Author: admin
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಮಾತೆ ಶ್ರೀ ಮಾತಾನಂದಮಯಿಯವರ ಆಶೀರ್ವಾದದೊಂದಿಗೆ ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಥಾಣೆ (ಮಹಾರಾಷ್ಟ್ರ) ಘಟಕದ ಭಜನಾ ಸತ್ಸಂಗವು ಆಗಸ್ಟ್ 31 ರ ಹುಣ್ಣಿಮೆಯ ಶುಭ ದಿನದಂದು ಥಾಣೆಯ ವರ್ತಕ್ ನಗರದ ಶ್ರೀ ಹನುಮಾನ್ ಮಂದಿರದಲ್ಲಿ ಉದ್ಘಾಟನೆಗೊಂಡಿತು. ಬಳಗದ ಹಿರಿಯರಾದ ವಾಮಯ್ಯ ಬಿ ಶೆಟ್ಟಿ, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಮಾಜಿ ಅಧ್ಯಕ್ಷೆ ರೇವತಿ ವಿ ಶೆಟ್ಟಿ, ಅಧ್ಯಕ್ಷೆ ಶ್ವೇತಾ ಸಿ ರೈ, ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್ ಹೆಗ್ಡೆ, ಗುಣಪಾಲ್ ಶೆಟ್ಟಿ ಮತ್ತು ಥಾಣೆಯ ಗುರುಭಕ್ತರು ಉಪಸ್ಥಿತರಿದ್ದು ಭಜನಾ ಸತ್ಸಂಗಕ್ಕೆ ಚಾಲನೆ ನೀಡಲಾಯಿತು.
ಮುಂಬಯಿ ಸಾರಸ್ವತ ಲೋಕದ ಸಜ್ಜನ ಸಾಹಿತಿ, ಅಜಾತ ಶತ್ರು ‘ಶಿಮುಂಜೆ ಪರಾರಿ’ ಎಂಬ ವಿಶಿಷ್ಟ ಕಾವ್ಯ ನಾಮದಿಂದ ಪ್ರಸಿದ್ದಿಯಾದ ತುಳು ಕನ್ನಡ ಕವಿ, ನಾಟಕಗಾರ, ಅನುವಾದಕಾರ, ಅಧ್ಯಾಪಕ ಕಂಠದಾನ ಕಲಾವಿದ ಮತ್ತು ನಟ ಹೀಗೆ ಬಹುಮುಖ ಪ್ರತಿಭೆಗಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಶಿಮುಂಜೆ ಪರಾರಿ ಸೀತಾರಾಮ ಮುದ್ದಣ್ಣ ಶೆಟ್ಟಿ ಅವರನ್ನು ಈ ಸಾರಿಯ ‘ವಯೋ ಸಮ್ಮಾನ’ದ ಗೌರವಕ್ಕೆ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆ ಆಯ್ಕೆ ಮಾಡಿದೆ. ಬೆಂಗಳೂರಿನ ಐಲೇಸಾ ಅಂತಾರಾಷ್ಟ್ರೀಯ ಡಿಜಿಟಲ್ ಸಂಸ್ಥೆ ತನ್ನ ಸ್ಥಾಪನೆಯ ಮೂರನೇ ವರ್ಷವನ್ನು ಇದೇ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳಿಸಲಿದ್ದು ಆ ಪ್ರಯುಕ್ತ ಈ ವಯೋ ಸಮ್ಮಾನ ಗೌರವವನ್ನು ಶಿಮುಂಜೆ ಪರಾರಿಯವರಿಗೆ ಜುಲೈ ತಿಂಗಳ 29 ನೇ ತಾರೀಕಿನಂದು ಸಲ್ಲಿಸುವುದರೊಂದಿಗೆ ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಖ್ಯಾತ ಹಿನ್ನಲೆ ಗಾಯಕ ರಮೇಶ್ಚಂದ್ರರ ಸಾರಥ್ಯದ ಐಲೇಸಾ ಸಂಸ್ಥೆಯ ವಯೋ ಸಮ್ಮಾನ್ ಗೌರವ ಸಮಿತಿಯು ಅನಂತರಾವ್ ನೇತೃತ್ವದಲ್ಲಿ ಮುಂಬಯಿಯ ಸಾಹಿತಿ ಪೇತ್ರಿ ವಿಶ್ವನಾಥ್…
2022-23 ನೇ ಶೈಕ್ಷಣಿಕ ವರ್ಷದ ಸಿಬಿಎಸ್ ಇ ಬೋರ್ಡ್ ನ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪುಣೆ ಚಿಂಚ್ವಾಡ್ ಪೋದಾರ್ ಇಂಟರ್ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿನಿ ತೃಪ್ತಿ ಹರೀಶ್ ಶೆಟ್ಟಿ ಶೇ . 88 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಈಕೆ ತುಳು ಸಂಘ ಪಿಂಪ್ರಿ- ಚಿಂಚ್ವಾಡ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಹಾಗೂ ಮಿಜಾರ್ ಕಾಂಬೆಟ್ಟು ಜಯಲಕ್ಷ್ಮಿ ಶೆಟ್ಟಿಯವರ ಪುತ್ರಿ.
ಮುಂಬಯಿ ವಿಶ್ವವಿದ್ಯಾನಿಲಯ, ಕನ್ನಡ ವಿಭಾಗದ ಎಂ. ಎ. ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಸವಿತಾ ಅರುಣ್ ಶೆಟ್ಟಿ ಅವರು ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ಹೊರನಾಡಾದ ಮುಂಬೈಯಲ್ಲಿ ನೆಲೆಸಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಗಳಲ್ಲಿ ಬಲಗೊಳಿಸಿದ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಶತಮಾನೋತ್ಸವದ ನೆನಪಿಗೆ ಮುಂಬೈ ವಿಶ್ಕವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರಿಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡುವ ನಿರ್ಧಾರಕ್ಕೆ ಬರಲಾಗಿದ್ದು, ಈ ಚೊಚ್ಚಲ ಪುರಸ್ಕಾರಕ್ಕೆ ಸವಿತಾ ಅರುಣ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ನಗದು ಬಹುಮಾನ, ಕೃತಿ ಕರಂಡಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಸವಿತಾ ಅರುಣ್ ಶೆಟ್ಟಿ ಅವರು ಈಗಾಗಲೇ ‘ಮಿತ್ರಾ ವೆಂಕಟ್ರಾಜ್ – ಬದುಕು ಬರಹ’ ಎಂಬ ಸಂಪ್ರಬಂಧವನ್ನು ರಚಿಸಿ ವಿಶ್ವ ವಿದ್ಯಾಲಯಕ್ಕೆ ಸಾದರಪಡಿಸಿದ್ದಾರೆ. ಇದೀಗ ” ಮುಂಬೈ ಕನ್ನಡ ಲೋಕದ ಅವಲೋಕನ ” ಎಂಬ ಶೋಧ ಸಂಪ್ರಬಂಧದ ರಚನೆಯಲ್ಲಿ ನಿರತರಾಗಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ಉತ್ತಮ ಸಾಹಿತ್ಯಾಸಕ್ತರಾಗಿದ್ದು, ಅವರು…
ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇಗುಲದ ನೂತನ ಧ್ವಜಸ್ತಂಭ ಶೋಭಾಯಾತ್ರೆಗೆ ಮಾ. 29ರ ಮಧ್ಯಾಹ್ನ 3.30ಕ್ಕೆ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ| ಜಿ. ಶಂಕರ್, ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಜ್ವಲ್ ಡೆವಲಪರ್ನ ಪುರುಷೋತ್ತಮ ಪಿ. ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕೋಟ ಶ್ರೀ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ ಸಿ. ಕುಂದರ್, ಕಾಪು ಹೊಸ ಮಾರಿಗುಡಿ ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಸಾಯಿರಾಧಾ ಡೆವಲಪರ್ನ ಮನೋಹರ ಎಸ್. ಶೆಟ್ಟಿ, ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಡಾ| ತಲ್ಲೂರು ಶಿವರಾಮ ಶೆಟ್ಟಿ, ರಂಜನ್ ಕಲ್ಕೂರ್, ತೋನ್ಸೆ ಮನೋಹರ ಶೆಟ್ಟಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಆರ್ಕಿಟೆಕ್ಟ್ ಶ್ರೀ ನಾಗೇಶ್ ಹೆಗ್ಡೆ, ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಮಟ್ಟು…
ದೇವರ ಅನುಗ್ರಹವಾದರೆ ನಮ್ಮೆಲ್ಲರ ಬಾಳು ಹಸನಾಗುತ್ತದೆ. ದೇವರನ್ನು ಮೀರಿ ಹೋಗುತ್ತೇನೆ ಎಂಬವನಿಗೆ ಜೀವನದಲ್ಲಿ ಏಳಿಗೆ ಇಲ್ಲ ಎಂದು ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು. ಮಂಗಳೂರು ಸಮೀಪದ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೀ ವಿಧ್ಯೆಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ದೇವಸ್ಥಾನದ ಪೂಜೆ ಪುರಸ್ಕಾರದ ಜತೆಗೆ ಅನ್ನದಾನ, ಸಂಸ್ಕೃತಿಯ ಕೇಂದ್ರವನ್ನಾಗಿ ಬೆಳೆಸುವ ಇಚ್ಛೆಯಿದೆ.ದೇವಸ್ಥಾನವನ್ನು ಇಷ್ಟು ಭವ್ಯವಾಗಿ ನಿರ್ಮಿಸಲು ಸಹಕರಿಸಿದ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ದಾನಿಗಳಿಗೆ, ಕರ ಸೇವಕರಿಗೆ, ವಿವಿಧ ಸಮುದಾಯ ಭಕ್ತರಿಗೆ ದೇವಿಯು ಆಶೀರ್ವದಿಸಿ ಮಂಗಳವನ್ನುಂಟು ಮಾಡಲಿ ಎಂದರು. ಶಾಸಕ ಡಾ| ಭರತ್ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲು ಸಹಕಾರದಲ್ಲಿ ಸರಕಾರದಿಂದ 2 ಕೋ.ರೂ. ಬಿಡುಗಡೆಯಾಗಿದೆ. ಇದರ ಜತೆಗೆ ಮುಡಾ ವತಿಯಿಂದ 1 ಕೋ.ರೂ. ವೆಚ್ಚದಲ್ಲಿ ಕ್ಷೇತ್ರದ ಕೆರೆ ಅಭಿವೃದ್ಧಿ ಪಡಿಸಲಾಗುವುದು. ಸಮುದಾಯ ಭವನಕ್ಕೆ 1 ಕೋ.ರೂ. ಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ…
ಇತ್ತೀಚಿಗೆ ಬಂಟ ಸಮುದಾಯದ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿ ಇವರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು ತೀವ್ರವಾಗಿ ಖಂಡಿಸಿದ್ದಾರೆ. ಸಮಾಜದ ನ್ಯಾಯಸಮ್ಮತ ವ್ಯವಸ್ಥೆಯಲ್ಲಿ ಪೋಲೀಸರ ಪಾಲು ಬಹು ದೊಡ್ಡದು. ಓವ್ರ ವಕೀಲರ ಮೇಲೆ ಪೂರ್ವಪರ ಯೋಚಿಸದೆ ಅಮಾನಿಯವಾಗಿ ಅರೆಬೆತ್ತಲೆಗೊಳಿಸಿ ಮಧ್ಯ ರಾತ್ರಿ ಬಾರ್ಯ ಮನೆಯಿಂದ ಕರೆದುಕೊಂಡು ಹೋಗಿರುವ ಕ್ರಮಕ್ಕೆ ತಾಲೂಕು ಬಂಟ ಸಮುದಾಯ ಖಂಡಿಸುತ್ತದೆ. ಪುಂಜಾಲಕಟ್ಟೆ ಆರಕ್ಷಕ ಉಪನಿರೀಕ್ಷಕರ ಅಮಾನವೀಯ ಕ್ರಮದ ಬಗ್ಗೆ ಸರಕಾರವು ತಕ್ಷಣ ತನಿಖೆ ನಡೆಸಿ ಸೇವೆಯಿಂದ ಅಮಾನತುಗೊಳಿಸಿ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿಯವರಿಗೆ ನ್ಯಾಯ ದೊರಕಿಸಿಕೊಟ್ಟು ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಬಂಟರ ಸಂಘ ತಿಳಿಸಿದೆ.. ಬಂಟರ ಸಂಘದಲ್ಲಿ ನಡೆದ ಸಭೆಯಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಉಪಾಧ್ಯಕ್ಷ ವಿಠಲ ಶೆಟ್ಟಿ ಕೊಲ್ಲೊಟ್ಟು, ಕಾರ್ಯದರ್ಶಿ ಸಂಜೀವ ಶೆಟ್ಟಿ ಕುಂಟಿನಿ, ಕೋಶಾಧಿಕಾರಿ ಆನಂದ ಶೆಟ್ಟಿ ಐಸಿರಿ, ಮಾಜಿ ಅಧ್ಯಕ್ಷರುಗಳಾದ ಎಸ್. ಜಯರಾಮ…
ತುಳುನಾಡಿನಲ್ಲಿ ಬೇಸಾಯ ಕಣ್ಮರೆಯಾಗುತ್ತಿದ್ದಂತೆ ಇದರ ಹಿನ್ನಲೆಯಲ್ಲಿ ಆರಾಧಿಸಲ್ಪಡುತ್ತಿದ್ದ ದೈವಗಳೂ ಕಣ್ಮರೆಯಾಗುತ್ತಿವೆ. ಕಳೆದ 20 ವರ್ಷಗಳ ಹಿಂದೆ ಬೇಸಾಯದ ಗದ್ದೆ ಬದುಗಳಲ್ಲಿ ಕುಣಿಯುತ್ತಿದ್ದ ಈ ದೈವಗಳು ಇಂದು ಕುಣಿಯುತ್ತಿಲ್ಲ. ಅಭಯದ ಮಾತುಗಳನ್ನು ಆಡುತ್ತಿಲ್ಲ, ಅನೇಕ ದೈವಗಳು ಇದ್ದ ಕುರುಹುಗಳೇ ಇಲ್ಲ. ಸಾವಿರದೊಂದು ಭೂತಗಳನ್ನು ನಂಬುತ್ತಿದ್ದ ತುಳುವರ ಪಾಲಿಗೆ ಇಂದು ಕೆಲವು ಮಾತ್ರ ಉಳಿದಿವೆ. ಹಲವು ದೈವಗಳು ರೂಪಾಂತರಗೊಂಡಿವೆ. ಇನ್ನು ಕೆಲವು ಹೆಸರು ಬದಲಾಯಿಸಿಕೊಂಡಿವೆ. ಅನೇಕ ದೈವಗಳ ಭೂತ ಚರಿತ್ರೆ, ಹುಟ್ಟು, ಬೆಳವಣಿಗೆ ಅದಲುಬದಲಾಗಿದೆ. ಪಾಡ್ದನಗಳು ತಮ್ಮ ಮೂಲ ರೂಪಕ್ಕಿಂತ ಭಿನ್ನವಾಗಿವೆ. ದೈವಗಳ ಚರಿತ್ರೆಯಿಂದ ಹಿಡಿದು ಮುಖವರ್ಣಿಕೆ, ಕುಣಿತ, ಮದಿಪು, ಪಾಡ್ದನ, ಎಲ್ಲ ಬಿಟ್ಟು ಬಾರಣೆ(ಆಹಾರ ಸೇವನೆ)ಯ ಸ್ವರೂಪವೂ ಬದಲಾಗಿದೆ. ತುಳುನಾಡಿನ ದೈವಗಳ ಮೇಲೆ ಇತರೆ ಆಚರಣೆಗಳ ಹಿಡಿತ ತೀವ್ರವಾಗುತ್ತಿದೆ. ಇಲ್ಲಿನ ಯಕ್ಷಗಾನ ಮತ್ತು ಕೇರಳದ ‘ತೆಯ್ಯಂ’ಗಳ ಪ್ರಭಾವ ಇನ್ನೂ ಗಾಢವಾಗುತ್ತಿದೆ. ಕೆಲವು ದೈವಗಳಿಗೆ ಅಗತ್ಯಕ್ಕಿಂತ ಹೆಚ್ಚು ಮಾನ್ಯತೆ ಸಿಗುತ್ತಿದ್ದರೆ, ಹಲವು ದೈವಗಳ ಆರಾಧನೆ ಇಲ್ಲವಾಗಿವೆ. ಇದರಲ್ಲಿ ತುಳುನಾಡಿನ ಬೇಸಾಯ ಸಂಬಂಧೀ ದೈವಗಳೇ ಮುಖ್ಯವಾದುವುಗಳು.…
ನಟ ರೂಪೇಶ್ ಶೆಟ್ಟಿ ಕನ್ನಡದಲ್ಲಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಆ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಅಧಿಪತ್ರ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರ ಕೆ.ಆರ್ ಸಿನಿ ಕಂಬೈನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಚಯನ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ. ಸದ್ಯ ಬಿಗ್‌ಬಾಸ್ ಸೀಸನ್-9 ರಲ್ಲಿ ವಿಜೇತರಾಗಿರುವ ರೂಪೇಶ್ ಶೆಟ್ಟಿ ಇತ್ತೀಚೆಗೆ “ಸರ್ಕಸ್” ಎಂಬ ತುಳು ಚಿತ್ರವನ್ನು ನಿರ್ದೇಶಿಸಿ, ನಾಯಕರಾಗಿ ನಟಿಸಿದ್ದರು. ಆ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮತ್ತೆ ಕನ್ನಡದತ್ತ ಮುಖ ಮಾಡಿದ್ದಾರೆ.
ಭಾರತಪ್ಪೆನ ಸಿರಿ ಮಟ್ಟೆಲ ಪುರು ತುಳುವಪ್ಪೆನ ಪಿರಿ ಪೆರ್ಮೆಡ್ ಪೊನ್ನಾಲ್ಮೆದ ಪರತಿರಿ ಪರಪೋಕು ಅಳಿದಾಂತೆ ಮೆರೆಪುನವು. ಬಿರ್ಮೆರೆ ಉಟಾರ್ನೆದ, ಗೆಲ್ಮೆದ ಉದಿಪುದ ಸಾಂಸ್ಕೃತಿಕ ಗದ್ದಿಗೆ ಒಂಜಿ ಪುಡೆಮಿ ಮೇಲ್‌ಡಿತ್ತ್ಂಡವು ತುಳುನಾಡೆನ್ಪಿ ಪುರಪುದ ಪಚ್ಚೆ ತುತ್ತಿ ಮೂಡಾಯಿ ಗಟ್ಟದ ಬರಿಡ್ದ್ ದುಡಿ ಕೊರ್ಪಿ ಪಡ್ಡಾಯಿ ಕಡಲ ಕರೆತ ಪುಣ್ಯ ಮಣ್ಣ್ ಪನ್ಪಿನೆಕ್ ಒವ್ವೆ ಪೊಸ ಗುರ್ತಾರ್ತ ಬೋಡುಂದಿಜ್ಜಿ. ದೈವೊ-ದೇಬೆರ್, ನಾಗೆ-ಬಿರ್ಮೆರ್, ಸಿರಿ-ಕುಮಾರೆರ್, ಬೀರಪುರ್ಸೆರ್ ಕಾತೊಂದು ಬರ್ಪಿ ಪೆರ್ಮೆದ ಬೂಡು. ಆಲೈಪು, ಆಚರಿಪು, ಆರಾದಿಪು, ಆನೊಯ್ಪುದ ನಿಲೆ, ಅಪ್ಪೆ ಕಟ್ಟ್, ತಮ್ಮಲೆನೊಟ್ಟು ಬದ್ಕ್ ಕಟ್ಟುನ ಪೊಲಿ ಪೊಲ್ಸುದ, ಪಲಿ ತಂಗಡಿಗ್ ದಲ್ಯೊ ಹಾಸ್‌ದ್ ಆದರಿಪುನ, ಕಲೆ-ಕಾರ್ನಿಕೊ ದಿಂಜಿದ್ ಉರ್ಕರುನ ಪೇರ ಪರಿಪುದ, ಸುದೆ-ಕಡಲ್, ಕಂಡೊ-ಕಾಂತರೊ, ಮಲೆ-ಬೈಲ್‌ಲ್ ಪೆರ್ಚಿದುಂತಿ ನಾಗನಡೆ, ಸರ್ಪಜಿಡೆ, ಪಂಚ ವರ್ನೊದ, ಪುಂಚೊದ ಸತ್ವೊ ದಿಂಜಿ ಮಣ್ಣ, ಬೀಜು ಗಾಲಿಗ್ ತರೆ ತೂಂಕುನ ಕಮ್ಮೆನ ದಿಂಜಿ ಬಾರರಿತ ಕುರಲ್‌ದ ಪೊರ್ಲ ನಾಡ್ ಸಿರಿಬಾರಿ ಲೋಕೆನ್ಪಿ ಪುಗರ್ತೆದ ತುಳುನಾಡ್. ತುಳುವ ಪರತಿರಿ ಪರಪೋಕುದಂಚಿ ಕಣ್ಣ್…