈ ಸಾಲಿನಲ್ಲಿ ಮಂಗಳೂರಿನ ಕರಂಗಲ್ಪಾಡಿಯ ರೂಪಕಲಾ ಆಳ್ವ ಅವರ “ಪಮ್ಮಕ್ಕೆನ ಪೊರುಂಬಾಟ” ಕೃತಿ ಆಯ್ಕೆಯಾಗಿದೆ.
ಪ್ರಶಸ್ತಿಯು 10 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಈ ಬಾರಿ ಸ್ಪರ್ಧೆಗೆ ಬಂದ ಹಸ್ತ ಪ್ರತಿಗಳನ್ನು ತೀರ್ಪುಗಾರರಾದ ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡಕ, ಸಕು ಪಾಂಗಾಳ ಹಾಗೂ ಪುತ್ತಿಗೆ ಪದ್ಮನಾಭ ರೈ ಅವರನ್ನೊಳಗೊಂಡ ಆಯ್ಕೆ ಸಮಿತಿ ಪರಿಶೀಲಿಸಿ, ಈ ಕೃತಿಯನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ನಲ್ಲಿ ನಡೆಯಲಿದೆ ಎಂದು ಪ್ರಶಸ್ತಿಯ ಸಂಚಾಲಕಿ ತಾರಾ ಆಚಾರ್ಯ ಹಾಗೂ ತುಳುಕೂಟದ ಅಧ್ಯಕ್ಷ ಬಿ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.