Author: admin
ನಾವು ಎಲ್ಲಾ ಧರ್ಮದ, ಎಲ್ಲಾ ಮತದ ಬಗ್ಗೆ ಅದೆಷ್ಟೋ ವಿಷಯಗಳನ್ನು ತಿಳಿದವರು. ಆದರೂ ತುಳು ಧರ್ಮ ಇವೆಲ್ಲಕ್ಕಿಂತ ಮೀರಿದ್ದು. ಹಿರಿಯರು ಹಾಕಿದ ಬುನಾದಿಯು ಒಂದಿಂಚು ಮಿಸುಕಾಡದಿದ್ದರೂ ಅಲ್ಲಲ್ಲಿ ಪಾಚಿ ಮಾತ್ರ ಕಟ್ಟಿರುವುದು ಕಾಣುತ್ತದೆ. ಆದರೂ ಕೂಡ ಬಂಡೆಯಷ್ಟೆ ಗಟ್ಟಿಯಾಗಿರುವುದು ನಮ್ಮ ಭಾಗ್ಯ. ತುಳುನಾಡ ಧರ್ಮಕ್ಕೆ ಯಾವುದೇ ಕರ್ತನಿಲ್ಲ, ಯಾವುದೇ ಬರವಣಿಗೆಗಳು ಇಲ್ಲ, ಆದರೂ ತುಳುನಾಡ ಮಣ್ಣಿನ ಜನರ ಕಣ ಕಣದಲ್ಲೂ ಹರಡಿಕೊಂಡಿದೆ. ತುಳುನಾಡ ಧರ್ಮದಲ್ಲಿ ಎಲ್ಲಕ್ಕೂ ಅದರದೇ ಆದ ವೈಜ್ಞಾನಿಕ ಆಧಾರ ಇದೆ. ಈ ಧರ್ಮದಲ್ಲಿ ಎಲ್ಲೂ ಕೂಡ ದುಂದುವೆಚ್ಚದ ಆರಾಧನೆಗಳಿಲ್ಲ. ಮುಖ್ಯವಾಗಿ ತುಳುನಾಡ ಜನರು ಪ್ರಕೃತಿ ಆರಾಧಕರು. ತಮ್ಮೊಂದಿಗೆ ಇರುವ ಪ್ರಾಣಿ ಪಕ್ಷಿಗಳಿಗೆ ದೈವ ದೇವರುಗಳ ಸ್ಥಾನವನ್ನು ಕಲ್ಪಿಸಿ ಜೀವನ ಚಕ್ರದಲ್ಲಿ ಮತ್ತು ನಿಸರ್ಗದ ಉಳಿವಿನಲ್ಲಿ ಪ್ರಾಣಿ ಪಕ್ಷಿಗಳ ಉಳಿವು ಅತೀ ಹೆಚ್ಚಿನದ್ದು ಎಂದು ಸಾರಿದ್ದಾರೆ. ತಮ್ಮಂತೆ ಅವುಗಳು ಜೀವವಿರುವುದನ್ನು ಮನಗಂಡು ಅವುಗಳಿಗೆ ಪೂಜ್ಯ ಸ್ಥಾನವನ್ನು ನೀಡಿದ್ದಾರೆ. ಉದಾ: ಪಂಜುರ್ಲಿ, ಮೈಸಂದಾಯ, ನಾಗ, ಪಿಲ್ಚಂಡಿ, ನಂದಿ ಇವೆಲ್ಲ ಪ್ರಾಣಿ ಮೂಲದ…
ಪ್ರತಿಯೊಬ್ಬರ ಆರೋಗ್ಯ ಅವಲಂಬಿತವಾಗಿರುವುದು ಅವರವರು ತೆಗೆದುಕೊಳ್ಳುವ ಆಹಾರದ ಮೇಲೆ. ಸುರಕ್ಷೆಯ ಆಹಾರ ಸೇವನೆಯಿಂದ ನಾವು ಆರೋಗ್ಯವಾಗಿರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ, ಅಸುರಕ್ಷಿತ , ಗುಣಮಟ್ಟ ರಹಿತ ಆಹಾರ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಕಳೆದ ಐದು ವರ್ಷಗಳಿಂದ ಪ್ರತೀ ವರ್ಷ ಜೂ.7ರಂದು ವಿಶ್ವ ಆಹಾರ ಸುರಕ್ಷ ದಿನವನ್ನು ಆಚರಿಸಲಾಗುತ್ತಿದೆ. ಅಸುರಕ್ಷಿತ ಆಹಾರದಿಂದ ಅನಾರೋಗ್ಯ : ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವ ಜಾಗತಿಕ ಅಂಕಿಅಂಶಗಳ ಪ್ರಕಾರ ಮಾನವನ ಆರೋಗ್ಯದ ಮೇಲೆ ಅಸುರಕ್ಷಿತ ಮತ್ತು ಕಲುಷಿತ ಆಹಾರ ಸೇವನೆ ಭಾರೀ ಪರಿಣಾಮವನ್ನುಂಟು ಮಾಡುತ್ತಿದೆ. ಈ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸ ಲಾಗುತ್ತಿದ್ದರೂ ವಿವಿಧ ಕಾರಣಗಳಿಗಾಗಿ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಪದಾರ್ಥಗಳಿಂದ ಭಾರೀ ಸಂಖ್ಯೆಯ ಜನರು ವಂಚಿತರಾಗಿದ್ದಾರೆ. ಭಾರತದ ಮುಂದಿದೆ ಬಲುದೊಡ್ಡ ಸವಾಲು : ವಿಶ್ವಸಂಸ್ಥೆಯ ಪ್ರಕಾರ ಅಂದಾಜು 195 ಮಿಲಿಯನ್ ಜನರು ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜತೆಗೆಶೇ. 43ರಷ್ಟು…
ಜಪಾನ್ನಲ್ಲಿ ಮೇಳೈಸಿದ 37ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದು ಸೃಜನಶೀಲತೆ : ಡಾ| ಕೆ.ಬಿ.ನಾಗೂರ್
ಮುಂಬಯಿ (ಜಪಾನ್ ನರಿಟಾ), ಆರ್‍ಬಿಐ, ಎ.10: ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸಮುದಾಯವು ಉತ್ತಮ ಸಂಸ್ಕೃತಿಯನ್ನು ರೂಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ಸಾಂಸ್ಕೃತಿಕವಾಗಿ ತೊಡಿಸಿಕೊಳ್ಳುವುದು ಸಮಾಜಕ್ಕೆ ನೀಡುವ ಸೃಜನಶೀಲ ಕೊಡುಗೆ ಆಗಿರುತ್ತದೆ ಎಂದು ವಿಜಾಪುರದ ಡಾ| ನಾಗೂರ್ ಎಜುಕೇಶನ್ ಟ್ರಸ್ಟ್ ನ ಮ್ಯಾನೇಂಗ್ ಟ್ರಸ್ಟೀ ಹಾಗೂ ಇಂಢಿಯಾ ಮಾಸ್ಟರ್ ಅಥ್ಲೆಟಿಕ್ಸ್ ಫೆಡೆರೇಷನ್ ಅಧ್ಯಕ್ಷ ಡಾ| ಕೆ.ಬಿ ನಾಗೂರ್ ಅಭಿಪ್ರಾಯಪಟ್ಟರು. ಕಳೆದ ಶುಕ್ರವಾರ (ಎ.7) ಜಪಾನಿನ ಟೋಕಿಯೋ ಸಮೀಪದ ನರಿಟಾ ನಗರದ ಕ್ರೇನ್ ಬಾಂಕ್ವೆಟ್ ಸಭಾಂಗಣದಲ್ಲಿ ನಡೆಸಲ್ಪಟ್ಟ 37ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಡಾ| ಕೆ.ಬಿ ನಾಗೂರ್ ಮಾತನಾಡಿದರು. ಶಿವಗಂಗಾ ಕ್ಷೇತ್ರ ಮೇಲಣ ಗವಿಮಠದ ಡಾ| ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾಚನ ನೀಡಿ ನಮ್ಮ ಕಲೆ ಮತ್ತು ಸಂಸ್ಕೃತಿಗಳು ಸಮಾಜಕ್ಕೆ ಬೆಳಕು ಚೆಲ್ಲುವ ದೀವಿಗೆಗಳಿದ್ದಂತೆ ಅವುಗಳನ್ನು ಸಾಗರದ ಆಚೆಯೂ ಪಸರಿಸುವುದು ಸಾಹಸದ ಕೆಲಸ. ಅಂತಹ ಕೆಲಸ ಮಾಡುವವರಿಗೆ ದೇವರು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದರು. ಐಸಿಎಫ್‍ಸಿ (ಇಂಡಿಯಾ) ಅಧ್ಯಕ್ಷ…
ಯಾರಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಇಷ್ಟವಿಲ್ಲ ಹೇಳಿ? ಈ ದಿನ, ಪುಟ್ಟ ಮಕ್ಕಳಿಗಂತೂ ಸಂಭ್ರಮ ಹೇಳತೀರದು! ಹುಟ್ಟಿದ ದಿನವನ್ನು ಹಬ್ಬವನ್ನಾಗಿ ಆಚರಿಸುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಹಿಂದೂ ಸಂಸ್ಕೃತಿಯಲ್ಲಿ ಈ ಆಚರಣೆಯು ಧಾರ್ಮಿಕ ಪದ್ಧತಿಯಲ್ಲಿ ಆಚರಿಸಲ್ಪಡುತ್ತಿತ್ತು. ಆದರೆ ಇತ್ತೀಚೆಗೆ ಎಲ್ಲದರಂತೆ ಅದರ ಮೇಲೂ ಆಂಗ್ಲ ಸಂಸ್ಕೃತಿಯ ಹಾವಳಿ ತೀವ್ರವಾಗಿ ಆಗಿರುವುದನ್ನು ಕಾಣಬಹುದು. “ಹೆಪ್ಪಿ ಬರ್ತ್ ಡೇ..” ಎಂದು ಶುಭಾಶಯ ಹೇಳುವುದು ಸಾರ್ವತ್ರಿಕವಾಗಿ ನಡೆಯುತ್ತಿದೆ. ಕೇಕ್ ಕತ್ತರಿಸಿ, ಉರಿಯುವ ಮೇಣದ ಬತ್ತಿಯನ್ನು ಆರಿಸಿ ಸಂಭ್ರಮಿಸುವುದೇ ಹುಟ್ಟುಹಬ್ಬದ ನಿಜವಾದ ಆಚರಣೆ ಎನ್ನುವಷ್ಟು ಎಲ್ಲರ ಜೀವನದಲ್ಲಿ ಇದು ಹಾಸುಹೊಕ್ಕಾಗಿದೆ. ಹಿಂದೂ ಪದ್ಧತಿಯಲ್ಲಿ ಹಿರಿಯರ ಜನ್ಮದಿನದ ಆಚರಣೆಯು ಬಹಳ ಅರ್ಥವತ್ತಾಗಿ ನಡೆಯುತ್ತದೆ. ಆ ದಿನ ಕಿರಿಯರೆಲ್ಲರೂ ಅವರ ಆಶೀರ್ವಾದ ಪಡೆದು, ಮನೆಯವರೆಲ್ಲರೂ ಸಿಹಿಯೂಟ ಉಂಡು ಸಂಭ್ರಮಿಸುವರು. ಕಿರಿಯರಾದರೆ, ಹೊಸಬಟ್ಟೆ ಧರಿಸಿ, ದೀಪ ಬೆಳಗಿದ ದೇವರೆದುರು ಕುಳಿತಾಗ ಆ ಮಗುವಿನ ಹೆತ್ತವರು ಆರತಿ ಬೆಳಗುವರು. ಆ ಬಳಿಕ ಹಿರಿಯರ ಆಶೀರ್ವಾದದೊಂದಿಗೆ ತಮ್ಮಿಷ್ಟದ ಉಡುಗೊರೆಗಳನ್ನು ಪಡೆದು ಸಿಹಿಯುಂಡು ನಲಿಯುವರು. ಇಂದು ಸಮಾಜ…
ನಾವು ಅಪರೂಪದಲ್ಲಿ ಅಪರೂಪವಾಗಿರುವ ಎರಡು ರೂಪಾಯಿ ವೈದ್ಯರು, ಐದು ರೂಪಾಯಿ ವೈದ್ಯರ ಬಗ್ಗೆಯೆಲ್ಲಾ ಕೇಳಿದ್ದೇವೆ. ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ಮಂಗಳೂರು ತಾಲೂಕಿನ ಉಚ್ಚಿಲ- ಕೆ.ಸಿ.ರೋಡ್ ಎಂಬಲ್ಲಿ ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಶೆಟ್ಟಿ ಡಾಕ್ಟರ್‌ರ ಬಗ್ಗೆಯೂ ಕೇಳಿದ್ದೆವು. ಇಂತವರಿಗಿಂತಲೂ ವಿಶಿಷ್ಟ ಉಚಿತ ಡಾಕ್ಟರ್ ಒಬ್ಬರು ಮಂಗಳೂರು ನಗರದಲ್ಲೇ ಇದ್ದಾರೆ. ಅವರೇ ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ.ಬಿ.ಸಂಜೀವ ರೈ. ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಡೀನ್ ಆಗಿದ್ದು, ಅಕಾಡೆಮಿಕ್ ವಲಯದಲ್ಲಿ ಇವರ ಅತ್ಯುನ್ನತ ಸಾಧನೆಗಳಿಂದ ಮತ್ತು ಒಳ್ಳೆಯ ಮಕ್ಕಳ ತಜ್ಞರೆಂದು ಇವರು ಪ್ರಸಿದ್ಧರಾಗಿದ್ದರೂ ಇವರ ಮಾನವೀಯ ಸೇವೆಗಳು ಎಲ್ಲೂ ಪ್ರಚಾರಕ್ಕೆ ಬಂದಿಲ್ಲ. ಅವರು ತಾನು ನೀಡುತ್ತಿರುವ ಮಾನವೀಯ ಸೇವೆಯನ್ನು ಈವರೆಗೆ ಪ್ರಚಾರ ಮಾಡಿದ್ದೂ ಇಲ್ಲ. ಅವರದಕ್ಕೆ ಪ್ರಚಾರವನ್ನು ಬಯಸಿಯೂ ಇಲ್ಲ. ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿರುವ ಮೆಡಿಕೇರ್ ಎಂಬ ಕಟ್ಟಡದ ಮಾಲಕರೂ ಆಗಿರುವ ಡಾ.ಬಿ.ಸಂಜೀವ ರೈ ಅದೇ ಕಟ್ಟಡದಲ್ಲಿ ತನ್ನದೊಂದು ಮಕ್ಕಳ ಚಿಕಿತ್ಸಾಲಯವನ್ನಿಟ್ಟು ವೃತ್ತಿ ನಿರತರಾಗಿದ್ದಾರೆ. ಅವರು ವೃತ್ತಿ ನಿರತರಾಗಿದ್ದಾರೆ…
ಹೈಕೋರ್ಟು ನ್ಯಾಯಮೂರ್ತಿಯಾಗಿ ರಾಜೇಶ್ ರೈ ಕಲ್ಲಂಗಳ ಅವರು ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯ ಪಾಲರಿಂದ ಮುಖ್ಯಮಂತ್ರಿಗಳ ಮತ್ತು ಮುಖ್ಯ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೈಕೋರ್ಟು ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರಿಗೆ ಜಯಕರ್ನಾಟಕ ಸಂಘಟನೆಯ ಕೃಷ್ಣಾನಂದ ಶೆಟ್ಟಿ ಅವರು ಅವರ ಕಚೇರಿಗೆ ತೆರಳಿ ಶುಭ ಹಾರೈಸಿದರು. ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕಲ್ಲಂಗಳ ನಿವಾಸಿಯಾಗಿರುವ ರಾಜೇಶ್ ರೈ ಕಲ್ಲಂಗಳ (48) ಅವರು ಹೈಕೋರ್ಟು ನ್ಯಾಯಮೂರ್ತಿಯಾಗಿ ಅತೀ ಸಣ್ಣ ವಯಸ್ಸಿನಲ್ಲಿ ಆಯ್ಕೆಗೊಂಡು, ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಥಮ ಹಾಗೂ ಅತೀ ಚಿಕ್ಕ ವಯಸ್ಸಿನ ಹೈಕೋರ್ಟು ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ನೇರವಾಗಿ ಅತೀ ಕಿರಿಯ ವಯಸ್ಸಿನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲಿಗರಾಗಿದ್ದಾರೆ. ರಾಜೇಶ್ ರೈ ಕಲ್ಲಂಗಳ ಅವರು ಬಾಲ್ಯದಿಂದಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜಪರ ಕೆಲಸ ಕಾರ‍್ಯಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ಕಲಾಪೋಷಕರಾಗಿರುವ ಇವರು ಯಕ್ಷಗಾನ ಮತ್ತು…
ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನಲ್ಲೆಯುಳ್ಳ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ಮನ್ಮಹಾರಥೋತ್ಸವ ಕಾರ್ಯಕ್ರಮ ಇದೇ ಬರುವ ಫೆ.5 ಮತ್ತು 6 ರಂದು ನಡೆಯಲಿದ್ದು ಆ ಪ್ರಯುಕ್ತ ಜಾತ್ರೋತ್ಸವಕ್ಕೆ ವಿಶೇಷ ಮೆರುಗು ನೀಡಯವ ಉದ್ದೇಶದಿಂದ ಹಿರೇಮಹಾಲಿಂಗೇಶ್ವರ ಮಿತ್ರ ವೃಂದದ ವತಿಯಿಂದ 4ದಿನಗಳ ಕಾಲ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಿತ್ರ ವೃಂದದ ವತಿಯಿಂದ ನಡೆಯುವ 47ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ಫೆ.3 ಶುಕ್ರವಾರ ಸಂಜೆ 6.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ ದೊರಕಲಿದ್ದು ಅದೇ ದಿನ ಸೇವಾ ಸಂಗಮ ಶಿಶು ಮಂದಿರ ಕೋಟ ಬಾಲ ಗೋಕುಲ ಪುಟಾಣಿಗಳಿಂದ ಕಾರ್ಯಕ್ರಮ ವೈವಿದ್ಯ ,ರಾತ್ರಿ 9.00ಕ್ಕೆ ಶಿವಾನಿ ಮ್ಯುಸಿಕಲ್ ಇವರಿಂದ ಸಂಗೀತ ರಸಮಂಜರಿ, ಫೆ.4ರಂದು ಶನಿವಾರ ಸಂಜೆ 7ಗ ಹಿರೇಮಹಾಲಿಂಗೇಶ್ಚರ ಮಿತ್ರವೃಂದ ಮಕ್ಕಳಿಂದ ನೃತ್ಯ ಸಿಂಚನ,ರಾತ್ರಿ 9ಕ್ಕೆ ಓಂಕಾರ್ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ಹಾಸ್ಯಮಯ ನಗೆ ನಾಟಕ ಅಗೋಚರ, ಫೆ.5ರಂದು ರಥೋತ್ಸವದ ಅಂಗವಾಗಿ ಮಹಾ ಅನ್ನಸಂತರ್ಪಣೆ ಹಾಗೂ ರಥೋತ್ಸವದಲ್ಲಿ ವಿಶೇಷ ಆಕರ್ಷಕ…
ಮೂಲತಃ ಮೃದು ಸ್ವಭಾವದ ವ್ಯಕ್ತಿ, ಯಶ್ ಶೆಟ್ಟಿ ಜ್ವಲಂತಂನಲ್ಲಿ ಅಘೋರ ಪಾತ್ರದ ನಂತರ ಪ್ರಸಿದ್ಧಿಯಾದರು. ಅಂದಿನಿಂದ ಅವರು 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೆಚ್ಚಾಗಿ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಶ್ ಶೆಟ್ಟಿ ತಮ್ಮ ನಿಜ ಜೀವನದ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿ ಪಾತ್ರಗಳನ್ನು ಚಿತ್ರಿಸಲು ಇಷ್ಟಪಡುತ್ತಾರಂತೆ. ಸೂಜಿದಾರ, ಮತ್ತು ಧರಣಿ ಮಂಡಲ ಮದ್ಯದೊಳಗೆ ಚಲನಚಿತ್ರಗಳಲ್ಲಿ ಪೋಷಕ ನಟನೆಗಳಿಗೆ ಹೆಸರುವಾಸಿಯಾಗಿದ್ದಾರೆ. ನಾನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಓದಿದಾಗ ನೆಗೆಟಿವ್ ಪಾತ್ರಗಳತ್ತ ನನ್ನ ಒಲವು ಶುರುವಾಯಿತು. ನಾಟಕಗಳಲ್ಲಿ ನಟಿಸುವಾಗ, ಸಕಾರಾತ್ಮಕ ಪಾತ್ರಗಳಿಗಿಂತ ಭಿನ್ನವಾಗಿ, ನಕಾರಾತ್ಮಕ ಪಾತ್ರಗಳು ವೈವಿಧ್ಯಮಯ ಭಾವನೆಗಳನ್ನು ಹೊರಹಾಕಲು ನಿಮಗೆ ಅನುವು ಮಾಡಿಕೊಡುತ್ತದೆ ಎಂದು ನಾನು ಭಾವಿಸಿದೆ ಎನ್ನುತ್ತಾರೆ ಯಶ್ ಶೆಟ್ಟಿ. ವಜ್ರಮುನಿ ಮತ್ತು ಪ್ರಕಾಶ್ ರಾಜ್ ಅವರಂತಹ ಬಹುಮುಖ ನಟರ ದೊಡ್ಡ ಅಭಿಮಾನಿ ಯಶ್ ಶೆಟ್ಟಿ. ಕೆರಿಯರ್‌ನಲ್ಲಿ ನಾನು ಪ್ರಕಾಶ್ ರಾಜ್ ಅವರನ್ನು ಅನುಸರಿಸುತ್ತೇನೆ. ಅವರು ಕೇವಲ ಖಳನಾಯಕನ ಪಾತ್ರದಲ್ಲಿ ಪ್ರಸಿದ್ಧರಾಗಿರುವ ನಟನ ಅತ್ಯುತ್ತಮ ಉದಾಹರಣೆಯಾಗಿದ್ದಾರೆ, ಆದರೆ ಕುಟುಂಬದ ಸದಸ್ಯ ಮತ್ತು ಸ್ನೇಹಿತ…
ಆನಂದ ಫಿಲಂಸ್ ಮತ್ತು ದಿ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ತುಳು ಚಿತ್ರವು ಸೆಪ್ಟಂಬರ್ 22 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ರಾಮ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತಾಡಿದ ಸಿಐಡಿ ದಯಾ ಖ್ಯಾತಿಯ ದಯಾನಂದ ಶೆಟ್ಟಿ ಅವರು, “ಹಿಂದಿ ಸಿನಿಮಾ ಮತ್ತು ಧಾರವಾಹಿ ಕ್ಷೇತ್ರದಲ್ಲಿ ನಾನು ಕಳೆದ 25 ವರ್ಷಗಳಿಂದ ದುಡಿಯುತ್ತಿದ್ದೇನೆ. ನಾನೆಲ್ಲಿ ಹೋದರೂ ತುಳು ಸಿನಿಮಾ ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸುತ್ತಿದ್ದರು. ಈಗ ನಾನು ನಟಿಸಿರುವ ಯಾನ್ ಸೂಪರ್ ಸ್ಟಾರ್ ತುಳು ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ಶುಕ್ರವಾರ ಬಿಡುಗಡೆಯಾಗಲಿದೆ. ಮೇಕಿಂಗ್, ನಿರ್ದೇಶನ ಎಲ್ಲದರಲ್ಲೂ ಗ್ರ್ಯಾಂಡ್ ಆಗಿರುವ ಸಿನಿಮಾವನ್ನು ಖಂಡಿತಾ ತುಳುವರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಬಳಿಕ ಮಾತಾಡಿದ ನಟ ಹರೀಶ್ ವಾಸು ಶೆಟ್ಟಿ ಅವರು, “ಯಾನ್ ಸೂಪರ್ ಸ್ಟಾರ್ ಸಿನಿಮಾ ಮಂಗಳೂರಿನ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್,…
ಸೆ. 04 ಬ್ರಹ್ಮಾವರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾದ ದಿ. ಎನ್ ಎಸ್ ಅಡಿಗರವರ ದಿವ್ಯಾತ್ಮಕ್ಕೆ ಶಾಂತಿಕೋರಲು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ್ದ ಎನ್. ಎಸ್. ಅಡಿಗರು, ಸರಳ ಸಜ್ಜನಿಕೆ, ನಗು ಮುಖದೊಂದಿಗೆ ಸಹಸ್ರಾರು ವಿಧ್ಯಾರ್ಥಿಗಳಿಗೆ ಜ್ಞಾನದ ಸುಧೆಯನ್ನು ಹರಿಸಿದ್ದಾರೆ. ಅವರ ಅಪಾರ ಭಾಷಾ ಪಾಂಡಿತ್ಯ, ಕೆಲಸದಲ್ಲಿ ಲವಲವಿಕೆಯಿಂದ ತೊಡಗಿಕೊಳ್ಳುತ್ತಿದ್ದ ಪರಿ ನಮಗೆಲ್ಲರಿಗೂ ಆದರ್ಶವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅಡಿಗರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವುಕರಾಗಿ ಮಾತನಾಡಿ ಶಿಸ್ತಿಗೆ, ಪರಿಪೂರ್ಣತೆಗೆ ಇನ್ನೊಂದು ಹೆಸರೇ ಅಡಿಗರು. ಅವರು ನನ್ನ ಗುರುಗಳು, ಮಾರ್ಗದರ್ಶಕರೂ ಆಗಿದ್ದರು ಎಂದರು. ನಂತರ ಜಿ ಎಮ್ ಸಂಸ್ಥೆಯನ್ನು ಕಟ್ಟುವಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿ ನಾವೆಲ್ಲರೂ ಅವರ ಆದರ್ಶಗಳನ್ನು, ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಹ ಸಿಬ್ಬಂದಿವೃಂದ ತಮ್ಮ ಭಾರವಾದ ಮನಸ್ಸಿನಿಂದ ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ಜಿ…